ಎಸ್.ಬಿ ಕಲಾ & ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ :ಪ್ರಪಂಚದಲ್ಲೇ ವೈಜ್ಞಾನಿಕ ಕ್ಷೇತ್ರದಲ್ಲಿ ನಮ್ಮ ಭಾರತ ದೇಶ ಒಂದು ಹೆಜ್ಜೆ ಮುಂದಿದೆ. ಚಂದ್ರನ ಮೇಲೆ “ಚಂದ್ರಯಾನ-೩” ಅನ್ನು ಇಳಿಸುವ ಮೂಲಕ ವೈಜ್ಞಾನಿಕ ಸಾಧನೆ ನಿಜಕ್ಕೂ ಮೆಚ್ಚುವಂಥದ್ದು ಎಂದು ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ದೆ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಸ್ನಾತಕೋತ್ತರ ಭೌತಶಾಸ್ತ್ರ ಅಧ್ಯಯನ ವಿಭಾಗದ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾಯೋಜಕತ್ವದಲ್ಲಿ “ಚಂದ್ರಯಾನ್ ಭಾರತೀಯ ಬಾಹ್ಯಾಕಾಶ ತಂತ್ರಜ್ಞಾನದ ಚಿನ್ನದ ಗರಿ” ಎಂಬ ಶೀರ್ಷಿಕೆಯ ಒಂದು ದಿನದ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶವು ಇಡೀ ಜಗತ್ತಿದೆ ಮಾದರಿಯಾಗಿದೆ. ವೈಜ್ಞಾನಿಕ ಕ್ಷೇತ್ರದಲ್ಲಿ ನಮ್ಮ ದೇಶ ಒಂದು ಹೆಜ್ಜೆ ಮುಂದಿದೆ ಎಂದರು.
ಈ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪನ್ಹಾಲದ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಮತ್ತು ಸಂಯೋಜಕರಾಗಿರುವ ಸಂಪನ್ಮೂಲ ವ್ಯಕ್ತಿ ಡಾ. ರಾಜೀವ್ ಶ್ರೀಕಾಂತ್ ವಟಕರ್ ತಾಂತ್ರಿಕ(ಲೈವ್) ವಿಚಾರ ಮಂಡಿಸಿದರು.
ಎರಡನೇ ಅವಧಿಯಲ್ಲಿ ಬೆಂಗಳೂರಿನ ಪೀಣ್ಯದ ನ್ಯಾವಿಗೇಷನ್ ಸಿಸ್ಟಮ್ಸ್ ಏರಿಯಾದ ಗ್ರೂಪ್ ಡೈರೆಕ್ಟರ್ ಆಗಿರುವ ಶ್ರೀಮತಿ.ರೂಪಾ ಎಂ.ವಿ. ಅವರಿಂದ “ಚಂದ್ರಯಾನ-೩ ಸಮಯದಲ್ಲಿ ಎದುರಿಸಿದ ಸವಾಲುಗಳು” ಎಂಬ ವಿಷಯದ ಕುರಿತು ವಿಚಾರ ಮಂಡಿಸಿದರು.
ಗಿರೀಶ್ ಕುಮಾರ್ ಬಿ. ಸಭೆಯನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಕರಾದ ಡಾ.ಪಿ.ಎಸ್.ಪಾಟೀಲ್, ಕಾರ್ಯಕ್ರಮದ ಸಂಚಾಲಕಿ ಡಾ.ಗಿರಿಜಾ ನಿಂಬಾಳ, ಶ್ರೀಮತಿ. ಸೌಮ್ಯಾ ಸಜ್ಜನ್ ಮತ್ತು ಕು.ಉಮೆರಾಬಾನು ಶೇಖ್ ಮಹಾವಿದ್ಯಾಲಯದ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ರೋಹನ್ ಕುಮಾರ್ ಶಾಖಾ ವ್ಯವಸ್ಥಾಪಕರು ವಂದಿಸಿದರು.

