ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣ ಪಂಚಾಯಿತಿ ಪೌರಕಾರ್ಮಿಕರ ಸಂಘಟನೆಯ ಪದಾಧಿಕಾರಿಗಳು ರಾಜ್ಯ ಪೌರ ನೌಕರರ ಸಂಘದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ, ಹಾಗೂ ತಮ್ಮ ಬೇಡಿಕೆಗಳನ್ನು ಇಡೇರಿಸಲು ಆಗ್ರಹಿಸಿ ಶಿರಸ್ತೇದಾರ ಡಿ.ಎಸ್.ಭೋವಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಪಂಚಾಯಿತಿ ಪೌರಕಾರ್ಮಿಕರು ಬುಧವಾರ ತಹಶೀಲ್ದಾರ ಕಾರ್ಯಾಲಯಕ್ಕೆ ಆಗಮಿಸಿ ತಮ್ಮ ಬೇಡಿಕೆ ಇಡೇರಿಕೆಗೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಬಾಗೇವಾಡಿ ಮಾತನಾಡಿ, ನಮ್ಮೇಲ್ಲ ಪೌರ ಕಾರ್ಮಿಕರನ್ನು ರಾಜ್ಯ ಸರ್ಕಾರಿ ನೌಕರರೆಂದೂ ಪರಿಗಣಿಸುವುದು ಹಾಗೂ ಸೌಲಭ್ಯಗಳನ್ನು ಜಾರಿ ಮಾಡುವುದು. ಹೊರಗುತ್ತಿಗೆ ಮೂಲಕ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ನೇರಪಾವತಿಗೆ ಒಳಪಡಿಸುವುದು. ಮತ್ತು ೨೦೨೨-೨೩ನೇ ಸಾಲಿನಲ್ಲಿ ಪೌರಕಾರ್ಮಿಕರ ವಿಶೇಷ ನೇಮಕಾತಿ ಅಡಿಯ ನೇಮಕಗೊಂಡ ಪೌರಕಾರ್ಮಿಕರ ವೇತನವನ್ನು ಎಸ್.ಎಫ್.ಸಿ ಅನುದಾನದಡಿ ನೀಡುವುದು ಸಹಿತ ಹಲವು ಬೇಡಿಕೆಗಳನ್ನು ಸರ್ಕಾರ ಮಾನವೀಯ ನೆಲೆಗಟ್ಟಿನಲ್ಲಿ ಪರಿಗಣಿಸಿ ಇಡೇರಿಸಲು ಆಗ್ರಹಿಸುತ್ತೇವೆ. ಬೇಡಿಕೆ ಇಡೇರುವವರೆಗೆ ಕಸ ಸಂಗ್ರಹ, ವಿಲೇವಾರಿ, ಸ್ವಚ್ಛತೆ, ಒಳಚರಂಡಿ ನಿರ್ವಹಣೆ ಮತ್ತು ನೀರು ಪೂರೈಕೆ ಹಾಗೂ ಕಚೇರಿ ಕೆಲಸವನ್ನು ಸ್ಥಗಿತಗೊಳಿಸಲಾಗುವುದು ಎಂದರು. ನಂತರ ಮನವಿ ಸಲ್ಲಿಸಿದರು.
ಉಪಾಧ್ಯಕ್ಷೆ ಶಾಂತಾಬಾಯಿ ತಳಕೇರಿ, ಲಕ್ಷö್ಮಣ ಗುಡಿಮನಿ, ಅಕ್ಷಯ ಹಿರೇಮಠ, ಉಮಾಕಾಂತ ಗುಡಿಮನಿ, ಪ್ರವೀಣ ಗುಡಿಮನಿ, ಸವಿತಾ ಗುಡಿಮನಿ, ಯಲ್ಲವ್ವ ಸರೂರ, ರಫೀಕ್ ನಧಾಫ್, ಇಮಾಮ್ ಮುಲ್ಲಾ ಅಂಬರೀಶ ಒಂಟೆತ್ತಿನ ಇದ್ದರು.

