ಉದಯರಶ್ಮಿ ದಿನಪತ್ರಿಕೆ
ಯಡ್ರಾಮಿ: ರೆಬಿಸ್ ಇದೊಂದು ಮಾರಕ ರೋಗವಿದ್ದು, ಒಮ್ಮೆ ರೆಬಿಸ್ ಆಗಿದೆ ಎಂದರೆ ಸಾವು ಖಚಿತವಾಗಿದೆ ಎಂಬುದು ತಿಳಿಯಬೇಕು ಎಂದು ತಾಲೂಕು ಪಶು ವೈದ್ಯಾಧಿಕಾರಿ ಡಾ.ಪ್ರಭು ಕಲ್ಲೂರ ಹೇಳಿದರು.
ತಾಲೂಕಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಪಶು ಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆ ಆಯೋಜಿಸಿದ್ದ ವಿಶ್ವ ರೆಬಿಸ್ ದಿನಾಚರಣೆಯ ಅಂಗವಾಗಿ ರೋಗದ ಅರಿವು ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೇಬೀಸ್ ನಿರ್ಮೂಲನೆಗೆ ಲಸಿಕೆ ಒಂದೇ ಮಾರ್ಗ. ಇದರ ಬಗ್ಗೆ ವಿದ್ಯಾರ್ಥಿಗಳಾದವರು ಅರಿತುಕೊಂಡು ತಮ್ಮ ಮನೆಯಲ್ಲಿ ಮತ್ತು ತಮ್ಮ ಸುತ್ತಲಿನ ಜನತೆಗೆ ತಿಳಿ ಹೇಳಬೇಕೆಂದರು. ಹುಚ್ಚು ನಾಯಿ ಕಡಿದರೆ ತಕ್ಷಣವೇ ಲಸಿಕೆ ಪಡೆದರೆ ಜೀವ ಉಳಿಸಿದಂತಾಗುತ್ತದೆ. ಈ ಕುರಿತು ಪ್ರತಿಯೊಬ್ಬರು ತಿಳಿಯಬೇಕಾದ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ದೇವೀಂದ್ರ ಬಡಿಗೇರ, ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿದ್ದರು.

