Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿಯ ಕಾಮಗಾರಿಯ ಬಿಲ್ ಪಾವತಿ ಮಾಡುವಂತೆ ಒತ್ತಾಯಿಸಿ ಅಂಬೇಡ್ಕರ್ ವೃತ್ತದಲ್ಲಿ ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಸೋಮವಾರ ಧರಣಿ ಸತ್ಯಾಗ್ರಹ ಆರಂಭಿಸಿದರು.ಈ ವೇಳೆ ಡಿಎಸ್‌ಎಸ್ ಮುಖಂಡ ಹರೀಶ ನಾಟೆಕಾರ ಮಾತನಾಡಿ, ಎಸ್‌ಎಫ್‌ಸಿ ಅನುದಾನದ ಅಡಿ ಅಂಬೇಡ್ಕರ್ ಅವರ ಹೊಸ ಮೂರ್ತಿ ಸಹಿತ ವೃತ್ತವನ್ನು ಅಭಿವೃದ್ಧಿ ಕಾಮಗಾರಿ ನಡೆಸಿ ಸುಮಾರು ಎರಡು ವರ್ಷಗಳ ಹಿಂದೆ ಈ ವೃತ್ತವನ್ನು ಉದ್ಘಾಟಿಸಲಾಗಿದೆ. ಆದರೆ ಈ ವರೆಗೆ ಕಾಮಗಾರಿಯ ಬಿಲ್ ಪಾವತಿ ಮಾಡಿರುವದಿಲ್ಲ. ಈಗಾಗಲೇ ಶೇ೯೦ ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು ಬಿಲ್ ಪಾವತಿಯಾದಲ್ಲಿ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸುವ ಮಹದಾಸೆಯನ್ನಿಟ್ಟುಕೊಂಡಿದ್ದೇವೆ. ಬಿಲ್ ಪಾವತಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಸಕ ಸಿ.ಎಸ್.ನಾಡಗೌಡರಿಗೆ, ಜಿಲ್ಲಾಧಿಕಾರಿಗಳಿಗೆ, ಲೋಕಾಯುಕ್ತರಿಗೆ ದೂರಿದರೂ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ಧರಣಿ ಸತ್ಯಾಗ್ರಹವನ್ನು ಆರಂಭಿಸಿದ್ದೇವೆ. ಈಗಲೂ ಬಿಲ್ ಪಾವತಿ ಮಾಡದಿದ್ದರೆ ಹೋರಾಟವನ್ನು ೫ ಹಂತಗಳಾಗಿ ಉಗ್ರವಾಗಿಸುತ್ತೇವೆ. ಆಗಲೂ ಬಿಲ್ ಪಾವತಿಸದಿದ್ದಲ್ಲಿ ಆತ್ಮ ಹತ್ಯೆ ಮಾಡಿಕೊಳ್ಳುತ್ತೇವೆ ಎಂದರು.ಪ್ರತಿಭಟನಾ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನೀವುಗಳು ನೀಡಿರುವ ಒಂದು ಮತ ಇಡೀ ವಿಜಯಪುರ ನಗರದ ಚಿತ್ರಣವನ್ನೇ ಬದಲಿಸಿ, ದೇಶದಲ್ಲಿ ಅತ್ಯುತ್ತಮ ಗಾಳಿ ಬಿಸುವ ನಗರ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಬರಲು ಸಾಧ್ಯವಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ನಗರದ ಶ್ರೀ 1008 ಸಹಸ್ರಫಣಿ ಪಾರ್ಶ್ವನಾಥ ಜೈನ್ ಮಂದಿರ ಹತ್ತಿರ ಭಾನುವಾರ ಲೋಕೋಪಯೋಗಿ ಇಲಾಖೆಯ ಎಸ್.ಎಚ್.ಡಿ.ಪಿ ಯೋಜನೆಯಡಿ ಮಂಜೂರಿಸಿದ ರೂ.10 ಕೋಟಿ ಅನುದಾನದಲ್ಲಿ ಸೋಲಾಪುರ ರಸ್ತೆಯಿಂದ ಇಟ್ಟಂಗಿಹಾಳ ಹೋಗುವ ರಿಂಗ್ ರಸ್ತೆ ವರೆಗೆ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಬೆಂಗಳೂರಿನಲ್ಲಿ ಇರುವ ಎಂ.ಜಿ ರಸ್ತೆ ಮೀರಿಸುವಂತೆ ನಗರದ ರಸ್ತೆಗಳು ಅಭಿವೃದ್ಧಿಗೊಂಡಿವೆ. ರಸ್ತೆಗಳ ಅಗಲೀಕರಣ ವೇಳೆ ಹಲವರು ಬೈದರು. ನಂತರ ಅವರೇ ಬಂದು ಥ್ಯಾಂಕ್ಸ್ ಹೇಳಿದ್ದಾರೆ. ಅದಕ್ಕೆ ಕಾರಣ ನಗರದಲ್ಲಿರುವ ರಸ್ತೆಗಳನ್ನು ವಿಶಾಲವಾಗಿ ಹಾಗೂ ಗುಣಮಟ್ಟದಿಂದ ಅಭಿವೃದ್ಧಿಗೊಳಿಸಿದಕ್ಕೆ ಸುಗಮ ಸಂಚಾರ, ದೂಳುಮುಕ್ತ ಜೊತೆಗೆ ನಿವೇಶನಗಳ ಬೆಲೆಯೂ ದುಪ್ಪಟ್ಟಾಗಿವೆ ಎಂದರು.ವಿದೇಶ ಸೇರಿ ಬೇರೆ ಬೇರೆ ಕಡೆಗಳಲ್ಲಿ ನೆಲೆಸಿರುವ ನಮ್ಮವರು 8-10 ವರ್ಷಗಳ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ(ಇಗ್ನೋ)ದ 2025 ರ ಪದವಿ, ಸ್ನಾತಕೋತ್ತರ ಮತ್ತು ಸರ್ಟಿಫಿಕೇಟ್ ಕೋರ್ಸ್ ಗಳಿಗೆ ಪ್ರವೇಶ ಪ್ರಾರಂಭವಾಗಿದ್ದು, ಜನೇವರಿ 31 ಕೊನೆಯ ದಿನವಾಗಿದೆ.ಈ ಕೋರ್ಸುಗಳ ಪ್ರವೇಶ ಮತ್ತೀತರ ಮಾಹಿತಿಗಾಗಿ ನಗರದ ರಾಮಮಂದಿರ ರಸ್ತೆಯ ಬಿ.ಎಲ್.ಡಿ.ಈ ಸಂಸ್ಥೆಯ ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯ ಆವರಣದಲ್ಲಿರುವ ಇಗ್ನೋ ಅಧ್ಯಯನ ಕೇಂದ್ರ 1307 ರಲ್ಲಿ ಸಂಪರ್ಕಿಸಬಹುದು. ಇಲ್ಲವೇ, www.ignouadmission.samarth.edu.in/ ನಲ್ಲಿ ಲಾಗಿನ್ ಆಗಿ ಆನ್ಲೈನ್ ಮೂಲಕ ನೊಂದಣಿ ಪಡೆಯಬಹುದು.ಹೆಚ್ಚಿನ ಮಾಹಿತಿಗಾಗಿ 9980691291 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಇಗ್ನೋ ಕೇಂದ್ರದ ಸಂಯೋಜಕ ಡಾ. ಮಂಜುನಾಥ್ ಬಿ. ಕೋರಿ ಅವರು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ಯಾವುದೇ ಕ್ಷೇತ್ರದಲ್ಲಿ ಉನ್ನತ ಮಟ್ಟದ ಗುರಿ ತಲುಪಬೇಕಾದರೆ ಆಯಾ ಕ್ಷೇತ್ರದಲ್ಲಿ ಸಕ್ರೀವಾಗಿರಬೇಕು ಅಂದಾಗ ಮಾತ್ರ ವಿದ್ಯಾರ್ಥಿ ಜೀವನವು ಯಶಸ್ಸಿನಿಂದ ಕೂಡಿರಬೇಕಾದರೆ ಸತತ ಅಧ್ಯಯನ ಶೀಲರಾಗಿರಬೇಕು ಎಂದು ಮಹಾಗಾಂವ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತç ಉಪನ್ಯಾಸಕ ಪರಮೇಶ್ವರ ಡಿ.ಪೆಂಚನಕರ್ ಅಭಿಪ್ರಾಯ ಪಟ್ಟರು.ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡಿಗೆ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಹೆಚ್ಚಾಗಿ ಗ್ರಾಮೀಣ ಭಾಗದಿಂದ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ರೈತಾಪಿ ಹಾಗೂ ಬಡತನ ಕುಟುಂಬದಿಂದ ಬಂದಿರುತ್ತಿರಿ ತಾವುಗಳು ತಮ್ಮ ಕುಟುಂಬದ ಹಿನ್ನಲೆ ಅರಿತುಕೊಂಡು ಉನ್ನತ ಸಾಧನೆಯತ್ತ ಚಿತ್ತ ಹರಿಸಬೇಕು ಎಂದ ಅವರು ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಿದಾಗಲೇ ತಮಗೆ ಕಲಿಸಿದ ಗುರುಗಳು ಹಾಗೂ ಹೆತ್ತವರು ಸಂತಸವಾಗುತ್ತದೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮುಂದುವರಿಯಬೇಕು ಎಂದರುನಿವೃತ್ತ ಉಪನ್ಯಾಸಕ ಶಿವಶರಣಪ್ಪ ಬೆಳಗುಂಪಿ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಗುರುಲಿಂಗಯ್ಯ ಎಂ.ಸಾಲಿಮಠ ಅವರು…
ಅಫಜಲಪುರದಲ್ಲಿ ಬಣಜಿಗ ಮಹಿಳಾ ಘಟಕದಿಂದ ಸಂಕ್ರಾಂತಿ ಸಂಭ್ರಮ ಆಚರಣೆ ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ಬಣಜಿಗ ಸಮೂದಯವು ಪುರಾತನ ಕಾಲದಿಂದಲೂ ಕಾಯಕ ಜೀವಿಗಳಾಗಿ ಜೀವನ ಮಾಡುತ್ತಾ ಬರುತ್ತಿದ್ದಾರೆ. ಹೀಗಾಗಿ ಇತರೆ ಸಮೂದಾಯದವರೊಂದಿಗೆ ಪ್ರೀತಿ ವಿಶ್ವಾಸದಿಂದ ಜೀವನ ಮಾಡುತ್ತಿದ್ದಾರೆ ಎಂದು ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಹೇಳಿದರು.ಪಟ್ಟಣದ ಶೆಟ್ಟಿ ಫಂಕ್ಷನ್ ಹಾಲ್‌ನಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ತಾಲೂಕು ಮಹಿಳಾ ಘಟಕದ ವತಿಯಿಂದ ನಡೆದ ಸಾಂಸ್ಕೃತಿಕ ಮತ್ತು ಜಾನಪದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು ವೀರಶೈವ ಸಮಾಜದ ಒಳಪಂಗಡಗಳಲ್ಲಿ ಬಣಜಿಗ ಸಮೂದಾಯ ಒಂದು, ಎಲ್ಲ ಸಮೂದಾಯದವರು ಸಮಾಜದ ಏಳಿಗೆಗಾಗಿ ಒಗ್ಗೂಡುವ ಮೂಲಕ ಒಳ ಪಂಗಡಗಳ ಗುರಿ ಉದ್ದೇಶ ಒಂದೆ ಆಗಿರಲಿವೆ ಎಂದ ಅವರು ಸಮಾಜ ಪ್ರತಿಯೋಬ್ಬರು ಮುನ್ನಲೆಗೆ ಬರಬೇಕಾದರೆ ಪ್ರತಿಯೊಬ್ಬರು ಕಾಯಕ ಜೀವಿಗಳಾಗಬೇಕು. ಮಹಿಳಾ ಸಂಘ ರಚನೆ ಮಾಡುವ ಮೂಲಕ ಮಹಿಳೆರನ್ನು ಮುಖ್ಯ ವಾಹಿನಿಗೆ ತರುವ ಕೆಲಸ ಸಮಾಜದ ಮುಖಂಡರು ಮಾಡುತ್ತಿರುವುದು ಒಳ್ಳೆಯ ಕಾರ್ಯವಾಗಿದೆ ಎಂದ ಅವರು ಸಮಾಜದ ಪ್ರತಿಯೊಬ್ಬರು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ತಳವಾರ ಸಮಾಜ ಸೇವಾ ಸಮಿತಿ (ಟಿ.ಎಸ್.ಎಸ್.) ಸಂಘದ ವತಿಯಿಂದ ಕಲಬುರಗಿ ಉಚ್ಛ ನ್ಯಾಯಾಲಯ ತಡೆಯಾಜ್ಞೆ ಪ್ರಕಾರ ಹಾಗೂ ತಳವಾರ ಎಸ್.ಟಿ. ಸಮುದಾಯಕ್ಕೆ ಸರಕಾರದ ಆದೇಶದ ರೋಸ್ಟರ್ ಅನ್ವಯ ಶೇ.೭% ಮೀಸಲಾತಿ ರೋಸ್ಟರ್ ಪಾಲನೆ ಮಾಡುವಂತೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ವಿಜಯಪುರ ಜಿಲ್ಲೆಯಲ್ಲಿ ದಿನಾಂಕ : ೦೯/೧೦/೨೦೨೪ ರಂದು ಕಾರ್ಯಕರ್ತ ಹಾಗೂ ಅಡುಗೆ ಸಹಾಯಕ ಹುದ್ದೆಗಳಿಗೆ ಅರ್ಜಿಗಳನ್ನು ಕರೆಯಲಾಗಿದ್ದು, ಸದರಿ ಹುದ್ದೆಗಳಿಗೆ ಅನುಗುಣವಾಗಿ ಸರಕಾರಿ ಆದೇಶ ಸಂಖ್ಯೆ : ಸಿಅಸ /ಇಂ/ ಸಹಿದು ೨೦೨೨ ದಿನಾಂಕ : ೨೮/೦೨/೨೦೨೨ ಆದೇಶದನ್ವಯ ಎಸ್.ಟಿ ವರ್ಗಕ್ಕೆ ೧೦೦ಕ್ಕೆ ಶೇ.೭% ಹುದ್ದೆಗಳು ಹಾಗೂ ಎಸ್.ಸಿ. ವರ್ಗಕ್ಕೆ ೧೦೦ಕ್ಕೆ ಶೇ.೧೭% ಹುದ್ದೆಗಳು ಮೀಸಲಾತಿ ರೊಸ್ಟರ್ ಅನ್ವಯಿಸುವಂತೆ ಸರಕಾರದ ಸ್ವಷ್ಟವಾದ ಆದೇಶವಿದ್ದು, ಆದರೆ ಸರಕಾರದ ಆದೇಶವನ್ನು ಪಾಲನೆ ಮಾಡದೇ ಪರಿಶಿಷ್ಟ ಪಂಗಡದ (ಎಸ್.ಟಿ.) ಸಮುದಾಯಕ್ಕೆ ಶೇ.೭% ರಷ್ಟು ಮೀಸಲಾತಿ ನೀಡದೇ ಶೋಷಿತ ಸಮುದಾಯಕ್ಕೆ ಅನ್ಯಾಯ ಮಾಡಿದ್ದರಿಂದ ಮಾನ್ಯ ಕಲಬುರಗಿ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತರಲಾಗಿದೆ.…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಮಾಜದಲ್ಲಿರುವಂತಹ ತಪ್ಪು, ದೋಷಗಳನ್ನು ಕವಿತೆ ಹಾಗೂ ವಚನಗಳ ಮೂಲಕ ಅವರ ವಿಚಾರದಾರೆಗಳನ್ನು ಸಮಾಜಕ್ಕೆ ಕೊಟ್ಟಂತಹ ಅನೇಕ ಮಹಾ ಪುರುಷರುಗಳನ್ನು ಸ್ಮರಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ನಗರ ಶಾಸಕರಾದ ಬಸನಗೌಡ ರಾ. ಪಾಟೀಲ(ಯತ್ನಾಳ) ಹೇಳಿದರು.ಇಂದು ನಗರದ ಕಂದಗಲ್ಲ ಶ್ರೀ ಹನಮಂತರಾಯ ರಂಗಮಂದಿರ ದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಜಾತಿಗಳನ್ನು ಮೀರಿ ಸಮಾಜದಲ್ಲಿ ಬದಲಾವಣೆಯನ್ನು ಮಾಡಿ, ಕ್ರಾಂತಿ ಮಾಡಿದಂತಹ ಸತ್ಪುರುಷರಾದ ನಮ್ಮ ಮಹಾಯೋಗಿ ವೇಮನರು ಹದಿನೈದನೇ ಶತಮಾನದಲ್ಲಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸಮಾಜವನ್ನು ಸರಿದಾರಿಗೆ ತರಲು ಯತ್ನಿಸಿದ ಮಹಾಯೋಗಿ ವೇಮನರು. ಅವರ ವಚನಗಳು ಇಂದು ನಮಗೆ ದಾರಿದೀಪವಾಗಿವೆ. ಸುಮಾರು ೧೫ ಸಾವಿರ ಪದ್ಯಗಳನ್ನು ಬರೆದು ಸಮಾಜಕ್ಕೆ ಒಂದು ಒಳ್ಳೆಯ ಕೊಡುಗೆಯನ್ನು ನಮಗೆ ನೀಡಿದ್ದಾರೆ. ಮಹಾಯೋಗಿಯ ಜೀವನ ಸಂದೇಶ ಎಲ್ಲರಿಗೂ ಪ್ರೇರಣೆಯಾಗಲಿ. ಮಹನೀಯರ ಸಾರಿದ ತತ್ವ ಸಿದ್ದಾಂತಗಳನ್ನು ಅರ್ಥ ಮಾಡಿಕೊಂಡು…
ಉದಯರಶ್ಮಿ ದಿನಪತ್ರಿಕೆ ಇಂಡಿ: ಸರಕಾರಿ ನೌಕರರ ಸಂಘ ರಾಜ್ಯದಲ್ಲಿಯೇ ದೊಡ್ಡ ಸಂಘಟನೆ, ಜನ ಪ್ರತಿನಿಧಿಗಿಂತ ಹೆಚ್ಚಿನ ಜವಾಬ್ದಾರಿ ಸರಕಾರಿ ನೌಕರರ ಮೇಲಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.ಪಟ್ಟಣದ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಘಟಕ ಇಂಡಿ ಮತ್ತು ಸರಕಾರಿ ನೌಕರರ ಸಹಕಾರಿ ಬ್ಯಾಂಕ ಇವರ ಸಹಯೋಗದಲ್ಲಿ ನಡೆದ ನೂತನವಾಗಿ ಆಯ್ಕೆಗೊಂಡ ಪದಾಧಿಕಾರಿಗಳಿಗೂ ಹಾಗೂ ನಿರ್ದೇಶಕರಿಗೂ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.ಜನರಿಗೆ ಸರಕಾರಿ ನೌಕರರ ಮೇಲೆ ವಿಶ್ವಾಸ ನಂಬಿಕೆ ಇದೆ. ವಿಶ್ವಾಸಾರ್ಹತೆಗೆ ಧಕ್ಕೆ ಬರದಂತೆ ಕೆಲಸ ಮಾಡಿ ಎಂದರು.ಸರಕಾರಿ ನೌಕರರ ಸಂಘದ ಇಂಡಿ ಘಟಕದ ಅಧ್ಯಕ್ಷ ಬಸವರಾಜ ರಾಹೂರ ಮಾತನಾಡಿ, ನೂತನ ಪದಾಧಿಕಾರಿಗಳು ನೌಕರರ ಹಿತ ಕಾಯುವ ಕೆಲಸವನ್ನು ನಿಭಾಯಿಸಬೇಕು, ಒಗ್ಗಟ್ಟು ಇದ್ದಾಗ ನಮ್ಮ ರಕ್ಷಣೆ ನಮ್ಮಿಂದಲೇ ಸಾದ್ಯವಿದೆ. ಸದಸ್ಯರು ಸಂಘಕ್ಕೆ ಶಕ್ತಿ ಯಾಗಬೇಕು ಎಂದರು.ಅದ್ಯಕ್ಷರು ಜೆಒಸಿಸಿ ಬ್ಯಾಂಕ ಆನಂದಗೌಡ ಬಿರಾದಾರ, ಕಾಂತು ಇಂಡಿ, ಅರ್ಜುನ ಲಮಾಣಿ, ಅಧ್ಯಕ್ಷರು ಇಂಡಿ ಶಿಕ್ಷಕರ ಸಂಘದ ಅಧ್ಯಕ್ಷ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಹಾಲುಮತಸ್ಥರು ಜಾಗೃತರಾಗಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ ಹೇಳಿದರು.ಪಟ್ಟಣದ ಕಿತ್ತೂರ ರಾಣಿ ಚನ್ನಮ್ಮ ವೃತ್ತದ ಬಳಿಯಿರುವ ರವಿಕಾಂತ ನಾಯ್ಕೋಡಿ ಅವರ ಮನೆಯ ಆವರಣದಲ್ಲಿ ಹಮ್ಮಿಕೊಂಡ ಕ್ರಾಂತಿವೀರ ಬ್ರಿಗೇಡ್ ಕಾರ್ಯಕ್ರಮ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಇಂದು ಸಣ್ಣಪುಟ್ಟ ಸಮುದಾಯಗಳು ರಾಜಕೀಯ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ತುಳಿತಕ್ಕೆ ಒಳಗಾಗುತ್ತಿವೆ. ಅಂತಹ ಸಮುದಾಯಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ನಮ್ಮ ಕ್ರಾಂತಿವೀರ ಬ್ರಿಗೇಡ್ ದ್ವನಿ ಎತ್ತುವ ಕೆಲಸ ಪ್ರಾಮಾಣಿಕವಾಗಿ ನಿರ್ವಹಿಸಲಿದೆ. ಬರುವ ಫೆ.೪ರಂದು ೧೦೦೮ ಶ್ರೀಗಳ ಪಾದ ಪೂಜೆ ಮೂಲಕ ಕೊಲ್ಲಾಪುರ ಶ್ರೀಗಳಿಂದ ವಿಜಯಪುರ ಜಿಲ್ಲೆಯ ಬಸವನಾಡು ಬಸವನ ಬಾಗೇವಾಡಿಯಲ್ಲಿ ಕ್ರಾಂತಿವೀರ ಬ್ರಿಗೇಡ್ ಸಮಾವೇಶ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ. ಕಾರಣ ಸಿಂದಗಿ ಹಾಗೂ ಆಲಮೇಲ ತಾಲೂಕಿನಿಂದ ಪಕ್ಷಾತೀತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡು ಸಂಘಟನೆಗೆ ಬಲ ತುಂಬಬೇಕು. ಎಂದು ಮನವಿ ಮಾಡಿದರು.ಗೋ ಎಂದರೆ ತಾಯಿ, ಅವಳನ್ನು ಕಣ್ಣೆದುರೇ ಕೊಲೆ ಮಾಡುವ ಕಾರ್ಯ ನಡೆಯುತ್ತಿದೆ. ಸದ್ಯಕ್ಕೆ ಮಹಾತ್ಮ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಆಂಧ್ರಪ್ರದೇಶದಲ್ಲಿ ಜನಿಸಿದ ೧೫ನೇ ಶತಮಾನದ ಕವಿ, ವಚನಕಾರ ವೇಮನ ದುಶ್ಚಟಗಳ ದಾಸನಾಗಿದ್ದರು. ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮಳಿಂದಾಗಿ ಮಹಾನ್ ಯೋಗಿ ಆದರು ಎಂದು ನಿವೃತ್ತ ಮುಖ್ಯಗುರು ಆರ್.ಎಸ್ ಬಿರಾದಾರ ಹೇಳಿದರು.ಸಿಂದಗಿ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಹಮ್ಮಿಕೊಂಡ ವೇಮನರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡದಲ್ಲಿ ಸರ್ವಜ್ಞ, ತಮಿಳುನಾಡಿನಲ್ಲಿ ತಿರುವಳ್ಳುವರ್ ಅವರಂತೆ ಆಂಧ್ರದಲ್ಲಿ ವೇಮನ ಅವರು ಮಹಾನ್ ಯೋಗಿ, ಸಮಾಜ ಚಿಂತಕ ಹಾಗೂ ವಚನಕಾರರು. ದುಶ್ಚಟಗಳ ದಾಸನಾಗಿದ್ದ ಅವರು ವೇಶ್ಯೆಗೆ ಮೂಗುತಿ ಕೊಡುವ ಸಂಬಂಧ ಅತ್ತಿಗೆ ಬಳಿ ಬರುತ್ತಾನೆ. ಆಗ ಆಕೆ ಕರಾರು ಹಾಕುತ್ತಾಳೆ. ವೇಮನ ಮಂಚದ ಮೇಲೆ ಕುಳಿತುಕೊಳ್ಳಬೇಕು. ವೇಶ್ಯೆ ನಗ್ನಳಾಗಿ ಬಂದು ಮಂಚವನ್ನು ಮುರು ಸುತ್ತು ಹಾಕಿ, ಹಿಮ್ಮುಖವಾಗಿ ಬಾಗಿ ಮೂಗುತಿ ಪಡೆಯಬೇಕು. ಅಲ್ಲಿಯ ತನಕ ವೇಮನ ತದೇಕಚಿತ್ತದಿಂದ ಅವಳನ್ನು ನೋಡಬೇಕು ಎನ್ನುತ್ತಾಳೆ. ಇದನ್ನು ಪಾಲಿಸಿದ ವೇಮನ ಜಿಗುಪ್ಸೆಗೊಳ್ಳುತ್ತಾನೆ. ಅಸಹ್ಯಭಾವನೆ ಮೂಡುತ್ತೆ. ಹುಟ್ಟುವಾಗ ಬೆತ್ತಲೆ, ಸತ್ತಮೇಲೆ ಬೆತ್ತಲೆ ಎನ್ನುವುದು ಅರಿವಾಗಿ ಬದುಕಿನುದ್ದಕ್ಕೂ ನಗ್ನನಾಗಿ ವೈರಗ್ಯಮೂರ್ತಿಯಾಗಿ…
