ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಯಾವುದೇ ಕ್ಷೇತ್ರದಲ್ಲಿ ಉನ್ನತ ಮಟ್ಟದ ಗುರಿ ತಲುಪಬೇಕಾದರೆ ಆಯಾ ಕ್ಷೇತ್ರದಲ್ಲಿ ಸಕ್ರೀವಾಗಿರಬೇಕು ಅಂದಾಗ ಮಾತ್ರ ವಿದ್ಯಾರ್ಥಿ ಜೀವನವು ಯಶಸ್ಸಿನಿಂದ ಕೂಡಿರಬೇಕಾದರೆ ಸತತ ಅಧ್ಯಯನ ಶೀಲರಾಗಿರಬೇಕು ಎಂದು ಮಹಾಗಾಂವ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತç ಉಪನ್ಯಾಸಕ ಪರಮೇಶ್ವರ ಡಿ.ಪೆಂಚನಕರ್ ಅಭಿಪ್ರಾಯ ಪಟ್ಟರು.
ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡಿಗೆ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಹೆಚ್ಚಾಗಿ ಗ್ರಾಮೀಣ ಭಾಗದಿಂದ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ರೈತಾಪಿ ಹಾಗೂ ಬಡತನ ಕುಟುಂಬದಿಂದ ಬಂದಿರುತ್ತಿರಿ ತಾವುಗಳು ತಮ್ಮ ಕುಟುಂಬದ ಹಿನ್ನಲೆ ಅರಿತುಕೊಂಡು ಉನ್ನತ ಸಾಧನೆಯತ್ತ ಚಿತ್ತ ಹರಿಸಬೇಕು ಎಂದ ಅವರು ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಿದಾಗಲೇ ತಮಗೆ ಕಲಿಸಿದ ಗುರುಗಳು ಹಾಗೂ ಹೆತ್ತವರು ಸಂತಸವಾಗುತ್ತದೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮುಂದುವರಿಯಬೇಕು ಎಂದರು
ನಿವೃತ್ತ ಉಪನ್ಯಾಸಕ ಶಿವಶರಣಪ್ಪ ಬೆಳಗುಂಪಿ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಗುರುಲಿಂಗಯ್ಯ ಎಂ.ಸಾಲಿಮಠ ಅವರು ವಿದ್ಯಾರ್ಥಿಗಳು ತಮಗಿರುವ ಕಾಲಾವಧಿಯಲ್ಲಿಯೇ ಯಶಸ್ಸು ಕಾಣಬೇಕು ಅಂದಾಗ ಸಮಾಜದಲ್ಲಿ ಮಾದರಿಯಾಗಲು ಸಾಧ್ಯ ಎಂದರು.
ಈ ಸಂಧರ್ಭದಲ್ಲಿ ಸಿಬ್ಬಂದಿಗಳಾದ ಪ್ರಶಾಂತ ಬಿಂದಗೆ, ಜ್ಯೋತಿಲಕ್ಷ್ಮಿ ಬಿರಾದಾರ, ಅನಿತಾ ಹನ್ನೂರೆ, ರಾಧಾಬಾಯಿ, ಸೈಯದ್, ಚಿದಾನಂದ, ಯಲ್ಲಮ್ಮ ಬತ್ತಾಸೆ, ಶಿವರಾಯಗೌಡ, ರಾಜಕುಮಾರ ಪಾಟೀಲ, ಶಿವಾನಂದ, ರಾಜಕುಮಾರ, ಶಿವಕಾಂತಮ್ಮ, ನಿಖಿತಾ ಪ್ರವೀಣ,ಸುಭಾಸ ಪವಾರ, ಲೀನಾ ಟಿಕ್ಕೆ, ಪೂಣ ðಮಾ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

