ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಚುನಾವಣಾ ಸಂದರ್ಭದಲ್ಲಿ ತಮ್ಮ ಪ್ರಣಾಳಿಕೆಯಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಓಪಿಎಸ್ ಜಾರಿ ಮಾಡುವುದಾಗಿ ಭರವಸೆ ನೀಡಿದ್ದರು ಎಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಲಕ್ಷ್ಮೀಪುತ್ರ ಕಿರನಳ್ಳಿ ಹೇಳಿದರು.
ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ವತಿಯಿಂದ ನಿಶ್ಚಿತ ಪಿಂಚಣಿ (ಔPS) ಜಾರಿ ಮಾಡುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ತಾಲೂಕಿನ ನೌಕರರು ಮುಖ್ಯ ಮಂತ್ರಿಗಳಿಗೆ ಪತ್ರ ಚಳುವಳಿ ಪ್ರಾರಂಭಿಸಿ ಮಾತನಾಡಿದ ಅವರು, ಅಧೀಕಾರಕ್ಕೆ ಬಂದು ಎರಡೂ ವರ್ಷಗಳು ಕಳೆದರೂ ಕಾಂಗ್ರೆಸ್ ಸರಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳದೇ ವಿಳಂಬ ನೀತಿ ಅನುಸರುತ್ತಿರುವುದು ಖಂಡಿನೀಯ. ಇಡೀ ರಾಜ್ಯಾದ್ಯಂತ ಓಪಿಎಸ್ ಜಾರಿ ಮಾಡುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಅಂಚೆ ಪತ್ರಗಳನ್ನು ಹಾಕುವುದರ ಮುಖಾಂತರ ಪತ್ರ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದರು.
ಈ ವೇಳೆ ತಾಲೂಕು ಅಧ್ಯಕ್ಷ ಬುಳ್ಳಪ್ಪ ಡಿ. ಪ್ರಧಾನ ಕಾರ್ಯದರ್ಶಿ ಶಿವಲಿಂಗ ಉಮ್ಮರಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಪತ್ರಾಂಕಿತ ವ್ಯವಸ್ಥಾಪಕರು ಎ.ಎಮ್.ಗಜಾಕೋಶ, ನೌಕರರಾದ ಇಮ್ರಾನ್ ಮಕಾನದಾರ ಜೆ.ಎಸ್.ಸೌದಾಗಾರ, ಎಸ್.ಎ.ಅರಳಿಮಟ್ಟಿ, ದೇವೆಂದ್ರ ನಾಯಕೊಡಿ , ಸತೀಶ ಹೂವಿನ ಹಳ್ಳಿ, ಸಿದ್ದಮ್ಮ ಗೊಟಗುಣಕಿ , ನೀಲಮ್ಮ ನಾಗಾವಿ,ಅಶೋಕ ರಾಠೋಡ, ಮಹೇಶ ಎಮ್, ಮುಖೇಶ್ ಲೋಣಿ, ಸುಭಾಷ್ ರಾಠೋಡ, ರಾಜೀವ್ ಭೈರಿ,ಪರಮಾನಂದ ಮಾಳೆಗಾರ, ರಾಮನಗೌಡ ಮಸಳಿ ಮುಂತಾದವರು ಉಪಸ್ಥಿತರಿದ್ದರು.
“ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಫೆ.೭ರಂದು ಬೆಂಗಳೂರು ಫ್ರೀಡಂ ಪಾರ್ಕಿನಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಅಂದು ಉಪವಾಸ ನಿರತ ನೌಕರರಿಗೆ ಸಾವು ನೋವುಗಳು ಉಂಟಾದರೆ ನೇರವಾಗಿ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ.”
– ಬುಳ್ಳಪ್ಪ. ಡಿ
ತಾಲೂಕಾಧ್ಯಕ್ಷರು