ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ತಳವಾರ ಸಮಾಜ ಸೇವಾ ಸಮಿತಿ (ಟಿ.ಎಸ್.ಎಸ್.) ಸಂಘದ ವತಿಯಿಂದ ಕಲಬುರಗಿ ಉಚ್ಛ ನ್ಯಾಯಾಲಯ ತಡೆಯಾಜ್ಞೆ ಪ್ರಕಾರ ಹಾಗೂ ತಳವಾರ ಎಸ್.ಟಿ. ಸಮುದಾಯಕ್ಕೆ ಸರಕಾರದ ಆದೇಶದ ರೋಸ್ಟರ್ ಅನ್ವಯ ಶೇ.೭% ಮೀಸಲಾತಿ ರೋಸ್ಟರ್ ಪಾಲನೆ ಮಾಡುವಂತೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ವಿಜಯಪುರ ಜಿಲ್ಲೆಯಲ್ಲಿ ದಿನಾಂಕ : ೦೯/೧೦/೨೦೨೪ ರಂದು ಕಾರ್ಯಕರ್ತ ಹಾಗೂ ಅಡುಗೆ ಸಹಾಯಕ ಹುದ್ದೆಗಳಿಗೆ ಅರ್ಜಿಗಳನ್ನು ಕರೆಯಲಾಗಿದ್ದು, ಸದರಿ ಹುದ್ದೆಗಳಿಗೆ ಅನುಗುಣವಾಗಿ ಸರಕಾರಿ ಆದೇಶ ಸಂಖ್ಯೆ : ಸಿಅಸ /ಇಂ/ ಸಹಿದು ೨೦೨೨ ದಿನಾಂಕ : ೨೮/೦೨/೨೦೨೨ ಆದೇಶದನ್ವಯ ಎಸ್.ಟಿ ವರ್ಗಕ್ಕೆ ೧೦೦ಕ್ಕೆ ಶೇ.೭% ಹುದ್ದೆಗಳು ಹಾಗೂ ಎಸ್.ಸಿ. ವರ್ಗಕ್ಕೆ ೧೦೦ಕ್ಕೆ ಶೇ.೧೭% ಹುದ್ದೆಗಳು ಮೀಸಲಾತಿ ರೊಸ್ಟರ್ ಅನ್ವಯಿಸುವಂತೆ ಸರಕಾರದ ಸ್ವಷ್ಟವಾದ ಆದೇಶವಿದ್ದು, ಆದರೆ ಸರಕಾರದ ಆದೇಶವನ್ನು ಪಾಲನೆ ಮಾಡದೇ ಪರಿಶಿಷ್ಟ ಪಂಗಡದ (ಎಸ್.ಟಿ.) ಸಮುದಾಯಕ್ಕೆ ಶೇ.೭% ರಷ್ಟು ಮೀಸಲಾತಿ ನೀಡದೇ ಶೋಷಿತ ಸಮುದಾಯಕ್ಕೆ ಅನ್ಯಾಯ ಮಾಡಿದ್ದರಿಂದ ಮಾನ್ಯ ಕಲಬುರಗಿ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತರಲಾಗಿದೆ. ಸದರಿ ಜಿಲ್ಲೆಯಲ್ಲಿ ತಳವಾರ ಎಸ್.ಟಿ. ಸಮುದಾಯಕ್ಕೆ ಶೇ.೭& ಮೀಸಲಾತಿ ರೋಸ್ಟರ್‌ನ್ನು ಪಾಲನೆ ಮಾಡಿ ನಮ್ಮ ತಳವಾರ ಸಮಾಜಕ್ಕೆ ನ್ಯಾಯ ಒದಗಿಸುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸೋಮಶೇಖರ ಎಸ್. ಜಮಾದಾರ, ಉಪಾಧ್ಯಕ್ಷ ಆನಂದ ಬಿ. ತಳವಾರ, ಗೌರವಾಧ್ಯಕ್ಷ ಶಿವಶರಣ ಎಸ್. ನಾಟೀಕಾರ, ಪ್ರಧಾನ ಕಾರ್ಯದರ್ಶಿ ಅಭಿಷೇಕ ಆರ್. ಜಮಾದಾರ, ಸಹ ಕಾರ್ಯದರ್ಶಿ ಅಮೋಘಸಿದ್ದ ಮಳಕುಂದಿ, ಮಲ್ಲನಗೌಡ ಪಾಟೀಲ, ಬಾಬು ಕೊಟ್ಟೂರ, ಪ್ರಕಾಶ ನಾಯಕೋಡಿ, ಶಶಿ ಪಾಟೀಲ, ರಾಜು ರೋಡಗಿ, ಸಿದ್ದಾರಾಮ ಬಿ. ಹತ್ತಳ್ಳಿ, ರವಿ ನಾಟೀಕಾರ, ಇನ್ನಿತರರು ಉಪಸ್ಥಿತರಿದ್ದರು.

