ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ(ಇಗ್ನೋ)ದ 2025 ರ ಪದವಿ, ಸ್ನಾತಕೋತ್ತರ ಮತ್ತು ಸರ್ಟಿಫಿಕೇಟ್ ಕೋರ್ಸ್ ಗಳಿಗೆ ಪ್ರವೇಶ ಪ್ರಾರಂಭವಾಗಿದ್ದು, ಜನೇವರಿ 31 ಕೊನೆಯ ದಿನವಾಗಿದೆ.
ಈ ಕೋರ್ಸುಗಳ ಪ್ರವೇಶ ಮತ್ತೀತರ ಮಾಹಿತಿಗಾಗಿ ನಗರದ ರಾಮಮಂದಿರ ರಸ್ತೆಯ ಬಿ.ಎಲ್.ಡಿ.ಈ ಸಂಸ್ಥೆಯ ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯ ಆವರಣದಲ್ಲಿರುವ ಇಗ್ನೋ ಅಧ್ಯಯನ ಕೇಂದ್ರ 1307 ರಲ್ಲಿ ಸಂಪರ್ಕಿಸಬಹುದು. ಇಲ್ಲವೇ, www.ignouadmission.samarth.edu.in/ ನಲ್ಲಿ ಲಾಗಿನ್ ಆಗಿ ಆನ್ಲೈನ್ ಮೂಲಕ ನೊಂದಣಿ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ 9980691291 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಇಗ್ನೋ ಕೇಂದ್ರದ ಸಂಯೋಜಕ ಡಾ. ಮಂಜುನಾಥ್ ಬಿ. ಕೋರಿ ಅವರು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
