ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮುಂದಿನ ವರ್ಷ ಗಾಂಧಿ ಜಯಂತಿ ಎನ್ನುವಷ್ಟರಲ್ಲಿ ಅತ್ಯದ್ಭುತವಾದ ನೂತನ ಗಾಂಧಿ ಪುತ್ಥಳಿಯನ್ನು ನಗರದಲ್ಲಿರುವ ಗಾಂಧಿ ವೃತ್ತದಲ್ಲಿ ಸ್ಥಾಪನೆ ಮಾಡಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡ ಮಹಾತ್ಮ ಗಾಂಧಿ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಕೊಡುಗೆ ಅಪಾರವಾದದ್ದು, ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಗಳ ಮೂಲಕ ದೇಶದಲ್ಲಿ ಜನಸ್ನೇಹಿ ಆಡಳಿತವನ್ನು ನೀಡಿದ ಅಪರೂಪದ ಪ್ರಧಾನಿಯಾಗಿದ್ದಾರೆ. ಗಾಂಧಿ ಅವರ ಬದುಕು ಮತ್ತು ಶಾಸ್ತ್ರೀಜಿ ಅವರ ಜೀವನ ಶೈಲಿ ನಮಗೆಲ್ಲ ಮಾದರಿಯಾಗಬೇಕು. ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುಂಚೆ ೧೯೨೪ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಗಾಂದೀಜಿ ಅವರು ವಹಿಸಿ ೧೦೦ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಎಪಿಎಂಸಿ ಯಾರ್ಡನಲ್ಲಿರುವ ಸಿಂದಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಾಲಯದಿಂದ ಸಂಗೋಳ್ಳಿ ರಾಯಣ್ಣ ವೃತ್ತ, ಅಂಬಿಗರ ಚೌಡಯ್ಯ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಹಾಗೂ ಗಾಂಧಿ ವೃತ್ತದ ಮಾರ್ಗವಾಗಿ ಅಂಬೇಡ್ಕರ್ ಭವನದವರೆಗೆ ಗಾಂಧಿ ನಡಿಗೆ ಎಂಬ ಹೆಸರಿನ ಮೂಲಕ ಅವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.
ಈ ವೇಳೆ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಆಲಮೇಲ ಪಪಂ ಅಧ್ಯಕ್ಷ ಸಾಧಿಕ ಸುಂಬಡ, ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ ಮಾತನಾಡಿದರು.
ಪುರಸಭೆಯ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಮಲ್ಲಣ್ಣ ಸಾಲಿ, ಅಶೋಕ ಕೋಳಾರಿ, ಎಮ್.ಎ.ಖತೀಬ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರ, ಮಹಿಳಾ ಅಧ್ಯಕ್ಷೆ ಜಯಶ್ರೀ ಹದ್ನೂರ ವೇದಿಕೆಯ ಮೇಲಿದ್ದರು.
ಗಾಂಧಿ ನಡಿಗೆ ಮೆರವಣಿಗೆಗೆ ಶಾಸಕ ಅಶೋಕ ಮನಗೂಳಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಸದಸ್ಯರಾದ ಸಂದೀಪ ಚೌರ, ಶ್ರೀಶೈಲ ಬೀರಗೊಂಡ, ಶಿವು ಹತ್ತಿ, ರವಿರಾಜ ದೇವರಮನಿ, ಮಲ್ಲಿಕಾರ್ಜುನ ಶಂಬೇವಾಡ, ಭೀಮನಗೌಡ ಬಿರಾದಾರ, ನಗರ ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಬಸವರಾಜ ಕಾಂಬಳೆ, ಮಹಾನಂದ ಬಮ್ಮಣ್ಣಿ, ಸುನಂದಾ ಯಂಪೂರೆ, ವರ್ಷಾ ಪಾಟೀ, ಭೀಮು ವಾಲೀಕಾರ, ಚಂದ್ರಶೇಖರ ದೇವರೆಡ್ಡಿ, ಶಾಂತೂ ರಾಣಾಗೋಳ, ಪರಶುರಾಮ ಕಾಂಬಳೆ ಸೇರಿದಂತೆ ಪಕ್ಷದ ಹಿರಿಯರು, ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

” ನನ್ನ ತಂದೆ ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಅವರು ತಾವು ಶಾಸಕರಾದ ಸಂದರ್ಭದಲ್ಲಿ ೧೯೯೪-೯೫ರಲ್ಲಿ ಗಾಂಧಿ ಪುತ್ಥಳಿಯನ್ನು ಸ್ಥಾಪನೆ ಮಾಡಿದ್ದರು. ಚಿಕ್ಕರೂಗಿಯಲ್ಲಿ ಅಂದು ಏಳು ಜನ ಸ್ವಾತಂತ್ರ್ಯ ಹೋರಾಟಗಾರರಿದ್ದರು. ಅವರು ಸಿಂದಗಿ ನಗರದಲ್ಲಿ ಗಾಂಧಿ ಪ್ರತಿಮೆ ನಿರ್ಮಾಣ ಆಗುವವರೆಗೆ ನಗರಕ್ಕೆ ಬರುವುದಿಲ್ಲ ಎಂದು ಪಣತೊಟ್ಟಿದ್ದರು. ಅವರ ಫಲವಾಗಿ ಗಾಂಧಿ ಪುತ್ಥಳಿ ನಿರ್ಮಾಣವಾಯಿತು. ಮುಂಬರುವ ದಿನಗಳಲ್ಲಿ ಸುಂದರವಾದ ಗಾಂಧಿ ಪ್ರತಿಮೆ ನಿರ್ಮಾಣ ಮಾಡುವೆ.”
– ಅಶೋಕ ಮನಗೂಳಿ
ಶಾಸಕರು, ಸಿಂದಗಿ

