Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಆಕ್ಸಿಯಮ್ -4 ಮಿಷನ್ ಯಶಸ್ವಿ | ಡ್ರ್ಯಾಗನ್ ನೌಕೆ ಮೂಲಕ ಭೂಮಿಗೆ ಮರಳಿದ ಶುಕ್ಲಾ | ಕೋಟ್ಯಾಂತರ ಕನಸುಗಳಿಗೆ ಸ್ಫೂರ್ತಿ ಎಂದ ಪ್ರಧಾನಿ ಮೋದಿ ನ್ಯೂಯಾರ್ಕ್: ಯಶಸ್ವಿ ಬಾಹ್ಯಾಕಾಶ ಯಾನ ಮುಕ್ತಾಯಗೊಳಿಸಿದ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲ ಅವರಿದ್ದ ತಂಡ ಇಂದು ಡ್ರ್ಯಾಗನ್ ನೌಕೆಯ ಮೂಲಕ ಯಶಸ್ವಿಯಾಗಿ ಭೂಮಿಗೆ ಮರಳಿದ್ದಾರೆ.”ನಾವು ಮನೆಗೆ ಮರಳಿದ್ದೇವೆ” ಆಕ್ಸಿಯಮ್ -4 ಮಿಷನ್ ಕಮಾಂಡರ್ ಪೆಗ್ಗಿ ವಿಟ್ಸನ್, ಜುಲೈ 15 ರಂದು ಪೆಸಿಫಿಕ್ ಮಹಾಸಾಗರದ ಸ್ಯಾನ್ ಡಿಯಾಗೋ ಬಳಿಯ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಡ್ರ್ಯಾಗನ್ ಎಂದು ಕರೆಯಲ್ಪಡುವ ಬಾಹ್ಯಾಕಾಶ ನೌಕೆ ಇಳಿದ ಸ್ವಲ್ಪ ಸಮಯದ ನಂತರ, ಮಧ್ಯಾಹ್ನ 3.02 ಕ್ಕೆ ಆಕ್ಸಿಯಮ್ ಸ್ಪೇಸ್ನ ಕಮಾಂಡ್ ಕಂಟ್ರೋಲ್ ಸೆಂಟರ್ಗೆ ತಿಳಿಸಿದ ಸಂದೇಶ ಇದಾಗಿದೆ.ಪೆಗ್ಗಿ ವಿಟ್ಸನ್ ಸಂದೇಶಕ್ಕೆ ಕಮಾಂಡ್ ಕೇಂದ್ರ “ಮನೆಗೆ ಸ್ವಾಗತ” ಎಂದು ಉತ್ತರಿಸಿದೆ. ಇದಕ್ಕೆ ಪೆಗ್ಗಿ ಉತ್ತರಿಸುತ್ತಾ, “ಮಹಾ ಸವಾರಿ ಮತ್ತು ಸುರಕ್ಷಿತ ಪ್ರಯಾಣಕ್ಕಾಗಿ ಧನ್ಯವಾದಗಳು.” ಗ್ರೇಸ್ನಲ್ಲಿರುವ ಸಿಬ್ಬಂದಿ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ. ಆಕ್ಸಿಯಮ್ -4 ವಾಣಿಜ್ಯ ಬಾಹ್ಯಾಕಾಶ…
ಲೇಖನ- ಡಾ. ಶಶಿಕಾಂತ ಪಟ್ಟಣ ರಾಮದುರ್ಗಮೊ: 9552002338 ಉದಯರಶ್ಮಿ ದಿನಪತ್ರಿಕೆ ಬಸವಣ್ಣನವರು ನಿರ್ಗಮಿಸಿದ ಮೇಲೆ ಅವರ ಹೆಸರಿನಲ್ಲಿ ಶೈವರು ವೈದಿಕರು ಸಾಹಿತಿಗಳು ಈಗ ರಾಜಕಾರಣಿಗಳು ಕಾವಿಗಳು ಬಸವ ತತ್ವವನ್ನು ತಮ್ಮ ಮನಸ್ಸಿಗೆ ಬಂದಂತೆ ಜಗ್ಗಾಡಿ ವ್ಯಾಖ್ಯಾನ ಮಾಡುತ್ತಾ ಬದುಕುತ್ತಿದ್ದಾರೆ.ಲಿಂಗಾಯತ ಒಂದು ಅವೈದಿಕ ಹಿಂದುಯೇತರ ಸರ್ವತಂತ್ರ ಸ್ವತಂತ್ರ ಧರ್ಮವಾಗಿದೆ. ಲಿಂಗಾಯತ ಧರ್ಮದ ಉಲ್ಲೇಖವು ಸಿ ಪಿ ಬ್ರೌನ್ ಜಾನ್ ಡಿ ಮೆನ್ ಆರ್ಥರ್ ಮೈಲ್ಸ್ ನ್ಯಾಯಮೂರ್ತಿ ಪ್ರೊ ಶಿ ಶಿ ಬಸವನಾಳ ಎಂ ಆರ್ ಸಾಖರೆ ಪಿ ಬಿ ಗಜೇಂದ್ರಗಡಕರ ಡಾ ಎಂ ಎಂ ಕಲಬುರ್ಗಿ ಮುಂತಾದವರ ಲೇಖನಗಳಿಂದ ಕಂಡು. ಬಂದಿದೆ. ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆಗೆ ಎರಡು ಶತಮಾನವೇ ಕಳೆದು ಹೋಗಿವೆ. ಲಿಂಗಾಯತ ಧರ್ಮದ ಬೇಡಿಕೆ ನ್ಯಾಯ ಸಮ್ಮತ ಮತ್ತು ಕಾನೂನು ಸಮ್ಮತವಾಗಿದೆ. 2018 ರಲ್ಲಿ ಶ್ರೀಮಾನ್ ಸಿದ್ದರಾಮಯ್ಯನವರ ಸರಕಾರದಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಮತ್ತು ಅಲ್ಪ ಸಂಖ್ಯಾತ ಸ್ಥಾನಮಾನಕ್ಕಾಗಿ ನ್ಯಾಯಮೂರ್ತಿ ಶ್ರೀ ನಾಗಮೋಹನದಾಸ ಸಮಿತಿ ರಚಿಸಲಾಯಿತು. ವೀರಶೈವ ಮತ್ತು ಲಿಂಗಾಯತ…
ಲೇಖನ- ವಿಜಯಲಕ್ಷ್ಮಿ ಮೂರ್ತಿ”ನಮ್ಮ ಕಥಾ ಅರಮನೆ”ಬರಹಗಾರರು ಉದಯರಶ್ಮಿ ದಿನಪತ್ರಿಕೆ ಆ ದಿನ ಟೆರೇಸ್ ನಲ್ಲಿ ಮುದ್ದುರಾಮನ ಪುಸ್ತಕ ಓದುತ್ತಾ ಕುಳಿತಿದ್ದ ಸಮಿತಳಿಗೆ ಮನೆಯಲ್ಲಿ ಆದ ಗಲಾಟೆಯಿಂದ ಮನಸ್ಸು ಭಾರವಾಗಿತ್ತು.ಓದುತ್ತಾ ಅವಳಿಗೆ ಮುದ್ದುರಾಮನ ಪುಸ್ತಕದಲ್ಲಿ ಸಿಕ್ಕ ಈ ಚೌಪದಿ ಅವಳಿಗೆ ಅವಳ ಮನಸ್ಸಿನಲ್ಲಿ ಆಗುವ ಒಂದು ಗೊಂದಲಕ್ಕೆ ವಿರಾಮ ಹಾಕುವಂತೆ ಅವಳನ್ನು ಪ್ರೇರೇಪಿಸಿತ್ತು.ಕಥೆ ಓದುವ ಹುಚ್ಚು ಸಮಿತಳಿಗೆ ಮೊದಲಿನಿಂದಲೂ ಇತ್ತು. ಯಾವ ಕಥೆ ಆಗಲಿ ಅವಳಿಗೆ ಓದುವುದು ಮುಖ್ಯ. ಮಹಾ ಕಾವ್ಯಗಳಾದ ಮಹಾಭಾರತ ರಾಮಾಯಣದಂತಹ ಕಥೆ ಅವಳಿಗೆ ಅಚ್ಚು ಮೆಚ್ಚು. ರಾಮಾಯಣದಲ್ಲಿ ರಾಮನ ಭಾತ್ರ್ ಪ್ರೇಮ ಅವಳನ್ನು ಮೂಕವಾಗಿಸಿತ್ತು. ರಾಮನಂತೆ ತನ್ನ ಗಂಡ ಸುಶಾಂತ ತನ್ನ ತಮ್ಮಂದಿರನ್ನು ಚೆನ್ನಾಗಿ ನೋಡಿಕೊಳ್ಳಲಿ ಎನ್ನುವ ಆಸೆ ಅವಳ ಮನದಲ್ಲಿ ಇತ್ತು. ಮೊದಲನೆಯವನಾಗಿ ಹುಟ್ಟಿದ ಸುಶಾಂತ ತುಂಬಾ ಮೊಂಡು ಬುದ್ಧಿಯವನಾಗಿದ್ದ. ತನ್ನದೇ ಹಠ ನಡೆಯಬೇಕೆಂಬ ಮನಸ್ಸು ಅವನದು.ಮದುವೆಯಾಗಿ ಬಂದಳು ಸಮಿತ ಈ ಕೂಡು ಕುಟುಂಬಕ್ಕೆ. ಅತ್ತೆಯ ಹಾಗೆ ತಾನೂ ಈ ಮನೆಯನ್ನು ಸಂಬಾಳಿಸಬೇಕು ಅಂದುಕೊಂಡಿದ್ದಳು. ತನ್ನ ತೌರು…
ರಚನೆ- ಮಾಲತಿ ಹಿರೇಮಠ”ನಮ್ಮ ಕಥಾ ಅರಮನೆ*ಬರಹಗಾರರು ಉದಯರಶ್ಮಿ ದಿನಪತ್ರಿಕೆ ಮುಂಜಾನೆಯ ನಸುಕಿನಲಿಬೆಳಕಂತೆ ನೀ ಬಂದೆ ನನ್ನೆದುರಲ್ಲಿನನ್ನ ಬರಡು ಹೃದಯಕೆ ತಂಪೆರೆದೆಒಲವೆಂಬ ಪನ್ನೀರ ಸಿಂಚನದಲಿ ತಂಗಾಳಿಯಲಿ ತೇಲಿ ಬಂದಿದೆನಿನ್ನ ಮೈಗೆ ಲೇಪಿಸಿದ ಪರಿಮಳನನ್ನ ಒಣ ಅಧರಕ್ಕೆ ಮುತ್ತನಿಕ್ಕಿದೆಬಾಡಿದ ತನುವನ್ನು ಉತ್ತೇಜಿಸಿದೆ ಪ್ರೀತಿಯಲಿ ತನ್ಮಯತೆ ತುಂಬಿದೆಮನದಲ್ಲಿ ಅನುರಾಗ ಚಿಮ್ಮಿದೆನಮ್ಮ ಪ್ರಣಯದ ಅಂಕುರವಾಗಿದೆನಿನ್ನಲ್ಲಿ ಒಂದಾಗುವ ಬಯಕೆಯಾಗಿದೆ
ಸ್ಥಳೀಯರ ನಿರ್ಧಾರದಂತೆ ಯೋಜನಾ ಸ್ಥಳ ನಿಗದಿ ಮಾಡುವುದಾಗಿ ಸಚಿವ ಶಿವಾನಂದ ಪಾಟೀಲ ಭರವಸೆ ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದಲ್ಲಿ ಪ್ರಜಾಸೌಧ ಹಾಗೂ ಬಸ್ ಡೀಪೋ ಸ್ಥಳ ಬದಲಾವಣೆ ಮಾಡುವ ವಿಷಯದಲ್ಲಿ ಸ್ಥಳೀಯರ ಒಕ್ಕೋರಲ ನಿರ್ಧಾರದಂತೆ ಯೋಜನಾ ಸ್ಥಳ ನಿಗದಿ ಮಾಡುವುದಾಗಿ ಬಸವವನಬಾಗೇವಾಡಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.ಮಂಗಳವಾರ ವಿಜಯಪುರ ನಗರದಲ್ಲಿರುವ ತಮ್ಮ ಗೃಹ ಕಛೇರಿಗೆ ಭೇಟಿ ನೀಡಿದ ಕೊಲ್ಹಾರ ಪಟ್ಟಣದ ನಿಯೋಗದ ಮನವಿ ಆಲಿಸಿದ ಸಚಿವರು, ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದೇನೆ. ಸಂತ್ರಸ್ತರ ಪುನರ್ವಸತಿ ಕೇಂದ್ರವಾದ ಕೊಲ್ಹಾರ ಪಟ್ಟಣ ಸೇರಿದಂತೆ ಇಡೀ ತಾಲೂಕಿನ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದೇನೆ. ಇದರ ಭಾಗವಾಗಿ ತಾಲೂಕ ಆಡಳಿತ ಸೌಧ ಹಾಗೂ ಬಸ್ ಡೀಪೋ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಸ್ಥಳೀಯರಿಗೆ ಅನುಕೂಲ ಆಗುವ ರೀತಿಯಲ್ಲಿ ಸ್ಥಳೀಯರ ಒಕ್ಕೋರಲ ನಿರ್ಧಾರದಂತೆ ಅಭಿವೃದ್ಧಿ ಯೋಜನೆ ರೂಪಿಸಲಾಗುತ್ತದೆ. ಹೀಗಾಗಿ ಅಭಿವೃದ್ಧಿ ವಿಷಯದಲ್ಲಿ ಒಡಕಿನ, ಅಪಸ್ವರದ ಮಾತುಗಳು ಬೇಡ…
ಪೊಲೀಸರ ಮೇಲೆ ಕಲ್ಲು, ಕಂಟ್ರಿ ಪಿಸ್ತೂಲ್ ನಿಂದ ಆರೋಪಿಗಳು ದಾಳಿ | ಆರೋಪಿಗಳ ಕಾಲಿಗೆ ಪೊಲೀಸರ ಗುಂಡೇಟು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಿನ್ನೆಯಷ್ಟೇ (ಜು.೧೪) ನಗರದಲ್ಲಿ ನಡೆದ ಸುಶೀಲ್ ಕಾಳೆ ಕೊಲೆ ಪ್ರಕರಣದ ಇಬ್ಬರು ಆರೋಪಿಗಳನ್ನು ಹಿಡಿಯಲು ಹೋದಾಗ ಪೊಲೀಸರ ಮೇಲೆ ಕಲ್ಲು, ಕಂಟ್ರಿ ಪಿಸ್ತೂಲ್ ನಿಂದ ಆರೋಪಿಗಳು ದಾಳಿ ನಡೆಸಿದಾಗ ಪೊಲೀಸರು ಪ್ರತಿಯಾಗಿ ಆರೋಪಿಗಳಿಬ್ಬರ ಮೇಲೆ ಗುಂಡು ಹಾರಿಸಿದ್ದು, ಅವರ ಕಾಲುಗಳಿಗೆ ಗಾಯಗಳಾದ ಘಟನೆ ಮಂಗಳವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಇಟ್ಟಂಗಿಹಾಳ ರಸ್ತೆಯಲ್ಲಿ ನಡೆದಿದೆ.ಆಕಾಶ ಕಲ್ಲವ್ವಗೋಳ (24), ಸುಭಾಸ ಬಗಲಿ (20) ಗಾಯಗೊಂಡ ಆರೋಪಿಗಳು.ಇಬ್ಬರು ಆರೋಪಿಗಳಿಗೆ ಕಾಲಿಗೆ ಗುಂಡು ತಗಲಿದ್ದು, ಆರೋಪಿಗಳನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.ಸುಶೀಲ್ ಕಾಳೆ ಕೊಲೆ ಆರೋಪಿಗಳು ಇಟ್ಟಂಗಿಹಾಳ ರಸ್ತೆ ಕಡೆಗೆ ಇರುವ ಬಗ್ಗೆ ಪೊಲೀಸರು ಖಚಿತ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರು ಆರೋಪಿಗಳ ಬಂಧನಕ್ಕೆ ತೆರಳಿದಾಗಆರೋಪಿಗಳು ಪೊಲೀಸರ ಮೇಲೇ ಕಲ್ಲು ತೂರಾಟ ನಡೆಸಿ, ತಮ್ಮ ಬಳಿ ಇದ್ದ ಕಂಟ್ರಿ ಪಿಸ್ತೂಲ್ ನಿಂದ ಪೊಲೀಸರತ್ತ…
ಮುಖ್ಯಮಂತ್ರಿಗಳಿಗೆ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಆಗ್ರಹ ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಯೋಜನೆಯಲ್ಲಿನ ಕಠಿಣ ಷರತ್ತಗಳನ್ನು ಸರಳೀಕರಣ ಮಾಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.ಮಾಧ್ಯಮ ಮಾನ್ಯತೆ ಪಡೆದ ಪತ್ರಕರ್ತರು ಮತ್ತು ಅವರ ಕುಟುಂಬಕ್ಕೆ ಈ ಯೋಜನೆಯನ್ನು ಸೀಮಿತ ಮಾಡಿರುವುದರಿಂದ ಬಹಳ ಜನ ಪತ್ರಕರ್ತರು ಯೋಜನೆಯಿಂದ ವಂಚಿತರಾಗುತ್ತಾರೆ. ಆದುದರಿಂದ ವಾರ್ತಾ ಇಲಾಖೆಯಲ್ಲಿ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳು ಮತ್ತು ಸುದ್ದಿಮಾಧ್ಯಮಗಳಲ್ಲಿ ಕೆಲಸ ಮಾಡುವ ಎಲ್ಲಾ ಪತ್ರಕರ್ತರಿಗೂ ಯೋಜನೆಯನ್ನು ವಿಸ್ತಾರ ಮಾಡಬೇಕು ಎಂದು ಕೆಯುಡಬ್ಲೂೃಜೆ ಆಗ್ರಹಿಸಿದೆ.ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಯೋಜನೆಯನ್ನು ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿಯೇ ಜಾರಿಗೆ ನೀಡಿರುವುದು ಸ್ವಾಗತಾರ್ಹವಾಗಿದ್ದು, ಅದಕ್ಕಾಗಿ ಅಭಿನಂದಿಸುವುದಾಗಿ ತಿಳಿಸಿರುವ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಯೋಜನೆ ಎಲ್ಲಾ ಪತ್ರಕರ್ತರಿಗೂ ಸಿಗುವಂತೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ವಿನಂತಿಸಿದ್ದಾರೆ.ತುಮಕೂರಿನಲ್ಲಿ ನಡೆದ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪತ್ರಕರ್ತರಿಗೆ ಉಚಿತ ಆರೋಗ್ಯ ಯೋಜನೆಯನ್ನು ಜಾರಿಗೆ ತರಬೇಕು ಎನ್ನುವ ಕರ್ನಾಟಕ ಕಾರ್ಯನಿರತ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರತೀ ವರ್ಷದಂತೆ ಈ ವರ್ಷವೂ ನಗರದ ಇಬ್ರಾಹಿಂಪುರದಲ್ಲಿ ಶ್ರೀ ಮರಗಮ್ಮ ದೇವಿ ಜಾತ್ರೆ ಮಂಗಳವಾರ ಅತ್ಯಂತ ವಿಜೃಂಭಣೆಯಿಂದ ಜರುಗಿತು.ಜಾತ್ರೆಗೂ ಮೊದಲು ಒಂದು ತಿಂಗಳು ವಾರ ಹಿಡಿಯಲಾಗಿತ್ತು. ಈ ಅವಧಿಯಲ್ಲಿ ಪ್ರತೀ ಮಂಗಳವಾರ, ಶುಕ್ರವಾರ ವಾಡಿಕೆಯಂತೆ ನೀರು ನೀಡಿ, ನೈವೇದ್ಯ ಸಮರ್ಪಣೆ ಮಾಡುವ ಮೂಲಕ ಶ್ರದ್ಧಾ ಭಕ್ತಿಯಿಂದ ದೇವಿಯ ಆರಾಧನೆ ಮಾಡಲಾಯಿತು. ಕೊನೆಯ ವಾರವಾದ ಮಂಗಳವಾರ ಅದ್ಧೂರಿಯಿಂದ ದೇವಿಯ ಜಾತ್ರೆ ನಡೆಯಿತು.ಜಾತ್ರೆಯ ದಿನ ಮರಗಮ್ಮ ದೇವಸ್ಥಾನದಲ್ಲಿ ದೇವಿಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು. ದೇವಿಯ ಗದ್ದುಗೆಗೆ ಪುಷ್ಪಾಲಂಕಾರ ಮಾಡಲಾಗಿತ್ತು. ಇಬ್ರಾಹಿಂಪುರ ಸೇರಿದಂತೆ ಸುತ್ತಲಿನ ವಿವಿಧ ಬಡಾವಣೆಗಳಿಂದ ಸಹಸ್ರಾರು ಜನ ಭಕ್ತರು ಮರಗಮ್ಮ ದೇವಸ್ಥಾನಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.ಇದೇ ಸಂದರ್ಭದಲ್ಲಿ ಭಕ್ತರಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಿರಂತರ ಅನ್ನದಾಸೋಹ ನಡೆಯಿತು. ಸಂಜೆ ವಿವಿಧ ವಾದ್ಯವೈಭವದೊಂದಿಗೆ ಮರಗಮ್ಮ ದೇವಿ ಮೂರ್ತಿಯ ಪಲ್ಲಕ್ಕಿ ಉತ್ಸವ ನಡೆಯಿತು. ಮರಗಮ್ಮ ದೇವಿ ದೇವಸ್ಥಾನದಿಂದ ಹೊರಟ ಪಲ್ಲಕ್ಕಿ ಮೆರವಣಿಗೆ ಗ್ರಾಮದ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಅಂಚೆ ವಿಭಾಗದಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿಗಳ ಆಯ್ಕೆಗೆ ನೇರ ಸಂದರ್ಶನ ಏರ್ಪಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳ ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಸ್ವವಿವರ, ಶೈಕ್ಷಣಿಕ ಪ್ರಮಾಣ ಪತ್ರದ ನಕಲುಗಳೊಂದಿಗೆ ದಿನಾಂಕ: ೧೮-೦೭-೨೦೨೫ ರಂದು ಬೆಳಿಗ್ಗೆ ೧೧-೦೦ಗಂಟೆಗೆ ನಗರದ ಸ್ಟೇಷನ್ ರಸ್ತೆಯಲ್ಲಿರುವ ಗೋಲ್ ಗುಂಬಜ್ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ೫,೦೦೦ ರೂ.ಗಳ ರಾಷ್ಟ್ರೀಯ ಉಳಿತಾಯ ಪತ್ರ ಅಥವಾ ಕಿಸಾನ್ ವಿಕಾಸ ಪತ್ರದ ರೂಪದಲ್ಲಿ ಭದ್ರತಾ ಠೇವಣಿ ಇರಿಸಬೇಕು. ಕನಿಷ್ಠ ೧೦ನೇ ತರಗತಿ ಉತ್ತೀರ್ಣರಾಗಿರುವ ನುರಿತ, ಸಂವಹನ ಕಲೆ ಹಾಗೂ ವಿಮಾ ಮಾರಾಟ ಕ್ಷೇತ್ರದಲ್ಲಿ ಅನುಭವ ಹೊಂದಿದವರಿಗೆ ಆದ್ಯತೆ ನೀಡಲಾಗುವುದು. ಆಯ್ಕೆಯಾದ ನೇರ ಪ್ರತಿನಿಧಿಗಳಿಗೆ ಆಯಾ ಇಲಾಖೆಗೆ ಸಂಬಂಧಿಸಿದಂತೆ ಸೂಕ್ತ ಕಮಿಷನ್ ನೀಡಲಾಗುವುದು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿ ಅಥವಾ ಅಂಜೆ ವಿಮಾ ಅಭಿವೃದ್ಧಿ ಅಧಿಕಾರಿ ಮೊಬೈಲ್:…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಮಾಜ ಕಲ್ಯಾಣ ಇಲಾಖೆಯಿಂದ ಪ್ರೋತ್ಸಾಹ ಧನ ಪಡೆಯಲು ೨೦೨೪-೨೫ನೇ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಮೆಟ್ರಿಕ್ ನಂತರದ ಕೋರ್ಸ್ಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿಯನ್ನು https://swdservice.karnataka.gov.in/PrizeMoneyClientAPP/ವೆಬ್ಸೈಟ್ ಮೂಲಕ ಸಲ್ಲಿಸಬಹುದಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ-ತಾಲೂಕಾ ಮಟ್ಟದ ಕಚೇರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.