ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದಲ್ಲಿ ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆ ತಾಲ್ಲೂಕು ಘಟಕ ಕೊಲ್ಹಾರದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮಂಗಳವಾರ ನಡೆಯಿತು.
ಕೊಲ್ಹಾರ ತಾಲ್ಲೂಕಿನ ನೂತನ ಪದಾಧಿಕಾರಿಗಳ
ಪದಗ್ರಹಣ ಸಮಾರಂಭ ಜೂನ್ 23 ಮಂಗಳವಾರ
ಸಿದ್ದು ಭಾವಿಕಟ್ಟಿ ಸಂಸ್ಥಾಪಕ ಅಧ್ಯಕ್ಷರ ನೇತೃತ್ವದಲ್ಲಿ ಹಾಗೂ ಸರ್ವ ಪದಾಧಿಕಾರಿಗಳ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.
ಅಧ್ಯಕ್ಷರಾಗಿ ಮಹಾಂತೇಶ ಸರೂರ,ಉಪಾಧ್ಯಕ್ಷರಾಗಿ ನಿಂಗಪ್ಪ ಪೂಜಾರಿ, ಕಾರ್ಯದರ್ಶಿಯಾಗಿ ದರಿಯಪ್ಪ ಕೊಂತಿಕಲ್ ಯುವ ಘಟಕದ ಅಧ್ಯಕ್ಷರಾಗಿ ರಾಘವೇಂದ್ರ ಕಲಗುರ್ಕಿ ಹಾಗೂ ಪದಾಧಿಕಾರಿಗಳಾಗಿ ಮುತ್ತು ಮಸೂತಿ,
ಅಂಬರೀಶ್ ಸಲಗರ ಇವರಿಗೆ ಆದೇಶ ಪತ್ರವನ್ನು ಸಂಸ್ಥಾಪಕ ಅಧ್ಯಕ್ಷರಾದ ಸಿದ್ದು ಭಾವಿಕಟ್ಟಿ ಹಾಗೂ ತಾಲೂಕು ಅಧ್ಯಕ್ಷರಾದ ಮಹಾಂತೇಶ ಸರೂರ ಅವರು ವಿತರಿಸಿದರು.

