Author: editor.udayarashmi@gmail.com

ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಪ್ರಿಯ ನೇತಾಜಿ,ನಿಮ್ಮೆಲ್ಲರ ಕಠಿಣ ಪರಿಶ್ರಮ, ಹೋರಾಟದ ಫಲವಾಗಿ ನಾವಿಂದು ಸ್ವಚ್ಛಂದವಾಗಿ ಜೀವಿಸುತ್ತಿದ್ದೇವೆ. ಒಳ್ಳೆಯ ಆಹಾರ, ಆರೋಗ್ಯ, ಶಿಕ್ಷಣ ಮತ್ತಿತರ ಸೌಲಭ್ಯಗಳು ನಮಗೆ ನಿಮ್ಮಂತಹ ಸ್ವಾತಂತ್ರ್ಯ ಯೋಧರ ಕೃಪೆಯಿಂದ ದೊರೆತಿವೆ. ಅದಕ್ಕೆ ನಾವು ನಿಮಗೆ ಎಷ್ಟು ಋಣಿಯಾಗಿದ್ದರೂ ಸಾಲದು.ಹಾ0… ನಿಮ್ಮನ್ನು ವರ್ಷದಲ್ಲಿ ಮೂರು ಬಾರಿ ಮಾತ್ರ ನೆನೆಸಿಕೊಳ್ಳುತ್ತೇವೆ ನಾವು. ಸ್ವಾತಂತ್ರ್ಯೋತ್ಸವ ದಿನ, ಗಣರಾಜ್ಯೋತ್ಸವದ ದಿನ ಮತ್ತು ಶಾಲೆಗಳಲ್ಲಿ ನಡೆಯುವ ಫ್ಯಾನ್ಸಿ ಡ್ರೆಸ್ ಸ್ಪರ್ಧೆಗೆ ನಿಮ್ಮ ರೀತಿ ವೇಷಭೂಷಣ ಧರಿಸಿದಾಗ…. “ನನಗೆ ನಿಮ್ಮ ಒಂದು ಹನಿ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯವನ್ನು ಕೊಡಿಸುತ್ತೇನೆ… ಸ್ವಾತಂತ್ರ್ಯ ಎನ್ನುವುದು ಬೇಡುವುದಲ್ಲ ಅದು ಹಕ್ಕಿನಿಂದ ಪಡೆದುಕೊಳ್ಳುವುದು” ಎಂಬ ನಿಮ್ಮ ವಾಗ್ನುಡಿ ಸಾವಿರಾರು ಮಕ್ಕಳ ಬಾಯಲ್ಲಿ ಅನುರಣಿತಗೊಂಡಿದೆ. ಅದು ನಿಮ್ಮ ಮಿಲಿಟರಿ ಡ್ರೆಸ್ ಅತ್ಯಂತ ಶಿಸ್ತಿನ ಸಿಪಾಯಿಯಂತೆ ತೋರಿ ಪ್ರಶಸ್ತಿ ಸಿಗಬಹುದು ಎಂಬ ಆಸೆಯಿಂದ ನಮಗೆ ಧರಿಸಲು ನೀಡಲಾಗುತ್ತದೆ. ವಿಪರ್ಯಾಸ ಎಂದೆನಿಸಿದರೂ ಇದೇ ನಿಜವಾದ ಸತ್ಯ.ದೊಡ್ಡವರಾಗುತ್ತಾ ಬಂದಂತೆ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಇತ್ತೀಚೆಗೆ ವಿಜಯಪುರದಇಟ್ಟಂಗಿಬಟ್ಟಿ ಮಾಲಕರು ಮತ್ತು ಅವನ ಸಹಚರರಿಂದ ಕಾರ್ಮಿಕರ ಮೇಲೆ ನಡೆದ ಅಮಾನುಷ ಹಲ್ಲೆ ಖಂಡಿಸಿ, ಆರೋಪಿಗಳಿಗೆ ಕಠಿಣ ಶಿಕ್ವೆ ವಿಧಿಸಲು ಆಗ್ರಹಿಸಿ ದಲಿತ ಸೇನೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ದಲಿತ ಸೇನೆಯ ಅಧ್ಯಕ್ಷ ರವಿ ಹೋಳಿ ಮಾತನಾಡಿ, ಈ ಒಂದು ಘಟನೆ ಇಡೀ ಮಾನವ ಕುಲವೇ ತಲೆ ತಗ್ಗಿಸುವಂತಾಗಿದೆ. ಬಡ ಕೂಲಿ ಕಾರ್ಮಿಕರಿಗೆ ಬಡೆದಿರುವ ರೀತಿ ನೋಡಿದರೆ ಮನುಷ್ಯತ್ವ ಇಲ್ಲದ ರಾಕ್ಷಸರಂತೆ ವರ್ತಿಸಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿಗಳು ಯಾವುದೇ ಸಮಾಜದವರಿರಲಿ ಅವರನ್ನು ಬಡಿದಿರುವ ವ್ಯಕ್ತಿ ಕೂಡ ಯಾವುದೇ ಸಮಾಜದನಾಗಿರಲಿ ಅಪರಾಧಿಗೆ ಉಗ್ರವಾದ ಶಿಕ್ಷೆ ಆಗಬೇಕು. ಇದರಲ್ಲಿ ಕಾಣದ ಕೆಲವು ರಾಜಕೀಯ ಕೈಗಳು ಮತ್ತು ಜಿಲ್ಲೆಯ ಪ್ರಭಾವಿ ನಾಯಕರು ಆರೋಪಿ ಪರವಾಗಿದ್ದು ಆರೋಪಿಗಳಿಗೆ ಬಚಾವ ಮಾಡುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಯ ನಾಯಕರಿಗೆ ಇದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಪೋಲಿಸ್ ಇಲಾಖೆ ಇದ್ಯಾವುದನ್ನು ಪರಿಗಣಿಸದೆ ಇನ್ನೊಮ್ಮೆ ಎಲ್ಲಿಯೂ ಇಂತ ಘಟನೆಗಳು ಆಗದಂತೆ…

Read More

ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ತಾಲೂಕಿನ ಆನೂರ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ಚೌಡಯ್ಯ ಜಯಂತಿ ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಅಂಬಿಗರ ಚೌಡಯ್ಯ ಯುವಕ ಸಂಘದ ಅಧ್ಯಕ್ಷ ಪಂಡಿತ ತಳವಾರ, ಪ್ರಮುಖರಾದ ಬಾಬು ದೇವರಮನಿ, ಶಿವಶರಣ ತಳವಾರ, ಚಂದ್ರಕಾಂತ ಭೂಸನೂರ, ವಿರೇಶ ಘಾಣೂರ, ಗುರು ತಳವಾರ, ಸಂಜು ಘಾಣೂರ ಸೇರಿದಂತೆ ಗ್ರಾಮಸ್ಥರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಮಾಡಲಾಯಿತು.ಪ್ರಾಚಾರ್ಯ ಮಾಣ ಕರಾವ್ ಕುಲಕಣ ð, ಉಪನ್ಯಾಸಕರಾದ ಡಾ. ಸಂತೋಷ ಹುಗ್ಗಿ, ಸೂರ್ಯಕಾಂತ ಉಮಾಪುರೆ, ಡಾ. ಸಾವಿತ್ರಿ ಕೃಷ್ಣ, ಡಾ. ಮಹ್ಮದ್ ಯೂನೂಸ, ಪ್ರವೀಣ, ಡಾ. ಶಾಂತಲಾ, ಡಾ. ಭಾರತಿ, ಡಾ. ಸಂಗಣ್ಣ ಸಿಂಗೆ, ಶ್ರೀದೇವಿ ರಾಠೋಡ, ಗೌರಿಶಂಕರ ಭುರೆ, ಹೀರೂ ರಾಠೋಡ, ಶರಣಬಸು ಇಕ್ಕಳಕಿ, ಡಾ. ಶಾಂತಪ್ಪ ಮೇಲ್ಕೇರಿ, ಮಡಿವಾಳ ಮುಗಳಿ, ಚಿದಾನಂದ, ಮಹೇಶ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಚಿಕ್ಕಪಡಸಲಗಿ: ಸಿದ್ದಿ ಸಾಧಕ ಅಂಬಿಗರ ಚೌಡಯ್ಯನವರ ಹೃದಯ ಸದಾಕಾಲವೂ ಸಾಮಾಜಿಕ ತಮಲುಗಳಿಗೆ ಮಿಡಿದಿದೆ ಎಂದು ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ ಹೇಳಿದರು.ಚಿಕ್ಕಪಡಸಲಗಿ ಗ್ರಾಮದಲ್ಲಿ ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 905 ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಹಸ್ರಾರು ವಚನಗಳನ್ನು ರಚಿಸಿ ಮನುಸ್ಮೃತಿಯ ಒಳಿತನ್ನು ಅಂಬಿಗರ ಚೌಡಯ್ಯನವರು ಬಯಸಿದರು ಎಂದರು. ಸಮಸಮಾಜದ ಹೊಂಗನಸ್ಸು ಮನಭಾವದಲ್ಲಿ ಹೊತ್ತಿ ಶೋಷಣೆಯ ತುಳಿತಕ್ಕೆ ಒಳಗಾದ ಜನರನ್ನು ಮೇಲೆತ್ತುವ ಜನಪರ ಕಾಯಕಕ್ಕೆ ಮುಂದಾಗಿ ಅವಿರತ ಶ್ರಮಿಸಿರುವ ನಿಜಶರಣ ಚೌಡಯ್ಯ ನಮಗೆಲ್ಲ ಬದುಕಿನ ವೇದ ತಿಳಿಸಿಕೊಟ್ಟ ಮಹಾನುಭಾವ ಎಂದರು.ಸಮ ಸಮಾಜ ಸೃಷ್ಟಿವಾದಾಗಲೇ ಸಕಲರಲ್ಲೂ ನೆಮ್ಮದಿಯ ಸಾಮರಸ್ಯ,ಶಾಂತಿ,ಕಾಂತಿ ಪ್ರಾಪ್ತಿವಾದೀತೆಂಬ ದಿವ್ಯತೆ ಜ್ಞಾನೋಕ್ತಿಯ ಸವಿಕನಸು ಕಂಡಿದ್ದ ಚೌಡಯ್ಯನವರು ನೇರ ನಡೆ,ನುಡಿಗೆ ಹೆಸರಾಗಿದ್ದರು. ಅವರಲ್ಲಿ ಅಪರಿಮಿತ ಜ್ಞಾನಯಿತ್ತು.ಅದು ಸಮಾಜಮುಖಿ ಕೆಲಸಗಳಿಗೆ ಬಳಕೆವಾಗಿತ್ತು‌.ಸಮಾನತೆಯ ಆಶಯ ಹೆಮ್ಮರವಾಗಿತ್ತು.ಮಹಾನ ವ್ಯಕ್ತಿತ್ವದ ಆದರ್ಶತನ ಇತ್ತು ಎಂದರು.ಹನ್ನೆರಡನೇ ಶತಮಾನದಲ್ಲಿ ಭಾಗಶಃ ಸಮಾಜದಲ್ಲಿ ತಾಂಡವಾಡುತ್ತಿದ್ದ ಜಾತಿ ವ್ಯವಸ್ಥೆಯ ಕಂದರದ ತಾರತಮ್ಯ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಜರುಗಿದ ಸಭೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ಆದೇಶದ ಮೇರೆಗೆ ಸಾಮಾಜಿಕ ಜಾಲತಾಣದ ತಾಲೂಕಾಧ್ಯಕ್ಷರನ್ನಾಗಿ ಹಣಮಂತ ಟಕ್ಕಳಕಿ ಅವರನ್ನು ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ, ಅವಳಿ ಜಿಲ್ಲೆಯ ಉಸ್ತುವಾರಿ ಅಶೋಕ ಹಾರಿವಾಳ ನೇಮಕ ಮಾಡಿದರು. ನಂತರ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ರಜಕಾ ದರ್ಗಾ, ಶಂಕ್ರಪ್ಪ ದೊಡ್ಡಮನಿ, ಸಿದ್ದಪ್ಪ ಬೇಲಿ, ಶಾಸಪ್ಪ ಮಾದರ, ಕರೆಯಪ್ಪ ಶರಣರ, ರಾಜು ಬೇಲಿ, ರಾಜು ದಡ್ಡಿ, ಮಹಾಂತೇಶ ಬೇವಿನಗಿಡದ, ಕರೆಯಪ್ಪ ಹೊಸಮನಿ, ಬಸವರಾಜ ಹೂಗಾರ, ಭರತ ಗಾಯಕವಾಡ ಇತರರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಾ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಸ್ಥಾನ, ಉಪಾಧ್ಯಕ್ಷ ಸ್ಥಾನಗಳಿಗೆ ಬುಧವಾರ ಚುನಾವಣೆ ಜರುಗಿತು. ಅಧ್ಯಕ್ಷ ಸ್ಥಾನಕ್ಕೆ ಈರಣ್ಣ ಚನ್ನಬಸಪ್ಪ ಪಟ್ಟಣಶೆಟ್ಟಿ, ಉಪಾಧ್ಯಕ್ಷ ಸ್ಥಾನಕ್ಕೆ ಸಾಹೇಬಗೌಡ ಶಾಂತಪ್ಪ ಉತ್ನಾಳ (ಯಾಳವಾರ) ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಸಹಕಾರ ಅಭಿವೃದ್ಧಿ ಅಧಿಕಾರಿ ಚೇತನ ಬಾವಿಕಟ್ಟಿ ಅವರು ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು.ನಂತರ ಬಸವೇಶ್ವರ ಬ್ಯಾಂಕಿನ ಸಭಾಂಗಣದಲ್ಲಿ ಜರುಗಿದ ಸನ್ಮಾನ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಈ ಸಲದ ಚುನಾವಣೆಯಲ್ಲಿ ನನ್ನನ್ನು ಪರಾಭವಗೊಳಿಸಬೇಕೆಂದು ಸಾಕಷ್ಟು ಪ್ರಯತ್ನಿಸಿದರೂ ನಾನು ಮಾಡಿರುವ ರೈತರ ಸೇವೆ, ವಿಶ್ವಗುರು ಬಸವೇಶ್ವರರ ಕೃಪಾಶೀರ್ವಾದದಿಂದ ಆಯ್ಕೆಯಾಗಿದ್ದೇನೆ. ಸಚಿವ ಶಿವಾನಂದ ಪಾಟೀಲ ಹಾಗೂ ನನ್ನ ನಡುವೆ ಯಾವಾಗಲೂ ಆತ್ಮೀಯ ಬಾಂಧವ್ಯವಿದೆ. ಈ ಬಾಂಧವ್ಯವನ್ನು ಯಾರೂ ಕೆಡಿಸಲು ಸಾಧ್ಯವಿಲ್ಲ. ಮತಕ್ಷೇತ್ರದಲ್ಲಿ ಯಾವಾಗಲೂ ನಾವು ಕೂಡಿಕೊಂಡು ಕ್ಷೇತ್ರದ ಜನತೆಯ ಸೇವೆ ಮಾಡುತ್ತೇವೆ. ನಮ್ಮ ಬ್ಯಾಂಕಿನ ಎಲ್ಲ ನಿರ್ದೇಶಕರು ಒಮ್ಮತದಿಂದ ನನ್ನನ್ನು ಮೂರನೆಯ ಬಾರಿಗೆ ಅಧ್ಯಕ್ಷನನ್ನಾಗಿ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ತಾಳಿಕೋಟೆ ತಾಲ್ಲೂಕಿನ ಕಲಕೇರಿ ಗ್ರಾಮದ ದಲಿತ ವ್ಯಕ್ತಿಯ ಕೊಲೆ, ಇಟ್ಟಿಗೆ ತಯಾರಿಕಾ ಕಾರ್ಮಿಕರ ಮೇಲೆ ಹಲ್ಲೆ ಮಾಡಿರುವ ಘಟನೆಗಳನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಪದಾಧಿಕಾರಿಗಳು ಉಪತಹಶೀಲ್ದಾರ ಸುರೇಶ ಮ್ಯಾಗೇರಿ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯಕ್ಕೆ ಆಗಮಿಸಿದ ದಸಂಸ ಪದಾಧಿಕಾರಿಗಳು ಜಿಲ್ಲೆಯಲ್ಲಿ ಜರುಗಿದ ಎರಡು ಘಟನೆಗಳ ಕುರಿತು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಹುಯೋಗಿ ತಳ್ಳೊಳ್ಳಿ ಮಾತನಾಡಿ, ಕಲಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಲಿತರ ಮೇಲೆ ಹಲ್ಲೆ ಮಾಡಿ ಹತ್ಯೆಗೈದಿರುವ ವಿಷಯ ಖಂಡನೀಯ. ಮತ್ತು ವಿಜಯಪುರದಲ್ಲಿ ಇಟ್ಟಿಗೆ ತಯಾರಿಕಾ ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆಯಾಗಿರುವುದು ಸಹ ಅಮಾನವೀಯ ಕೃತ್ಯವಾಗಿದೆ.ರಾಜ್ಯದಲ್ಲಿ ಅಕ್ರಮ ಚಟುವಟಿಕೆಗಳು ನಡೆದಿದ್ದು, ಹಾಡು ಹಗಲೇ ಇಂತಹ ದುಷ್ಕೃತ್ಯ ನಡೆಯುತ್ತಿವೆ. ಆಗಾಗ ದಲಿತರ ಮೇಲೆ ಅನ್ಯಾಯವಾಗುತ್ತಿದ್ದು, ರಕ್ಷಣೆ ಇಲ್ಲವಾಗಿದೆ. ಕೂಡಲೇ ಪೊಲೀಸ್ ಇಲಾಖೆ ಮುಂಜಾಗ್ರತೆ ವಹಿಸಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಕೊಳ್ಳಬೇಕು. ದಲಿತರಿಗೆ ಸೂಕ್ತ ರಕ್ಷಣೆ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಚುನಾವಣಾ ಸಂದರ್ಭದಲ್ಲಿ ತಮ್ಮ ಪ್ರಣಾಳಿಕೆಯಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಓಪಿಎಸ್ ಜಾರಿ ಮಾಡುವುದಾಗಿ ಭರವಸೆ ನೀಡಿದ್ದರು ಎಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಲಕ್ಷ್ಮೀಪುತ್ರ ಕಿರನಳ್ಳಿ ಹೇಳಿದರು.ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ವತಿಯಿಂದ ನಿಶ್ಚಿತ ಪಿಂಚಣಿ (ಔPS) ಜಾರಿ ಮಾಡುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ತಾಲೂಕಿನ ನೌಕರರು ಮುಖ್ಯ ಮಂತ್ರಿಗಳಿಗೆ ಪತ್ರ ಚಳುವಳಿ ಪ್ರಾರಂಭಿಸಿ ಮಾತನಾಡಿದ ಅವರು, ಅಧೀಕಾರಕ್ಕೆ ಬಂದು ಎರಡೂ ವರ್ಷಗಳು ಕಳೆದರೂ ಕಾಂಗ್ರೆಸ್ ಸರಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳದೇ ವಿಳಂಬ ನೀತಿ ಅನುಸರುತ್ತಿರುವುದು ಖಂಡಿನೀಯ. ಇಡೀ ರಾಜ್ಯಾದ್ಯಂತ ಓಪಿಎಸ್ ಜಾರಿ ಮಾಡುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಅಂಚೆ ಪತ್ರಗಳನ್ನು ಹಾಕುವುದರ ಮುಖಾಂತರ ಪತ್ರ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದರು.ಈ ವೇಳೆ ತಾಲೂಕು ಅಧ್ಯಕ್ಷ ಬುಳ್ಳಪ್ಪ ಡಿ. ಪ್ರಧಾನ ಕಾರ್ಯದರ್ಶಿ ಶಿವಲಿಂಗ ಉಮ್ಮರಗಿ, ಕ್ಷೇತ್ರ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಿಜಯಪುರ ನಗರದ ಹೊರ ವಲಯದಲ್ಲಿ ಇತ್ತೀಚಗೆ ನಡೆದ ಕೂಲಿ ಕಾರ್ಮಿಕರ ಮೇಲಿನ ಹಲ್ಲೆ ನಾಗರೀಕ ಸಮಾಜ ತೆಲೆ ತಗ್ಗಿಸುವಂತೆ ಮಾಡಿದೆ. ಇಂತಹ ಅಮಾನವೀಯ ಕೃತ್ಯ ಎಸಗಿದ ಇಟ್ಟಂಗಿ ಬಟ್ಟಿಯ ಮಾಲೀಕ ಖೇಮು ರಾಠೋಡ ಹಾಗೂ ಸಂಗಡಿಗರಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಕೇವಲ ನಾಮಕಾವಸ್ಥೆ ಬಂದಿಸಿದರೆ ಸಾಲದು ಹಲ್ಲೆ ಮಾಡಿದವರ ಇಟ್ಟಿಗೆ ಬಟ್ಟಿಯನ್ನು ಸರಕಾರ ಮುಟ್ಟುಗೊಲು ಹಾಕಿಕೊಂಡು ಹಲ್ಲೆಗೋಳಗಾದ ಕುಟುಂಬದ ಕಾರ್ಮಿಕರಾದ ಸದಾಶಿವ ಮಾದರ, ಉಮೇಶ ಮಾದರ, ಸದಾಶಿವ ಮಾದರ ಅವರಿಗೆ ಸರಕಾರ ಸೂಕ್ತ ಪರಿಹಾರ ಒದಗಿಸಬೇಕು. ಮೂವರು ಕಾರ್ಮಿಕರಿಗೆ ಸೂಕ್ತ ಭದ್ರತೆ ಹಾಗೂ ಸಂಪೂರ್ಣ ಚಿಕಿತ್ಸೆಯ ವೆಚ್ಚ ಹೆಚ್ಚಿನ ಚಿಕಿತ್ಸೆಯ ಜವಾಬ್ದಾರಿ ಹೊರಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಆಡಳಿತ ವ್ಯೆವಸ್ಥೆ ಹಾಳಾಗಿದೆ. ಮೂಲ ಅಸ್ಪೃಶ್ಯ ಜನಾಂಗದ ಮೇಲೆ ಪದೆ – ಪದೆ ಹಲ್ಲೆಗಳು ಆಗುತ್ತಿದ್ದು ಸರಕಾರ ಎಚ್ಛೆತ್ತುಕೊಂಡು ನ್ಯಾಯ ಕೊಡಿಸುವ ಕೆಲಸ ಮಾಡಬೇಕಾಗಿದೆ. ಈಗಾಗಲೇ ಅಪರಾಧಿಗಳನ್ನು ಬಂದಿಸಿದ್ದು ಸ್ವಾಗತ. ಅದು ನಾಮಕಾವಸ್ಥೆ ಆಗದೆ ಕಠಿಣ ಕಾನೂನು…

Read More