ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವಿಜಯಪುರ ನಗರದ ಹೊರ ವಲಯದಲ್ಲಿ ಇತ್ತೀಚಗೆ ನಡೆದ ಕೂಲಿ ಕಾರ್ಮಿಕರ ಮೇಲಿನ ಹಲ್ಲೆ ನಾಗರೀಕ ಸಮಾಜ ತೆಲೆ ತಗ್ಗಿಸುವಂತೆ ಮಾಡಿದೆ. ಇಂತಹ ಅಮಾನವೀಯ ಕೃತ್ಯ ಎಸಗಿದ ಇಟ್ಟಂಗಿ ಬಟ್ಟಿಯ ಮಾಲೀಕ ಖೇಮು ರಾಠೋಡ ಹಾಗೂ ಸಂಗಡಿಗರಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಕೇವಲ ನಾಮಕಾವಸ್ಥೆ ಬಂದಿಸಿದರೆ ಸಾಲದು ಹಲ್ಲೆ ಮಾಡಿದವರ ಇಟ್ಟಿಗೆ ಬಟ್ಟಿಯನ್ನು ಸರಕಾರ ಮುಟ್ಟುಗೊಲು ಹಾಕಿಕೊಂಡು ಹಲ್ಲೆಗೋಳಗಾದ ಕುಟುಂಬದ ಕಾರ್ಮಿಕರಾದ ಸದಾಶಿವ ಮಾದರ, ಉಮೇಶ ಮಾದರ, ಸದಾಶಿವ ಮಾದರ ಅವರಿಗೆ ಸರಕಾರ ಸೂಕ್ತ ಪರಿಹಾರ ಒದಗಿಸಬೇಕು. ಮೂವರು ಕಾರ್ಮಿಕರಿಗೆ ಸೂಕ್ತ ಭದ್ರತೆ ಹಾಗೂ ಸಂಪೂರ್ಣ ಚಿಕಿತ್ಸೆಯ ವೆಚ್ಚ ಹೆಚ್ಚಿನ ಚಿಕಿತ್ಸೆಯ ಜವಾಬ್ದಾರಿ ಹೊರಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಆಡಳಿತ ವ್ಯೆವಸ್ಥೆ ಹಾಳಾಗಿದೆ. ಮೂಲ ಅಸ್ಪೃಶ್ಯ ಜನಾಂಗದ ಮೇಲೆ ಪದೆ – ಪದೆ ಹಲ್ಲೆಗಳು ಆಗುತ್ತಿದ್ದು ಸರಕಾರ ಎಚ್ಛೆತ್ತುಕೊಂಡು ನ್ಯಾಯ ಕೊಡಿಸುವ ಕೆಲಸ ಮಾಡಬೇಕಾಗಿದೆ. ಈಗಾಗಲೇ ಅಪರಾಧಿಗಳನ್ನು ಬಂದಿಸಿದ್ದು ಸ್ವಾಗತ. ಅದು ನಾಮಕಾವಸ್ಥೆ ಆಗದೆ ಕಠಿಣ ಕಾನೂನು ಶಿಕ್ಷೆಗೆ ಒಳಪಡಿಸಿ ಅವರ ಮೇಲೆ ರೌಡಿ ಶಿಟರ್ ಕೇಸ್ ದಾಖಲು ಮಾಡಿ ಇಟ್ಟಿಗೆ ಬಟ್ಟಿಯ ಪರವಾನಗಿ ರದ್ದು ಪಡಿಸಬೇಕು ವಿಜಯಪುರ ಜಿಲ್ಲೆಯ ಜಿಲ್ಲಾಡಳಿತ ಅಧಿಕಾರಿಗಳ ನಡೆಯನ್ನು ಗಮನಿಸಿ, ಒಂದು ವೇಳೆ ಇಟ್ಟಿಗೆ ಬಟ್ಟಿಯ ಮಾಲೀಕರ ಮತ್ತು ಹಿಂಬಾಲಕರ ರಕ್ಷಣೆಯ ಉದ್ದೇಶದಿಂದ ಕಾನೂನು ಸಡಿಲಿಕೆ ಕಂಡು ಬಂದರೆ ಮುಂದಿನ ಹೋರಾಟದ ರೂಪರೇಷ ರೂಪಿಸಬೇಕಾಗುತ್ತದೆ ಎಂದು ಕರ್ನಾಟಕ ಆದಿಜಾಂಭವ ಜನಸಂಘದ ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಸಾಯಬಣ್ಣ ದೇವರಮನಿ ಪತ್ರಿಕಾ ಪ್ರಕಟಣೆಯ ಮೂಲಕ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

