ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಕಾನ್ನಾಳದಿಂದ ಸಂಕನಾಳಕ್ಕೆ ಹೋಗುವ ರಸ್ತೆ ತುಂಬಾ ಹದಗೆಟ್ಟಿದ್ದರಿಂದ ಈ ರಸ್ತೆಯನ್ನು ಸುಧಾರಿಸಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದಿಂದ ಬುಧವಾರ ಪಟ್ಟಣದ ಪಂಚಾಯತ ಇಲಾಖೆಯ ಸಹಾಯಕ ಅಭಿಯಂತರರಿಗೆ ಬರೆದ ಮನವಿ ಪತ್ರವನ್ನು ರೈತ ಸಂಘದಿಂದ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಇಮೇಳ ವಾಲೀಕಾರ ಮಾತನಾಡಿ, ಸುಮಾರು ವರ್ಷಗಳಿಂದ ಕಾನ್ನಾಳ ಗ್ರಾಮದಿಂದ ಸಂಕನಾಳ ಹಾಗೂ ಬಸವನ ಬಾಗೇವಾಡಿಗೆ ಹೋಗುವ ರಸ್ತೆ ಇದೆ. ಈ ರಸ್ತೆಯನ್ನು ಸುಮಾರು 10-15 ವರ್ಷಗಳ ಹಿಂದ ದುರಸ್ತಿ ಮಾಡಲಾಗಿತ್ತು. ಇದೀಗ ಈ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಈ ರಸ್ತೆ ಮಾರ್ಗವಾಗಿ ತಾಲೂಕು ಆಸ್ಪತ್ರೆಗೆ ಗರ್ಭಿಣಿ ಮಹಿಳೆಯರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಮಯದಲ್ಲಿ ನಡು ರಸ್ತೆ ಮಧ್ಯದಲ್ಲಿಯೇ ಹೆರಿಗೆಯಾದ ಪ್ರಸಂಗಗಳಿವೆ. ಎಷ್ಟು ಶಿಶುಗಳು ಮರಣ ಹೊಂದಿದ್ದು ಇದೆ. ದ್ವಿಚಕ್ರ ವಾಹನ ಸವಾರರು ಬಿದ್ದು ವಾಹನದಿಂದ ಬಿದ್ದು ಕೈ ಕಾಲು ಮುರಿದು ಕೊಂಡು ಜಿಲ್ಲಾ ಆಸ್ಪತ್ರೆಗೆ ದಾಖಲ ಆಗಿದ್ದಾರೆ. ಶಾಲಾ ಮಕ್ಕಳು ಶಾಲೆಗೆ ಹೋಗುವಾಗ ಸೈಕಲ್ ಹಾಕಿಕೊಂಡು ಬಿದ್ದು ಸೈಕಲ್ ಮುರಿದುಕೊಂಡು ಕೈಕಾಲುಗಳಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ರಸ್ತೆಯ ದುಸ್ಥಿತಿ ಕಂಡು ಶಾಲೆಯನ್ನು ಬಿಟ್ಟು ಮಕ್ಕಳು ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ನಮ್ಮ ಮತಕ್ಷೇತ್ರದ ಶಾಸಕರು ಹಾಗೂ ಅಧಿಕಾರಿಗಳು ತಕ್ಷಣ ಈ ರಸ್ತೆಯನ್ನು ಪರಿಶೀಲಿಸಿ ಆದಷ್ಟು ಬೇಗ ರಸ್ತೆ ದುರಸ್ತಿ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹಣಮಂತ್ರಾಯ ಕಲಗುರ್ಕಿ, ಇಬ್ರಾಹಿಂ ಮಕಾಂದಾರ, ಅರವಿಂದ ಹೂಗಾರ, ರಾಜು ವಡವಡಗಿ,ಸಾಹೇಬಗೌಡ ಹೊಸೂರು, ರಾಮನಗೌಡ ಹೊಸಗೌಡರ, ಪರಶುರಾಮ ಮುತ್ತಗಿ, ಪ್ರವೀಣ ಹೊಸೂರ, ಆನಂದ ನಾಗರಡ್ಡಿ, ಸದಯ್ಯತೆಗ್ಗಿನಮಠ, ಮೌಲಾ ಯಲಗಾರ, ಸಂಗಪ್ಪ ಚಲವಾದಿ, ಮಲ್ಲಿಕಾರ್ಜುನ ಬಿರಾದಾರ, ಬಾಬುಸ್ವಾಮಿ ಹಿರೇಮಠ, ಮಂಜುಗೌಡ ಮೇಟಿ ಇದ್ದರು.

