ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಶಾಲೆಗಳಲ್ಲಿ ಮೈದಾನಗಳ ಅಭಿವೃದ್ಧಿ ಅಗತ್ಯವಿದೆ. ಅದಕ್ಕಾಗಿ ಮನರೇಗಾ ಯೋಜನೆಯಡಿ ತಾಲ್ಲೂಕಿನ ಆಯ್ದ ಶಾಲೆಗಳಲ್ಲಿ ಗ್ರಾಮ ಪಂಚಾಯ್ತಿಯಡಿ ಮೈದಾನ ನಿರ್ಮಿಸಲಾಗುವುದು ಎಂದು ನಿಡಗುಂದಿ ತಾಲ್ಲೂಕು ಪಂಚಾಯ್ತಿ ಕಾರ‍್ಯನಿರ‍್ವಹಣಾಧಿಕಾರಿ ವೆಂಕಟೇಶ ವಂದಾಲ ಭರವಸೆ ನೀಡಿದರು.
ಅವರು ಸ್ಥಳಿಯ ಆಲಮಟ್ಟಿಯ ಎಂ.ಎಚ್.ಎಂ ಪ್ರೌಢಶಾಲೆಯಲ್ಲಿ ಜಿಲ್ಲಾಪಂಚಾಯತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಜಯಪುರ, ಕ್ಷೇತ್ರಶಿಕ್ಷಣಾಧಿಕಾರಿಗಳು, ಕ್ಷೇತ್ರ
ಸಮನ್ವಯಾಧಿಕಾರಿಗಳು ಬಸವನಬಾಗೇವಾಡಿ ಹಾಗೂ ಮಂಜಪ್ಪ ಹರ್ಡೇಕರ ಸ್ಮಾರಕ ಪ.ಪೂ.ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದ ಸಹಯೋಗದೊಂದಿಗೆ ನಡೆದ
೨೦೨೪-೨೫ನೇ ಸಾಲಿನ ಬಸವನಬಾಗೇವಾಡಿ ತಾಲೂಕಾ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಜ್ಯೋತಿ ಸ್ವೀಕರಿಸಿ ಮಾತನಾಡಿದರು.
ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳು ಮೋಬೈಲ್ ಮತ್ತು ಟಿವಿಗಳನ್ನು ತ್ಯಜಿಸಿ ದೇಶೀ ಕ್ರೀಡೆಗಳನ್ನು ಆಡುವದರಿಂದ ಮಕ್ಕಳಲ್ಲಿ ಉತ್ತಮ ದೈಹಿಕ ಬೆಳವಣಿಗೆಯಾಗುತ್ತದೆ.
ಕ್ರೀಡೆಗಳೊಂದಿಗೆ ಪಠ್ಯವೂ ಮುಖ್ಯವಾಗಿದ್ದು ಮಕ್ಕಳು ಕ್ರಿಕೆಟ್ಗಳಂತಹ ವಿದೇಶೀ ಕ್ರೀಡೆಗಳಲ್ಲಿ ಸಮಯ ವ್ಯರ್ಥಮಾಡದೆ ಓದುವ ಕಡೆಗೂ ಗಮನಹರಿಸಬೇಕು ಎಂದರು.
ಕರ‍್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ‍್ಯದರ್ಶಿ ಚಂದ್ರಶೇಖರ ನುಗ್ಗಲಿ ಮಾತನಾಡಿ, ಆಟವೂ ಒಂದು ಅದ್ಭುತ ವಿದ್ಯೆ, ಅದನ್ನು ಹುಡುಗಾಟದಂತೆ ಆಡದೇ, ಸುಪ್ತವಾಗಿರುವ ಆಟದ ವಿದ್ಯೆಯನ್ನು ಕ್ರೀಡಾಕೂಟಗಳು ಬೆಳಕಿಗೆ ತರುತ್ತವೆ ಆಟದಲ್ಲಿ
ಸೋಲು-ಗೆಲುವು ಮುಖ್ಯವಲ್ಲ, ಗೆದ್ದಾಗ ಚಪ್ಪಾಳೆ ಹೊಡೆಯುವವರಿಗಿಂತ ಸೋತಾಗ ಸಾಂತ್ವನ ಹೇಳಿ ಹುರುದುಂಬಿಸುವದು ಮುಖ್ಯ, ಆಟವನ್ನು ಹುಡುಗಾಟ ರೀತಿ
ಆಡಬಾರದು, ಯಾವ ಮಕ್ಕಳಲ್ಲಿ ಯಾವ ವಿದ್ಯೆ ಸುಪ್ತವಾಗಿರುತ್ತದೆ ಎನ್ನುವುದು ಯಾರಿಗೂ ಅರ್ಥವಾಗುವದಿಲ್ಲ ಆದರೆ ಇಂಥ ಕ್ರೀಡಾಕೂಟದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಹೊರಗೆಡವಲು ಒಂದು ವೇದಿಕೆಯಾಗಲಿದೆ. ಇಲ್ಲಿ ಭಾಗವಹಿಸಿದ ಮಗು ಮುಂದೊಂದು ದಿನ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡಾಪಟುವಾದರೂ ಅಚ್ಚರಿಯಿಲ್ಲ ಎಂದರು.
ಮಂಜಪ್ಪ ಹರ್ಡೇಕರ ಶಿಕ್ಷಣ ಸಂಸ್ಥೆ ಎಂದರೆ ಶಿಸ್ತಿಗೆ ಇನ್ನೊಂದು ಹೆಸರು, ಶಾಲೆಯ ಶಿಸ್ತಿನಲ್ಲಿ ದೈಹಿಕ ಶಿಕ್ಷಕರ ಪಾತ್ರ ಮುಖ್ಯವಾಗಿದೆ,ದೈಹಿಕ ಶಿಕ್ಷಕರು ದೇಶಕಟ್ಟುವಲ್ಲಿ ಉಳಿದ ಶಿಕ್ಷಕರಷ್ಟೇ ಮಹತ್ತರ ಪಾತ್ರವಿದೆ ಎಂದು ಪ್ರಶಂಸಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಮಾತನಾಡಿ, ಕ್ರೀಡೆಯಿಂದ ಬೌದ್ಧಿಕ ಶಕ್ತಿ, ಸ್ವಾಸ್ಥ್ಯ ರಕ್ತ ಪರಿಚಲನೆ, ನಾಯಕತ್ವ ಗುಣ ಬೆಳೆಯುತ್ತದೆ ಎಂದರು. ಕ್ರೀಡೆಯ ಜತೆಗೆ ಪಠ್ಯವೂ ಬಹು ಮುಖ್ಯವಾಗಿದ್ದು, ಸಮಯ ವ್ಯರ್ಥ ಮಾಡದೇ ಓದಿನತ್ತಲೂ ಚಿತ್ತ ಹರಿಸಬೇಕು ಎಂದರು.
ಆಲಮಟ್ಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕವಿತಾ ಬಡಿಗೇರ ಕ್ರೀಡಾಕೂಟ ಉದ್ಘಾಟಿಸಿದರು. ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಸಿದ್ದಮ್ಮ ವಾಲಿಕಾರ, ಅಕ್ಷರದಾಸೋಹ ಸಹಾಯಕ ರ‍್ದೇಶಕ ಸಂಗಮೇಶ ಬಿರಾದಾರ, ಎಸ್.ಬಿ.ಪಾಟೀಲ, ಪ್ರರ‍್ಯ ಪಿ.ಎ. ಹೇಮಗಿರಿಮಠ, ಯು.ವೈ. ಬಶೆಟ್ಟಿ, ವೈ.ಎಂ. ಪಾತ್ರೋಟ, ಬಸವರಾಜ ಹಿರೇಮಠ, ಮಂಜುನಾಥ ಹಿರೇಮಠ, ರ‍್ಯಕ್ರಮದ ಸಂಘಟನಾ ಅಧ್ಯಕ್ಷ ಎಸ್.ಐ. ಗಿಡ್ಡಪ್ಪಗೋಳ, ಗಂಗಾಧರ ಹಿರೇಮಠ, ಜಿ.ಎಂ. ಕೋಟ್ಯಾಳ, ಶಂಕರ ಜಲ್ಲಿ, ಸಲೀಂ ದಡೆದ, ಆರ್.ಎಸ್. ಕಮತ, ಎಂ.ಎಂ. ಮುಲ್ಲಾ, ಸುರೇಶ ಹುರಕಡ್ಲಿ, ಎಸ್.ಎಂ. ಕಮತಗಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಂ. ಪಾಟೀಲ, ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ ಗಲಗಲಿ, ಈರಣ್ಣ ಕಾರಕೂನ, ಬಿ.ಎಂ.ಮನಗೂಳಿ ಮತ್ತೀತರರು ಇದ್ದರು.
ದೈಹಿಕ ಶಿಕ್ಷಣ ಶಿಕ್ಷಕ ಗಂಗಾಧರ ಹಿರೇಮಠ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಮಹೇಶ ಗಾಳಪ್ಪಗೋಳ, ಎನ್.ಎಸ್. ಬಿರಾದಾರ ಕಾರ್ಯಕ್ರಮ ನಿರ್ವಹಿಸಿದರು.

