ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಕಸ್ತೂರಿ ಕಾಲೊನಿ ನಿವಾಸಿ, ಸಮರವಾಣಿ ಕನ್ನಡ ದಿನಪತ್ರಿಕೆಯ ಸಂಪಾದಕ ರಜಾಕ್ ಬಾಗೇವಾಡಿ ಅವರ ತಂದೆ ಇಬ್ರಾಹಿಂಸಾಬ ಬಾಗೇವಾಡಿ (೮೨) ಅವರು ಭಾನುವಾರ ನಿಧನರಾದರು.
ಮೃತರಿಗೆ ಸಂಪಾದಕ ರಜಾಕ್ ಬಾಗೇವಾಡಿ ಸೇರಿದಂತೆ ಓರ್ವ ಪುತ್ರ, ಪತ್ನಿ, ಹಾಗೂ ಮೂವರು ಪುತ್ರಿಯರಿದ್ದಾರೆ.
ಮೃತರ ಅಂತ್ಯಕ್ರಿಯೆಯು ಉಕ್ಕಲಿ ರಸ್ತೆಯಲ್ಲಿರುವ ಖಬರಸ್ಥಾನದಲ್ಲಿ ಭಾನುವಾರ ರಾತ್ರಿ ೮ ಗಂಟೆಗೆ ನೆರವೇರಿತು.

