Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ನಡೆದ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ(ಯತ್ನಾಳ) ಭಾಷಣ ಮಾಡುತ್ತಾ ಹಜರತ್ ಟಿಪ್ಪು ಸುಲ್ತಾನ್ ಅವರ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿದ್ದನ್ನು ವಿರೋಧಿಸಿ ಪ್ರತಿಭಟಿಸಿದ ಟಿಪ್ಪು ಸುಲ್ತಾನ ಯೂಥ್ ಕಮಿಟಿ ಮತ್ತು ಮುಸ್ಲಿಂ ಸಮಾಜದ ಮುಖಂಡರು ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ತಹಶೀಲ್ದಾರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.ಆಲಮೇಲ ಪ.ಪಂ ಅಧ್ಯಕ್ಷ ಮತ್ತು ಕಾಂಗ್ರೇಸ ಮುಖಂಡ ಸಾಧೀಕ ಸುಂಬಡ ಮಾತನಾಡಿ, ವಿಜಯಪೂರ ನಗರ ಶಾಸಕ ಬಸವನಗೌಡ ಪಾಟೀಲ(ಯತ್ನಾಳ) 2012ರಲ್ಲಿ ಆಲಮೇಲದಲ್ಲಿ ನಡೆದ ಟಿಪ್ಪು ಸುಲ್ತಾನ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದರು ಆ ಸಂದರ್ಭದಲ್ಲಿ ಟಿಪ್ಪು ಪ್ರೇಮಿಯಾಗಿದ್ದರು, ಈಗ ಟಿಪ್ಪು ಸುಲ್ತಾನ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಭಾರತ ಹಲವಾರು ಜಾತಿ ಧರ್ಮಗಳಿಂದ ಕೂಡಿದ ದೇಶವಾಗಿದೆ. ನೀವು ಜಿಲ್ಲೆಯ ಹಿರಿಯ ರಾಜಕಾರಣಿಯಾಗಿದ್ದೀರಿ, ನಿಮ್ಮ ಮಾತಿನಲ್ಲಿ ನಾಲಿಗೆ ಮತ್ತು ಮೆದುಳಿಗೆ ಸಂಪರ್ಕವಿರಲಿ. ಮಾನಸಿಕ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಕೃಷಿಯಲ್ಲಿ ಹೆಚ್ಚುತ್ತಿರುವ ಚಿಕ್ಕ ಹಿಡುವಳಿಗಳು, ಬದಲಾಗುತ್ತಿರುವ ಕೃಷಿ ಆದ್ಯತೆಗಳು ಹಾಗೂ ಮರೆಯಾಗುತ್ತಿರುವ ಸಮಗ್ರ ಕೃಷಿ ಪದ್ದತಿಗಳಿಂದ ದೇಶದ ಕೃಷಿಕರ ಬದುಕಿನಲ್ಲಿ ಉಂಟಾದ ವಿಷಮತೆಯನ್ನು ತೊಡೆದು ಹಾಕಲು ಸಾಮೂಹಿಕ ಕೃಷಿಯೊಂದೆ ಪರಿಹಾರವೆಂದು ನಂಬಲಾಗುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ರೈತರೇ ಒಗ್ಗೂಡಿ ಕಟ್ಟಿದ ಕಂಪನಿ ರೈತ ಪಾಲಿನ ಅಕ್ಷಯ ಪಾತ್ರೆಯಾಗಬೇಕು ಎಂದು ಪಶು ಪಾಲನೆ ಮತ್ತು ಪಶು ವೈಧ್ಯಕೀಯ ಇಲಾಖೆಯ ಕುಕ್ಕುಟ ವಿಭಾಗದ ಸಹಾಯಕ ನಿರ್ದೇಶಕಿ ಡಾ. ಪದ್ಮಾವತಿ ದೊಡಮನಿ ಕರೆ ನೀಡಿದರು.ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ನಿಯಮಿತದ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಾರುಕಟ್ಟೆಯ ಬೇಡಿಕೆ ಮತ್ತು ಪೂರೈಕೆಯನ್ನು ಗಮನದಲ್ಲಿಟ್ಟುಕೊಂಡು ಸದಸ್ಯ ರೈತರಿಗೆ ಸುಸ್ಥಿರ ಲಾಭ ತಂದು ಕೊಡಬಹುದಾದ ವಿಶೇಷ ವ್ಯವಹಾರಿಕ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಉತ್ಪಾದನಾ ತಾಂತ್ರಿಕತೆಗಳಿಂದ ಹಿಡಿದು ಸ್ವಂತ ಬ್ರ್ಯಾಂಡ್ ಹೆಸರಲ್ಲಿ ಮಾರುಕಟ್ಟೆ ಮಾಡುವ ಮಟ್ಟಕ್ಕೆ ಉತ್ಪಾದಕ ಕಂಪನಿಯನ್ನು ಬೆಳೆಸಲು ಬೇಕಾದ ಸಾಮಾಜಿಕ ಚಿಂತನೆ,…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಬದುಕು ಬೆಳಕಾಗಬೇಕು. ಬದುಕು ಬಯಲಾಗಬೇಕು. ಇದುವೇ ಜೀವನ ಎಂಬುದನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ನಿಸರ್ಗದಲ್ಲಿ ಭಗವಂತ ನಮಗೆ ಎಲ್ಲವನ್ನು ನೀಡಿದ್ದಾನೆ. ಇದನ್ನು ನಾವೆಲ್ಲರೂ ಅನುಭವಿಸಿ ಸುಂದರ ಜೀವನ ಸಾಗಿಸಬೇಕೆಂದು ವಿಶ್ರಾಂತ ಮುಖ್ಯ ಅಭಿಯಂತರ, ಆಧ್ಯಾತ್ಮಿಕ ಚಿಂತಕ ಶಂಕರ ದೇವನೂರು ಹೇಳಿದರು.ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಅಕ್ಕನಾಗಮ್ಮ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಶನಿವಾರ ಹಮ್ಮಿಕೊಂಡಿದ್ದ ಸ್ಪೂರ್ತಿ ಸಿಂಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಜೀವನ ಹೂವಿನಂತಾಗಬೇಕು. ಇದು ಬಸವೇಶ್ವರರ ಪವಿತ್ರ ಭೂಮಿಯಾಗಿದೆ. ಮಹಾತ್ಮರು ನುಡಿದಂತೆ ನಡೆದು ಬೆಳಕಾಗಿದ್ದಾರೆ. ಅದರಂತೆ ನಮ್ಮ ಜೀವನ ಬೆಳಕಾಗಬೇಕು. ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮಾಡುವ ಮೂಲಕ ತಮ್ಮ ಜೀವನವನ್ನು ಉತ್ತಮ ಪಡಿಸಿಕೊಳ್ಳಬೇಕೆಂದರು.ಬಸವನಿಲ್ಲದ ಕರ್ನಾಟಕ ರಾಜ್ಯವನ್ನು ಪರಿಗಣಿಸಲು ಸಾಧ್ಯವಿಲ್ಲ. ಬಸವೇಶ್ವರರನ್ನು ಸ್ಮರಿಸದೇ ರಾಜ್ಯವನ್ನು ಸ್ಮರಿಸಲು ಸಾಧ್ಯವಿಲ್ಲ. ಬಸವ ತತ್ವ ಎಲ್ಲವನ್ನು ಒಳಗೊಂಡಿದೆ. ಬಸವಾದಿ ಶರಣರ ವಚನಗಳು ಎಲ್ಲರ ಬದುಕಿಗೆ ಬೆಳಕಾಗಿವೆ. ಶಿಕ್ಷಣ, ತತ್ವ ನಮ್ಮ ಬದುಕನ್ನು ನರಳಿಸಬಾರದು. ಅದು ಅರಳಿಸುವಂತಿರಬೇಕೆಂದರು.ಸಾನಿಧ್ಯ ವಹಿಸಿದ್ದ ಕಜ್ಜಿಡೋಣಿಯ ಕೃಷ್ಣಾನಂದ ಶರಣರು ಮಾತನಾಡಿ,…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ೧೨ ನೇ ಶತಮಾನದ ಬಸವಾದಿ ಶರಣರ ಸಂಸ್ಕ್ರತಿಯನ್ನು ನಾಡಿನ ಜನತೆಗೆ ಮುಟ್ಟಿಸುವಲ್ಲಿ ಶರಣ ಸಾಹಿತ್ಯ ಪರಿಷತ್ತು ವಿವಿಧ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಶರಣ ಸಂಸ್ಕ್ರತಿಯನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣಕ್ಕೆ ಪೂರಕವಾಗುತ್ತದೆ ಎಂದು ನಂದಿ ಪ್ರಾಥಮಿಕ, ಪ್ರೌಢಶಾಲೆಯ ಮುಖ್ಯಗುರುಮಾತೆ ವೀಣಾ ಪೂಜಾರಿ ಹೇಳಿದರು.ಪಟ್ಟಣದ ಮಸಬಿನಾಳ ರಸ್ತೆಯಲ್ಲಿ ನಂದಿ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಲಿಂ.ಶಾಂತಾಬಾಯಿ ಮಲ್ಲಪ್ಪ ಕೊಟ್ಲಿ, ಮಲ್ಲಪ್ಪ ಸದಾಶಿವಪ್ಪ ಕೊಟ್ಲಿ ಸ್ಮರಣಾರ್ಥ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಳ್ಳುವ ಕಾರ್ಯಕ್ರಮದಲ್ಲಿ ಹೆಚ್ಚು ಯುವಜನಾಂಗ ಭಾಗವಹಿಸುವ ಮೂಲಕ ಶರಣ ಸಂಸ್ಕ್ರತಿಯನ್ನು ಉಳಿಸಿಕೊಂಡು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು. ಯುವಜನಾಂಗ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡರೆ ಅವರ ಜೀವನ ಉಜ್ವಲವಾಗುತ್ತದೆ ಎಂದರು.ಜನಪದರು ಕಂಡ ಶರಣರು ಕುರಿತು ಕನ್ನಡ ಜಾನಪದ ಪರಿಷತ್ತಿನ ತಾಲೂಕಾಧ್ಯಕ್ಷ ದೇವೇಂದ್ರ ಗೋನಾಳ ಮಾತನಾಡಿ, ಶರಣ ಸಾಹಿತ್ಯ, ಜನಪದ ಸಾಹಿತ್ಯ ಎರಡು ಒಂದೇ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಅಪ್ರತಿಮ ದೇಶಭಕ್ತ ಭಗತಸಿಂಗ್ ಕೇವಲ ದೇಶಕ್ಕೆ ಸ್ವಾತಂತ್ರ್ಯ ಮಾತ್ರ ಬಯಸದೇ ಪ್ರತಿಯೊಬ್ಬ ಭಾರತೀಯನಿಗೂ ಸಮಾನತೆ ಸಿಗುವ ಜೊತೆಗೆ ಜಾತಿ, ಧರ್ಮಗಳಿಂದ ಮುಕ್ತವಾದ ಯುವ ಭಾರತದ ಪರಿಕಲ್ಪನೆಯ ಸ್ವಾತಂತ್ರ್ಯವನ್ನು ಬಯಸಿದ್ದರು. ಇಂತಹ ಮಹಾನ್ ಕ್ರಾಂತಿಕಾರಿ ಪುರುಷ ಎಂದಿಗೂ ಯುವಜನಾಂಗಕ್ಕೆ ಸ್ಪೂರ್ತಿದಾಯಕವಾಗಿದ್ದಾರೆ ಎಂದು ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.ಪಟ್ಟಣದ ರಾಣಿ ಚನ್ನಮ್ಮ ವೃತ್ತದಲ್ಲಿ ರಾಷ್ಟ್ರೀಯ ಬಸವಸೈನ್ಯ ಸಂಘಟನೆಯು ಶನಿವಾರ ಹಮ್ಮಿಕೊಂಡಿದ್ದ ಕ್ರಾಂತಿಕಾರಿ ಭಗತಸಿಂಗ್ ಅವರ ೧೧೭ ನೇ ಜಯಂತಿ ಕಾರ್ಯಕ್ರಮದಲ್ಲಿ ಭಗತ್ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಅಸಮಾನತೆ ವ್ಯವಸ್ಥೆಯನ್ನು ಹೋಗಲಾಡಿಸಿ ಬದಲಾವಣೆ ತರಲು ಭಗತ್ಸಿಂಗ್ ನಿರಂತರವಾಗಿ ಹೋರಾಟ ಮಾಡಿದ್ದರು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗುವ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮದೇ ಕೊಡುಗೆ ನೀಡಿದ್ದಾರೆ. ತಮ್ಮ ಚಿಕ್ಕವಯಸ್ಸಿನಲ್ಲಿಯೇ ದೇಶದ ಸ್ವಾತಂತ್ರ್ಯ ಸಿಗಲು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಅಪ್ರತಿಮ ದೇಶಭಕ್ತರಾಗಿದ್ದಾರೆ. ಇವರ ವಿಚಾರಗಳನ್ನು ಯುವಜನಾಂಗ ಅರಿತುಕೊಂಡು ದೇಶದ ಪ್ರಗತಿಗೆ ಕೈಜೋಡಿಸಬೇಕೆಂದರು.ಈ ಸಂದರ್ಭದಲ್ಲಿ…
ಉದಯರಶ್ಮಿ ದಿನಪತ್ರಿಕೆ ಯಡ್ರಾಮಿ: ರೆಬಿಸ್ ಇದೊಂದು ಮಾರಕ ರೋಗವಿದ್ದು, ಒಮ್ಮೆ ರೆಬಿಸ್ ಆಗಿದೆ ಎಂದರೆ ಸಾವು ಖಚಿತವಾಗಿದೆ ಎಂಬುದು ತಿಳಿಯಬೇಕು ಎಂದು ತಾಲೂಕು ಪಶು ವೈದ್ಯಾಧಿಕಾರಿ ಡಾ.ಪ್ರಭು ಕಲ್ಲೂರ ಹೇಳಿದರು.ತಾಲೂಕಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಪಶು ಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆ ಆಯೋಜಿಸಿದ್ದ ವಿಶ್ವ ರೆಬಿಸ್ ದಿನಾಚರಣೆಯ ಅಂಗವಾಗಿ ರೋಗದ ಅರಿವು ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ರೇಬೀಸ್ ನಿರ್ಮೂಲನೆಗೆ ಲಸಿಕೆ ಒಂದೇ ಮಾರ್ಗ. ಇದರ ಬಗ್ಗೆ ವಿದ್ಯಾರ್ಥಿಗಳಾದವರು ಅರಿತುಕೊಂಡು ತಮ್ಮ ಮನೆಯಲ್ಲಿ ಮತ್ತು ತಮ್ಮ ಸುತ್ತಲಿನ ಜನತೆಗೆ ತಿಳಿ ಹೇಳಬೇಕೆಂದರು. ಹುಚ್ಚು ನಾಯಿ ಕಡಿದರೆ ತಕ್ಷಣವೇ ಲಸಿಕೆ ಪಡೆದರೆ ಜೀವ ಉಳಿಸಿದಂತಾಗುತ್ತದೆ. ಈ ಕುರಿತು ಪ್ರತಿಯೊಬ್ಬರು ತಿಳಿಯಬೇಕಾದ ಅಗತ್ಯವಿದೆ ಎಂದರು.ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ದೇವೀಂದ್ರ ಬಡಿಗೇರ, ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿದ್ದರು.
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮಕ್ಕಳು ಸಂಸ್ಕಾರವಂತರಾದಾಗ ಮಾತ್ರ ಅವರು ಕಲಿತ ಶಿಕ್ಷಣಕ್ಕೆ ಬೆಲೆಯಿದೆ ಎಂದು ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಹೇಳಿದರು.ಪಟ್ಟಣದಲ್ಲಿ ಶನಿವಾರ ೨೦೨೩-೨೪ನೇ ಸಾಲಿನ ತಾಲ್ಲೂಕು ಪಂಚಾಯಿತಿ ಅನಿರ್ಭಂಧಿತ ಅನುದಾನ ಅಡಿಯಲ್ಲಿ ಸರ್ಕಾರಿ ಉರ್ದುಶಾಲೆಯ ಶೌಚಾಲಯ ನಿರ್ಮಾಣ ಕಾಮಗಾರಿ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ವಿತರಣೆ ಹಾಗೂ ಸರ್ಕಾರಿ ಉರ್ದು ಪ್ರೌಢಶಾಲೆಯ ಕಂಪೌಂಡ ನಿರ್ಮಾಣ ಕಾಮಗಾರಿಗಳ ಚಾಲನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ, ದೈಹಿಕಕ್ಷಮತೆ ಅಗತ್ಯವಾಗಿದೆ. ಶೈಕ್ಷಣಿಕ ಹಾಗೂ ಆರೋಗ್ಯದ ದೃಷ್ಟಿಯಿಂದ ಪಾಲಕರು ಮೊಬೈಲ್‌ಗಳಿಂದ ತಮ್ಮ ಮಕ್ಕಳನ್ನು ದೂರವಿಡಬೇಕು ಎಂದರು.ಅಕ್ಷರದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಎ.ಎಸ್.ಡೋಣೂರ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯ ಸರ್ಕಾರದ ಅಕ್ಷರ ದಾಸೋಹ, ಮಧ್ಯಾನ್ಹ ಉಪಾಹಾರ ಯೋಜನೆಯಡಿ ಅಜೀಂ ಪ್ರೇಮ್‌ಜಿ ಫೌಂಡೇಷನ್ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಶಾಲಾ ಮಕ್ಕಳ ಪೌಷ್ಠಿಕತೆ ವೃದ್ಧಿಸಲು ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.ಸಿಂದಗಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಯಡ್ರಾಮಿ ಸ್ವಾಗತಿಸಿದರು. ನಂತರ ಮಕ್ಕಳಿಗೆ ಮೊಟ್ಟೆ ವಿತರಿಸಲಾಯಿತು.ಜಿಲ್ಲಾ…
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಮಹಾರಾಷ್ಟ್ರದ ಗಡಿಯಂಚಿನ ತಾಲ್ಲೂಕಿನ ಘೋಣಸಗಿ ತಾಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಪರಮೇಶ್ವರ ಗದ್ಯಾಳ ಅವರು ಶೈಕ್ಷಣಿಕವಾಗಿ ಸಲ್ಲಿಸಿರುವ ಸೇವೆ ಪರಿಗಣಿಸಿ ಬೆಂಗಳೂರಿನ ಜನಸಿರಿ ಪೌಂಡೇಶನ ವತಿಯಿಂದ ಪುಟ್ಟಣ್ಣ ಚೆಟ್ಟಿ ಪುರಭವನ(ಬೆಂಗಳೂರ)ದಲ್ಲಿ ಶನಿವಾರ ನಡೆದ ರಾಜ್ಯ ಮಟ್ಟದ ಶಿಕ್ಷಕರ ಹಬ್ಬ 2024 ಸಮಾರಂಭದಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ.ಶಾಲೆಯ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿ ಮಕ್ಕಳ ಸರ್ವತೋಮುಖ ಶೈಕ್ಷಣಿಕ ಕಾಳಜಿ ತೋರಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ವಂತ ಹಣ ಖರ್ಚು ಮಾಡಿ ಶಾಲೆಯ ಅಂದ ಚಂದ ಹೆಚ್ಚಿಸಿ ಸಾರ್ವಜನಿಕರ ಹಾಗೂ ಇಲಾಖೆಗೆ ಪ್ರೀತಿ ಪಾತ್ರರಾಗಿದ್ದಾರೆ. ನೋಡುತ್ತಾ ಕಲಿ, ಆಡುತ್ತಾ ಕಲಿ ಎಂಬಂತೆ ಮಕ್ಕಳು ಕಲಿಯುವ ಕಲಿಕೆಗೆ ಸಹಾಯವಾಗಲು ನೈಜ ಕಲಿಕಾ ವಾತಾವರಣ ನಿರ್ಮಿಸಿದ್ದಾರೆ.ಹಲವು ಸಾಧನೆಗಳ ಮೂಲಕ ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣ ನಿರ್ಮಿಸಿದ ಶಿಕ್ಷಕ ಪರಮೇಶ್ವರ ಗದ್ಯಾಳಗೆ ಈ ಬಾರಿ ಬೆಂಗಳೂರಿನ ಜನಸಿರಿ ಪೌಂಡೆಶನ ನೀಡುವ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದಕ್ಕಾಗಿ ಇಲಾಖೆಯ ಅಧಿಕಾರಿಗಳು,…
ಉದಯರಶ್ಮಿ ದಿನಪತ್ರಿಕೆ ಇಂಡಿ: ಅನುಸೂಚಿತ ಜಾತಿ, ಪಂಗಡದ ಜನರು ಶಿಕ್ಷಣವಂತರಾದರೆ ಸಮಾಜದಲ್ಲಿ ನಡೆಯುವ ದೌರ್ಜನ್ಯ ತಡೆಯಲು ಸಾಧ್ಯ. ಶಿಕ್ಷಣವಂತರಾದರೆ ಕಾನೂನು ಅರಿವು ಬಂದು ದೌರ್ಜನ್ಯ ಕಡಿಮೆಯಾಗುತ್ತವೆ ಎಂದು ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ ಹೇಳಿದರು.ಪಟ್ಟಣದ ಡಿ.ವಾಯ್.ಎಸ್.ಪಿ ಕಚೇರಿ ಸಭಾಭವನದಲ್ಲಿ ನಡೆದ ಉಪವಿಭಾಗೀಯ ಮಟ್ಟದ ಎಸ್ ಸಿ, ಎಸ್ ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸಭೆಯಲ್ಲಿ ಮಾತನಾಡಿದರು.ಶಿಕ್ಷಣವಂತರಾದರೆ ಮಧ್ಯಪಾನ, ಮಟಕಾ,ಜೂಜಾಟದಂತಹ ವ್ಯಸನಗಳು ಕಡಿಮೆಯಾಗಿ ಒಳ್ಳೆಯ ಸಮಾಜ ನಿರ್ಮಿಸಲು ಸಾಧ್ಯ ಎಂದರು.ಡಿಎಸ್ ಎಸ್ ತಾಲೂಕಾ ಸಂಚಾಲಕ ರಮೇಶ ನಿಂಬಾಳಕರ ಮಾತನಾಡಿ, ಪಜಾ ಪಪಂ ಜನರಿಂದ ದೌರ್ಜನ್ಯ ಕೇಸ್ ಪಡೆದುಕೊಂಡು ಆರೋಪಿಗಳನ್ನು ಬಂದಿಸುತ್ತಿಲ್ಲ. ಇದರಿಂದ ಆರೋಪಿಗಳು ರಾಜಾ ರೋಷವಾಗಿ ಹೊರಗಡೆ ಅಡ್ಡಾಡುತ್ತಾರೆ ಹೀಗಾಗದಂತೆ ನೋಡಿಕೊಂಡು ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಬೇಕೆಂದು ಎಂದರು.ಡಿ.ವಾಯ್.ಎಸ್.ಪಿ ಜಗದೀಶ ಮಾತನಾಡಿ ದೌರ್ಜನ್ಯದಲ್ಲಿ ನೊಂದ ಸಂತೃಸ್ತರಿಗೆ ತಕ್ಷಣ ಇಲಾಖೆಯಿಂದ ಪರಿಹಾರ ಧನ ನೀಡಲು ಕೇಳಿಕೊಂಡರು.ಡಿ.ಎಸ್.ಎಸ್. ಜಿಲ್ಲಾ ಸಂಚಾಲಕ ವಿನಾಯಕ ಗುಣಸಾಗರ,ತಾಲೂಕಾ ಅಧ್ಯಕ್ಷ ಶಿವಾನಂದ ಮೂರಮನ, ಸಿಂದಗಿ ತಾಲೂಕಾ ದಲಿತ ಮುಖಂಡ ಚಂದ್ರಕಾಂತ ಸಿಂಗೆ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಶಿಕ್ಷಣ ಎನ್ನುವುದು ನಿರಂತರವಾಗಿರುವ ಪ್ರಕ್ರಿಯೆ. ಒಂದು ಹಂತದವರೆಗಿನ ಶಿಕ್ಷಣ ಮುಗಿಸಿದರೆ ಸಾಲದು. ಪದವಿ ಎನ್ನುವದು ಒಂದು ಹಂತ ಅಷ್ಟೆ, ಆದ್ದರಿಂದ ಎಲ್ಲರೂ ಶಿಕ್ಷಣ ಮುಂದುವರಿಸಿ ಎಂದು ಡಾ ಆರ್.ಎಮ್.ಪಾಟೀಲ ಹೇಳಿದರು.ಪಟ್ಟಣದ ಪಿ.ಇ.ಎಸ್ ಸಂಸ್ಥೆಯ ಅಂಗಸಂಸ್ಥೆಯಾದ ಶ್ರೀಮತಿ ಪ್ರೇಮಾ ಭೀ. ಕರ್ಜಗಿ ಪದವಿ ಮಹಾವಿದ್ಯಾಲಯ ಹಾಗೂ ಲಯನ್ಸ್ ಕ್ಲಬ್ ಸಿಂದಗಿ ಇವರ ಆಶ್ರಯದಲ್ಲಿ ಹಮ್ಮಿಕೊಂಡ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಶಿಕ್ಷಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಧನೆ ಮಾಡಲು ಕೇವಲ ಓದು ಬರಹ ಅಷ್ಟೇ ಅಲ್ಲ. ಅದರ ಜೊತೆ ಕೌಶಲ್ಯವನ್ನೂ ಅಳವಡಿಸಿಕೊಳ್ಳಬೇಕು. ಕೇವಲ ನೌಕರಿಗಾಗಿ ಓದದೇ ಬದುಕಿನ ವಿಕಾಸಕ್ಕಾಗಿ ಓದಬೇಕು ಎಂದರು.ಇದೇ ಸಂದರ್ಭದಲ್ಲಿ ಆಲಮೇಲ ನಿರ್ಮಲಾಲಯ ಪ್ರೌಢಶಾಲೆ ಮುಖ್ಯ ಗುರುಮಾತೆ ಸಿಸ್ಟರ್ ಐರೀನ್, ಗೀತಾ ಹಿಪ್ಪರಗಿ ಎಸ್.ಆಯ್.ಅಂಕಲಗಿ ಶಿಕ್ಷಕರನ್ನು ಹಾಗೂ ರಾಷ್ಟçಮಟ್ಟದ ಬೆಸ್ಟ್ ಅಗ್ರೀ ಫ್ರೇನರ್ ಪ್ರಶಸ್ತಿ ಪುರಸ್ಕೃತ ಮನೋಜ ವಾರದ ಅವರನ್ನುಸನ್ಮಾನಿಸಿ ಗೌರವಿಸಲಾಯಿತು.ಸಮಾರಂಭದ ಸಮ್ಮುಖವನ್ನು ಸಂಸ್ಥೆಯ ಗೌರವ ಕಾರ್ಯದರ್ಶಿ ಬಿ.ಪಿ.ಕರ್ಜಗಿ, ಅಧ್ಯಕ್ಷತೆಯನ್ನು ತಾಲೂಕಾ ಲಾಯನ್ಸ್…
