ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಗ್ರಾಮದ ಸಮುದಾಯ ಆರೋಗ್ಯ ಕೇಂದ್ರ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ತಾಯಂದಿರ ಸಭೆ ಹಮ್ಮಿಕೊಳ್ಳಲಾಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶ್ರೀಮತಿ ಶಾರದಾಭಾಯಿ ಲಮಾಣಿ ಅವರು ಸರ್ಕಾರದಿಂದ ಸಿಗುವ ಕುಟುಂಬ ಕಲ್ಯಾಣ ವಿಧಾನಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಫಾರೂಕ್ ವಲ್ಲಿಭಾಯಿ, ಪೌಷ್ಟಿಕ ಆಹಾರದ ಬಗ್ಗೆ ಮತ್ತು ಪೌಷ್ಟಿಕ ಆಹಾರ ಕೊರತೆಯಿಂದ ಬರುವ ರೋಗಗಳ ಬಗ್ಗೆ ವಿವರಿಸಿ ಕ್ಷಯರೋಗದ ಬಗ್ಗೆ ತಾಯಂದಿರಿಗೆ ತಿಳಿಸಿದರು.
ಕ್ಷಯರೋಗ ಅನ್ನೋದು ಸಾಂಕ್ರಾಮಿಕ ರೋಗ ಮೈಕೋ ಬ್ಯಾಕ್ಟಿರಿಯಂ ಎಂಬ ಸೂಕ್ಷ್ಮಾಣು ಜೀವಿಯ ಮುಖಾಂತರ ಬರುತ್ತದೆ. ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಕಫದಲ್ಲಿ ರಕ್ತ ಬರುವುದು, ತೂಕ ಕಡಿಮೆಯಾಗುವುದು, ಹಸಿವು ಆಗದೇ ಇರುವುದು, ಮೇಲಿಂದ ಮೇಲೆ ಜ್ವರ ಬರುವುದು ಮತ್ತು ಎದೆ ನೋವು ಕೂಡ ಈ ರೋಗದ ಲಕ್ಷಣಗಳಾಗಿದ್ದು, ಕ್ಷಯರೋಗದ ಲಕ್ಷಣವಿದ್ದರೆ ಕೂಡಲೇ ವೈದ್ಯರ ಸಲಹೆ ಪಡೆದು ಪರೀಕ್ಷಿಸಿಕೊಳ್ಳಬೇಕು, ಒಂದು ವೇಳೆ ಖಚಿತವಾದರೆ ಸಂಪೂರ್ಣವಾಗಿ ಚಿಕಿತ್ಸೆ ಉಚಿತವಾಗಿರುತ್ತದೆ. ಭಾರತ ಸರ್ಕಾರ ೨೦೨೫ಕ್ಕೆ ಕ್ಷಯ ಮುಕ್ತ ಭಾರತವನ್ನು ಮಾಡಬೇಕಾಗಿ ತೀರ್ಮಾನಿಸಿದೆ ಈ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಿದಲ್ಲಿ ಮಾತ್ರ ಕ್ಷಯರೋಗ ಮುಕ್ತ ಭಾರತ ಮಾಡಲು ಸಾಧ್ಯವಾಗಲಿದ್ದು, ಮುಂದಿನ ದಿನಮಾನಗಳಲ್ಲಿ ಕ್ಷಯ ರೋಗ ನಿಯಂತ್ರಿಸಲು ಅಡಲ್ಟ್ ಬಿಸಿಜಿ ಲಸಿಕೆ ಹಾಕಲು ಪ್ರಾರಂಭಿಸಲಾಗುತ್ತಿದ್ದು, ಎಲ್ಲರೂ ಕಡ್ಡಾಯವಾಗಿ ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದರು.
ಆಶಾ ಮೇಲ್ವಿಚಾರಕಿ ಶ್ರೀಮತಿ ನಿರ್ಮಲಾ ಬೀರನೂರ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿಯರಾದ ಶ್ರೀಮತಿ ಮಲ್ಲಮ್ಮ ಜೋಗುರ, ಶ್ರೀಮತಿ ನಜ್ಮಾ ನಾಯ್ಕೋಡಿ, ಶ್ರೀಮತಿ ಜ್ಯೋತಿ ತಳ್ಳೋಳ್ಳಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮೀನಾಕ್ಷಿ ಬೇನಾಳ, ಗೀತಾ ಜಂಗಾಣಿ ಮತ್ತು ಗ್ರಾಮದ ತಾಯಂದಿರು ಮಕ್ಕಳು ಹಾಜರಿದ್ದರು.

