Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ವಿರುದ್ಧ ತೀವ್ರ ಕಿಡಿಕಾರಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಉದಯರಶ್ಮಿ ದಿನಪತ್ರಿಕೆ ಕೋಲಾರ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆ ಅಧಿವೇಶನದಲ್ಲಿ ಕೊತ್ವಾಲ್ ರಾಮಚಂದ್ರ ರೀತಿ ವರ್ತಿಸಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಆರೋಪಿಸಿದ್ದಾರೆ.ಕೋಲಾರದಲ್ಲಿ ಶ್ರೀರಾಮ ಸೇನೆ ಆಯೋಜಿಸಿದ್ದ ರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾರಿ ಮೆರವಣಿಗೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರ ವಿರುದ್ಧ ತೀವ್ರವಾಗಿ ಕಿಡಿಕಾರಿದರು.ವಿಧಾನಸಭೆಯಲ್ಲಿ ಡಿಕೆ ಶಿವಕುಮಾರ್ ಅವರ ವರ್ತನೆ ಸರಿಯಿಲ್ಲ ಎಂದು ಆರೋಪಿಸಿದ ಅವರು, “ಅವರ ನಡೆ ಕೊತ್ವಾಲ್ ರಾಮಚಂದ್ರ ಕಾಲವನ್ನು ನೆನಪಿಸುವಂತಿತ್ತು ಎಂದು ಹೇಳಿದ್ದಾರೆ.ದಮ್ಮು, ತಾಕತ್ತಿನ ಬಗ್ಗೆ ಮಾತನಾಡುವ ಇಂತಹವರು ಮುಖ್ಯಮಂತ್ರಿ ಆದರೆ ಗತಿಯೇನು? ಡಿ.ಕೆ ಶಿವಕುಮಾರ್ ಅವರು ಸಿಎಂ ಆಗಬೇಕೆಂದು ನಮ್ಮವರನ್ನೂ ಭೇಟಿ ಮಾಡಿ ಚರ್ಚೆ ಮಾಡಿದ್ದು, ಕೇಂದ್ರದವರು ಒಪ್ಪದ ಕಾರಣ ಕಾಂಗ್ರೆಸ್‌ನಲ್ಲೇ ಇದ್ದುಕೊಂಡು ಹೋರಾಟ ಮಾಡುತ್ತಿದ್ದಾರೆ. ಬಿಜೆಪಿ ನನ್ನನ್ನು ಬೆಳೆಸಿದ ಪಕ್ಷವಾಗಿದ್ದು, ಹೀಗಾಗಿ ನಾನೆಂದೂ ಬಿಜೆಪಿಗನಾಗಿದ್ದು, ಯಡಿಯೂರಪ್ಪ ಮಾದರಿಯಲ್ಲಿ ಪಕ್ಷ ತೊರೆಯುವ ಮಾತೇ…
ಪ್ರೇಮ ಬರಹ ಕೋಟಿ ತರಹ(ಪ್ರಣಯ ಪಕ್ಷಿಗಳ ಮೋಹಕ ಪದಗಳ ಗುಚ್ಛ) ಲೇಖನ – ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಗೆಳತಿ ನಿನ್ನ ಹೆಸರು ಕೇಳಿದರೆ ಸಾಕು ಮೈಯಲ್ಲಿರುವ ನರನಾಡಿಗಳೆಲ್ಲ ಮಿಡಿಯುವ ವೀಣೆಯಾಗುತ್ತವೆ. ಮನಸ್ಸು ಬಾನಾಡಿಯಾಗಿ ಬಾನೆತ್ತರಕ್ಕೆ ಚಿಮ್ಮುತ್ತವೆ. ವರ್ಷದ ನಂತರ ನಿನ್ನ ಭೇಟಿಯಾಗುವ ಕ್ಷಣ ಸನಿಹ ಬಂದಂತೆ ಮನದಲ್ಲೇನೋ ಹೇಳಲಾಗದ ಭಾವ ಇದುವರೆಗೂ ಕಾಣದ ಕಂಪನ. ಅಂದ ಚೆಂದದ ಮೈ ಮಾಟಕ್ಕೆ ಕಿರೀಟವಿಟ್ಟಂತೆ ನಿನ್ನ ನಡತೆ. ನಿನಗೆ ಸೋಲದ ಗಂಡು ಇನ್ನೂ ಹುಟ್ಟಿಯೇ ಇಲ್ಲ ಅನಿಸುತ್ತದೆ. ಎಂಥ ಗಂಡೆದೆಯಿರುವವನೂ ನಿನ್ನ ಮುಂದೆ ಮಂಡೆಯೂರಿ ನಿನ್ನ ಪ್ರೀತಿಗಾಗಿ ಅರ್ಜಿ ಗುಜರಾಯಿಸುವನು.ನಿನ್ನ ಮೃದು ಹೃದಯ ತನ್ನದಾಗಿಸಿಕೊಳ್ಳಲು ಹಂಬಲಿಸದೇ ಇರನು. ಪರಿ ಪರಿಯಾಗಿ ಬೇಡಿಕೊಳ್ಳದೇ ಇರನು. ಕವಿಯ ಕಲ್ಪನೆಗೆ ರೂಪ ಕೊಟ್ಟಂತಿರುವ ಅಪರೂಪದ ರೂಪ ನಿನ್ನದು. ಪ್ರಥಮ ನೋಟದಲ್ಲೇ ಯಾರೂ ಕಾಲಿಡದ ನನ್ನ ಹೃದಯದ ಅರಮನೆಯ ಕೀಲಿ ತೆರೆದು ನಿನಗೆ ಪ್ರವೇಶ ನೀಡಿಯಾಗಿದೆ. ಹೊರ ಹೋಗದಂತೆ ಹೃದಯಕ್ಕೆ ದೊಡ್ಡ ಬೀಗವನ್ನೂ ಅಂದೇ ಜಡಿದಾಗಿದೆ.…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಭಾರತೀಯ ಜನತಾ ಪಕ್ಷ ವತಿಯಿಂದ ಪಂಡಿತ್ ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ ಅಂಗವಾಗಿ ಕಾರ್ಯಕರ್ತರಿಗಾಗಿ ಮಾರ್ಚ್ 29ರಿಂದ ಮೂರು ದಿನಗಳ ಕಾಲ ವಿಶೇಷ ಪ್ರಶಿಕ್ಷಣ ವರ್ಗವನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಸಿದ್ದರಾಮ ಕಾಖಂಡಕಿ ತಿಳಿಸಿದ್ದಾರೆ.ಸ್ಥಳೀಯ ವಿಶ್ವಭಾರತಿ ವಿದ್ಯಾವರ್ಧಕ ಸಂಘದ ಶ್ರೀ ಯಲ್ಲಮ್ಮ ದೇವಿ ಶಾಲೆಯಲ್ಲಿ ನಡೆಯಲಿರುವ ಈ ವರ್ಗವನ್ನು ಎರಡು ತಂಡಗಳಲ್ಲಿ ಹಮ್ಮಿಕೊಳ್ಳಲಾಗಿದೆ.ಮೊದಲ ತಂಡದ ಪ್ರಶಿಕ್ಷಣ ವರ್ಗ ಮಾರ್ಚ್ 29ರಂದು ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದ್ದು, ಬಸವನ ಬಾಗೇವಾಡಿ ಪುರಸಭೆ, ಮುತ್ತಗಿ ಜಿಪಂ, ಗೊಳಸಂಗಿ ಜಿಪಂ, ನಿಡಗುಂದಿ ಪ.ಪಂ ಹಾಗೂ ಆಲಮಟ್ಟಿ ಜಿ.ಪಂ ವ್ಯಾಪ್ತಿಯ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಇದರ ಸಮಾರೋಪ ಸಮಾರಂಭ ಮಾರ್ಚ್ 30ರಂದು ಮಧ್ಯಾಹ್ನ 12.30ಕ್ಕೆ ನಡೆಯಲಿದೆ.ಇನ್ನೂ ಎರಡನೇ ತಂಡದ ವರ್ಗ ಮಾರ್ಚ್ 30ರಂದು ಸಂಜೆ 5 ಗಂಟೆಗೆ ಆರಂಭವಾಗಲಿದ್ದು, ಕೊಲ್ಹಾರ ಪ.ಪಂ, ಮನಗೂಳಿ ಪ.ಪಂ, ಉಕ್ಕಲಿ, ಮುಳವಾಡ ಹಾಗೂ ಕೂಡಗಿ ಜಿ.ಪಂ ವ್ಯಾಪ್ತಿಯ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಈ ತಂಡದ ಸಮಾರೋಪ ಮಾರ್ಚ್…
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಮಕ್ಕಳ ಬದುಕಿನಲ್ಲಿ ಪಾಲಕರು ಆಕರ್ಷಣೆಯನ್ನು ಉಂಟು ಮಾಡುವವರಾಗಿರಬೇಕು ವಿಪರ್ಯಾಸವೆಂದರೆ ಇಂದು ಮಕ್ಕಳನ್ನು ಆಕರ್ಷಿಸುತ್ತಿರುವುದು ಮೊಬೈಲ್ ಫೋನುಗಳು.ನಾವು ಚಿಕ್ಕಂದಿನಲ್ಲಿ ಆಯಸ್ಕಾಂತ ಮತ್ತು ಕಾಂತ ಕ್ಷೇತ್ರದ ಕುರಿತು ಹೇಳುವಾಗ ಒಂದು ಹಾಳೆಯ ಮೇಲೆ ಆಯಸ್ಕಾಂತದ ಪುಟ್ಟ ತುಂಡನ್ನು ಇಟ್ಟು ಕಾಗದದ ಮತ್ತೊಂದು ಭಾಗದಲ್ಲಿ ಪುಟ್ಟ ಗುಂಡು ಸೂಜಿಯನ್ನು ಇಲ್ಲವೇ ಪಿನ್ನನ್ನು ಇಟ್ಟು ಆಯಸ್ಕಾಂತವನ್ನು ಸರಿಸುತ್ತಾ ಹೋದಾಗ ಗುಂಡು ಸೂಜಿಯು ಆಯಸ್ಕಾಂತದ ಆಕರ್ಷಣೆಗೆ ಒಳಗಾಗಿ ಸರಿಯುತ್ತದೆ ಎಂಬುದನ್ನು ನಮ್ಮ ಪಠ್ಯದಲ್ಲಿ ಓದುತ್ತಿದ್ದೆವಲ್ಲದೇ ಪ್ರಾಯೋಗಿಕವಾಗಿ ಮಾಡುತ್ತಿದ್ದೆವು ಕೂಡ.ಇಂದಿನ ಕಾಲದಲ್ಲಿ ಅಪ್ಪ-ಅಮ್ಮ ಆಯಸ್ಕಾಂತವಾಗಿಲ್ಲ ಬದಲಾಗಿ ಮೊಬೈಲ್ ಅವರಿಗೆ ಆಕರ್ಷಣೆಯನ್ನು ಉಂಟುಮಾಡುತ್ತಿವೆ. ಶಾಲೆಯಿಂದ ಬರುವ ಮಕ್ಕಳು ತಮ್ಮ ಪಾಲಕರಿಗೆ ಶಾಲೆಯಲ್ಲಿ ನಡೆದ ಎಲ್ಲ ವಿಷಯಗಳನ್ನು ಹೇಳಿ ವಿಚಾರವಿನಿಮಯ ಮಾಡಿ ಕೊಳ್ಳಬೇಕಾದ ಸಮಯದಲ್ಲಿ ಮೊಬೈಲ್ ಹಿಡಿದು ಕುಳಿತುಕೊಳ್ಳುತ್ತಿದ್ದಾರೆ ಎಂದರೆ ಪಾಲಕರು ಎಲ್ಲಿ ವಿಫಲರಾಗಿದ್ದಾರೆ ಎಂಬುದನ್ನು ಕುರಿತು ನಾವು ಯೋಚಿಸಬೇಕಾಗಿದೆ.ಇತ್ತೀಚೆಗೆ ಬಿಜಾಪುರ ಜಿಲ್ಲೆಯ ಒಂದು ಪುಟ್ಟ ತಾಲೂಕಿಗೆ ಕಾರ್ಯಕ್ರಮಕ್ಕೆ ನಾನು ಹೋದಾಗ…
ಜಮಖಂಡಿ ಭಾಗದಲ್ಲಿ ಮಹಿಳೆಯರಿಂದ ಭರದ ಸಿದ್ಧತೆ | ಶ್ಯಾವಿಗಿ, ಹಪ್ಪಳ, ಸಂಡಿಗೆ ಬಿಸಿಲಿಗೆ ಗರಿಗರಿ ಉದಯರಶ್ಮಿ ದಿನಪತ್ರಿಕೆ ವರದಿ: ಸಿದ್ರಾಮ್ ಎಮ್ ಇಟ್ಟಿಜಮಖಂಡಿ: ಬೇಸಿಗೆ ಬಿಸಿಲಿನ ತಾಪ ನಮಗೆ ಸಹಿಸಲಸಾಧ್ಯ. ಆದರೆ ಶ್ಯಾವಿಗಿ, ಹಪ್ಪಳ, ಸಂಡಿಗೆ, ಚಕ್ಕುಲಿ ಇತರೆ ಅಡುಗೆ ಮನೆಯ ಕುರುಕುಲು ಪದಾರ್ಥಗಳ ತಯಾರಿಗೆ ಈ ವಸಂತ ಮಾಸ ಒಳ್ಳೆ ವಾತಾವರಣ..ಹೌದು, ಬೇಸಿಗೆ ಆರಂಭವಾಗುತ್ತಿದ್ದಂತೆ ಗ್ರಾಮೀಣ ಭಾಗದ ಹಳ್ಳಿಗರ ಮನೆಗಳ ಅಂಗಳ, ಮಹಡಿ ಮೇಲೆ ಈ ಹಪ್ಪಳ, ಶ್ಯಾವಿಗೆ, ಸಂಡಿಗೆ ಕಂಡು ಬರುತ್ತವೆ. ಇಡೀ ವರ್ಷದ ಊಟಕ್ಕೆ ನಂಚಿಕೆಗೆ ಬೇಕಾಗುವ ಈ ಪದಾರ್ಥ ರೆಡಿ ಮಾಡಿ, ಒಣಗಿಸಿ, ತುಂಬಿಟ್ಟುಕೊಳ್ಳುವ ವಾಡಿಕೆ ಇಲ್ಲಿದೆ.ಬಯಲುಸೀಮೆ ಉತ್ತರ ಕರ್ನಾಟಕ ಭಾಗದ ಮನೆಯ ಮಹಿಳೆಯರು ಹರಟೆ ಹೊಡೆಯುತ್ತಾ, ಜನಪದ ಹಾಡು ಗುನುಗುತ್ತಾ ಇವುಗಳ ತಯಾರಿಯಲ್ಲಿ ತೊಡಗಿದ್ದಾರೆ. ಅದರಲ್ಲೂ ಸಾಮಾನ್ಯವಾಗಿ ಯುಗಾದಿ ಹಬ್ಬದ ಸುತ್ತಮುತ್ತ ಇಂಥ ಪದಾರ್ಥಗಳು ರೆಡಿಯಾಗುತ್ತವೆ.ಮನೆ ಅಂಗಳದಲ್ಲಿ, ಚಾವಣಿಗಳಲ್ಲಿ ಈ ತಿನಿಸುಗಳು ಬಿಸಿಲಿಗೆ ಒಣಗುತ್ತಿವೆ. ಇವೇನೂ ಒಂದೆರಡು ದಿನಕ್ಕೆ ಆಗುವಷ್ಟು ಅಲ್ಲ. ಇಡಿ ವರ್ಷ…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ತಾಲೂಕಿನ ಮುತ್ತೂರ ಗ್ರಾಮದಲ್ಲಿ ಬಿಎಲ್‌ಡಿಇ ಸಂಸ್ಥೆಯ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ವಿಶೇಷ ಶಿಬಿರದ ಅಂಗವಾಗಿ ಜಾನುವಾರುಗಳ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರ ಗುರುವಾರ ಯಶಸ್ವಿಯಾಗಿ ನಡೆಯಿತು.ತಾಲೂಕಿನ ತುಂಗಳ ಗ್ರಾಮದ ದಿವಂಗತ ಬಾಲವ್ವ ಪಾಂಡಪ್ಪ ಗಿರಡ್ಡಿ ಅವರ ಸ್ಮರಣಾರ್ಥವಾಗಿ, ಜಮಖಂಡಿಯ ಬಸವಜ್ಯೋತಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಅವರ ಪ್ರಾಯೋಜಕತ್ವದಲ್ಲಿ ಈ ಶಿಬಿರ ಆಯೋಜಿಸಲಾಯಿತು. ಮುತ್ತೂರ ಗ್ರಾಮದ ಹಿರಿಯರಾದ ಭೀಮಪ್ಪ ಹಿಪ್ಪರಗಿ ಅವರು ಗೋವು ಪೂಜೆ ನೆರವೇರಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.ಶಿಬಿರದಲ್ಲಿ ಆಕಳು, ಎಮ್ಮೆ, ಆಡು, ನಾಯಿ ಸೇರಿದಂತೆ ವಿವಿಧ ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸಿ, ಚುಚ್ಚು ಮದ್ದು, ಮಾತ್ರೆಗಳು, ಔಷಧಿ ಹಾಗೂ ಪೌಡರ್‌ಗಳನ್ನು ನೀಡಿ ಚಿಕಿತ್ಸೆ ನೀಡಲಾಯಿತು. ಜಾನುವಾರುಗಳ ಮಾಲೀಕರಿಗೆ ಅಗತ್ಯ ಔಷಧಿಗಳನ್ನು ವಿತರಿಸಲಾಯಿತು.ಜಮಖಂಡಿಯ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಸಿ.ಎಸ್. ನಿಂಬಾಳ, ಡಾ.ಆರ್.ಬಿ.ನಾಗರಳ್ಳಿ, ಮುತ್ತೂರಿನ ಪಶು ಚಿಕಿತ್ಸಾಲಯದ ಹಿರಿಯ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಶರಣ ಪರಂಪರೆಯಲ್ಲಿ ಸಾಮೂಹಿಕ ವಿವಾಹಮಹೋತ್ಸವದ ಪರಿಕಲ್ಪನೆ ಆರಂಭಗೊಂಡಿದ್ದು, ಇಂದಿಗೂ ಸರಳ ಸಾಮೂಹಿಕ ವಿವಾಹಗಳು ಮಹತ್ವ ಪಡೆದುಕೊಂಡಿವೆ ಎಂದು ಬಾಳೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.ಅವರು ತಾಲ್ಲೂಕಿನ ಕಡಣಿ ಗ್ರಾಮದಲ್ಲಿ ಶರಣ ಭೋಗೇಶ್ವರ ಜಾತ್ರಾಮಹೋತ್ಸವದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.ವೈರಾಗಿಗಳು, ಚಟಗಳ ದಾಸರು, ದುಡಿದು ತಿನ್ನದವರು ಗಂಡಸರಲ್ಲ ಇಂಥವರು ಮದುವೆಯಾಗಬಾರದು ಎಂದು ಹೇಳಿದ ಸ್ವಾಮೀಜಿ ಸಂಪತ್ತಿನ ವ್ಯಾಮೋಹ ಬಿಟ್ಟು ಆದರ್ಶದ ಸರಳತೆ ಸಂತೃಪ್ತಿ ಬದುಕನ್ನು ತಮ್ಮದಾಗಿಸಿಕೊಳ್ಳಬೇಕೆಂದರು.ಪ್ರತಿಯೊಬ್ಬರೂ ಮೂರು ಮಕ್ಕಳನ್ನು ಹೆತ್ತು ಮಕ್ಕಳನ್ನೆ ಸಂಪತ್ತು ಮಾಡಿ ಎಂದು ನವದಂಪತಿಗಳಿಗೆ ಸಲಹೆ ನೀಡಿದರು.ಉದ್ಘಾಟನೆ ಮಾಡಿ ಮಾತನಾಡಿದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ‘ ಸರಳಮದುವೆಯ ಸಂಪ್ರದಾಯ ಹೆಚ್ಚೆಚ್ಚು ನಡೆಯಲಿ, ಮಾಜಿಸಚಿವ ದಿ. ಎಂ.ಸಿ.ಮನಗೂಳಿ ಪ್ರತಿಷ್ಠಾನ ಸಾಮೂಹಿಕ ಮದುವೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು. ಅಧ್ಯಕ್ಷತೆಯನ್ನು ಶಾಸಕ ಅಶೋಕ ಮನಗೂಳಿ ವಹಿಸಿದ್ದರು.೧೧ ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.ವೇದಿಕೆಯಲ್ಲಿ ಆಲಮೇಲದ ಚಂದ್ರಶೇಖರ ಸ್ವಾಮೀಜಿ, ಕಡಕೋಳದ ರುದ್ರಮುನಿ ಶಿವಾಚಾರ್ಯರು,…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಲಿಂಗ ದೀಕ್ಷೆ ಎಂದರೆ ಆತ್ಮಶುದ್ಧಿ, “ಲಿಂಗ ದೀಕ್ಷೆ ಎನ್ನುವುದು ಕೇವಲ ಬಾಹ್ಯ ಕ್ರಿಯೆಯಲ್ಲ, ಅದು ಅಂತರಂಗದ ಅರಿವನ್ನು ಜಾಗೃತಗೊಳಿಸುವ ಪ್ರಕ್ರಿಯೆ. ಶರೀರಕ್ಕೆ ಸ್ನಾನ ಹೇಗೋ, ಆತ್ಮಕ್ಕೆ ಲಿಂಗ ದೀಕ್ಷೆ ಹಾಗೆ ಸಂಸ್ಕಾರ ನೀಡುತ್ತದೆ,” ಎಂದು ಡಾ ಅಲ್ಲಮಪ್ರಭು ಮಹಾಸ್ವಾಮಿಗಳು ಹೇಳಿದರು ಜಮಖಂಡಿ ತಾಲೂಕಿನ ತುಬಚಿ ಗ್ರಾಮದ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವದ ಪುಣ್ಯ ಸಂದರ್ಭದಲ್ಲಿ ಇಲ್ಲಿನ ಶ್ರೀಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಸುಮಾರು 250ಕ್ಕೂ ಹೆಚ್ಚು ಜನರಿಗೆ ಲಿಂಗ ದೀಕ್ಷೆ ನೀಡಿ ಬಸವಣ್ಣವರ ವಾಣಿಯಂತೆ ಕಾಯಕವೇ ಕೈಲಾಸ ಪ್ರತಿಯೊಬ್ಬರೂ ತಮ್ಮ ದೈನಂದಿನ ಕಾಯಕದಲ್ಲಿ ನಿಷ್ಠೆ ಹೊಂದಿರಬೇಕು ಮತ್ತು ಅರಿವಿನ ದಾರಿಯಲ್ಲಿ ಸಾಗಬೇಕು ಎಂದು ಅವರು ಕರೆ ನೀಡಿದರು.ಶೇಗುಣಸಿಯ ಮಹಾಂತಪ್ರಭು ಸ್ವಾಮೀಜಿಯವರು ಮಾತನಾಡಿ, ಲಿಂಗ ಧರಿಸಿದ ನಂತರ ಸಾತ್ವಿಕ ಜೀವನ ನಡೆಸುವುದು, ಅಹಿಂಸೆ ಮತ್ತು ಸತ್ಯದ ಹಾದಿಯಲ್ಲಿ ನಡೆಯುವುದು ಮುಖ್ಯ ಎಂದು ಕಿವಿಮಾತು ಹೇಳಿದರು.ಗುರು-ಹಿರಿಯರ ಸಮ್ಮುಖದಲ್ಲಿ ನಡೆದ ಈ ಪವಿತ್ರ ಕಾರ್ಯಕ್ರಮದಲ್ಲಿ ಭಕ್ತರು ಮಠದ ಆವರಣದಲ್ಲಿ ಶ್ರದ್ಧಾ ಭಕ್ತಿಯಿಂದ…
ಅಥಣಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತಹಶೀಲ್ದಾರ್ ಸಿದರಾಯ ಬೋಸಗಿ ಸೂಚನೆ ಉದಯರಶ್ಮಿ ದಿನಪತ್ರಿಕೆ ಅಥಣಿ: ಏಪ್ರಿಲ್ 14 ರಂದು ತಾಲೂಕಾ ಆಡಳಿತದಿಂದ ಆಚರಿಸುವ ಡಾ.ಬಿ.ಆರ್ ಅಂಬೇಡ್ಕರ್ ಅವರ ಜಯಂತಿಯ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ತಹಶೀಲ್ದಾರ್ ಸಿದರಾಯ ಬೋಸಗಿ ಹೇಳಿದರು.ಅವರು ತಾಲೂಕಾ ಪಂಚಾಯತ ಸಭಾ ಭವನದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಡಾ. ಬಿ, ಆರ್, ಅಂಬೇಡ್ಕರ್ ರವರ ಜನ್ಮದಿನಾಚರಣೆಯನ್ನು ತಾಲ್ಲೂಕಿನಾದ್ಯಂತ ಅತ್ಯಂತ ಸಂಭ್ರಮ ಹಾಗೂ ಶಿಸ್ತುಬದ್ಧವಾಗಿ ಬಾಬಾ ಸಾಹೇಬರ ವಿಚಾರಧಾರೆಗಳು ಸರ್ವರಿಗೂ ದಾರಿದೀಪವಾಗಿವೆ ಏಪ್ರಿಲ್ 14ರಂದು ನಡೆಯಲಿರುವ ಜಯಂತಿಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ ಅವರ ತತ್ವಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅರ್ಥಪೂರ್ಣವಾಗಿ ಆಚರಿಸಿ ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮಗಳು ಎಲ್ಲಾ ಇಲಾಖೆಗಳ ಸಮನ್ವಯದಿಂದ ಕೆಲಸ ಮಾಡಬೇಕು ಹಾಗೂ ಎಲ್ಲ ಇಲಾಖೆ ಅಧಿಕಾರಿಗಳಿಗೆ ಸೂಚಿಸಿರುವ ಹಾಗೆ ತಮ್ಮ ತಮ್ಮ ಕೆಲಸಗಳನ್ನು ತಾವು ಶ್ರದ್ದೆಯಿಂದ ನೆರವೇರಿಸಬೇಕು. ಅನೇಕ ದಲಿತ ಮುಖಂಡರು…
