Subscribe to Updates
Get the latest creative news from FooBar about art, design and business.
Author: editor.udayarashmi@gmail.com
– ಬಸವರಾಜ ನಂದಿಹಾಳಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನ ಮನಗೂಳಿ, ಯರನಾಳ, ಇಂಗಳೇಶ್ವರ, ದಿಂಡವಾರ, ರಬಿನಾಳ, ಮಸಬಿನಾಳ, ನರಸಲಗಿ, ಇವಣಗಿ, ಕಣಕಾಲ, ಕಾನ್ನಾಳ, ಟಕ್ಕಳಕಿ, ಜೈನಾಪೂರ, ಜಾಯವಾಡಗಿ, ಬ್ಯಾಕೋಡ, ಸೋಲವಾಡಗಿ, ಹೂವಿನಹಿಪ್ಪರಗಿ ಸೇರಿದಂತೆ ವಿವಿಧೆಡೆ ಗುರುವಾರ ಸಂಜೆ ಮಳೆ ಸುರಿಯಿತು.ಹಲವಾರು ದಿನಗಳಿಂದ ಮಳೆಯ ನಿರೀಕ್ಷೆಯಲ್ಲಿದ್ದ ರೈತಬಾಂಧವರಿಗೆ ನಾಗಪಂಚಮಿಯಂದು ಬಂದ ಮಳೆ ಮಂದಹಾಸ ಮೂಡಿಸಿದೆ.ನಾಗರ ಪಂಚಮಿ ಹಬ್ಬದ ಸಿಹಿ ತಿನ್ನುತ್ತಾ ಮಳೆಯನ್ನು ರೈತರು ನೋಡಿ ಹರ್ಷವ್ಯಕ್ತಪಡಿಸಿದರು. ಬಿತ್ತನೆ ಮಾಡಿದ ನಂತರ ಅಷ್ಟಾಗಿ ಮಳೆ ಬಂದಿರಲಿಲ್ಲ. ಮಳೆಯಿಲ್ಲದೇ ಬೆಳೆ ಒಣಗುವ ಸ್ಥಿತಿ ಬಂದೊದಗಿತ್ತು. ಮೆಕ್ಕೆಜೋಳ, ತೊಗರಿ ಪ್ರಮುಖ ಆದಾಯ ಬೆಳೆಯಾಗಿರುವದರಿಂದಾಗಿ ಇವುಗಳ ಬಿತ್ತನೆ ಪ್ರಮಾಣ ಹೆಚ್ಚಾಗಿದೆ. ಬಿತ್ತನೆಯಾದ ನಂತರ ಮಳೆಯೇ ಆಗಿರಲಿಲ್ಲ. ಆಷಾಢ ಗಾಳಿಗೆ ನಾಟಿದ ಬೆಳೆ ಒಣಗಿ ಹೋಗುತ್ತಿತ್ತು. ಮಳೆಯಿಲ್ಲದೇ ಇರುವದರಿಂದಾಗಿ ಅಂತರ್ಜಲ ಮಟ್ಟವೂ ಕುಸಿಯಲು ಆರಂಭವಾಗಿತ್ತು. ಇಂದು ಸಂಜೆ ಬಂದ ಮಳೆಯು ಬೆಳೆಗಳಿಗೆ ಆಸರೆಯಾಗಿದೆ.ಬಿತ್ತುವ ಮೊದಲು ಉತ್ತಮ ಮಳೆಯಾಗಿರುವದರಿಂದಾಗಿ ಬಿತ್ತನೆ ಮಾಡಲಾಗಿತ್ತು. ಬಿತ್ತನೆ ಮಾಡಿದ ಒಂದೂವರೆ ತಿಂಗಳಿಂದ ಉತ್ತಮ ಮಳೆಯಾಗಿರಲಿಲ್ಲ. ಇದರಿಂದಾಗಿ ಬೆಳೆಗೆ…
ವಿಜಯಪುರ: ಬಸವ ಜನ್ಮಸ್ಥಳವಾದ ಇಂಗಳೇಶ್ವರ ಗ್ರಾಮಕ್ಕೆ ಇಂದು ಜಿಲ್ಲಾಧಿಕಾರಿಗಳಾದ ಟಿ ಭೂಬಾಲನ್ ಅವರು ಭೇಟಿ ಮಾಡಿ ಬಸವೇಶ್ವರರ ಪುತ್ತಳಿ ನಿರ್ಮಾಣ ಕುರಿತು ಸಮೀಕ್ಷೆ ನಡೆಸಿ ಮತ್ತೆ ಸ್ಮಾರಕಕ್ಕೆ ತೆರಳಿ ವೀಕ್ಷಣೆ ಮಾಡಿ ಗ್ರಾಮದ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ವೀಕ್ಷಣೆ ಮಾಡಿದರು.ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮಕ್ಕೆ ಬೇಟಿ ಶ್ರೀ ಬಸವೇಶ್ವರ ಸರ್ಕಲ್ & ಮೂರ್ತಿ ಪ್ರತಿಷ್ಠಾಪನಾ ನಿರ್ಮಾಣ ಕುರಿತು ಸಂಬಂಧಿಸಿದ ತಹಶೀಲ್ದಾರರಿಂದ ಮಾಹಿತಿ ಪಡೆದ ಅವರು, ಗಾವಠಾಣ ಜಾಗದಲ್ಲಿ ಬಸ್ ನಿಲ್ದಾಣ ನಿರ್ಮಾಣ ಕುರಿತು ಪರಿಶೀಲನೆ ನಡೆಸಿದರು.ಬಸವೇಶ್ವರ ಬಸವ ಸ್ಮಾರಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ನಿರ್ಮಾಣ ಹಂತದಲ್ಲಿರುವ ಅಂಬಿಗರ ಚೌಡಯ್ಯ ಸಮುದಾಯ ಭವನ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು.ಹಾಲು ಬಾವಿ ಹಾಗೂ ವಿರಕ್ತಮಠದ ವಚನ ಶಿಲಾ ಮಂಟಪ ವೀಕ್ಷಣೆ ಮಾಡಿದರು.ಬಸವನ ಬಾಗೇವಾಡಿಯ ಮೆಗಾ ಮಾರ್ಕೆಟ್ ಮತ್ತು ನಂದಿ ಮಾರ್ಕೆಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಜೆ ಬಸವನ ಬಾಗೇವಾಡಿಯಲ್ಲಿರುವ ಇಂದಿರಾ ಕ್ಯಾಂಟೀನಗೆ ದಿಢೀರ ಭೇಟಿ…
ಮುದ್ದೇಬಿಹಾಳ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷರಾಗಿ ವೆಂಕನಗೌಡ ಪಾಟೀಲ, ಕಾರ್ಯನಿರ್ವಾಹಕ ಸಮಿತಿ ಸದಸ್ಯರಾಗಿ ಅಶೋಕ ಚಟ್ಟೇರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚಿಕ್ಕಪಡಸಲಗಿ: ಇಲ್ಲಿನ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಗುರುವಾರ ವಿದ್ಯಾಮಾತೆ ಸರಸ್ವತಿ ದೇವಿ ಪೂಜಾ ಆರಾಧನೆ ಶ್ರದ್ಧಾಭಕ್ತಿ ನಮನದೊಂದಿಗೆ ಜರುಗಿತು.ಸರಸ್ವತಿ ದೇವಿ ಹಾಗೂ ಲಿಂ, ತೋಂಟದ ಸಿದ್ದಲಿಂಗ ಪೂಜ್ಯರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಪೂಜೆ ಸಲ್ಲಿಸಲಾಯಿತು. ಗುರು,ಗುರುಮಾತೆ ಹಾಗೂ ಶಾಲಾ ಮಕ್ಕಳು ಭಕ್ತಿಭಾವದಿಂದ ಆರಾಧಿಸಿದರು.ಈ ಸಂದರ್ಭದಲ್ಲಿ ವಿಶ್ರಾಂತ ದೈಹಿಕ ಶಿಕ್ಷಕ ಬಸವರಾಜ ಅನಂತಪುರ ಮಾತನಾಡಿ, ಮಕ್ಕಳು ಒಳ್ಳೆಯ ಜ್ಞಾನದಿಂದ ವಿದ್ಯಾವಂತರಾಗಲು ಸರಸ್ವತಿದೇವಿಯ ಕೃಪಾಶೀವಾ೯ದ ಬೇಕು.ಶುಭ್ರ ಪ್ರಸನ್ನತೆಭಾವದಿಂದ ಆರಾಧಿಸಿದರೆ ದೇವಿಯ ಅನುಗ್ರಹಕ್ಕೆ ಪಾತ್ರರಾಗಬಹುದು. ವಿದ್ಯಾಭ್ಯಾಸ ಮಾಡುವ ಮಕ್ಕಳು ಭವಿಷ್ಯತ್ತಿನ ಬದುಕಿನಲ್ಲಿ ಉತ್ತಮ ಚರಿತ್ರೆಯಿಂದ ಉನ್ನತಿ ಕಾಣಲು ಜ್ಞಾನದಾತೆ ಸರಸ್ವತಿ ದೇವಿಯನ್ನು ಅನುದಿನವೂ ಆಧ್ಯಾತ್ಮಿಕತೆಯಿಂದ ಪೂಜಿಸಿ ಆರಾಧಿಸಬೇಕು.ಜೊತೆಗೆ ಪಠ್ಯ ಪುಸ್ತಕ, ಬುಕ್ ಗಳೊಂದಿಗೆ ಸಮಯೋಚಿತವಾಗಿ ಬೆರೆತು ಅದ್ಯಯನಶೀಲರಾದಾಗ ವಿದ್ಯೆ,ಬುದ್ದಿ ಪ್ರಾಪ್ತಿವಾದೀತು ಎಂದರು.ಮುಖ್ಯ ಗುರು ಬಸವರಾಜ ಜಾಲೋಜಿ, ಧಾಮಿ೯ಕ ಸಂಪ್ರದಾಯದ ನಮ್ಮ ದೇಶದಲ್ಲಿ ಹಲವಾರು ದೇವ,ದೇವತೆಗಳು ಪೂಜಿಸಲ್ಪಡುವರು.ಅದರಲ್ಲಿ ವಿದ್ಯಾರ್ಥಿಗಳ ಸಮೂಹಕ್ಕೆ ಸರಸ್ವತಿ ದೇವಿ ಅತಿ ಪ್ರಿಯಳು ಎಂದು ಜ್ಞಾನ ವಾಹಿನಿಯ ಮಹತ್ವ ಮಕ್ಕಳಿಗೆ ತಿಳಿಸಿದರು. ಶಿಕ್ಷಣ…
ಸಿಂದಗಿ: ವಾರ್ಡ್ ನಂ.೧೮,೧೯,೨೦,೨೧ರಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ೧೮-೧೯ನೇ ವಾರ್ಡ್ನಲ್ಲಿ ಕೋಳವೆ ಭಾವಿ ಇದ್ದು, ಸರಿಯಾಗಿ ಅದರ ನಿರ್ವಹಣೆಯಿಲ್ಲದೇ ಕುಡಿಯುವ ನೀರಿನ ಸಮಸ್ಯೆಯಿದೆ ಕೂಡಲೇ ಈ ಸಮಸ್ಯೆಗಳಿಗೆ ಸ್ಪಂದಿಸಿ ಸರಿಪಡಿಸಬೇಕು ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ವಕ್ತಾರ ಚನ್ನಪ್ಪಗೌಡ ಎಸ್. ಬಿರಾದಾರ ಆಗ್ರಹಿಸಿದರು.ಪಟ್ಟಣದ ಪುರಸಭೆ ಕಾರ್ಯಾಲಯದ ಮುಂಭಾಗದಲ್ಲಿ ವಿವಿಧ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಪ್ರತಿಭಟಿಸಿ, ಮನವಿ ಸಲ್ಲಿಸಿ ಮಾತನಾಡಿದ ಅವರು, ನಗರ ಸ್ವಚ್ಚತೆಯೆಡೆಗೆ ಅಧಿಕಾರಿಗಳು ಗಮನ ಹರಿಸಬೇಕು. ರಾಜ್ಯದಲ್ಲಿ ಈಗಾಗಲೇ ಡೆಂಘೀ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಸಿಂದಗಿ ನಗರವು ಸ್ವಚ್ಚತೆಯಿಂದ ಮರಿಚೀಕೆಯಾಗಿ ಅಶುಚಿತ್ವದಿಂದ ರಾರಾಜುಸುತ್ತಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಪರಿಹರಿಸದೆ ಹೋದರೇ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತೆ ಎಂದು ಎಚ್ಚರಿಸಿದರು.ಇದೇ ಸಂದರ್ಭದಲ್ಲಿ ಸಂತೋಷ ಮನಗೂಳಿ, ಸಿದ್ರಾಮಪ್ಪ ಅವಟಿ, ಸೋಮಲಿಂಗ ನಾಯ್ಕೋಡಿ, ನಾಗಣ್ಣ ಪಡೆಕನೂರ, ರಮೇಶ ರಾಠೋಡ, ಶರಣು ಮನಗೂಳಿ, ಮುನ್ನಾ ಮುಜಾವರ, ಅಶೋಕ ಪಾಟೀಲ, ಸಿದ್ದು ತಮದೊಡ್ಡಿ, ಸದ್ದಾಂ ಮುಲ್ಲಾ, ಕಿರಣಕುಮಾರ ತಳವಾರ, ದಾದಾಗೌಡ ಮೋರಟಗಿ, ಮನೋಜ್ ಪಾಟೀಲ, ಶ್ರೀಶೈಲ ಮೋರಟಗಿ…
ಮುದ್ದೇಬಿಹಾಳ: ಭಾರತ ದೇಶದಲ್ಲಿ ಅನಕ್ಷರಸ್ಥರಿಗಿಂತ ಅಕ್ಷರಸ್ಥರೇ ಹೆಚ್ಚು ಮೌಢ್ಯಗಳಿಗೆ ಬಲಿಯಾಗಿದ್ದಾರೆ. ನಾವೆಲ್ಲರೂ ಬೆಳೆಯುವ ಭವಿಷ್ಯದ ಮಕ್ಕಳಿಗೆ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಬೆಳೆಸಬೇಕು ಎಂದು ನಾಲತವಾಡದ ಶ್ರೀ ವೀರೇಶ್ವರ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಪರಶುರಾಮ ಚೌಡಕೇರ ಹೇಳಿದರು.ತಾಲ್ಲೂಕಿನ ಜಮ್ಮಲದಿನ್ನಿ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಹಸಿರು ತೋರಣ ಗೆಳೆಯರ ಬಳಗ ಗುರುವಾರ ನಾಗರ ಪಂಚಮಿ ನಿಮಿತ್ತ ಹಮ್ಮಿಕೊಂಡಿದ್ದ “ಮಕ್ಕಳಿಗೆ ಹಾಲು ಕುಡಿಸುವ ಹಬ್ಬ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಹಬ್ಬ ಹರಿದಿನಗಳನ್ನು ಸಂಭ್ರಮದಿಂದ ಆಚರಿಸೋಣ. ಆದರೆ ದೇವರ ಹೆಸರಿನಲ್ಲಿ ಅಮೂಲ್ಯವಾದ ಆಹಾರ ಪದಾರ್ಥಗಳನ್ನು ಅಭಿಷೇಕ, ಯಜ್ಞ, ಯಾಗಗಳ ಹೆಸರಿನಲ್ಲಿ ವ್ಯರ್ಥ ಹಾಳು ಮಾಡದೇ ಹಸಿದಿರುವ ಕೋಟ್ಯಂತರ ಬಡವರಿಗೆ ಕೊಡುವ ಕೆಲಸ ಮಾಡೋಣ ಎಂದರು.ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಚಾರ್ಯ ಎನ್.ಎಸ್.ಕೋಡಬಾಗಿ ಮಾತನಾಡಿ, ಹಸಿರು ತೋರಣ ಗೆಳೆಯರ ಬಳಗದ ಸದಸ್ಯರು ತಾಲ್ಲೂಕಿನಲ್ಲಿ ಪರಿಸರ ಜಾಗೃತಿ ಜೊತೆಗೆ ವೈಚಾರಿಕತೆ ಬೆಳೆಸುವ ಮಾಡುತ್ತಿರುವುದು ಶ್ಲಾಘನೀಯ. ನಾವು ಮೌಢ್ಯಗಳ ಜೊತೆ ಬದುಕದೇ, ಆಯಾ ವಿಷಯದ ಸತ್ಯಾಸತ್ಯತೆ ಕುರಿತು…
ಇಡಿ ವಿರುದ್ಧ ಪ್ರತಿಭಟನೆ ಪ್ರಕರಣ | ಅಗತ್ಯ ಅನುಮತಿಯಿಲ್ಲದೆ ಪ್ರತಿಭಟನೆ | ಆ.29 ರಂದು ಖುದ್ದು ವಿಚಾರಣೆಗೆ ಹಾಜರಾಗಲು ಸಮನ್ಸ್ | ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯದ ವಿಚಾರಣೆ ಖಂಡಿಸಿ ಪ್ರತಿಭಟನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 29 ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಬೆಂಗಳೂರು ನ್ಯಾಯಾಲಯ ಗುರುವಾರ ಸಮನ್ಸ್ ಜಾರಿ ಮಾಡಿದೆ.ಜೂನ್ 2022 ರಲ್ಲಿ, ಎರಡು ವರ್ಷಗಳ ಹಿಂದೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಇಡಿ ಪದೇ ಪದೇ ವಿಚಾರಣೆಗೆ ಒಳಪಡಿಸಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿದ್ದರು.ರಾಹುಲ್ ಗಾಂಧಿಯವರಿಗೆ ಅನಗತ್ಯ ಕಿರುಕುಳ ನೀಡುತ್ತಿರುವ ಇಡಿ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಪ್ರತಿಭಟನೆಯನ್ನು ಆಯೋಜಿಸಿತ್ತು. ಆದರೆ ಸ್ವಾತಂತ್ರ್ಯ ಉದ್ಯಾನದಲ್ಲಿ ಮಾತ್ರ ಪ್ರತಿಭಟನೆ ಮಾಡಬೇಕೆಂದು…
ಚಡಚಣ: ವ್ಯಸನಗಳು ವ್ಯಕ್ತಿಯ ವ್ಯಕ್ತಿತ್ವನ್ನು ಹಾಳು ಮಾಡುತ್ತವೆ. ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ವ್ಯಸನಗಳಿಂದ ದೂರವಿರಬೇಕು ಎಂದು ಪ್ರಾಚಾರ್ಯ ಮನೋಜ ಕಟಗೇರಿ ಹೇಳಿದರುಪಟ್ಟಣದ ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಇಲಕಲ್ಲದ ಮಹಾಂತ ಶ್ರೀಗಳ ಜನ್ಮದಿನದ ಅಂಗವಾಗಿ ನಡೆದ ವ್ಯಸನ ಮುಕ್ತ ದಿನ ಆಚರಣೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಿ ಅವರು ಮಾತನಾಡಿದರುಮಹಾಂತ ಅಪ್ಪಗಳು ಮಹಾಂತ ಜೋಳಿಗೆ ಎಂಬ ವಿನೂತನ ಕಾರ್ಯಕ್ರಮವನ್ನು ಮಾಡುವದರ ಮುಖಾಂತರ ಭಕ್ತರ ಮನೆಗಳಿಗೆ ತೆರಳಿ ಯುವಜನರು ದುಶ್ಚಟಗಳನ್ನು ತಮ್ಮ ಜೋಳಿಗೆಯಲ್ಲಿ ಹಾಕುವಂತೆ ಮನವೊಲಿಸಿ ವ್ಯಸನ ಮುಕ್ತ ಸಮಾಜ ನಿರ್ಮಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.ಇಂದು ವಿಶ್ವದಲ್ಲಿ ೭ ಮೀಲಿಯನ್ ಜನ ದುಶ್ಚಟಗಳಿಂದ ಸಾವನ್ನಪ್ಪುತ್ತಿದ್ದು ಯುವ ಪೀಳಿಗೆ ಇದರಿಂದ ದೂರವಿರಬೇಕೆಂದು ಸಲಹೆ ನೀಡಿದರು.ಎಲ್ಲರೂ ಶ್ರೀಗಳ ಜನ್ಮದಿನದ ಸುಸಂದರ್ಭದಲ್ಲಿ ದುಶ್ಚಟಗಳಿಗೆ ದಾಸರಾಗುವದಿಲ್ಲ ಎಂಬ ಪ್ರತಿಜ್ಞೆ ಮಾಡುವದರ ಮುಖಾಂತರ ಶ್ರೀಗಳ ಕನಸನ್ನು ನನಸು ಮಾಡಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕ ಬಿ.ಎಸ್.ಅಂಡಗಿ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಶ್ರೀಶೈಲ ಕಾಮಗೊಂಡ, ಎನ್.ಎಸ್.ಎಸ್.…
ವಿಜಯಪುರ: ಗ್ರಾಮೀಣ ತಾಲೂಕಿನ ಕಗ್ಗೋಡ ಗ್ರಾಮದ ಆದರ್ಶ ವಿದ್ಯಾಲಯಲ್ಲಿ 2024-25 ನೇ ಸಾಲಿಗೆ 6ನೇ ತರಗತಿ ದಾಖಲಾತಿಗಾಗಿ ಮೀಸಲಾತಿವಾರು ಖಾಲಿ ಇರುವ ಸ್ಥಾನಗಳಿಗೆ 1:20 ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗ್ರಾಮೀಣ ವಲಯ ಹಾಗೂ ಸರಕಾರಿ ಆದರ್ಶ ವಿದ್ಯಾಲಯ ಕಗ್ಗೋಡ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.ರಾಜ್ಯ ಕಚೇರಿಯಿಂದ ಈಗಾಗಲೇ ಅರ್ಹ ವಿದ್ಯಾರ್ಥಿಗಳಿಗೆ ಸಂದೇಶ ರವಾನಿಸಲಾಗಿದ್ದು ಸದರಿ ಪಟ್ಟಿ ಆದರಿಸಿ ಆಗಷ್ಟ 13 ರಂದು ಬೆಳಿಗ್ಗೆ 10 ಗಂಟೆಗೆ ಸಾಮಾನ್ಯ ವರ್ಗದ (ಸಾಮಾನ್ಯ) ವಿದ್ಯಾರ್ಥಿಗಳಿಗೆ ಹಾಗೂ ಆಗಷ್ಟ 14 ರಂದು ಬೆಳಿಗ್ಗೆ 10 ಗಂಟೆಗೆ ಇತರೆ ಪ್ರವರ್ಗಗಳಿಗೆ (ಓಬಿಸಿ) ಕೌನ್ಸಿಲಿಂಗ್ ಅನ್ನು ವಿಜಯಪುರ ಗ್ರಾಮೀಣ ತಾಲೂಕಿನ ಕಗ್ಗೋಡ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ನಡೆಸಲಾಗುವುದು.ಹೆಚ್ಚಿನ ಮಾಹಿತಿಗಾಗಿ ಶಾಲೆಯ ಮುಖ್ಯೋಪಾಧ್ಯಾಯ ಶ್ರೀಮತಿ ಎಫ್. ಎಸ್. ಹತ್ತರಕಿಹಾಳ 7795490736 ಪರೀಕ್ಷೆ ನೋಡಲ್ ಪ್ರಭು ಬಿರಾದಾರ 9880832448 ಹಾಗೂ ಪ್ರದಸ ಶಿರಹಟ್ಟಿ 8971163743 ಇವರನ್ನು ಸಂಪರ್ಕಿಸಲು ತಿಳಿಸಲಾಗಿದೆ.ಕಡ್ಡಾಯವಾಗಿ ಎಸ್ಸಿ ಎಸ್ಟಿ ಒಬಿಸಿ ವಿದ್ಯಾರ್ಥಿಗಳು ಕೌನ್ಸಲಿಂಗ…
ಢವಳಗಿ: ಗ್ರಾಮದ ಬಸವ ಬಾಲ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಗಸ್ಟ 6ರಂದು ನಡೆದ 2024-25ನೇ ಸಾಲಿನ ಢವಳಗಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವು ಯಶಸ್ವಿಯಾಗಿ ಜರುಗಿತು. ಈ ಕ್ರೀಡಾಕೂಟದಲ್ಲಿ ಬಸವ ಬಾಲ ಭಾರತಿ ಶಾಲೆಯ ವಿದ್ಯಾರ್ಥಿಗಳು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿರುತ್ತಾರೆ.ಅದರಲ್ಲಿ ಅಭಿಷೇಕ್ ಕೋಣನವರ್ ಎತ್ತರ ಜಿಗಿತ ಪ್ರಥಮ ಉದ್ದ ಜಿಗಿತ ದ್ವಿತೀಯ ಸ್ಥಾನ, ನಿಂಗನಗೌಡ ಕರಡ್ಡಿ 600 ಮೀಟರ್ ಓಟದಲ್ಲಿ ಪ್ರಥಮ ಉದ್ದ ಜಗಿತದಲ್ಲಿ ಪ್ರಥಮ 100 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ, ಸಂಗಮೇಶ್ ಯಾಳವಾರ್ 100 ಮೀಟರ್ ಓಟದಲ್ಲಿ ಪ್ರಥಮ 400 ಮೀಟರ್ ಓಟದಲ್ಲಿ ಪ್ರಥಮ ಎರಡು ನೂರು ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ, ಮಾರುತಿ ನಾಗರಬೆಟ್ಟ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ, ಅರುಣ್ ಕುಮಾರ್ ಕೋಣನವರ್ ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ, ಚೈತ್ರ ಬಿರಾದಾರ್ ಎತ್ತರ ಜಿಗಿತದಲ್ಲಿ ಪ್ರಥಮ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ,ಬಾಲಕರ ವಿಭಾಗದ ಗುಂಪು ಆಟದಲ್ಲಿ…
