ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ತಾಲ್ಲೂಕಿನ ರೋಣಿಹಾಳ 110/11ಕೆ.ವಿ
ಉಪಕೇಂದ್ರದ ಮೊದಲನೆ ತ್ರೈಮಾಸಿಕ ನಿರ್ವಹಣಾ ಕಾರ್ಯನಿಮಿತ್ತ ಉಪಕೇಂದ್ರ ವ್ಯಾಪ್ತಿಯ ಕೊಲ್ಹಾರ, ಕುಬಕಡ್ಡಿ, ರೋಣಿಹಾಳ, ಹಳ್ಳದಗೆಣ್ಣೂರ, ಚಿಕ್ಕ ಗರಸಂಗಿ, ಹಿರೇ ಗರಸಂಗಿ, ಮುಳವಾಡ ಇಂಡಸ್ಟ್ರಿಯಲ್ ಏರಿಯಾ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಜೂನ್ 25 ರ ಗುರುವಾರ ಮುಂಜಾನೆ 9 ಗಂಟೆಯಿಂದ ಸಾಯಂಕಾಲ 5 ಗಂಟೆಯ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಕಾರಣ ಗ್ರಾಹಕರಿಗೆ ಸಹಕರಿಸಲು ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
