ಲಾಲ್ ಬಹದ್ದೂರಶಾಸ್ತ್ರಿ ಹಾಗೂ ಬಸವ ಸಾಗರ ಜಲಾಶಯಗಳ ನೀರು ಮರು ಹಂಚಿಕೆ ಮಾಡಲು ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅವಳಿ ಜಲಾಶಯಗಳ ನೀರು ಮರು ಹಂಚಿಕೆ ಹೋರಾಟ ಸಮೀತಿ ಜಿಲ್ಲಾ ಘಟಕ ವಿಜಯಪುರ ವತಿಯಿಂದ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರಿಗೆ ಒತ್ತಾಯಪಡಿಸುವಂತೆ ಆಗ್ರಹಿಸಿ ಅವಳಿ ಜಲಾಶಯಗಳ ಹೋರಾಟ ಸಮಿತಿ ವತಿಯಿಂದ ರೈತ ಮುಖಂಡರುಗಳು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರಿಗೆ ರವಿವಾರ ಅವರ ಸ್ವಗ್ರಹದಲ್ಲಿ ಮನವಿ ಸಲ್ಲಿಸಿದರು.
ಈ ವೇಳೆ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಅವರು ಮಾತನಾಡಿ, ಆಲಿಮಟ್ಟಿ ಜಲಾಶಯದ ನಿರ್ಮಾಣಕ್ಕೆ ಫಲವತ್ತಾದ ಬಹುತೇಕ ಭೂಮಿಯನ್ನು ಕಳೆದುಕೊಂಡಿರುವ ಕೃಷ್ಣೆಯ ಮಕ್ಕಳು ಅನಾಥರಾಗಿ ದಿಕ್ಕು ತೊಚದಂತಾಗಿದ್ದಾರೆ, ಭೂಮಿ ಕಳೆದುಕೊಂಡವರು ನಮ್ಮ ಜಿಲ್ಲೆಯವರು ಆದರೆ ಇದರ ಸಂಪೂರ್ಣ ಫಲ ಉಣ್ಣುತ್ತಿರುವವರು ನೆರೆಯ ಬಸವ ಸಾಗರ ಆಣೆಕಟ್ಟು ಹಾಗೂ ಆಂದ್ರದ ಜನರು, ಆದ್ದರಿಂದ ಈ ನೀರು ಹಂಚಿಕೆಯ ತಾರತಮ್ಯವನ್ನು ಕೂಡಲೇ ಇತ್ಯರ್ಥ ಪಡೆಸಿ ೨ ಆಲಿಮಟ್ಟಿ ಹಾಗೂ ಬಸವ ಸಾಗರ ಜಲಾಶಯಗಳ ನೀರನ್ನು ಮರು ಹಂಚಿಕೆ ಮಾಡಬೇಕು ಎಂದರಲ್ಲದೆ, ಇದಕ್ಕಾಗಿ ರೈತ ನಿಯೋಗವನ್ನು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ರೈತರ ನೀರಾವರಿ ಅಧ್ಯಕ್ಷ ಮುಖ್ಯಮಂತ್ರಿಗಳ ಬಳಿ ಸಭೆಗೆ ಸಮಯ ನಿಗದಿ ಪಡಿಸಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲರು ಮನವಿ ಸ್ವೀಕರಿಸಿ ಮಾತನಾಡುತ್ತಾ, ಈ ವಿಷಯ ಕುರಿತು ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷ ಆರ.ಬಿ.ತಿಮ್ಮಾಪುರ ಅವರಿಗೆ ಬೇಟಿ ಆಗಿ ಮಾತನಾಡಿ, ಒಂದು ವೇಳೆ ಇಲ್ಲಿ ಬಗೆಹರೆಯದಿದ್ದರೆ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರ ಬಳಿ ಚರ್ಚಿಸಲು ಸಮಯಾವಕಾಶ ತೆಗೆದುಕೊಳ್ಳೊಣ ಎಂದರು.
ಈ ವೇಳೆ ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ, ತಾಲೂಕಾ ಅಧ್ಯಕ್ಷ ಮಹಾದೇವಪ್ಪ ತೇಲಿ, ತಿಕೊಟಾ ಅಧ್ಯಕ್ಷ ಸಾತಲಿಂಗಯ್ಯ ಸಾಲಿಮಠ, ಮಹಾದೇವ ಕದಂ, ಮಹಾಂತೇಶ ಮಮದಾಪುರ, ಸಂಗಪ್ಪ ಟಕ್ಕೆ, ತಿಪ್ಪರಾಯ ಭೈರೋಡಗಿ, ವಿಠ್ಠಲ ಬಿರಾದಾರ, ಸೋಮನಗೌಡ ಪಾಟೀಲ, ಪ್ರಲ್ಹಾದ ನಾಗರಾಳ, ಸಿದ್ದಪ್ಪ ಕೊಟ್ಟಲಗಿ, ಹೊನ್ನಕೆರಪ್ಪ ತೇಲಗಿ, ಸದಾಶಿವ ಬರಟಗಿ ಸೇರಿದಂತೆ ಅನೇಕರು ಇದ್ದರು.

