Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 29, 2026

ಹಿರಿಯ ಪತ್ರಕರ್ತ ಟಿ.ಕೆ.ಮಲಗೊಂಡಗೆ ಸನ್ಮಾನಿಸಿದ ದಿಂಗಾಲೇಶ್ವರ ಶ್ರೀ

ಕಳೆದುಹೋದ ೧೧೦ ಮೊಬೈಲ್‌ಗಳು ವಾರಸುದಾರರ ವಶಕ್ಕೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಗಣಿತ ಕಲಿಕಾ ಆಂದೋಲನ:ಜಿಲ್ಲಾ ಮಟ್ಟದ ಗಣಿತ ವಿಚಾರ ಸಂಕಿರಣ
(ರಾಜ್ಯ ) ಜಿಲ್ಲೆ

ಗಣಿತ ಕಲಿಕಾ ಆಂದೋಲನ:ಜಿಲ್ಲಾ ಮಟ್ಟದ ಗಣಿತ ವಿಚಾರ ಸಂಕಿರಣ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಕರ್ನಾಟಕ ಸರಕಾರ,ಶಿಕ್ಷಣ ಇಲಾಖೆ ಹಾಗೂ ಅಕ್ಷರ ಫೌಂಡೇಶನ್‌ ಸಹಯೋಗದೊಂದಿಗೆ ಗಣಿತ ಕಲಿಕಾ ಆಂದೋಲನ ಯೋಜನೆಯು ಸುಮಾರು ವರ್ಷಗಳಿಂದ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳ ಗುಣಾತ್ಮಕ ಕಲಿಕೆಗಾಗಿ ಹಾಗೂ ಮಕ್ಕಳು ಗಣಿತ ವಿಷಯವನ್ನು ಸರಳವಾಗಿ, ಅನುಭವಾತ್ಮಕವಾಗಿ ಕಲಿಯಲು ಜಿಲ್ಲೆಯ ಪ್ರತಿ ಶಾಲೆಗಳಿಗೆ ಗಣಿತ ಕಿಟ್‌ ನೀಡುವುದರ ಮೂಲಕ ಅನುಷ್ಠಾನಗೊಂಡಿರುತ್ತದೆ. ಸದರಿ ಯೋಜನೆ ಅಡಿಯಲ್ಲಿ ವಿಜಯಪುರ ಜಿಲ್ಲೆಯ ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ,ಶಿಕ್ಷಣ ಇಲಾಖೆ, ಸಮುದಾಯ, ಶೈಕ್ಷಣಿಕ ಸ್ವಯಂ ಸೇವಕರು, ಗ್ರಾಮ ಪಂಚಾಯತ ಮಟ್ಟದ ಶೈಕ್ಷಣಿಕ ತಂಡದ ನಾಯಕರು ಹಾಗೂ ಅಕ್ಷರ ಫೌಂಡೇಶನ್‌ ಸಹಭಾಗಿತ್ವದಲ್ಲಿ “ಗ್ರಾಮ ಪಂಚಾಯಿತಿ ಮಟ್ಟದ ಗಣಿತ ಸ್ಪರ್ಧೆಗಳನ್ನು 4ನೇ ತರಗತಿ ಯಿಂದ 6ನೇ ತರಗತಿಯ ಮಕ್ಕಳಿಗೆ ಒಟ್ಟು 211 ಗ್ರಾಮ ಪಂಚಾಯತಿಗಳಲ್ಲಿ ಮಾಡಲಾಯಿತು.ಸುಮಾರು 44600 ಮಕ್ಕಳು ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಂಡಿರುತ್ತಾರೆ.
ಗ್ರಾಮ ಪಂಚಾಯತಿ ಮಟ್ಟದ ಗಣಿತ ಸ್ಪರ್ಧೆಗಳು ಎಲ್ಲರ ಸಹಕಾರದೊಂದಿಗೆ ಉತ್ತಮ ರೀತಿಯಲ್ಲಿ ಯಶಸ್ಸನ್ನು ಸಾಧಿಸಿದೆ ಹಾಗೂ ಅಕ್ಷರ ಫೌಂಡೇಶನ್‌ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಇಲಾಖೆಯ ಸಹಕಾರದೊಂದಿಗೆ ಸಕ್ರೀಯವಾಗಿ ತೋಡಗಿಸಿಕೊಂಡಿರುವುದು 2024-25ನೇ ವರ್ಷಕ್ಕೆ 25 ವರ್ಷಗಳು ಪೂರೈಸಲಿದೆ,ಹೀಗಾಗಿ ಶಿಕ್ಷಣ ಇಲಾಖೆಗೆ ಮತ್ತು ಗ್ರಾಮ ಪಂಚಾಯತ್‌ ಇಲಾಖೆಗೆ ಅಭಿನಂದಿಸುವ ಉದ್ದೇಶದಿಂದ ಗ್ರಾಮ ಪಂಚಾಯತ್‌ ಮಟ್ಟದ ಗಣಿತ ಸ್ಪರ್ಧೆಗಳ ಮಕ್ಕಳ ಫಲಿತಾಂಶದ ಆಧಾರದ ಮೇಲೆ ಜಿಲ್ಲೆಯ 25 ಶಾಲೆಗಳನ್ನು ಹಾಗೂ 25 ಗ್ರಾಮ ಪಂಚಾಯತ್‌ ಗಳನ್ನು ಗುರುತಿಸಿ “ಜಿಲ್ಲಾ ಮಟ್ಟದ ಗಣಿತ ವಿಚಾರ ಸಂಕಿರಣ” ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳು/ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು/ಉಪನಿರ್ದೇಶಕರು (ಆಡಳಿತ ಮತ್ತು ಅಭಿವೃದ್ಧಿ) ರವರ ಉಪಸ್ಥಿತಿಯಲ್ಲಿ ಸರಕಾರಿ ಕಿರಿಯ/ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯೋಪಾಧ್ಯಾಯರವರಿಗೆ ಮತ್ತು ಮಾನ್ಯ ಗ್ರಾಮ ಪಂಚಾಯತ ಅಧ್ಯಕ್ಷರು/ಪಿ.ಡಿ.ಓ ರವರಿಗೆ ಸನ್ಮಾನಿಸಲಾಗುವುದು ಹಾಗೂ ಗ್ರಾಮ ಪಂಚಾಯತ್‌ ಮಟ್ಟದ ಗಣಿತ ಸ್ಪರ್ಧೆಗಳ ಜಿಲ್ಲಾ ವರದಿಯನ್ನು ಬಿಡುಗಡೆಗೊಳಿಸಲಾಗುವುದು.
ಜಿಲ್ಲಾ ವರದಿಗಳನ್ನು ಮಾನ್ಯ ಜಿಲ್ಲಾಧಿಕಾರಿಗಳಿಗೆ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ,ಜಿಲ್ಲಾ ಪಂಚಾಯತ್‌, ಉಪನಿರ್ದೇಶಕರು (ಆಡಳಿತ ಮತ್ತು ಅಭಿವೃದ್ಧಿ) ಶಿಕ್ಷಣ ಇಲಾಖೆ ಇವರಿಗೆ ಒದಗಿಸಲಾಗುವುದು. ಅದೇ ರೀತಿಯಲ್ಲಿ ತಾಲೂಕು ಹಂತದ ಇಲಾಖೆಗಳ ಅಧಿಕಾರಿಗಳಿಗೆ, ಗ್ರಾಮ ಪಂಚಾಯತ್‌ ಮತ್ತು ಪ್ರತಿ ಶಾಲೆಗಳಿಗೆ ಗಣಿತ ಸ್ಪರ್ಧೆಯ ವರದಿಯನ್ನು ಕೊಡಲಾಗುವುದು. ಸದರಿ ವರದಿಗಳಲ್ಲಿ ಮಕ್ಕಳ ಗಣಿತ ಕಲಿಕಾ ಸಾಮಾರ್ಥ್ಯದ ಫಲಿತಾಂಶ ವನ್ನು ಒಳಗೊಂಡಿರುವುದರಿಂದ ಎಲ್ಲಾ ಅಧಿಕಾರಿಗಳು ವರದಿಗಳನ್ನು ಗಮನ ಹರಿಸಿ ತಾಲೂಕ/ಜಿಲ್ಲಾ ಸಭೆಗಳಲ್ಲಿ/ತರಬೇತಿಗಳಲ್ಲಿ/ಕಾರ್ಯಗಾರಗಳಲ್ಲಿ ಇದರ ಬಗ್ಗೆ ಚರ್ಚಿಸಲು ಸಾದ್ಯವಾಗುತ್ತದೆ. ಮತ್ತು ಮುಂದಿನ ದಿನಗಳಲ್ಲಿಶಾಲಾ ಪರಿಸರವನ್ನು ಹಾಗೂ ಸಮಗ್ರವಾದ ಮಕ್ಕಳ ಕಲಿಕಾ ಬೆಳವಣಿಗೆಗಾಗಿ ಶೈಕ್ಷಣಿಕ ಕ್ರೀಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಲು ಸಹಾಯವಾಗುತ್ತದೆ. ಬಹುಮುಖ್ಯವಾಗಿ ಶಾಲಾ ವರದಿಯು ಮಕ್ಕಳ ಕಲಿಕಾ ಮಟ್ಟವನ್ನು ಉತ್ತಮ ಪಡಿಸಲು ಗಣಿತ ಬೋಧಿಸುವ ಶಿಕ್ಷಕರಿಗೆ, ಮುಖ್ಯಶಿಕ್ಷಕರಿಗೆ ತುಂಬಾ ಉಪಯುಕ್ತವಾಗುತ್ತದೆ ಅದೇ ರೀತಿಯಲ್ಲಿ ಗ್ರಾಮ ಪಂಚಾಯತ್‌ ಮಟ್ಟದ ವರದಿಯನ್ನು ಪಂಚಾಯತ್‌ ಸಭೆಗಳಲ್ಲಿ ಚರ್ಚಿಸುವುದರ ಮೂಲಕ ಗ್ರಾಮ ಪಂಚಾಯತ್‌ ಗೆ ಒಳಪಡುವ ಎಲ್ಲಾ ಶಾಲೆಗಳ ಬಗ್ಗೆ , ಮಕ್ಕಳ ಕಲಿಕೆಯ ಬಗ್ಗೆ ಜವಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಮತ್ತು ಪಾಲಕರು, ಪೋಷಕರು ಕೂಡ ಮಕ್ಕಳನ್ನು ದಿನಾಲು ಶಾಲೆಗೆ ಕಳಿಸುವುದು ಮತ್ತು ಮನೆಯಲ್ಲಿ ಮಕ್ಕಳ ಅಭ್ಯಾಸದ ಬಗ್ಗೆ ಗಮನ ಹರಿಸುವಂತೆ ಸಮುದಾಯ ಜಾಗೃತಿ ಕಾರ್ಯಕ್ರಮಗಳು ಹಾಕಿಕೊಳ್ಳಲು ಸಹಾಯವಾಗುತ್ತದೆ ಎಂದು ಪ್ರಾಸ್ತಾವಿಕ ಭಾಷಣದಲ್ಲಿ ಹನುಮಂತರಾಯ ಕಣ್ಣಿ ಅಕ್ಷರ ಫೌಂಡೇಶನ್‌ ಬೆಂಗಳೂರು ರವರು ಹೇಳಿದರು.
ಶಿಕ್ಷಣ ಇಲಾಖೆಯ ಅಧಿಕಾರಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅಧಿಕಾರಿಗಳು ಮತ್ತು ಸಮುದಾಯದ ಪ್ರತಿನಿಧಿಯವರು ಗಣಿತ ವಿಚಾರ ಗೋಷ್ಠಿಯಲ್ಲಿ ಭಾಗವಹಿಸಿದ ಅಧಿಕಾರಿಗಳೊಂದಿಗೆ ಅಕ್ಷರ ಫಂಡೇಶನ್‌ ರವರು ಸಿದ್ದಪಡಿಸಿದ ಪ್ರಶ್ನಾವಳಿಗಳ ಮೂಲಕ ಜಿಲ್ಲೆಯ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳ ಕಲಿಕಾ ಮಟ್ಟವನ್ನುಉತ್ತಮಪಡಿಸಲು ಕಾರ್ಯಕ್ರಮಗಳೇನು, ಯೋಜನೆಗಳೇನು,ಜವಬ್ದಾರಿಗಳೇನು,ಸಲಹೆಗಳು,ಸೂಚನೆಗಳು ಇವೆಲ್ಲಾವುದರ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮತ್ತು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಅಳವಡಿಸಿಕೊಳ್ಳುವ ಅಂಶಗಳನ್ನು ಗಣಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಕಂಡುಕೊಳ್ಳಬಹುದಾಗಿದೆ.
ಈ ಕಾರ್ಯಕ್ರಮದ ಉದ್ಘಾಕರಾಗಿ ಬಿ ಎಸ್ ರಾಠೋಡ ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ್ ವಿಜಯಪುರ ಅದ್ಯಕ್ಷತೆಯನ್ನು ಶ್ರೀಮತಿ ಉಮಾದೇವಿ ಸೊನ್ನದ ಉಪ ನಿರ್ದೇಶಕರು (ಅಭಿವೃದ್ಧಿ) ಶಾಲಾ ಶಿಕ್ಷಣ ಇಲಾಖೆ ವಿಜಯಪುರ ಗ್ರಾಮ ಪಂಚಾಯತ್‌ ಮಟ್ಟದ ಗಣಿತ ಸ್ಪರ್ಧೆಗಳ ಜಿಲ್ಲಾ ವರದಿ ಬಿಡುಗಡೆಯನ್ನು ಉದ್ಘಾಟಕರಿಂದ ಮಾಡಲಾಯಿತು.
ಅತಿಥಿಗಳಾಗಿ ಶ್ರೀಮತಿ ಟಿ ಎಸ್. ಕೋಲಾರ ಉಪ ನಿರ್ದೇಶಕರು (ಅಡಳಿತ) ಶಾಲಾ ಶಿಕ್ಷಣ ಇಲಾಖೆ ವಿಜಯಪುರ ಶ್ರೀಮತಿ ಅನಸೂಯ ಚಲವಾದಿ ಸಹಾಯಕ ಕಾರ್ಯದರ್ಶಿಗಳು ಜಿಲ್ಲಾ ಪಂಚಾಯತ್ ವಿಜಯಪುರ. ಎ ಎಸ್ ಹತ್ತಳ್ಳಿ ಡಯಟ್ ಹಿರಿಯ ಉಪನ್ಯಾಸಕರು, ಜಿ ಎಸ್ ಬೇವನೂರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರು ಗಣಿತ ವಿಚಾರ ಗೋಷ್ಠಿಯಲ್ಲಿ ಭಾಗವಹಿಸಿದವರು ಎನ್ ವಿ ಬಾಬಾನಗರ ಡಯಟ್ ಉಪನ್ಯಾಸಕರು ವಿಜಯಪುರ. ರಾಮು ಅಗ್ನಿ ಕಾರ್ಯ ನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ್ ಸಿಂದಗಿ, ಮಂಜುನಾಥ ಹಿರೇಮಠ ಗ್ರಾಮ ಪಂಚಾಯತ ಸದಸ್ಯರು ಆಲಮಟ್ಟಿ, ಗಣಿತ ವಿಚಾರಗೋಷ್ಠಿ ನಡೆಸಿಕೊಟ್ಟವರು ಹಾಗೂ ಇಡೀ ಜಿಲ್ಲಾ ಮಟ್ಟದ ಗಣಿತ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಅಧಿಕಾರಗಳ ಸಹಕಾರದೊಂದಿಗೆ ಯಶಸ್ವಿಯಾಗಿ ಆಯೋಜನೆ ಮಾಡಲಾಯಿತು .
ದಿಲೀಪ್ ಕಾಂಬಳೆ ಬಿ ಆರ್ ಪಿ ವಿಜಯಪುರ ಗ್ರಾಮೀಣ ಅವರು ಸ್ವಾಗತ ಕೋರಿದರು. ಮಾರುತಿ ಮಲ್ಲಾಪುರ ಅಕ್ಷರ ಫೌಂಡೇಶನ್ ಜಿಲ್ಲಾ ಸಂಯೋಜಕರು ವಂದನಾರ್ಪಣೆ ಮಾಡಿದರು ಕಾರ್ಯಕ್ರಮದ ನಿರೂಪಕರು ಕಾಶಿನಾಥ ಜಾದವ್ ಶಿಕ್ಷಕರು ಅಭಿನಂದನ ಕಾರ್ಯಕ್ರಮವನ್ನು ಶ್ರೀ ಬಸವರಾಜ್ ಅವಟಿ ಬಿ ಆರ್ ಪಿ ಬಸವನ ಬಾಗೇವಾಡಿ ನಡೆಸಿ ಕೊಟ್ಟರು.
ಈ ಸಂದರ್ಭದಲ್ಲಿ 25 ಶಾಲೆಯ ಮುಖ್ಯ ಶಿಕ್ಷಕರು, 25 ಗ್ರಾಮ ಪಂಚಾಯತ್‌ ಅದ್ಯಕ್ಷರು/ಪಿ.ಡಿ,ಓ,/ಇಓ/ಬಿಇಒ/ಬಿ.ಅರ್.ಸಿ ಪತ್ರಿಕಾ ವರದಿಗಾರು, ಟಿವಿ ಮಾಧ್ಯಮ ಮಿತ್ರರು. ಇತರೆ ಅಧಿಕಾರಿಗಳು, ಸಮುದಾಯದವರು ಭಾವಹಿಸಿ ಯಶಸ್ವಿಗೊಳಿಸಿದ್ದಾರೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 29, 2026

ಹಿರಿಯ ಪತ್ರಕರ್ತ ಟಿ.ಕೆ.ಮಲಗೊಂಡಗೆ ಸನ್ಮಾನಿಸಿದ ದಿಂಗಾಲೇಶ್ವರ ಶ್ರೀ

ಕಳೆದುಹೋದ ೧೧೦ ಮೊಬೈಲ್‌ಗಳು ವಾರಸುದಾರರ ವಶಕ್ಕೆ

ಏ.15 ರಿಂದ ಬಸವ ಜಯಂತಿ ಕಾರ್ಯಕ್ರಮ & ಓಲೆಮಠದ ಜಾತ್ರಾ ಮಹೋತ್ಸವ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 29, 2026
    In ದಿನಪತ್ರಿಕೆ
  • ಹಿರಿಯ ಪತ್ರಕರ್ತ ಟಿ.ಕೆ.ಮಲಗೊಂಡಗೆ ಸನ್ಮಾನಿಸಿದ ದಿಂಗಾಲೇಶ್ವರ ಶ್ರೀ
    In (ರಾಜ್ಯ ) ಜಿಲ್ಲೆ
  • ಕಳೆದುಹೋದ ೧೧೦ ಮೊಬೈಲ್‌ಗಳು ವಾರಸುದಾರರ ವಶಕ್ಕೆ
    In (ರಾಜ್ಯ ) ಜಿಲ್ಲೆ
  • ಏ.15 ರಿಂದ ಬಸವ ಜಯಂತಿ ಕಾರ್ಯಕ್ರಮ & ಓಲೆಮಠದ ಜಾತ್ರಾ ಮಹೋತ್ಸವ
    In (ರಾಜ್ಯ ) ಜಿಲ್ಲೆ
  • ಕಲಾಶ್ರೀ ಚವ್ಹಾಣ ಗೆ ಅಭಿನಂದಿಸಿದ ಡಾ.ಸುರೇಖಾ
    In (ರಾಜ್ಯ ) ಜಿಲ್ಲೆ
  • ಸಚಿವ ಎಂ. ಬಿ. ಪಾಟೀಲ ಅವರ ಪ್ರವಾಸ ವಿವರ
    In (ರಾಜ್ಯ ) ಜಿಲ್ಲೆ
  • ನ್ಯಾಯ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುವ ನಿಖರ ತನಿಖೆ & ದೃಢ ಸಾಕ್ಷಿ
    In (ರಾಜ್ಯ ) ಜಿಲ್ಲೆ
  • ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾದಪೊಲೀಸ್ ಅಧಿಕಾರಿಗಳು
    In (ರಾಜ್ಯ ) ಜಿಲ್ಲೆ
  • ಯಡ್ರಾಮಿ ಬಸವೇಶ್ವರ ಜಾತ್ರೆಯ ಅದ್ದೂರಿ ರಥೋತ್ಸವ ಸಂಪನ್ನ
    In (ರಾಜ್ಯ ) ಜಿಲ್ಲೆ
  • ಪರೀಕ್ಷಾ ಪ್ರಕ್ರಿಯೆಯ ಪ್ರತಿ ಹಂತ ವೀಕ್ಷಿಸಿದ ಜಿ.ಪಂ. ಸಿಇಒ ರಿಷಿ ಆನಂದ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.