Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಎಸ್.ಬಿ ಕಲಾ & ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ :ಪ್ರಪಂಚದಲ್ಲೇ ವೈಜ್ಞಾನಿಕ ಕ್ಷೇತ್ರದಲ್ಲಿ ನಮ್ಮ ಭಾರತ ದೇಶ ಒಂದು ಹೆಜ್ಜೆ ಮುಂದಿದೆ. ಚಂದ್ರನ ಮೇಲೆ “ಚಂದ್ರಯಾನ-೩” ಅನ್ನು ಇಳಿಸುವ ಮೂಲಕ ವೈಜ್ಞಾನಿಕ ಸಾಧನೆ ನಿಜಕ್ಕೂ ಮೆಚ್ಚುವಂಥದ್ದು ಎಂದು ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ದೆ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಸ್ನಾತಕೋತ್ತರ ಭೌತಶಾಸ್ತ್ರ ಅಧ್ಯಯನ ವಿಭಾಗದ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾಯೋಜಕತ್ವದಲ್ಲಿ “ಚಂದ್ರಯಾನ್ ಭಾರತೀಯ ಬಾಹ್ಯಾಕಾಶ ತಂತ್ರಜ್ಞಾನದ ಚಿನ್ನದ ಗರಿ” ಎಂಬ ಶೀರ್ಷಿಕೆಯ ಒಂದು ದಿನದ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶವು ಇಡೀ ಜಗತ್ತಿದೆ ಮಾದರಿಯಾಗಿದೆ. ವೈಜ್ಞಾನಿಕ ಕ್ಷೇತ್ರದಲ್ಲಿ ನಮ್ಮ ದೇಶ ಒಂದು ಹೆಜ್ಜೆ ಮುಂದಿದೆ ಎಂದರು.ಈ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪನ್ಹಾಲದ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಮತ್ತು ಸಂಯೋಜಕರಾಗಿರುವ ಸಂಪನ್ಮೂಲ…
ಲೇಖನ:ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ ದೂ: ೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ದೇಶದಲ್ಲಿ ರಾಜರ ಆಳ್ವಿಕೆಯ ಕಾಲದಲ್ಲಿ ಪ್ರೆಗಳ ನಡುವಿನ ಒಗ್ಗಟ್ಟಿನ ಕೊರತೆ ಮತ್ತು ಪ್ರಜೆಗಳ ಒಳಗೇ ಇದ್ದ ಜಾತೀಯತೆ ಮತ್ತು ಪರಸ್ಪರ ದ್ವೇಷ ಮತ್ತು ಅಸೂಯೆಯ ಕಾರಣದಿಂದ ವಿದೇಶೀಯರು ಇಲ್ಲಿನ ರಾಜರನ್ನು ಸೋಲಿಸಿ ತಾವು ಸಧಿಪತ್ಯವನ್ನು ಸ್ಥಾಪಿಸಿದರು. ೧೯೪೭ರ ಪೂರ್ವದ ವರೆಗೂ ಭಾರತವು ಪರಕೀಯರ ದಾಸ್ಯಕ್ಕೆ ಒಳಪಟ್ಟಿತ್ತು. ಈ ದೇಶದ ಸಾವಿರಾರು ನಾಯಕರ ಮತ್ತು ಲಕ್ಷೋಪಲಕ್ಷ ಪ್ರಜೆಗಳ ತ್ಯಾಗ ಮತ್ತು ಬಲಿದಾನಗಳ ಫಲವಾಗಿ ೧೯೪೭ ಆಗಸ್ಟ್ ೧೪ರ ಮಧ್ಯರಾತ್ರಿ ಈ ದೇಶವು ಪರಕೀಯರ ದಾಸ್ಯದಿಂದ ಬಿಡುಗಡೆಯನ್ನು ಕಂಡಿತು. ಇಂದು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿದ ದೇಶವಾಗಿ ಭಾರತವು ಗುರುತಿಸಿಕೊಂಡಿದೆ.ಅಂಬೇಡ್ಕರ್ ಹೇಳಿದ ‘ಇತಿಹಾಸವನ್ನು ಮರೆತವರು ಎಂದಿಗೂ ಇತಿಹಾಸವನ್ನು ಸೃಷ್ಟಿಸಲಾರರು’ ಎಂಬ ಮಾತು ಖಂಡಿತಾ ಸತ್ಯ. ಸ್ವಾತಂತ್ರ‍್ಯದ ಧ್ಯೋತಕವಾಗಿ ದೇಶಕ್ಕೆ ದೊರೆತ ‘ಸೆಂಗೋಲ್’ ಎನ್ನುವ ದಂಡ ಇದೀಗ ದೇಶದ ಸಂಸತನ್ನು ಪ್ರವೇಶಿಸಿ…
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಶಾಲೆಗಳಲ್ಲಿ ಮೈದಾನಗಳ ಅಭಿವೃದ್ಧಿ ಅಗತ್ಯವಿದೆ. ಅದಕ್ಕಾಗಿ ಮನರೇಗಾ ಯೋಜನೆಯಡಿ ತಾಲ್ಲೂಕಿನ ಆಯ್ದ ಶಾಲೆಗಳಲ್ಲಿ ಗ್ರಾಮ ಪಂಚಾಯ್ತಿಯಡಿ ಮೈದಾನ ನಿರ್ಮಿಸಲಾಗುವುದು ಎಂದು ನಿಡಗುಂದಿ ತಾಲ್ಲೂಕು ಪಂಚಾಯ್ತಿ ಕಾರ‍್ಯನಿರ‍್ವಹಣಾಧಿಕಾರಿ ವೆಂಕಟೇಶ ವಂದಾಲ ಭರವಸೆ ನೀಡಿದರು.ಅವರು ಸ್ಥಳಿಯ ಆಲಮಟ್ಟಿಯ ಎಂ.ಎಚ್.ಎಂ ಪ್ರೌಢಶಾಲೆಯಲ್ಲಿ ಜಿಲ್ಲಾಪಂಚಾಯತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಜಯಪುರ, ಕ್ಷೇತ್ರಶಿಕ್ಷಣಾಧಿಕಾರಿಗಳು, ಕ್ಷೇತ್ರಸಮನ್ವಯಾಧಿಕಾರಿಗಳು ಬಸವನಬಾಗೇವಾಡಿ ಹಾಗೂ ಮಂಜಪ್ಪ ಹರ್ಡೇಕರ ಸ್ಮಾರಕ ಪ.ಪೂ.ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದ ಸಹಯೋಗದೊಂದಿಗೆ ನಡೆದ೨೦೨೪-೨೫ನೇ ಸಾಲಿನ ಬಸವನಬಾಗೇವಾಡಿ ತಾಲೂಕಾ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಜ್ಯೋತಿ ಸ್ವೀಕರಿಸಿ ಮಾತನಾಡಿದರು.ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳು ಮೋಬೈಲ್ ಮತ್ತು ಟಿವಿಗಳನ್ನು ತ್ಯಜಿಸಿ ದೇಶೀ ಕ್ರೀಡೆಗಳನ್ನು ಆಡುವದರಿಂದ ಮಕ್ಕಳಲ್ಲಿ ಉತ್ತಮ ದೈಹಿಕ ಬೆಳವಣಿಗೆಯಾಗುತ್ತದೆ.ಕ್ರೀಡೆಗಳೊಂದಿಗೆ ಪಠ್ಯವೂ ಮುಖ್ಯವಾಗಿದ್ದು ಮಕ್ಕಳು ಕ್ರಿಕೆಟ್ಗಳಂತಹ ವಿದೇಶೀ ಕ್ರೀಡೆಗಳಲ್ಲಿ ಸಮಯ ವ್ಯರ್ಥಮಾಡದೆ ಓದುವ ಕಡೆಗೂ ಗಮನಹರಿಸಬೇಕು ಎಂದರು.ಕರ‍್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ‍್ಯದರ್ಶಿ ಚಂದ್ರಶೇಖರ ನುಗ್ಗಲಿ ಮಾತನಾಡಿ, ಆಟವೂ ಒಂದು ಅದ್ಭುತ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಟಿಪ್ಪರನ ಹಿಂಬದಿ ಸಿಲುಕಿ ಎರಡೂ ಕೈಗಳಿಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ತಲುಪುವ ಮುನ್ನವೇ ಯುವಕನೋರ್ವ ಪ್ರಾಣ ಕಳೆದುಕೊಂಡ ಘಟನೆ ಪಟ್ಟಣದ ಲಕ್ಷ್ಮಿ ಚಿತ್ರಮಂದಿರದ ಬಳಿ ನಡೆದಿದೆ.ಮೃತ ದುರ್ದೈವಿ ಯುವಕನನ್ನು ವಿನೋದ ತಿಪ್ಪಣ್ಣ ಶಹಾಪೂರ(೧೯) ಎಂದು ಗುರುತಿಸಲಾಗಿದೆ. ಬಸವೇಶ್ವರ ವೃತ್ತದಿಂದ ನೇಬಗೇರಿ ಗ್ರಾಮದತ್ತ ಹೊರಟಿದ್ದ ಟಿಪ್ಪರ್ ಗೆ ನೇಬಗೇರಿ ಕಡೆಯಿಂದ ದ್ವಿಚಕ್ರ ವಾಹನ ಸವಾರಿ ಮಾಡುತ್ತ ಬರುತ್ತಿದ್ದ ವಿನೋದ ಪಟ್ಟಣದ ಲಕ್ಷ್ಮಿ ಚಿತ್ರ ಮಂದಿರದ ಬಳಿ ಬಂದಾಗ ಟಿಪ್ಪರ್ ನ ಮಧ್ಯಭಾಗಕ್ಕೆ ಕೈ ತಗುಲಿ ಬೈಕ್ ನಿಂದ ಕೆಳಗೆ ಬಿದ್ದು ಮತ್ತೊಂದು ಕೈ ತೋಳಿನ ಮೇಲೆ ಟಿಪ್ಪರ್ ನ ಹಿಂಬದಿ ಚಕ್ರ ಹರಿದು ಗಂಭೀರ ಸ್ವರೂಪದ ಗಾಯವಾಗಿದೆ ಎನ್ನಲಾಗಿದೆ.ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಕ್ರೈಂ ಪಿಎಸ್‌ಐ ಆರ್.ಎಲ್.ಮನ್ನಾಬಾಯಿ ಗಾಯಾಳುವನ್ನು ಅಟೋ ಮೂಲಕ ಸ್ಥಳೀಯ ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ. ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ತೆರಳುವಾಗ ಮಾರ್ಗ ಮಧ್ಯೆ ಗಾಯಾಳು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಗ್ರಾಮದ ಸಮುದಾಯ ಆರೋಗ್ಯ ಕೇಂದ್ರ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ತಾಯಂದಿರ ಸಭೆ ಹಮ್ಮಿಕೊಳ್ಳಲಾಯಿತು.ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶ್ರೀಮತಿ ಶಾರದಾಭಾಯಿ ಲಮಾಣಿ ಅವರು ಸರ್ಕಾರದಿಂದ ಸಿಗುವ ಕುಟುಂಬ ಕಲ್ಯಾಣ ವಿಧಾನಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.ಮುಖ್ಯ ಅತಿಥಿಗಳಾಗಿ ಮಾತನಾಡಿದ ಫಾರೂಕ್ ವಲ್ಲಿಭಾಯಿ, ಪೌಷ್ಟಿಕ ಆಹಾರದ ಬಗ್ಗೆ ಮತ್ತು ಪೌಷ್ಟಿಕ ಆಹಾರ ಕೊರತೆಯಿಂದ ಬರುವ ರೋಗಗಳ ಬಗ್ಗೆ ವಿವರಿಸಿ ಕ್ಷಯರೋಗದ ಬಗ್ಗೆ ತಾಯಂದಿರಿಗೆ ತಿಳಿಸಿದರು.ಕ್ಷಯರೋಗ ಅನ್ನೋದು ಸಾಂಕ್ರಾಮಿಕ ರೋಗ ಮೈಕೋ ಬ್ಯಾಕ್ಟಿರಿಯಂ ಎಂಬ ಸೂಕ್ಷ್ಮಾಣು ಜೀವಿಯ ಮುಖಾಂತರ ಬರುತ್ತದೆ. ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಕಫದಲ್ಲಿ ರಕ್ತ ಬರುವುದು, ತೂಕ ಕಡಿಮೆಯಾಗುವುದು, ಹಸಿವು ಆಗದೇ ಇರುವುದು, ಮೇಲಿಂದ ಮೇಲೆ ಜ್ವರ ಬರುವುದು ಮತ್ತು ಎದೆ ನೋವು ಕೂಡ ಈ ರೋಗದ ಲಕ್ಷಣಗಳಾಗಿದ್ದು, ಕ್ಷಯರೋಗದ ಲಕ್ಷಣವಿದ್ದರೆ ಕೂಡಲೇ ವೈದ್ಯರ ಸಲಹೆ ಪಡೆದು ಪರೀಕ್ಷಿಸಿಕೊಳ್ಳಬೇಕು, ಒಂದು ವೇಳೆ ಖಚಿತವಾದರೆ ಸಂಪೂರ್ಣವಾಗಿ ಚಿಕಿತ್ಸೆ ಉಚಿತವಾಗಿರುತ್ತದೆ. ಭಾರತ ಸರ್ಕಾರ ೨೦೨೫ಕ್ಕೆ ಕ್ಷಯ…
ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ದಲಿತ ಸೇನೆ ಸಂಘಟನೆ ರಾಜ್ಯಾಧ್ಯಕ್ಷ ಹನುಮಂತ ಯಳಸಂಗಿ ಅವರನ್ನು ಏಳಿಗೆ ಸಹಿಸದವರು ಷಡ್ಯಂತ್ರ ರಚಿಸಿ ಜೈಲು ಪಾಲಾಗುವಂತೆ ಮಾಡಿದ್ದು ಕೂಡಲೇ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಬೇಕೆಂದು ದಲಿತ ಸೇನೆ ತಾಲೂಕು ಅಧ್ಯಕ್ಷ ಮಹಾಂತೇಶ ಬಳೂಂಡಗಿ ಹೇಳಿದರು.ಅವರು ಪಟ್ಟಣದ ತಹಸೀಲ್ ಕಛೇರಿಯಲ್ಲಿ ತಹಸೀಲ್ದಾರ ಸಂಜೀವಕುಮಾರ ದಾಸರ್ ಅವರ ಮೂಲಕ ರಾಜ್ಯಪಾಲರು, ಮುಖ್ಯಮಂತ್ರಿಗಳು, ಗೃಹ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿ ಮಾತನಾಡುತ್ತಾ, ಕಲಬುರಗಿ ನಗರದಲ್ಲಿರುವ ಕೆಲವು ಪುಡಿ ರೌಡಿಗಳು, ಮಿಟರ್ ಬಡ್ಡಿ ಆಡುವವರು, ಸಮಾಜಘಾತುಕ ಕೆಲಸ ಮಾಡುವವರು ಕೂಡಿಕೊಂಡು ಷಡ್ಯಂತ್ರ ರಚಿಸಿ ನ್ಯಾಯವಾದಿ, ದಲಿತ ಸೇನೆ ರಾಜ್ಯಾಧ್ಯಕ್ಷ ಹನುಮಂತ ಯಳಸಂಗಿ ಅವರನ್ನು ಜೈಲಿಗೆ ಹೋಗುವಂತೆ ಮಾಡಿದ್ದಾರೆ. ಆದರೆ ಪೊಲೀಸ್ ಇಲಾಖೆ ಸತ್ಯಾಸತ್ಯತೆ ಪರಿಶೀಲನೆ ಮಾಡಬೇಕು. ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುವ ಹನುಮಂತ ಯಳಸಂಗಿ ಅವರನ್ನು ಬಿಡುಗಡೆಗೊಳಿಸಿ ಷಡ್ಯಂತ್ರ ರಚಿಸಿದವರನ್ನು ಬಂಧಿಸಿ ರಾಜ್ಯ ನೋಡುವ ರೀತಿಯಲ್ಲಿ ಕಠಿಣ ಕಾನೂನು ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ…
ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ತಾಲೂಕಿನ ಅರ್ಜುಣಗಿ ತಾಂಡಾದಿಂದ ಬಡದಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಡಾಂಬರ್ ರಸ್ತೆ ನಿರ್ಮಾಣವಾದ ಒಂದು ವರ್ಷದಲ್ಲೇ ಹಾಳಾಗಿ ಹೋಗಿದ್ದು ಸಂಬಂಧ ಪಟ್ಟವರು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಎರಡು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಅರ್ಜುಣಗಿ ತಾಂಡಾದಿಂದ ಬಡದಾಳ ಗ್ರಾಮದ ಮಾರ್ಗವಾಗಿ ೨ ಕಿ.ಮೀ ರಸ್ತೆ ನಿರ್ಮಿಸಲಾಗಿದೆ. ಈ ರಸ್ತೆ ನಿರ್ಮಿಸಿ ಒಂದು ವರ್ಷವಾಗಿಲ್ಲ ಈಗಲೇ ರಸ್ತೆಗೆ ಹಾಕಿರುವ ಡಾಂಬರ್ ಕಿತ್ತು ಹೋಗಿದ್ದು ಸುಗಮ ಸಂಚಾರ ಸಾಧ್ಯವಾಗುತ್ತಿಲ್ಲ. ಅರ್ಜುಣಗಿ ಗ್ರಾಮಸ್ಥರು, ವಿದ್ಯಾರ್ಥಿಗಳು ತಾಂಡಾ ನಿವಾಸಿಗಳು ಆಸ್ಪತ್ರೆಗೆ, ಸಂತೆಗಾಗಿ ಮತ್ತು ಶಾಲಾ, ಕಾಲೇಜಿನ ವ್ಯಾಸಂಗಕ್ಕಾಗಿ ಬಡದಾಳ ಗ್ರಾಮಕ್ಕೆ ನಿತ್ಯ ಹೋಗಿ ಬರುತ್ತಾರೆ. ಅಲ್ಲದೆ ರೈತರು ತಮ್ಮ ಹೊಲಗದ್ದೆಗಳಿಗೆ ಹೋಗುತ್ತಾರೆ. ಇವರಿಗೆಲ್ಲ ಈ ಹದಗೆಟ್ಟ ರಸ್ತೆಯಲ್ಲಿ ಸಂಚರಿಸುವಾಗ ನರಕಯಾತನೆ ಅನುಭವಿಸದಂತಾಗುತ್ತಿದೆ. ಕೂಡಲೇ ಸಂಬಂಧ ಪಟ್ಟವರು ಹಾಳಾದ ರಸ್ತೆ ಸುಧಾರಿಸುವ ಕೆಲಸ ಮಾಡಬೇಕು ಎಂದು ಎರಡು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ಪಟ್ಟಣದ ಶರಣ ರೇವಣಸಿದ್ದ ಹೂಗಾರ ಅವರ ಮನೆಯಲ್ಲಿ ಶರಣ ಹೂಗಾರ ಮಾದಣ್ಣನವರ ಜಯಂತಿ ಆಚರಣೆ ಮಾಡಲಾಯಿತು.ತಹಸೀಲ್ದಾರ ಸಂಜೀವಕುಮಾರ ದಾಸರ್ ಮಾತನಾಡುತ್ತಾ ೧೨ನೇ ಶತಮಾನದಲ್ಲಿ ಕಾಯಕ ತತ್ವದಡಿಯಲ್ಲಿ ಬದುಕು ನಡೆಸಿದ ಶರಣ ಹೂಗಾರ ಮಾದಣ್ಣನವರು ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಇಂದು ಅವರ ಅನುಯಾಯಿಗಳು ಅವರ ತತ್ವಾದರ್ಶಗಳ ಪಾಲನೆ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸುವ ಕೆಲಸ ಮಾಡಬೇಕೆಂದು ಕರೆ ನೀಡಿದರು.ಶಿಕ್ಷಕ ಬಾಪುಗೌಡ ಬಿರಾದಾರ ಮಾತನಾಡುತ್ತಾ ಬಸವಾದಿ ಶರಣರು ಯಾವುದೇ ಒಂದು ಸಮಾಜಕ್ಕೆ ಸೀಮಿತರಾದವರಲ್ಲ. ಅವರು ಎಲ್ಲರಿಗೂ ಒಳಿತಾಗುವಂತೆ ಮಾದರಿ ಜೀವನ ನಡೆಸಿದ್ದಾರೆ ಎಂದ ಅವರು ಹೂಗಾರ ಸಮಾಜ ಎಲ್ಲಾ ಸಮಾಜಗಳೊಂದಿಗೆ ಸಹಬಾಳ್ವೆಯಿಂದ ಬದುಕುವ ಸಮಾಜವಾಗಿದೆ. ಹೂಗಾರ ಮಾದಣ್ಣ ಶರಣರು ಕೇವಲ ಒಂದು ಸಮಾಜಕ್ಕೆ ಸೀಮಿತರಾದ ಶರಣರಲ್ಲ, ಅವರ ತತ್ವಾದರ್ಶಗಳು ಎಲ್ಲರಿಗೂ ಪ್ರೇರಣೆಯಾಗಿವೆ ಎಂದರು.ಪುರಸಭೆ ಮುಖ್ಯಾಧಿಕಾರಿ ವಿಜಯಮಹಾಂತೇಶ ಹೂಗಾರ, ಆಶಾಕಿರಣ ಸೇವಾಸಂಸ್ಥೆಯ ಅಧ್ಯಕ್ಷೆ ಪ್ರಭಾವತಿ ಮೇತ್ರಿ, ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಬಸವರಾಜ ಚಾಂದಕವಟೆ, ಹಿರಿಯ ಸಾಹಿತಿ…
ಲಾಲ್ ಬಹದ್ದೂರಶಾಸ್ತ್ರಿ ಹಾಗೂ ಬಸವ ಸಾಗರ ಜಲಾಶಯಗಳ ನೀರು ಮರು ಹಂಚಿಕೆ ಮಾಡಲು ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅವಳಿ ಜಲಾಶಯಗಳ ನೀರು ಮರು ಹಂಚಿಕೆ ಹೋರಾಟ ಸಮೀತಿ ಜಿಲ್ಲಾ ಘಟಕ ವಿಜಯಪುರ ವತಿಯಿಂದ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರಿಗೆ ಒತ್ತಾಯಪಡಿಸುವಂತೆ ಆಗ್ರಹಿಸಿ ಅವಳಿ ಜಲಾಶಯಗಳ ಹೋರಾಟ ಸಮಿತಿ ವತಿಯಿಂದ ರೈತ ಮುಖಂಡರುಗಳು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರಿಗೆ ರವಿವಾರ ಅವರ ಸ್ವಗ್ರಹದಲ್ಲಿ ಮನವಿ ಸಲ್ಲಿಸಿದರು.ಈ ವೇಳೆ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಅವರು ಮಾತನಾಡಿ, ಆಲಿಮಟ್ಟಿ ಜಲಾಶಯದ ನಿರ್ಮಾಣಕ್ಕೆ ಫಲವತ್ತಾದ ಬಹುತೇಕ ಭೂಮಿಯನ್ನು ಕಳೆದುಕೊಂಡಿರುವ ಕೃಷ್ಣೆಯ ಮಕ್ಕಳು ಅನಾಥರಾಗಿ ದಿಕ್ಕು ತೊಚದಂತಾಗಿದ್ದಾರೆ, ಭೂಮಿ ಕಳೆದುಕೊಂಡವರು ನಮ್ಮ ಜಿಲ್ಲೆಯವರು ಆದರೆ ಇದರ ಸಂಪೂರ್ಣ ಫಲ ಉಣ್ಣುತ್ತಿರುವವರು ನೆರೆಯ ಬಸವ ಸಾಗರ ಆಣೆಕಟ್ಟು ಹಾಗೂ ಆಂದ್ರದ ಜನರು, ಆದ್ದರಿಂದ ಈ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಕಸ್ತೂರಿ ಕಾಲೊನಿ ನಿವಾಸಿ, ಸಮರವಾಣಿ ಕನ್ನಡ ದಿನಪತ್ರಿಕೆಯ ಸಂಪಾದಕ ರಜಾಕ್ ಬಾಗೇವಾಡಿ ಅವರ ತಂದೆ ಇಬ್ರಾಹಿಂಸಾಬ ಬಾಗೇವಾಡಿ (೮೨) ಅವರು ಭಾನುವಾರ ನಿಧನರಾದರು.ಮೃತರಿಗೆ ಸಂಪಾದಕ ರಜಾಕ್ ಬಾಗೇವಾಡಿ ಸೇರಿದಂತೆ ಓರ್ವ ಪುತ್ರ, ಪತ್ನಿ, ಹಾಗೂ ಮೂವರು ಪುತ್ರಿಯರಿದ್ದಾರೆ.ಮೃತರ ಅಂತ್ಯಕ್ರಿಯೆಯು ಉಕ್ಕಲಿ ರಸ್ತೆಯಲ್ಲಿರುವ ಖಬರಸ್ಥಾನದಲ್ಲಿ ಭಾನುವಾರ ರಾತ್ರಿ ೮ ಗಂಟೆಗೆ ನೆರವೇರಿತು.
