ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಶಾಂತಿ ಧೂತ ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜಯಂತಿ ಪ್ರಯುಕ್ತ ತಾಲೂಕಿನ ಗುಡಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಎಸ್‌ಡಿಎಂಸಿ ಸದಸ್ಯ ಭೀಮನಗೌಡ ದೋರನಹಳ್ಳಿ, ಇಬ್ರಾಹಿಂ ಶೇಖ್, ಪ್ರಭಾರಿ ಮುಖ್ಯ ಗುರು ಸಂಗಮೇಶ ನವಲಿ, ಸಹಶಿಕ್ಷಕಿ ಲಕ್ಷ್ಮೀ ಮನಿಕಟ್ಟಿ, ಅತಿಥಿ ಶಿಕ್ಷಕಿ ಯಲ್ಲಮ್ಮ ಉತಾಳೆ ಹಾಗೂ ಶ್ರೀಮತಿ ಕಾಶಿಬಾಯಿ ಹಾದಿಮನಿ ಸೇರಿದಂತೆ ವಿದ್ಯಾರ್ಥಿಗಳು ಶ್ರಮದಾನ ಮಾಡಿದರು.

