Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ದೇಶಕ್ಕೆ ಮಾದರಿಯಾದ ಪಂಚಗ್ಯಾರಂಟಿ ಯೋಜನೆಗಳು

ಭಾರತ ನಕ್ಷೆಯ ಆಕಾರದಲ್ಲಿ ಅರಿಹಂತ ಶಾಲೆ ವಿದ್ಯಾರ್ಥಿಗಳು

ಸಹಿಷ್ಣುತೆ- ಸಾಮರಸ್ಯದಿಂದ ದೇಶದ ಐಕ್ಯತೆ ಸಾಧ್ಯ :ಡಾ.ಹಾದಿಮನಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬೆಳೆ ವಿಮೆ ತುಂಬಲು ಸೂಚನೆ
(ರಾಜ್ಯ ) ಜಿಲ್ಲೆ

ಬೆಳೆ ವಿಮೆ ತುಂಬಲು ಸೂಚನೆ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಬಸವನಬಾಗೇವಾಡಿ: ಬಸವನಬಾಗೇವಾಡಿ, ಕೊಲ್ಹಾರ, ನಿಡಗುಂದಿ ತಾಲೂಕುಗಳಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಆರಂಭವಾಗಿರುತ್ತವೆ. ರೈತರು ತಮ್ಮ ಬೆಳೆಗಳನ್ನು ಪ್ರಕೃತಿ ವಿಕೋಪಗಳಿಂದ ರಕ್ಷಿಸಿಕೊಳ್ಳಲು ಬೆಳೆ ವಿಮೆ ಮಾಡಿಸಿಕೊಳ್ಳುವುದು ಅತ್ಯಂತ ಮಹತ್ವದ್ದು ಮತ್ತು ಅಗತ್ಯವಾಗಿರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಕರ್ನಾಟಕ ರಾಜ್ಯ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಬಹುದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅನಿಯಮಿತ ಮಳೆ, ಬರ, ಗಾಳಿಮಳೆ, ಪ್ರವಾಹ, ಕೀಟ ಹಾಗೂ ರೋಗಬಾಧೆ ಮುಂತಾದ ಕಾರಣಗಳಿಂದ ರೈತರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬೆಳೆ ವಿಮೆ ರೈತರಿಗೆ ಆರ್ಥಿಕ ನೆರವು ಒದಗಿಸಿ ಕೃಷಿಯಲ್ಲಿ ಸ್ಥಿರತೆ ಕಾಪಾಡಲು ಸಹಕಾರಿಯಾಗುತ್ತದೆ. 2026 ಮುಂಗಾರು ಹಂಗಾಮಿಗೆ ಬಸವನಬಾಗೇವಾಡಿ ತಾಲೂಕಿನಲ್ಲಿ ತೊಗರಿ, ಮುಸಕಿನಜೋಳ, ಈರುಳ್ಳಿ, ಸಜ್ಜೆ ಮತ್ತು ಸೂರ್ಯಕಾಂತಿ, ಹತ್ತಿ, ನಿಡಗುಂದಿ ತಾಲೂಕಿನಲ್ಲಿ ತೊಗರಿ, ಮುಸಕಿನಜೋಳ, ಈರುಳ್ಳಿ ಮತ್ತು ಸೂರ್ಯಕಾಂತಿ, ಕೊಲ್ಹಾರ ತಾಲೂಕಿನಲ್ಲಿ ತೊಗರಿ, ಮುಸಕಿನಜೋಳ, ಈರುಳ್ಳಿ ಮತ್ತು ಸಜ್ಜೆ ಅಧಿಸೂಚಿತ ಬೆಳೆಗಳನ್ನು ವಿಮಾ ವ್ಯಾಪ್ತಿಗೆ ಒಳಪಡಿಸಲಾಗಿದೆ. ಬೆಳೆ ಸಾಲ ಪಡೆದ ಮತ್ತು ಪಡೆಯದ ಎಲ್ಲಾ ರೈತರು ಯೋಜನೆಯ ಸೌಲಭ್ಯ ಪಡೆಯಬಹುದು. ನಮ್ಮ ಜಿಲ್ಲೆಗೆ ಎಸ್.ಬಿ.ಆಯ್, ಜನರಲ್ ಇನ್ಸೂರನ್ಸ್ ಕಂಪನಿ ಆಯ್ಕೆಯಾಗಿದೆ. ತೊಗರಿ (ಮಳೆಯಾಶ್ರಿತ), ತೊಗರಿ (ನೀರಾವರಿ) ಮುಸಕಿನ ಜೋಳ (ನೀರಾವರಿ), ಮುಸಕಿನ ಜೋಳ (ಮಳೆಯಾಶ್ರಿತ), ಸಜ್ಜೆ (ಮಳೆಯಾಶ್ರಿತ), ಸೂರ್ಯಕಾಂತಿ (ಮಳೆಯಾಶ್ರಿತ) ಬೆಳೆಗಳಿಗೆ ವಿಮೆ ಕಟ್ಟಲು ಜುಲೈ 31 ಕೊನೆಯ ದಿನವಾಗಿದೆ. ಈರುಳ್ಳಿ (ನೀರಾವರಿ), ಹತ್ತಿ (ಮಳೆಯಾಶ್ರಿತ) ಬೆಳೆಗೆ ವಿಮೆ ಕಟ್ಟಲು ಆಗಷ್ಟ್ 14 ಕೊನೆಯ ದಿನವಾಗಿದೆ. ಬೆಳೆ ವಿಮೆ ನೋಂದಣಿಗೆ ರೈತರು ಕಡ್ಡಾಯಾವಾಗಿ ಫ್ರೂಟ್ಸ್ ಐ. ಡಿ. (ಎಫ್.ಐ.ಡಿ), ಎನ್.ಪಿ.ಸಿ.ಐ ಸಿಡಿಂಗ್ ಆಗಿರುವ ಬ್ಯಾಂಕ್ ಖಾತೆ, ಆಧಾರ್ ಕಾರ್ಡ ಮತ್ತು ಜಮೀನಿನ ದಾಖಲೆಗಳನ್ನು ಹೊಂದಿರಬೇಕು. ರೈತರ ಬ್ಯಾಂಕ್ ಖಾತೆಯು ಎಫ್.ಐ.ಡಿ ಮತ್ತು ಆಧಾರ್ ಜೋಡಣೆಯಾಗಿರುವುದು ಕಡ್ಡಾಯವಾಗಿದೆ. ವಿಮೆ ಮಾಡಿಸಿದ ಬೆಳೆಗಳಿಗೆ ಪ್ರಕೃತಿ ವಿಕೋಪ ಅಥವಾ ಇತರೆ ಕಾರಣಗಳಿಂದ ಹಾನಿ ಯಾದಲ್ಲಿ ರೈತರು 72 ಗಂಟೆಗಳ ಒಳಗಾಗಿ ಕೃಷಿ ಇಲಾಖೆ, ಬ್ಯಾಂಕ್ ಅಥವಾ ವಿಮಾ ಸಂಸ್ಥೆಗೆ ಮಾಹಿತಿ ನೀಡಬೇಕು. ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಿದರೆ ಪರಿಹಾರ ಪಡೆಯಲು ಅನುಕೂಲವಾಗುತ್ತದೆ. ಬಸವನಬಾಗೇವಾಡಿ, ನಿಡಗುಂದಿ ಮತ್ತು ಕೊಲ್ಹಾರ ತಾಲೂಕಿನ ರೈತ ಬಾಂಧವರು ಬೆಳೆ ವಿಮೆ ಯೋಜನೆಯ ಸದುಪಯೋಗ ಪಡೆದು ತಮ್ಮ ಬೆಳೆ ಸುರಕ್ಷಿತಗೊಳಿಸಿಕೊಳ್ಳುವಂತೆ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಅಮಗೋಂಡ ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ದೇಶಕ್ಕೆ ಮಾದರಿಯಾದ ಪಂಚಗ್ಯಾರಂಟಿ ಯೋಜನೆಗಳು

ಭಾರತ ನಕ್ಷೆಯ ಆಕಾರದಲ್ಲಿ ಅರಿಹಂತ ಶಾಲೆ ವಿದ್ಯಾರ್ಥಿಗಳು

ಸಹಿಷ್ಣುತೆ- ಸಾಮರಸ್ಯದಿಂದ ದೇಶದ ಐಕ್ಯತೆ ಸಾಧ್ಯ :ಡಾ.ಹಾದಿಮನಿ

ದೇಶದ ಸೈನಿಕರಿಂದ ಸ್ವಾತಂತ್ರ್ಯ ರಕ್ಷಣೆ :ಮೇಜರ್ ಗಿರಿಮಲ್ಲೇಶ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ದೇಶಕ್ಕೆ ಮಾದರಿಯಾದ ಪಂಚಗ್ಯಾರಂಟಿ ಯೋಜನೆಗಳು
    In (ರಾಜ್ಯ ) ಜಿಲ್ಲೆ
  • ಭಾರತ ನಕ್ಷೆಯ ಆಕಾರದಲ್ಲಿ ಅರಿಹಂತ ಶಾಲೆ ವಿದ್ಯಾರ್ಥಿಗಳು
    In (ರಾಜ್ಯ ) ಜಿಲ್ಲೆ
  • ಸಹಿಷ್ಣುತೆ- ಸಾಮರಸ್ಯದಿಂದ ದೇಶದ ಐಕ್ಯತೆ ಸಾಧ್ಯ :ಡಾ.ಹಾದಿಮನಿ
    In (ರಾಜ್ಯ ) ಜಿಲ್ಲೆ
  • ದೇಶದ ಸೈನಿಕರಿಂದ ಸ್ವಾತಂತ್ರ್ಯ ರಕ್ಷಣೆ :ಮೇಜರ್ ಗಿರಿಮಲ್ಲೇಶ
    In (ರಾಜ್ಯ ) ಜಿಲ್ಲೆ
  • ಸ್ವಾತಂತ್ರ್ಯ ಫಲಪ್ರದದಿಂದ ನಮಗೆ ನೆಮ್ಮದಿ ಜೀವನ :ಹೂಗಾರ
    In (ರಾಜ್ಯ ) ಜಿಲ್ಲೆ
  • ​ಗಾಂಧಿ ಭವನದಲ್ಲಿ ಡಿಸಿ ಡಾ.ಆನಂದ.ಕೆ ರಿಂದ ಧ್ವಜಾರೋಹಣ
    In (ರಾಜ್ಯ ) ಜಿಲ್ಲೆ
  • “ದೇಶದ ಅಭಿವೃದ್ಧಿ ಹಾಗೂ ಜನಕಲ್ಯಾಣಕ್ಕೆ ಸಂಕಲ್ಪ ಮಾಡಬೇಕು
    In (ರಾಜ್ಯ ) ಜಿಲ್ಲೆ
  • ಉರ್ದು ಶಾಲಾ ಶಿಕ್ಷಕರ ನೇಮಕಕ್ಕೆ ಉರ್ದು ಶಿಕ್ಷಕರ ಸಂಘ ಮನವಿ
    In (ರಾಜ್ಯ ) ಜಿಲ್ಲೆ
  • ಸ್ವಾತಂತ್ರ್ಯದ ಹಿಂದೆ ಸಾವಿರಾರು ವೀರರ ತ್ಯಾಗವಿದೆ :ಕಟಕಧೋಂಡ
    In (ರಾಜ್ಯ ) ಜಿಲ್ಲೆ
  • ಆ.17ರಿಂದ ಗುರುದೇವ ಆಶ್ರಮದಲ್ಲಿ ಆಧ್ಯಾತ್ಮಿಕ ಪ್ರವಚನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.