ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಪಟ್ಟಣದ ಶ್ರೀಮತಿ ಗಂಗೂಬಾಯಿ ಶಾಂತಗೌಡ ಪೋಲೀಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸತ್ಯ ಮತ್ತು ಅಹಿಂಸೆ ಪ್ರತಿಪಾದಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ,155 ನೇ ಹಾಗೂ ಜೈ ಜವಾನ್ ಜೈ ಕಿಸಾನ್ ಎಂದ ಲಾಲ್ ಬಹದ್ದೂರ್ ಶಾಸ್ತ್ರಿಯವರ,120 ನೇ ಜನ್ಮದಿನದ ಅಂಗವಾಗಿ ಉಭಯ ನಾಯಕರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.
ಕರ್ನಾಟಕ ರಾಜ್ಯ ಸರ್ಕಾರ, ರಾಯಚೂರು ವಿಶ್ವವಿದ್ಯಾಲಯ ರಾಯಚೂರು, ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೆಂಭಾವಿ ಸಹಯೋಗದಲ್ಲಿ ಸೆಪ್ಟೆಂಬರ್ 17 ರಿಂದ 02 ಅಕ್ಟೋಬರ್ ವರೆಗೆ ಹಮ್ಮಿಕೊಂಡಿದ್ದ
“ಸ್ವಚ್ಛತೆಯೇ ಸೇವೆ” ಎಂಬ ಕಾರ್ಯಕ್ರಮದಡಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಅಭಿಯಾನದಲ್ಲಿ ಪಾಲ್ಗೊಂಡು ಮೆರುಗು ತಂದು ಕೊಟ್ಟರು.
ಇದೇ ಸಂದರ್ಭದಲ್ಲಿ ಪುರಸಭೆ ನಾಮನಿರ್ದೇಶಿತ ಸದಸ್ಯ ಶಿವಶಂಕರ ಖಾನಾಪುರ, ಗ್ಯಾರಂಟಿ ಯೋಜನೆ ಅನುಷ್ಠಾನ ತಾಲೂಕು ಸಮಿತಿ ಸದಸ್ಯ ಆನಂದ ಎಂ ವಜ್ಜಲ್, ಮಾಜಿ ಗ್ರಾಪಂ ಅಧ್ಯಕ್ಷ ಸೋಮಲಿಂಗಪ್ಪ ದೊಡ್ಮನಿ, ಪ್ರಾಂಶುಪಾಲ ಡಾ ನಾಗಪ್ಪ ಚಾವಲ್ಕರ್, ಉಪನ್ಯಾಸಕರಾದ ಡಾ ಸಿದ್ದಲಿಂಗ ರಾಠೋಡ್, ಡಾ ಬಸಮ್ಮ ಎಸ್, ಮಲ್ಲಿಕಾರ್ಜುನ ಮರಡ್ಡಿ, ಡಾ ಯಂಕನಗೌಡ ಪಾಟೀಲ, ಶರಣಪ್ಪ ಗೊಡ್ರಿಹಾಳ, ಬೋಧಕೇತರ ಸಿಬ್ಬಂದಿ ಸಂಗಣ್ಣ ಪಟ್ಟಣಕರ್, ಮಾಸುಮ ಅಲಿ ನಾಶಿ, ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದು ಪ್ರತಿಜ್ಞಾವಿಧಿ ಸ್ವೀಕರಿಸಿದರು.

