ನೂತನ ಪಿಎಸೈ ಮಂಜುನಾಥ ಗೆ ಸನ್ಮಾನ
ಉದಯರಶ್ಮಿ ದಿನಪತ್ರಿಕೆ ಝಳಕಿ: ಇಲ್ಲಿನ ಪೊಲೀಸ್ ಠಾಣೆಗೆ ನೂತನವಾಗಿ ವರ್ಗಾವಣೆಯಾಗಿ ಬಂದ ಪಿಎಸ್ಐ ಮಂಜುನಾಥ ತಿರಕನವರ ಇವರನ್ನು ಕ.ರ.ವೇ ತಾಲೂಕಾ ಉಪಾಧ್ಯಕ್ಷ ಪ್ರಕಾಶಗೌಡ ಬಿರಾದಾರರವರ ನೇತೃತ್ವದಲ್ಲಿ ಶಾಲು ಹೊಂದಿಸಿ ಹೂಗುಚ್ಛವನ್ನು ನೀಡುವ ಮೂಲಕ ಸ್ವಾಗತ ಕೋರಲಾಯಿತು.ಈ ಸಂದರ್ಭದಲ್ಲಿ ಕ.ರವೇ ವಲಯ ಅಧ್ಯಕ್ಷರಾದ ರವಿಕುಮಾರ ಹೂಗಾರ, ಸಂತೋಷ ನಾವಿ, ನಿರಂಜನ ಪೂಜಾರಿ, ಹರೀಶ ಶೆಟ್ಟಿ, ಪಿಂಟು ಬಿರಾದಾರ, ಬಾಲಕೃಷ್ಣ ಭೋಸಲೆ, ಮಲ್ಲಿಕಾರ್ಜುನ ಬನಸೋಡೆ, ಅಮೋಘ ಢಾಳೆಯವರುಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಿಎಂ ಪಾಲಿಕೆ ನೌಕರರ ಕಷ್ಟ ಕೇಳಲಿ :ಎಚ್ಡಿಕೆ ಆಗ್ರಹ
ಮುಖ್ಯಮಂತ್ರಿಗಳು ಕೇವಲ ಶಾಸಕರ ದುಃಖ ದುಮ್ಮಾನ ಕೇಳಿದರೆ ಸಾಲದು ಎಂದು ಕುಟುಕಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬೆಂಗಳೂರು: ಕೇವಲ ಶಾಸಕರ ದುಃಖ ದುಮ್ಮಾನ ಕೇಳಿದರೆ ಸಾಲದು. ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಮಹಾನಗರ ಪಾಲಿಕೆಗಳ ನೌಕರರ ಕಷ್ಟಕಾರ್ಪಣ್ಯ ಆಲಿಸುವ ಹೃದಯವಂತಿಕೆ ತೋರಬೇಕು ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಗುರುವಾರ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ತುರ್ತು ಗಮನ ಹರಿಸಬೇಕು ಎಂದು ಕುಮಾರಸ್ವಾಮಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.ಶಾಸಕರ
ಒತ್ತುವರಿ ಮಾಡಿದ ಅಂಗಡಿಗಳ ತೆರವು ಕಾರ್ಯಾಚರಣೆ
ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ಮುಖ್ಯರಸ್ತೆಗಳ ಪಕ್ಕದ ಎರಡು ಬದಿಗಳಲ್ಲಿ ಚಂಡಿಗಳ ಜಾಗ ಒತ್ತುವರಿ ಮಾಡಿಕೊಂಡು ಕಟ್ಟಿರುವ ಗೂಡಂಗಡಿಗಳು, ತಳ್ಳು ಬಂಡಿಗಳ ತೆರವು ಕಾರ್ಯಾಚರಣೆ ಬುಧವಾರ ನಡೆಯಿತು.ಪುರಸಭೆ ಮುಖ್ಯಾಧಿಕಾರಿ ವಿಜಯಮಹಾಂತೇಶ ಹೂಗಾರ ಮಾಹಿತಿ ನೀಡಿ ಮಾತನಾಡಿ ಪಟ್ಟಣದ ಮುಖ್ಯರಸ್ತೆಗಳ ಚರಂಡಿಗಳು ಒತ್ತುವರಿಯಾಗಿದ್ದರಿಂದ ಚರಂಡಿಗಳ ಸ್ವಚ್ಚತೆ ಮಾಡಲಾಗುತ್ತಿಲ್ಲ, ವಾಹನ ದಟ್ಟಣೆ ನಿಯಂತ್ರಣ ಮಾಡಲಾಗುತ್ತಿಲ್ಲ ಹೀಗಾಗಿ ಪುರಸಭೆ ಅಧ್ಯಕ್ಷೆ ಸುಹಾಸಿನಿ ವಿರೇಶ ಖೇಳಗಿ ಅಧ್ಯಕ್ಷತೆಯಲ್ಲಿ ಕೆಲ ತಿಂಗಳ ಹಿಂದೆ ಸಭೆ ನಡೆಸಲಾಗಿದ್ದು ಸರ್ವ ಸದಸ್ಯರ ಸಮ್ಮತಿಯ ನಂತರ ಠರಾವು ಪಾಸು ಮಾಡಿ
Subscribe to Updates
Get the latest creative news from FooBar about art, design and business.