ಬಾಲಿವುಡ್ ನಟ ಗೋವಿಂದ | ಮಹಾರಾಷ್ಟ್ರ ಡಿಸಿಎಂ ಏಕನಾಥ ಶಿಂಧೆ ಭಾಗಿ | ಬಂಜಾರಾ ಮುಖಂಡ ಡಾ.ಬಾಬು ರಾಜೇಂದ್ರ ನಾಯಕ ಮಾಹಿತಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸೋಮದೇವರ ಹಟ್ಟಿ ಪುಟ್ಟ ಗ್ರಾಮವಾದರೂ ಅಧ್ಯಾತ್ಮಿಕವಾಗಿ ಪ್ರಸಿದ್ಧಿ.
ಗೋವಾ, ರಾಜಸ್ತಾನ, ತ್ರಿಪುರಾ ಹೀಗೆ ನಾನಾ ಭಾಗಗಳಿಂಧ ಗಣ್ಯಾತಿಗಣ್ಯರ ದಂಡು ಸೋಮದೇವರ ಹಟ್ಟಿಗೆ ಆಗಮಿಸಿದ್ದುಂಟು. ತ್ರಿಪುರಾ ಮಾಜಿ ಸಿಎಂ ಗಿರಿಧರ ಗಮಾಂಗ್ ಅನೇಕ ಬಾರಿ ಈ ನೆಲದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ್ದು ಸಹ ಇದೆ.
ಈ ಬಾರಿ ಇದೇ ದಿನಾಂಕ ೧೩ ರಿಂದ ನಡೆಯಲಿರುವ ಸೋಮದೇವರ ಹಟ್ಟಿಯ ಸುಪ್ರಸಿದ್ಧ ದುರ್ಗಾದೇವಿ ಜಾತ್ರಾ ಮಹೋತ್ಸವಕ್ಕೆ ಭರದ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಈ ಬಾರಿ ಬಾಲಿವುಡ್ ಖ್ಯಾತ ನಟ ಗೋವಿಂದ, ಮಹಾರಾಷ್ಟç ಮುಖ್ಯಮಂತ್ರಿ ಏಕನಾಥ ಶಿಂಧೆ ಸೇರಿದಂತೆ ಅನೇಕ ಗಣ್ಯರ ದಂಡು ಭಾಗವಹಿಸಲಿದೆ. ದೇವಾಲಯದ ಧರ್ಮದರ್ಶಿ ಜಗನು ಮಹಾರಾಜರ ನೇತೃತ್ವದಲ್ಲಿ ಈ ಎಲ್ಲ ಕಾರ್ಯಕ್ರಮಗಳು ನಡೆಯಲಿವೆ.
ಈ ಕುರಿತು ವಿವರಣೆ ನೀಡಿದ ಡಾ.ಬಾಬು ರಾಜೇಂದ್ರ ನಾಯಕ, ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ದಿ.೧೩ ರಿಂದ ಜಾತ್ರಾ ಮಹೋತ್ಸವ ಆರಂಭಗೊಳ್ಳಲಿದೆ. ಅಂದು ಪುಣೆ ತಂಡದವರಿಂದ ರಾತ್ರಿ ೯-೦೦ ಗಂಟೆಗೆ ಮರಾಠಿ ಲಾವಣಿ ಪದಗಳ ಗಾಯನ ನಡೆಯಲಿದೆ.
ದಿ.೧೪ ರಂದು ದೇವಿಯ ಮಹಾಪೂಜೆ, ಆರತಿ ಪ್ರಾತ:ಕಾಲದಲ್ಲಿ ನಡೆಯಲಿದೆ. ದಿ.೧೪ ರಂದು ನಡೆಯಲಿರುವ ಸಮಾರಂಭದಲ್ಲಿ ಖ್ಯಾತ ಬಾಲಿವುಡ್ ನಟ ಗೋವಿಂದ್, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ ಶಿಂಧೆ, ಕೇಂದ್ರ ಸಚಿವ ಶ್ರೀಪಾದ ನಾಯಿಕ, ಗೋವಾ ಸಚಿವ ಸುಭಾಸ ಪಲ್ಲದೇಸಾಯಿ, ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ಸಂಜಯ ರಾಠೋಡ, ವಿಧಾನಸಭೆ ಉಪಾ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಸಂಸದ ರಮೇಶ ಜಿಗಜಿಣಗಿ, ಗೋವಾ ಶಾಸಕ ಮೈಖಲ್ ಲೋಬೋ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದು, ಸಚಿವ ಡಾ.ಎಂ.ಬಿ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.
ಮೋಹನ್ ಶಂಕರ ಚವ್ಹಾಣ, ಡಿ.ಎಚ್.ಜಾಧವ್, ಭೀಮು ರಾಠೋಡ್, ಸುನಿಲ್ ಪೂಜಾರಿ, ಮೋಹನ್ ಚವ್ಹಾಣ, ರವಿ ಚವ್ಹಾಣ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಹೆಲಿಕ್ಯಾಪ್ಟರ್ ಮೂಲಕ ಪುಷ್ಪಾರ್ಚನೆ
ಈ ಬಾರಿಯೂ ದೇವಾಲಯಕ್ಕೆ ಹೆಲಿಕ್ಯಾಪ್ಟರ್ ಮೂಲಕ ಪುಷ್ಪಾರ್ಚನೆ ನಡೆಯಲಿದೆ, ನಂತರ ಮಧ್ಯಪ್ರದೇಶ, ರಾಜಸ್ತಾನ ಸೇರಿದಂತೆ ವಿವಿಧ ಕಲಾ ತಂಡಗಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಲಿದೆ.

