ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಶಿಕ್ಷಣ ಎನ್ನುವುದು ನಿರಂತರವಾಗಿರುವ ಪ್ರಕ್ರಿಯೆ. ಒಂದು ಹಂತದವರೆಗಿನ ಶಿಕ್ಷಣ ಮುಗಿಸಿದರೆ ಸಾಲದು. ಪದವಿ ಎನ್ನುವದು ಒಂದು ಹಂತ ಅಷ್ಟೆ, ಆದ್ದರಿಂದ ಎಲ್ಲರೂ ಶಿಕ್ಷಣ ಮುಂದುವರಿಸಿ ಎಂದು ಡಾ ಆರ್.ಎಮ್.ಪಾಟೀಲ ಹೇಳಿದರು.
ಪಟ್ಟಣದ ಪಿ.ಇ.ಎಸ್ ಸಂಸ್ಥೆಯ ಅಂಗಸಂಸ್ಥೆಯಾದ ಶ್ರೀಮತಿ ಪ್ರೇಮಾ ಭೀ. ಕರ್ಜಗಿ ಪದವಿ ಮಹಾವಿದ್ಯಾಲಯ ಹಾಗೂ ಲಯನ್ಸ್ ಕ್ಲಬ್ ಸಿಂದಗಿ ಇವರ ಆಶ್ರಯದಲ್ಲಿ ಹಮ್ಮಿಕೊಂಡ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಶಿಕ್ಷಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಧನೆ ಮಾಡಲು ಕೇವಲ ಓದು ಬರಹ ಅಷ್ಟೇ ಅಲ್ಲ. ಅದರ ಜೊತೆ ಕೌಶಲ್ಯವನ್ನೂ ಅಳವಡಿಸಿಕೊಳ್ಳಬೇಕು. ಕೇವಲ ನೌಕರಿಗಾಗಿ ಓದದೇ ಬದುಕಿನ ವಿಕಾಸಕ್ಕಾಗಿ ಓದಬೇಕು ಎಂದರು.
ಇದೇ ಸಂದರ್ಭದಲ್ಲಿ ಆಲಮೇಲ ನಿರ್ಮಲಾಲಯ ಪ್ರೌಢಶಾಲೆ ಮುಖ್ಯ ಗುರುಮಾತೆ ಸಿಸ್ಟರ್ ಐರೀನ್, ಗೀತಾ ಹಿಪ್ಪರಗಿ ಎಸ್.ಆಯ್.ಅಂಕಲಗಿ ಶಿಕ್ಷಕರನ್ನು ಹಾಗೂ ರಾಷ್ಟçಮಟ್ಟದ ಬೆಸ್ಟ್ ಅಗ್ರೀ ಫ್ರೇನರ್ ಪ್ರಶಸ್ತಿ ಪುರಸ್ಕೃತ ಮನೋಜ ವಾರದ ಅವರನ್ನುಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದ ಸಮ್ಮುಖವನ್ನು ಸಂಸ್ಥೆಯ ಗೌರವ ಕಾರ್ಯದರ್ಶಿ ಬಿ.ಪಿ.ಕರ್ಜಗಿ, ಅಧ್ಯಕ್ಷತೆಯನ್ನು ತಾಲೂಕಾ ಲಾಯನ್ಸ್ ಕ್ಲಬ್ ಅಧ್ಯಕ್ಷ ಮಾಧು ಲೋಣಿ ವಹಿಸಿದ್ದರು. ಎಂ.ಜೆ.ಎಫ್ ಲಾಯನ್ ಕೆ.ಎಚ್. ಸೋಮಾಪೂರ, ಆಡಳಿತಾಧಿಕಾರಿ ಆಯ್.ಬಿ.ಬಿರಾದಾರ, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಜಿ. ಎಸ್.ಕಡಣಿ, ಆರ್.ಬಿ.ಗೋಡಕರ, ಎಸ್.ವಾಯ್.ಬೀಳಗಿ, ಪಿ.ಎಮ್.ಮಡಿವಾಳರ ಸೇರಿದಂತೆ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅಕ್ಷತಾ ಬಂದಪಟ್ಟಿ ನಿರೂಪಿಸಿದರು. ಭಾಗ್ಯಶ್ರೀ ಬಬಲೇಶ್ವರ ಸ್ವಾಗತಿಸಿದರು. ನಂದಿನಿ ಹಿರೇಮಠ ವಂದಿಸಿದರು.

