ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಅಯೋಧ್ಯೆಯಲ್ಲಿ ನಡೆದ ರಾಷ್ಟ್ರ ಮಟ್ಟದ ಖೋಖೋ ಪಂದ್ಯದಲ್ಲಿ ದ್ವಿತೀಯ ಸ್ಥಾನ ಪಡೆದ ಮಸೂತಿ ಗ್ರಾಮದ ಶ್ರೀ ಸಂಗನಬಸವೇಶ್ವರ ಪ್ರೌಢ ಶಾಲೆಯ ಬಾಲಕಿಯರನ್ನು ಬಸವನ ಬಾಗೇವಾಡಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕಲ್ಲು ಬ ಸೊನ್ನದ ಹಾಗೂ ಪ್ರಮುಖ ನಾಯಕರು ಸನ್ಮಾನಿಸಿದರು.
ಸನ್ಮಾನಿಸಿ ಕಲ್ಲು ಬ ಸೊನ್ನದ ಮಾತನಾಡಿ, ಬಾಲಕಿಯರ ಖೋಖೋ ಪಂದ್ಯದಲ್ಲಿ ಕರ್ನಾಟಕ ಎರಡನೇ ಸ್ಥಾನ ಪಡೆಯಲು ಬಾಲಕಿಯರಾದ ಶ್ರಾವಣಿ ಸಾಲಳ್ಳಿ ಹಾಗೂ ವರ್ಷಾ ಬಂಡಿವಡ್ಡರ ಸಾಧನೆ ಅಮೋಘವಾದದ್ದು ಮತ್ತು ಈ ಬಾಲಕಿಯರಿಗೆ ಆರ್ಥಿಕವಾಗಿ ಸಹಾಯ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.
ಬಸವನ ಬಾಗೇವಾಡಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಬಸವರಾಜ ಬಿಜಾಪುರ ಮಾತನಾಡಿ ಇಂದಿನ ಆಧುನಿಕ ಯುಗದಲ್ಲಿ ನಾವು ಹೆಚ್ಚು ಕ್ರೀಡೆಗೆ ಒತ್ತು ನೀಡಬೇಕು ಏಕೆಂದರೆ ನಮ್ಮ ಆರೋಗ್ಯದ ಗುಟ್ಟು ಕ್ರೀಡೆಯಲ್ಲಿ ಅಡಗಿದೆ ಈ ಮಕ್ಕಳ ಸಾಧನೆಯಿಂದ ನಮ್ಮ ಜಿಲ್ಲೆಯ ಹೆಸರು ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮುದಕಣ್ಣ ಹೊರ್ತಿ, ಅನೀಲ ಗೊಳಸಂಗಿ, ಶಿಕ್ಷಕರಾದ ಹೂನಸಿಂಗ ರಾಠೋಡ, ಮಲ್ಲನಗೌಡ ಪಾಟೀಲ, ಗೌಡಪ್ಪ ಗರಸಂಗಿ, ಲಕ್ಷ್ಮಣ ಡೆಂಗಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

