Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕೇಂದ್ರ ಸಚಿವ ಅಮಿತ್ ಷಾ ಅವರು ಡಾ. ಅಂಬೇಡ್ಕರ್ ಅವರನ್ನು ಅಪಮಾನಿಸುತ್ತಾರೆ. ಜಿಲ್ಲೆಯ ಸಂಸದರಾದ ರಮೇಶ್ ಜಿಗಜಿಣಿ ಅವರು ಕೇಂದ್ರ ಸಚಿವರ ಮಾತನ್ನ ಸಮರ್ಥಿಸಿಕೊಳ್ಳುತ್ತಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ವಿಜಯೇಂದ್ರ ಅವರು ಖರ್ಗೆ ಅವರು ನನಗೆ ಸುಪಾರಿ ನೀಡಿದ್ದಾರೆ ಎನ್ನುವ ಮಾತು ಅವರ ಹುದ್ದೆಗೆ ಘನತೆ ತರುವಂತ ವಿಚಾರವಲ್ಲ. ಇಂಥಹ ಮಾತುಗಳು ರಾಜ್ಯದ ಜನ ಆಲಿಸುತ್ತಿದ್ದಾರೆ ಮತ್ತು ಬಿಜೆಪಿಯವರನ್ನೇ ಮಾತನಾಡಿಕೊಳ್ಳುತ್ತಿದ್ದಾರೆ. ರಾಜಕಾರಣ ಸತ್ಯ ಮತ್ತು ಸಂವಿಧಾನ ಬದ್ಧವಾಗಿ ಇರಬೇಕೆ ಹೊರತು ಅಸಂಬದ್ಧ ಮಾತುಗಳು ಅಸಂಬದ್ಧ ವಿಚಾರಗಳನ್ನ ಒಳಗೊಂಡಿರಬಾರದು. ಸಚಿವ ಪ್ರಿಯಾಂಕ ಖರ್ಗೆ ಅವರ ಮೇಲೆ ಮಾಡುತ್ತಿರುವ ಆರೋಪಗಳನ್ನ ತಕ್ಷಣವೇ ಬಿಜೆಪಿ ಮುಖಂಡರು ನಿಲ್ಲಿಸಬೇಕು. ಇಲ್ಲವಾದಲ್ಲಿ ರಾಜ್ಯದ ಜನತೆಯ ಸಹನೆ ಮಿತಿಮೀರುತ್ತದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಡೆತ್ ನೋಟದಲ್ಲಿ ಸಚಿವರ ಹೆಸರಿಲ್ಲ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದಾಗ ಬಿಜೆಪಿ ಅವರು ನಡೆಸುತ್ತಿರುವ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಶಾ ಕಾರ್ಯಕರ್ತೆಯರು ಮೈ ಕೊರೆಯುವ ಚಳಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದರೂ, ಸರ್ಕಾರದ ಯಾವುದೇ ಪ್ರತಿನಿಧಿ ಅವರ ಬಳಿ ಹೋಗದೆ ಇರುವುದು ನಿಜಕ್ಕೂ ಅಮಾನವೀಯವಾದದ್ದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದ್ದಾರೆ.ಆಶಾ ಕಾರ್ಯಕರ್ತೆಯರು ಮೂಲಭೂತ ಆರೋಗ್ಯ ಸೇವೆಗಳನ್ನು ತಲುಪಿಸಲು, ಆರೋಗ್ಯ ಜಾಗೃತಿಯನ್ನು ಉತ್ತೇಜಿಸುವ ಮಹತ್ತರವಾದ ಪಾತ್ರವನ್ನು ವಹಿಸುತ್ತಾರೆ. ಸುರಕ್ಷಿತ ಹೆರಿಗೆ, ಆರೋಗ್ಯವಂತ ಶಿಶುವಿನ ಜನನ, ಆರೈಕೆ ಹಾಗೂ ಪೌಷ್ಟಿಕತೆಯ ಅರಿವು ಮೂಡಿಸುವುದಲ್ಲದೆ ಕ್ಷಯ, ಮಲೇರಿಯಾ, ಡೆಂಗೀ, ಮತ್ತಿತರ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಅವಿರತ ಶ್ರಮಿಸುತ್ತಿದ್ದಾರೆ. ಚುನಾವಣಾ ಪೂರ್ವದಲ್ಲಿ ಆಶಾ ಕಾರ್ಯಕರ್ತೆಯರ ಸಂಬಳವನ್ನು ರೂ.15 ಸಾವಿರಕ್ಕೆ ಏರಿಸುತ್ತೇವೆ ಎಂದು ಹೇಳಿದ್ದ ಕಾಂಗ್ರೆಸ್ ಸರ್ಕಾರ ಈಗ ತನ್ನ ಮಾತನ್ನು ತಪ್ಪಿದೆ.ಹೆಚ್ಚುತ್ತಿರುವ ಜೀವನ ವೆಚ್ಚ, ಬೆಲೆ ಏರಿಕೆಯಿಂದ ಆಶಾ ಕಾರ್ಯಕರ್ತೆಯರ ಜೀವನವೂ ದುಸ್ತರವಾಗಿದೆ. ಕಾಂಗ್ರೆಸ್ ಸರ್ಕಾರ ತನ್ನ ಪ್ರತಿಷ್ಠೆಯನ್ನು ಬಿಟ್ಟು, ಕೂಡಲೇ ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸ್ಪಂದಿಸಬೇಕು ಹಾಗೂ ಅವರ ಆಶ್ವಾಸನೆ ನೀಡಿದಂತೆ ಅವರ ವೇತನವನ್ನು…
ಉದಯರಶ್ಮಿ ದಿನಪತ್ರಿಕೆ ವರದಿ: ಚೇತನ ಶಿವಶಿಂಪಿಮುದ್ದೇಬಿಹಾಳ: ಸಂಜೆ ಮೈ ಕೊರೆಯುವ ಚಳಿ, ಬೆಳಿಗ್ಗೆಯಾದರೆ ಸಾಕಪ್ಪ ಎನ್ನುತ್ತಿದ್ದಂತೆ ಬರುವ ನೆತ್ತಿ ಸುಡುವ ಬಿಸಿಲು. ಕಲ್ಲು ಮುಳ್ಳುಗಳೆನ್ನದೇ ಸಾಗುವ ಭಕ್ತರ ದಂಡು. ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕಾಗಿ ಇದಾವುದನ್ನೂ ಲೆಕ್ಕಿಸದೇ ಪಾದಯಾತ್ರೆ ಹೊರಡುವ ಭಕ್ತರ ದಂಡು.ಶ್ರೀ ರಾಯರನ್ನು ನೆನೆದಾಗ ಮೊದಲು ನೆನಪಾಗುವದೇ ಮಂತ್ರಾಲಯದ ಬೃಂದಾವನ. ಏನೇ ಕಷ್ಟವಿದ್ದರೂ ಶ್ರೀಗಳನ್ನು ನೆನೆದರೆ ಸಾಕು ನಿವಾರಣೆಯಾಗುತ್ತದೆ ಎನ್ನುವ ಅಚಲ ನಂಬಿಕೆಯಿಂದ ತಮ್ಮ ಎಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ ತುಂಗಾ ತೀರದ ನಿವಾಸಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಹೊರಡುತ್ತಾರೆ ಭಕ್ತ ಗಣ.ಶ್ರೀಗಳ ದರ್ಶನ ಪಡೆಯಲು ವರ್ಷವಿಡೀ ಕಾತುರದಿಂದ ಕಾಯುವ ಪಟ್ಟಣದ ಈ ಭಕ್ತರ ಪಡೆ, ಜನೆವರಿ ತಿಂಗಳು ಬಂತೆಂದರೆ ಸಾಕು ಪಾದಯಾತ್ರೆ ಹೊರಡುವ ಸಿದ್ಧತೆಗೆ ಇಳಿಯುತ್ತಾರೆ. ಜ.೯ ರಂದು ಪಾದಯಾತ್ರೆ ಮೂಲಕ ಮಂತ್ರಾಲಯಕ್ಕೆ ಹೊರಡುವ ಭಕ್ತ ಸಮೂಹ ಒಟ್ಟು ೨೦೦ ಕಿಮೀ ಗಳ ೫ದಿನಗಳ ಪಾದಯಾತ್ರೆ ಮಾಡುವರು. ದಿನಕ್ಕೆ ೪೦ ಕಿಮೀ ನಂತೆ ಹೊರಡುವ ಭಕ್ತರಿಗೆೆ ಯಾವುದೇ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಅಯೋಧ್ಯೆಯಲ್ಲಿ ನಡೆದ ರಾಷ್ಟ್ರ ಮಟ್ಟದ ಖೋಖೋ ಪಂದ್ಯದಲ್ಲಿ ದ್ವಿತೀಯ ಸ್ಥಾನ ಪಡೆದ ಮಸೂತಿ ಗ್ರಾಮದ ಶ್ರೀ ಸಂಗನಬಸವೇಶ್ವರ ಪ್ರೌಢ ಶಾಲೆಯ ಬಾಲಕಿಯರನ್ನು ಬಸವನ ಬಾಗೇವಾಡಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕಲ್ಲು ಬ ಸೊನ್ನದ ಹಾಗೂ ಪ್ರಮುಖ ನಾಯಕರು ಸನ್ಮಾನಿಸಿದರು.ಸನ್ಮಾನಿಸಿ ಕಲ್ಲು ಬ ಸೊನ್ನದ ಮಾತನಾಡಿ, ಬಾಲಕಿಯರ ಖೋಖೋ ಪಂದ್ಯದಲ್ಲಿ ಕರ್ನಾಟಕ ಎರಡನೇ ಸ್ಥಾನ ಪಡೆಯಲು ಬಾಲಕಿಯರಾದ ಶ್ರಾವಣಿ ಸಾಲಳ್ಳಿ ಹಾಗೂ ವರ್ಷಾ ಬಂಡಿವಡ್ಡರ ಸಾಧನೆ ಅಮೋಘವಾದದ್ದು ಮತ್ತು ಈ ಬಾಲಕಿಯರಿಗೆ ಆರ್ಥಿಕವಾಗಿ ಸಹಾಯ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.ಬಸವನ ಬಾಗೇವಾಡಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಬಸವರಾಜ ಬಿಜಾಪುರ ಮಾತನಾಡಿ ಇಂದಿನ ಆಧುನಿಕ ಯುಗದಲ್ಲಿ ನಾವು ಹೆಚ್ಚು ಕ್ರೀಡೆಗೆ ಒತ್ತು ನೀಡಬೇಕು ಏಕೆಂದರೆ ನಮ್ಮ ಆರೋಗ್ಯದ ಗುಟ್ಟು ಕ್ರೀಡೆಯಲ್ಲಿ ಅಡಗಿದೆ ಈ ಮಕ್ಕಳ ಸಾಧನೆಯಿಂದ ನಮ್ಮ ಜಿಲ್ಲೆಯ ಹೆಸರು ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗಿದೆ ಎಂದರು.ಈ ಸಂದರ್ಭದಲ್ಲಿ ಮುದಕಣ್ಣ ಹೊರ್ತಿ, ಅನೀಲ ಗೊಳಸಂಗಿ, ಶಿಕ್ಷಕರಾದ ಹೂನಸಿಂಗ ರಾಠೋಡ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಸರಕಾರ,ಶಿಕ್ಷಣ ಇಲಾಖೆ ಹಾಗೂ ಅಕ್ಷರ ಫೌಂಡೇಶನ್ ಸಹಯೋಗದೊಂದಿಗೆ ಗಣಿತ ಕಲಿಕಾ ಆಂದೋಲನ ಯೋಜನೆಯು ಸುಮಾರು ವರ್ಷಗಳಿಂದ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳ ಗುಣಾತ್ಮಕ ಕಲಿಕೆಗಾಗಿ ಹಾಗೂ ಮಕ್ಕಳು ಗಣಿತ ವಿಷಯವನ್ನು ಸರಳವಾಗಿ, ಅನುಭವಾತ್ಮಕವಾಗಿ ಕಲಿಯಲು ಜಿಲ್ಲೆಯ ಪ್ರತಿ ಶಾಲೆಗಳಿಗೆ ಗಣಿತ ಕಿಟ್ ನೀಡುವುದರ ಮೂಲಕ ಅನುಷ್ಠಾನಗೊಂಡಿರುತ್ತದೆ. ಸದರಿ ಯೋಜನೆ ಅಡಿಯಲ್ಲಿ ವಿಜಯಪುರ ಜಿಲ್ಲೆಯ ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ,ಶಿಕ್ಷಣ ಇಲಾಖೆ, ಸಮುದಾಯ, ಶೈಕ್ಷಣಿಕ ಸ್ವಯಂ ಸೇವಕರು, ಗ್ರಾಮ ಪಂಚಾಯತ ಮಟ್ಟದ ಶೈಕ್ಷಣಿಕ ತಂಡದ ನಾಯಕರು ಹಾಗೂ ಅಕ್ಷರ ಫೌಂಡೇಶನ್ ಸಹಭಾಗಿತ್ವದಲ್ಲಿ “ಗ್ರಾಮ ಪಂಚಾಯಿತಿ ಮಟ್ಟದ ಗಣಿತ ಸ್ಪರ್ಧೆಗಳನ್ನು 4ನೇ ತರಗತಿ ಯಿಂದ 6ನೇ ತರಗತಿಯ ಮಕ್ಕಳಿಗೆ ಒಟ್ಟು 211 ಗ್ರಾಮ ಪಂಚಾಯತಿಗಳಲ್ಲಿ ಮಾಡಲಾಯಿತು.ಸುಮಾರು 44600 ಮಕ್ಕಳು ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಂಡಿರುತ್ತಾರೆ.ಗ್ರಾಮ ಪಂಚಾಯತಿ ಮಟ್ಟದ ಗಣಿತ ಸ್ಪರ್ಧೆಗಳು ಎಲ್ಲರ ಸಹಕಾರದೊಂದಿಗೆ ಉತ್ತಮ ರೀತಿಯಲ್ಲಿ ಯಶಸ್ಸನ್ನು ಸಾಧಿಸಿದೆ ಹಾಗೂ ಅಕ್ಷರ ಫೌಂಡೇಶನ್ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ…
ಉದಯರಶ್ಮಿ ದಿನಪತ್ರಿಕೆ ವರದಿ: ಡಾ.ಯಂಕನಗೌಡ ಎಸ್ ಪಾಟೀಲಕೆಂಭಾವಿ: ಆಡಳಿತದಲ್ಲಿರುವ ಸರ್ಕಾರಗಳು, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕಾರ್ಯ ನಿರಂತರವಾಗಿದ್ದರು, ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಹಾಗೂ ನಿಜವಾದ ಫಲಾನುಭವಿಗಳನ್ನು ಗುರುತಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಯದೇ ಅದೆಷ್ಟೋ ಕುಟುಂಬಗಳು ಇಂದಿಗೂ ರೋಟಿ, ಧೋತಿ, ಮಕಾನ್ ಇಲ್ಲದೆ ಬದುಕುತ್ತಿದ್ದಾರೆ. ಅಂತಹವರನ್ನು ಗುರುತಿಸುವ ಗುರುತರ ಜವಾಬ್ದಾರಿವುಳ್ಳ ಸರ್ಕಾರದ ಹತ್ತು ಹಲವು ಸಮಿತಿಗಳಲ್ಲಿ ಆಶ್ರಯ ಸಮಿತಿಯು ಕೂಡ ಒಂದಾಗಿದೆ. ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ನೂತನವಾಗಿ ಪದಗ್ರಹಣ ಮಾಡಿದ ಆಶ್ರಯ ಕಮಿಟಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರಿಗೂ ಪಕ್ಷಾತೀತವಾಗಿ, ಸಾಲು ಸಾಲು ಸನ್ಮಾನ, ಅಭಿನಂದನೆಗಳು, ಮಹಾಪೂರವೇ ಹರಿದುಬರುತ್ತಿರುವುದು ಆಶಾದಾಯಕ ಬೆಳವಣಿಗೆ.ಇತ್ತೀಚೆಗೆ ರಾಜ್ಯ ಸರ್ಕಾರದಿಂದ ನಾಮನಿರ್ದೇಶನಗೊಂಡ ಆಶ್ರಯ ಕಮಿಟಿಯ ನೂತನ ಅಧ್ಯಕ್ಷ ಶರಣಬಸವ ಕಾಕಾ ಡಿಗ್ಗಾವಿಯವರು ಅಧಿಕಾರಕ್ಕೆ ಆಸೆ ಪಟ್ಟವರಲ್ಲ, ಕಾಡಿಬೇಡಿ ಅಧಿಕಾರ ಪಡೆದವರಲ್ಲ, ಅದಕ್ಕಾಗಿ ಅವರನ್ನು ಯಾರೂ ಹೆಸರಿಟ್ಟು ಕರೆಯುವುದಿಲ್ಲ ಎಲ್ಲರೂ ಪ್ರೀತಿಯಿಂದ ‘ಕಾಕಾ’ ಎಂದು ಕರೆಯುತ್ತಾರೆ. ಹಾಗಾಗಿಯೇ ಡಿಗ್ಗಾವಿಯವರಿಗೆ ಅಧಿಕಾರ ಹುಡುಕಿಕೊಂಡು ಬರುತ್ತದೆ ಎನ್ನುತ್ತಾರೆ ಕೆಲವರು. ಈ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗ್ರಾಮೀಣ ಭಾಗದಲ್ಲಿ ಜನರ ಬಳಿಗೆ ಆರೋಗ್ಯ ಸೇವೆಯನ್ನು ಒದಗಿಸುತ್ತಿರುವ ಬಿ.ಎಲ್.ಡಿ.ಇ ಆಸ್ಪತ್ರೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಬಿಜ್ಜರಗಿ ಗ್ರಾ. ಪಂ. ಮಾಜಿ ಅಧ್ಯಕ್ಷ ಸುಭಾಷಗೌಡ ಪಾಟೀಲ ಹೇಳಿದ್ದಾರೆ.ಬುಧವಾರ ತಿಕೋಟಾ ತಾಲೂಕಿನ ಬಿಜ್ಜರಗಿಯಲ್ಲಿ ಬಿ.ಎಲ್.ಡಿ.ಇ ಸೂಪರ್ ಸ್ಪೇ಼ಷಾಲಿಟಿ ಆಸ್ಪತ್ರೆಯಿಂದ ವತಿಯಿಂದ ಪ್ರಾಥಮಿಕ ಆರೋಗ್ಶ ಉಪಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಮತ್ತು ಸಚಿವ ಎಂ. ಬಿ. ಪಾಟೀಲ ಅವರ ಜನರ ಆರೋಗ್ಯ ಪರ ಕಾಳಜಿಯಿಂದಾಗಿ ತಜ್ಞ ವೈದ್ಯರು ಗ್ರಾಮೀಣ ಭಾಗಕ್ಕೆ ಬಂದು ಉಚಿತವಾಗಿ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಈ ಮಲೂಕ ಬಡಜನರಿಗೂ ಆರೋಗ್ಯ ಸೇವೆ ಸಿಗುವಂತಾಗಿದೆ ಎಂದು ಅವರು ಹೇಳಿದರು.ಪ್ರಾಸ್ತವಿಕವಾಗಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಪ್ರೀತು ದಶವಂತ, ಬಿಜ್ಜರಗಿಯಲ್ಲಿ ಆಯೋಜಿಸಲಾದ ಉಚಿತ ಆರೋಗ್ಶ ತಪಾಸಣೆ ಶಿಬಿರ ಗ್ರಾಮೀಣ ಭಾಗದ ಬಡಜನರಿಗೆ ಜೀವ ಉಳಿಸುವ ಸಂಜಿವಿನಿಯಾಗಿದೆ. ಎಲ್ಲರೂ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಚಡಚಣ ಭಾಗದ ಸಾರ್ವಜನಿಕರ ಕನಸು ಕೊನೆಗೂ ನನಸಾಗುವ ಕಾಲ ಸನ್ನಿಹಿತವಾಗಿದೆ. ಇದೆ ದಿನಾಂಕ ೧೬.೦೧.೨೫ ಗುರುವಾರದಂದು ಸುಮಾರು ೫೦೦ ಕೋಟಿ ವೆಚ್ಚದ ಚಡಚಣ ಏತ ನೀರಾವರಿಯ ಪೈಪುಗಳಲ್ಲಿ ಪ್ರಾಯೋಗಿಕವಾಗಿ ಅಧಿಕಾರಿಗಳು ನೀರು ಹರಿಸಲಿದ್ದಾರೆ ಎಂದು ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಹೇಳಿದರುಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೆಬಿಜೆಎನ್‌ಎಲ್ ಅಧಿಕಾರಿಗಳೊಂದಿಗೆ ನಡೆದ ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.೨೦೧೩ ರಲ್ಲಿ ಎಂ ಬಿ ಪಾಟೀಲ ನೀರಾವರಿ ಮಂತ್ರಿಯಾಗಿದ್ದಾಗ ಚಡಚಣ ಏತ ನೀರಾವರಿ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಲಾಗಿತ್ತು. ಆದರೆ ಕುಂಟುತ್ತ ಸಾಗಿದ್ದ ಕಾಮಗಾರಿ ಶಾಸಕ ವಿಠ್ಠಲ ಕಟಕಧೋಂಡ ಇವರ ವಿಶೇಷ ಆಸಕ್ತಿಯ ಫಲವಾಗಿ ಇಂದು ಪ್ರಾಯೋಗಿಕವಾಗಿ ಚಾಲನೆಗೊಳ್ಳುತ್ತಿರುವದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಭೀಮಾ ನದಿಗೆ ಬ್ರಹತ್ ಬ್ಯಾರೇಜ್ ನಿರ್ಮಾಣ ಮಾಡಿ ಅಲ್ಲಿ ನೀರನ್ನು ಸಂಗ್ರಹಿಸಿ ಪೈಪಗಳ ಮುಖಾಂತರ ರೈತರ ಹೊಲಗಳಿಗೆ ನೀರು ಹರಿಸುವ ಯೋಜನೆ ಇದಾಗಿದೆ. ಚಡಚಣ ತಾಲೂಕಿನ ಚಡಚಣ, ಹಾವಿನಾಳ,ಗೋಡಿಹಾಳ, ಹಾಲಹಳ್ಳಿ, ಬರಡೋಲ ಟೆಕ್ಕೆ, ಶಿರಾಡೋಣ,…
ಶ್ರೀ ಗುರುಕೃಪಾ ಇಂಗ್ಲೀಷ ಮಾದ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ | ಉಪನ್ಯಾಸಕ ಮಹಾಂತೇಶ ನೂಲಾನವರ ರಿಂದ ಉದ್ಘಾಟನೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಮ್ಮ ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನು ಬೆಳೆಸಿ ಪ್ರತಿಭೆಯನ್ನು ಪ್ರೋತ್ಸಾಹಿಸುವ ಮೂಲಕ ದೇಶ ಕಟ್ಟುವ ಕಾರ್ಯ ಆಗಬೇಕು ಆ ಕಾರ್ಯ ಶ್ರೀ ಗುರುಕೃಪಾ ಶಿಕ್ಷಣ ಸಂಸ್ಥೆಯಲ್ಲಿ ನಡೆದು ಭವ್ಯ ಭಾರತದ ನಿರ್ಮಾಣಕ್ಕೆ ಇಲ್ಲಿಯ ವಿದ್ಯಾರ್ಥಿಗಳು ಬರುವಂತೆ ಕಾರ್ಯ ನಡೆಯುತ್ತದೆ ಎಂದು ವಿಜಯಪುರ ರಾಣಿ ಚೆನ್ನಮ್ಮಾ ವಿಶ್ವವಿದ್ಯಾಲಯದ ಬಿ.ಇ.ಒ ಸದಸ್ಯ ಮಂಜುನಾಥ ಜುನಗೊಂಡ ಅವರು ಹೇಳಿದರು.ಸಿಂದಗಿ ಪಟ್ಟಣದ ಶ್ರೀ ಗುರುಕೃಪಾ ಇಂಗ್ಲೀಷ ಮಾದ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಇಂದು ವಿಶ್ವ ಶಾಂತಿ ಅವಶ್ಯವಿದ್ದು ಅದರ ಆಧಾರದ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಮೂಲಕ ಜಾತಿ, ಮತ, ಭೇದ ಹೋಗಬೇಕು ಮಾನವೀಯತೆಯನ್ನು ಬೆಳೆಸುವ ಪ್ರೀತಿ ಪ್ರೇಮ ಇಟ್ಟು ದೇಶ ಕಟ್ಟು ಕೆಲಸ ಆಗಬೇಕಿದೆ. ವಚನ, ಭಗವದ್ಗೀತೆ ಹೇಳುವ ಶಾಲೆಯು ದೇಶದ ಸಂಸ್ಕೃತಿ…
ಖೇಡ ಕಾಲೇಜ್ ದ್ವೀತಿಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದಯರಶ್ಮಿ ದಿನಪತ್ರಿಕೆವಿಜಯಪುರ: ಎಲ್ಲೆಲ್ಲೂ ಯುವಜನತೆಯ ಕೈಯಲ್ಲಿಂದು ಸ್ಕ್ರೀನ್ ಟಚ್ ಮೊಬೈಲ್ ರಾರಾಜಿಸುತ್ತಿವೆ.ಮೊಬೈಲ್ ಗುಂಗು ತೆಲೆ ಕಡಿಸಿವೆ. ಮೊಬೈಲ್ ವ್ಯಾಮೋಹದ ಹಾವಳಿ ಅಧಿಕಗೊಂಡಿದೆ. ವ್ಯಾಪಕವಾಗಿ ಅದು ನರ್ತನದೊಂದಿಗೆ ನಲಿದಾಡುತ್ತಿದೆ.ಇದು ಅಷ್ಟೊಂದು ಸರಿಯಾದ ಕ್ರಮವಲ್ಲ. ಹೊತ್ತು ಗೊತ್ತಿಲ್ಲದೇ ದಿನವಿಡೀ ಮೊಬೈಲ್ ದಲ್ಲಿ ಕಾಲಹರಣ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಅದರಲ್ಲೂ ಯುವಪೀಳಿಗೆ ಮೊಬೈಲ್ ಮಾಯಾಂಗನೆಯ ಸೆಳತಕ್ಕೆ ಒಳಗಾಗಿ ತಮ್ಮ ಸುಂದರ ಭವಿಷ್ಯ ಹಾಳುಗೆಡವುತ್ತಲ್ಲಿದ್ದಾರೆ. ಇದರಿಂದ ಪಾಲಕ, ಪೋಷಕರು ಹಾಗೂ ಶಿಕ್ಷಕ ಸಮೂಹ ತೀವ್ರ ಆತಂಕ ಪಡುವುಂಥ ದುಸ್ಥಿತಿ ಬಂದೊದಗಿರುವುದು ದುರದೃಷ್ಟಕರ ಎಂದು ವಿಜಯಪುರ ಸಿಕ್ಯಾಬ್ ಬಾಲಕಿಯರ ಪಪೂ ಕಾಲೇಜ್ ಹಿರಿಯ ಉಪನ್ಯಾಸಕ ಉಮರ ಶರೀಫ್ ಕುಂಟೋಜಿ ವಿಷಾಧಿಸಿದರು. ಬಿಜಾಪುರ ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆ ವಿಜಯಪುರದ ಎಸ್.ಕೆ.ವಿ.ಎಂ.ಎಸ್. ಕಲಾ,ವಾಣಿಜ್ಯ, ವಿಜ್ಞಾನ ಪದವಿಪೂರ್ವ ಕಾಲೇಜಿನ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ೨೦೨೪-೨೫ ನೇ ಸಾಲಿನ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭದಲ್ಲಿ ಮುಖ್ಯ…
