ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಉತ್ತಮ ಸಂವಹನ ಕಲೆಯೇ ಯಶಸ್ಸಿನ ಮೆಟ್ಟಿಲು. ಯಾವ ವ್ಯಕ್ತಿ ಕಮ್ಯೂನಿಕೇಶನ್ ಸ್ಕಿಲ್‌ನ್ನು ಹೊಂದಿರುತ್ತಾನೋ, ಆ ವ್ಯಕ್ತಿ ಜೀವನದಲ್ಲಿ ಯಶಸ್ಸು ಸಾಧಿಸುತ್ತಾನೆ. ಅದಕ್ಕೆ ನಮ್ಮ ಹಿರಿಯರು “ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲವೆಂದು” ಹೇಳಿದ್ದಾರೆ. ಹಾಗಾಗಿ ರಾಜ್ಯಾದ್ಯಾಂತ ಮಕ್ಕಳ ದಿನಾಚರಣೆ ಅಂಗವಾಗಿ ಕರ್ನಾಟಕ ಬಾಲವಿಕಾಸ ಅಕಾಡೆಮಿಯು ಆಯೋಜಿಸಿದ್ದ ಜಿಲ್ಲಾಮಟ್ಟದಲ್ಲಿ ಆಯ್ಕೆಗೊಂಡು ರಾಜ್ಯಮಟ್ಟದ ಸ್ಪರ್ಧೆಗೆ ಆಗಮಿಸಿದ್ದ, “ನವ ಭಾರತದ ನಿರ್ಮಾಣದಲ್ಲಿ ಪಂಡಿತ ಜವಾಹರಲಾಲ ನೆಹರೂಜಿ ಯವರ ಕೊಡುಗೆ” ಕುರಿತು ರಾಜ್ಯ ಮಟ್ಟದ ಭಾಷಣ ಸ್ಪರ್ಧೆಗೆ ಆಗಮಿಸಿರುವ ೩೧ ಜಿಲ್ಲೆಯ ಮಕ್ಕಳು ಅತ್ಯೋತ್ತಮ ಮಾತಿನ ಕೌಶಲ್ಯವನ್ನು ಹೊಂದಿದ್ದು, ನೀವು ಜೀವನದಲ್ಲಿ ಯಶಸ್ಸು ಪಡೆಯುವುದರಲ್ಲಿ ಸಂದೇಹವೇ ಇಲ್ಲವೆಂದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಸಂಗಮೇಶ ಬಬಲೇಶ್ವರ ಹೇಳಿದರು.
ಅವರು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಸಭಾವನದಲ್ಲಿ ಆಯೋಜಿಸಿದ ಪ್ರಾಥಮಿಕ / ಪ್ರೌಢ ಹಾಗೂ ಪದವಿ ಪೂರ್ವ ವಿಭಾಗಗಳ ರಾಜ್ಯಮಟ್ಟದ ಭಾಷಣ ಸ್ಪರ್ಧೆಯ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ನಂತರ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
ಈ ಸ್ಪರ್ಧೆಯ ಯಶಸ್ಸಿಗೆ ಶ್ರಮಿಸಿ ರಾಜ್ಯದ ಪ್ರತಿ ಶಾಲೆ-ಕಾಲೇಜುಗಳಲ್ಲಿ ಶಾಲಾ ಮಟ್ಟ, ತಾಲ್ಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆಯನ್ನು ಆಯೋಜಿಸಲು ಕಾರಣಿಭೂತರಾದ ಎಲ್ಲಾ ಶಾಲಾ-ಶಿಕ್ಷಣ ಅಧಿಕಾರಿಗಳಿಗೆ, ಶಿಕ್ಷಕರಿಗೆ, ಪಾಲ್ಗೊಂಡ ಮಕ್ಕಳಿಗೆ ಹಾಗೂ ಸಹಕಾರ ನೀಡಿದ ಪೋಷಕರಿಗೆ ಸಂಗಮೇಶ ಬಬಲೇಶ್ವರ ಅಭಿನಂದನೆ ಸಲ್ಲಿಸಿದರು.
ಸಮಾರಂಭದ ಮುಖ್ಯ ಅತಿಯಾಗಿ ಭಾಗವಹಿಸಿದ ಅಕಾಡೆಮಿಯ ಸದಸ್ಯರಾದ ಗಜಾನನ ಮನ್ನಿಕೇರಿ ಮಾತನಾಡಿ, ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷರು ನಾಡಿನ ಮಕ್ಕಳನ್ನು ತಲುಪುತ್ತಿರುವ ರೀತಿ ಮತ್ತು ಆಯೋಜಿಸುತ್ತಿರುವ ಕಾರ್ಯಕ್ರಮಗಳು ನಾಡಿನ ಮೆಚ್ಚುಗೆಗೆ ಪಾತ್ರವಾಗಿದ್ದು, ಅಕಾಡೆಮಿಯ ಎಲ್ಲ ಕಾರ್ಯಕ್ರಮಗಳಲ್ಲಿ ನಾಡಿನ ಮಕ್ಕಳು ಪಾಲ್ಗೊಳ್ಳಬೇಕೆಂದು ಕರೆ ನೀಡಿದರು
ಯೋಜನಾಧಿಕಾರಿಗಳಾದ ಶ್ರೀಮತಿ ಅಕ್ಕಮಹಾದೇವಿ ಕೆ.ಹೆಚ್ ಅವರು ಮಾತನಾಡಿ, ಕರ್ನಾಟಕ ರಾಜ್ಯದ ಸಮಸ್ತ ಮಕ್ಕಳ ಹಿತವನ್ನು ಕಾಪಾಡುವಲ್ಲಿ, ಮಕ್ಕಳ ಹಕ್ಕುಗಳನ್ನು ರಕ್ಷಿಸುವಲ್ಲಿ, ಅವರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಪಾತ್ರ ಮಹತ್ವದಾಗಿದೆ ಎಂದು ಹೇಳಿದರು.
ಅತಿಥಿಗಳಾಗಿ ಅಕಾಡೆಮಿಯ ಸದಸ್ಯರಾದ ಶ್ರೀನಿವಾಸ ಸೊರಟೂರ, ಸುಜಾತಾ ಬಂಡಾರಿ, ಅರ್ಜುನ ಲಮಾಣಿ, ಗಂಗಾಧರ ಕೊರವರ, ಮಂಜುನಾಥ ಕುರಕುರಿ, ಡಾ ಶ್ರೀಧರ ಹೆಗಡೆ, ಈರಯ್ಯಾ ಹಿರೇಮಠ, ಬಾಳಣ್ಣ ಚಿನ್ನಗುಡಿ, ಅನ್ನಪೂರ್ಣ ಸಂಗಳದ, ಮೀನಾಕ್ಷಿ ಮೆಡ್ಲೇರಿ, ಪುಷ್ಪಾ ಹಂಜಗಿ, ಸುಭಾಸ ಚಂದ್ರಗಿರಿ, ಸುವರ್ಣಲತಾ ಮಠದ, ಪದ್ಮಶ್ರೀ ಮೇಟಿ ಅಕಾಡೆಮಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ೩೧ ಜಿಲ್ಲೆಗಳಿಂದ ಆಗಮಿಸಿದ ಶಿಕ್ಷಕರು / ಪಾಲಕರು ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳು ಹಾಗೂ ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.
“ನವ ಭಾರತದ ನಿರ್ಮಾಣದಲ್ಲಿ ಪಂಡಿತ ಜವಾಹರಲಾಲ ನೆಹರೂಜಿ ಯವರ ಕೊಡುಗೆ” ಕುರಿತು ರಾಜ್ಯಮಟ್ಟದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳ ವಿವರ
ಪ್ರಾಥಮಿಕ ವಿಭಾಗ – ಶಿರಸಿ-ಮಹತಿ ಭಟ್-ಪ್ರಥಮ ಸ್ಥಾನ-25000-00
ಪ್ರಾಥಮಿಕ ವಿಭಾಗ -ಬೆಂಗಳೂರು (ಗ್ರಾ)-ಹಿತೈಷಿಣಿ ಡಿ ಎಸ್-ದ್ವಿತೀಯ ಸ್ಥಾನ-12500
ಪ್ರಾಥಮಿಕ ವಿಭಾಗ -ಉಡುಪಿ- ತನು – ತೃತೀಯ ಸ್ಥಾನ-7500
ಪ್ರೌಢ ವಿಭಾಗ -ಶಿರಸಿ ಆಶ್ರಿತ ಜಿ- ಪ್ರಥಮ ಸ್ಥಾನ-25000-00
ಪ್ರೌಢ ವಿಭಾಗ-ಚಿಕ್ಕಮಗಳೂರ ತಪಸ್ಯ ಆರ್ ಶೆಟ್ಟಿ-ದ್ವಿತೀಯ ಸ್ಥಾನ-12500
ಪ್ರೌಢ ವಿಭಾಗ-ಮಂಗಳೂರು -ಧನುಶ್ರೀ ಎಸ್ ಕುಲಾಲ್-ತೃತೀಯ ಸ್ಥಾನ-7500
ಪದವಿ ಪೂರ್ವ-ಧಾರವಾಡ ಐಮನ್‌ಫಾತಿಮಾ ಗೋಡಿಹಾಳ-ಪ್ರಥಮ ಸ್ಥಾನ-25000-00
ಪದವಿ ಪೂರ್ವ-ಬೆಳಗಾವಿ ಶೀತಲ ಕಮ್ಮಾರ-ದ್ವಿತೀಯ ಸ್ಥಾನ-12500
ಪದವಿ ಪೂರ್ವ-ಕೊಪ್ಪಳ ಚೈತ್ರಾ ಸಲುಡಿ-ತೃತೀಯ ಸ್ಥಾನ-7500
ಈ ವಿಜೇತ ಮಕ್ಕಳಿಗೆ ಅಕಾಡೆಮಿಯಿಂದ ವಿಶೇಷವಾಗಿ ಗೌರವ ಸನ್ಮಾನ ಮಾಡಿ, ನಗದು ಬಹುಮಾನದ ಚೆಕ್ ವಿತರಿಸಲಾಯಿತು.

