ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಕೆಪಿಆರ್ ಸಕ್ಕರೆ ಕಾರ್ಖಾನೆಯು ಕಬ್ಬು ಕಟಾವುದಾರರಿಗೆ ಹೆಚ್ಚುವರಿ ಬಾಕಿ ಹಣ ನೀಡದಿರುವದನ್ನು ಖಂಡಿಸಿ ಕಳೆದ ನಾಲ್ಕುದಿನಗಳಿಂದ ಕಬ್ಬು ಕಟಾವುದಾರರು ದರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಬೆಂಬಲಿಸಿ ಬ್ರಹತ್ ಪ್ರತಿಭಟನಾ ಮೆರವಣಿಗೆ ಮಾಡಿದರು.
ಕಬ್ಬು ಕಟಾವುದಾರರ ಟ್ರಾಕ್ಟರ್ ಮಾಲಿಕರಾದ ಬಸುಗೌಡ ಬಿರಾದಾರ, ಶಶೀಧರ ನಾಯ್ಕೋಡಿ ಮುಂತಾದವರು ಮಾತನಾಡಿ, ಸರ್ಕಾರದ ನಿದೇರ್ಶನದಂತೆ ಎಪ್‌ಆರ್‌ಪಿ ಪ್ರಕಾರ ಕಬ್ಬು ಕಟವುದಾರರಿಗೆ ಪ್ರತಿ ಟನ್ ಕಬ್ಬಿಗೆ ೩೨೫ರೂ ನೀಡಿದ್ದು ಹೆಚ್ಚುವರಿಯಾಗಿ ೧೧೪ರೂ ನೀಡಬೇಕು ಎಂದು ಆದೇಶವಿದ್ದು, ಈ ನಿಯಮದಂತೆ ಇಗಾಗಲೆ ಪಕ್ಕದ ಮಾರಾಷ್ಟ್ರದಲ್ಲಿನ ಎಲ್ಲ ಸಕ್ಕರೆ ಕಾರ್ಖಾನೆಗಳು ಮತ್ತು ಕರ್ನಾಟಕ ಅನೇಕ ಸಕ್ಕರೆ ಕಾರ್ಖಾನೆಗಳು ಹೆಚ್ಚುವರಿ ಹಣ ನೀಡಿದ್ದು ಆಲಮೇಲ ಕೆಪಿಆರ್ ಕಾರ್ಖಾನೆ ಇನ್ನುವರೆಗೂ ನೀಡಿಲ್ಲ ಕೆಳಿದರೆ ಯಾವುದೆ ಸ್ಪಂದನೆ ನೀಡುತ್ತಿಲ್ಲ, ಈ ಬಗ್ಗೆ ತಹಶೀಲ್ದಾರ, ಉಪ ವಿಭಾಗಾಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗದ್ದರಿಂದ ಕಳೆದ ನಾಲ್ಕುದಿನಗಳಿಂದ ಕೆಪಿಆರ್ ಕಾರ್ಖಾನೆ ಮುಂದೆ ಧರಣಿ ಸತ್ಯಾಗ್ರಹ ಆರಂಬಿಸಿದ್ದೇವೆ ಎಂದರು.
ವಿಷಯ ತಿಳಿದು ಸೋಮವಾರ ಇಂಡಿ ಉಪವಿಭಾಗ ಅಧಿಕಾರಿ ಅಬೀದ ಗದ್ಯಾಳ ದರಣಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಸಮಸ್ಯೆಗಳು ಆಲಿಸಿ ಕಾರ್ಖಾನೆ ಅಧಿಕಾರಿಗೋಂದಿಗೆ ಮಾತುಕತೆ ಮಾಡಿದ್ದರೂ ಯಾವುದೆ ಪ್ರಯೋಜನವಾಗಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೂ ಧರಣಿ ಸತ್ಯಾಗ್ರಹ ಮುಂದುವರೆಯುವುದು, ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವದು ಎಂದು ಎಚ್ಚರಿಸಿದರು.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿ, ಕಬ್ಬು ಕಟಾವು ಮಾಲಿಕರು ಹಮ್ಮಿಕೊಂಡ ಧರಣಿ ಸತ್ಯಾಗ್ರಹಕ್ಕೆ ರಾಜ್ಯ ರೈತ ಸಂಘ ಬೆಂಬಲಿಸಿ ಹೆಚ್ಚುವರಿ ಹಣ ನೀಡುವವರೆಗೂ ಬಿಡುವದಿಲ್ಲ, ಮೊಂಡು ಹಟ ಮಾಡಿದರೆ ಮುಂದಿನ ದಿನಗಳಲ್ಲಿ ಉಗ್ರವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ದರಣಿ ಸತ್ಯಾಗ್ರದಲ್ಲಿ ಬಸುಗೌಡ ಬಿರಾದಾರ, ಶಶಿಧರ ನಾಯ್ಕೋಡಿ, ಮಾಂತು ಕತ್ತಿ, ರಾಜು ಮೇತ್ರಿ, ರಾಜು ಬಿರಾದಾರ, ಖಾಜಪ್ಪ ಜಮಾದಾರ, ಲಕ್ಷ್ಮಣ ಗುಡ್ಡಳ್ಳಿ, ಧಶರಥ ಲಾವಟೆ, ದಯಾನಂದ ತೆಗ್ಗೆಳ್ಳಿ ಮುಂತಾದವರು ಇದ್ದರು.

