ಉದಯರಶ್ಮಿ ದಿನಪತ್ರಿಕೆ
ಚಿಕ್ಕಪಡಸಲಗಿ: ಸಿದ್ದಿ ಸಾಧಕ ಅಂಬಿಗರ ಚೌಡಯ್ಯನವರ ಹೃದಯ ಸದಾಕಾಲವೂ ಸಾಮಾಜಿಕ ತಮಲುಗಳಿಗೆ ಮಿಡಿದಿದೆ ಎಂದು ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ ಹೇಳಿದರು.
ಚಿಕ್ಕಪಡಸಲಗಿ ಗ್ರಾಮದಲ್ಲಿ ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 905 ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಹಸ್ರಾರು ವಚನಗಳನ್ನು ರಚಿಸಿ ಮನುಸ್ಮೃತಿಯ ಒಳಿತನ್ನು ಅಂಬಿಗರ ಚೌಡಯ್ಯನವರು ಬಯಸಿದರು ಎಂದರು. ಸಮಸಮಾಜದ ಹೊಂಗನಸ್ಸು ಮನಭಾವದಲ್ಲಿ ಹೊತ್ತಿ ಶೋಷಣೆಯ ತುಳಿತಕ್ಕೆ ಒಳಗಾದ ಜನರನ್ನು ಮೇಲೆತ್ತುವ ಜನಪರ ಕಾಯಕಕ್ಕೆ ಮುಂದಾಗಿ ಅವಿರತ ಶ್ರಮಿಸಿರುವ ನಿಜಶರಣ ಚೌಡಯ್ಯ ನಮಗೆಲ್ಲ ಬದುಕಿನ ವೇದ ತಿಳಿಸಿಕೊಟ್ಟ ಮಹಾನುಭಾವ ಎಂದರು.
ಸಮ ಸಮಾಜ ಸೃಷ್ಟಿವಾದಾಗಲೇ ಸಕಲರಲ್ಲೂ ನೆಮ್ಮದಿಯ ಸಾಮರಸ್ಯ,ಶಾಂತಿ,ಕಾಂತಿ ಪ್ರಾಪ್ತಿವಾದೀತೆಂಬ ದಿವ್ಯತೆ ಜ್ಞಾನೋಕ್ತಿಯ ಸವಿಕನಸು ಕಂಡಿದ್ದ ಚೌಡಯ್ಯನವರು ನೇರ ನಡೆ,ನುಡಿಗೆ ಹೆಸರಾಗಿದ್ದರು. ಅವರಲ್ಲಿ ಅಪರಿಮಿತ ಜ್ಞಾನಯಿತ್ತು.ಅದು ಸಮಾಜಮುಖಿ ಕೆಲಸಗಳಿಗೆ ಬಳಕೆವಾಗಿತ್ತು.ಸಮಾನತೆಯ ಆಶಯ ಹೆಮ್ಮರವಾಗಿತ್ತು.ಮಹಾನ ವ್ಯಕ್ತಿತ್ವದ ಆದರ್ಶತನ ಇತ್ತು ಎಂದರು.
ಹನ್ನೆರಡನೇ ಶತಮಾನದಲ್ಲಿ ಭಾಗಶಃ ಸಮಾಜದಲ್ಲಿ ತಾಂಡವಾಡುತ್ತಿದ್ದ ಜಾತಿ ವ್ಯವಸ್ಥೆಯ ಕಂದರದ ತಾರತಮ್ಯ ನೀತಿ ಜೊತೆಗೆ ಅನಾಚಾರ,ಕಂದಾಚಾರ,ಅನೈತಿಕತೆಂಥ ದುರಾವಸ್ಥೆಯನ್ನು ಕಟುವಾಗಿ ಟೀಕಿಸಿ ನಿಭಿ೯ತಿಯಿಂದ ತೊಡೆದುಹಾಕಲು ಶ್ರಮಿಸಿದರು. ತಮ್ಮ ವಚನಗಳಿಗೆ ವೈಚಾರಿಕತೆ ಪ್ರಜ್ಣೆರೂಪ ಮೂಡಿಸಿ ಸಮಾಜ ಸುಧಾರಣೆಗೆ ಮುಂದಾದ ಚೌಡಯ್ಯ ಸರಳತೆಯ ಅಮೂಲ್ಯ ಶರಣ ಜೀವ. ಅವರ ತತ್ವಾದರ್ಶಗಳು ನಮ್ಮೆಲ್ಲರ ಬದುಕಿಗೆ ಮಾದರಿ ಎಂದು ಜಾಲೋಜಿ ಅಭಿಪ್ರಾಯಿಸಿದರು.
ವಿಶ್ರಾಂತ ಹಿರಿಯ ಶಿಕ್ಷಕ ಬಸವರಾಜ ಅನಂತಪೂರ, ಚೌಡಯ್ಯನವರು ದಿಟ್ಟತನದಿಂದ ಗಟ್ಟಿತನದ ಎದೆಗಾರಿಕೆ ತೋರಿದ್ದಾರೆ. ಸಮಾಜಕ್ಕೆ ಅರಿವಿನ ಅನ್ಯೋನ್ಯತೆ ಪಥ ಸ್ಪರ್ಶ ವೈಚಾರಿಕ ಚಿಂತನಾ ಲೇಖನಗಳ ಮೂಲಕ ಮೂಡಿಸಿದ್ದಾರೆ. ಅವರಲ್ಲಿ ಹುದುಗಿದ್ದ ಅಪಾರ ಜ್ಞಾನ ಭಂಡಾರ ಮನುಕುಲಕ್ಕೆ ಸಂಜೀವಿನಿಯಾಗಿದೆ. ಭಿನ್ನ ವಿಶಿಷ್ಟ ವ್ಯಕ್ತಿತ್ವದ ರೂಪ ಲಾವಣ್ಯ ಹೊಂದಿರುವ ಅಂಬಿಗರ ಚೌಡಯ್ಯನವರು ಅನುಭಾವಿ ಶರಣರಾಗಿ ಸಮಾಜಪರ ಮಹತ್ವದ ಚಿಂತನೆಗಳನ್ನು ವಚನಗಳ ಮೂಲಕ ಬಿತ್ತಿದ್ದಾರೆ ಎಂದರು.
ಗುರುಮಾತೆ ಸಹನಾ ಹತ್ತಳ್ಳಿ (ಕಲ್ಯಾಣಿ), ಪ್ರಮೀಳಾ ತೇಲಸಂಗ, ಅಪರೂಪದ ಶರಣ ಜೀವ ಅಂಬಿಗರ ಚೌಡಯ್ಯನವರು ತಮ್ಮ ವಚನಸಾರಗಳ ಮೂಲಕ ಸಮಾಜಕ್ಕೆ ಸೈದ್ಧಾಂತಿಕ ನೆಲೆಗಟ್ಟು ನೀಡುವಲ್ಲಿ ಶ್ರಮಿಸಿದ್ದಾರೆ. ಅವರಲ್ಲಿ ಸತ್ಯಾನ್ವೇಷಣೆ ಭಾವ ಮಿಡಿತ ಮಿಡಿದಿವೆ. ಸಾಮಾಜಿಕವಾಗಿ ಜಿಡ್ಡುಗಟ್ಟಿದ ಜಟಿಲುಮಯ ಸ್ವಹಿತ,ಸ್ವೇಚ್ಛೆ ತಮಲುಗಳಿಗೆ ಕಡಿವಾಣ ಹಾಕಲು ತಡಕಾಡಿದ್ದಾರೆ. ಚೌಡಯ್ಯನವರ ವೈಚಾರಿಕ ಚಾಟಿ ಜನಮನ ಸೆಳೆದಿವೆ.ಅವರ ವಚನಗಳ ಸಾರ ಚರಿತ್ರೆ,ಜೀವನ ಯಶೋಗಾಥೆ ವೀರೋಚಿತವಾಗಿವೆ. ಯುವಜನತೆ ಇಂಥ ಮಹನೀಯರ ಬಗ್ಗೆ ತಿಳಿದುಕೊಂಡು ಆದರ್ಶದ ಮಾರ್ಗದಲ್ಲಿ ನಡೆಯಬೇಕು ಎಂದರು.
ಶಿಕ್ಷಕ ಗುಲಾಬಚಂದ ಜಾಧವ, ಲೋಹಿತ ಮಿಜಿ೯, ಈರಪ್ಪ ದೇಸಾಯಿ, ಶ್ರೀಶೈಲ ಹುಣಶಿಕಟ್ಟಿ, ಗೌರವ ಅತಿಥಿ ಶಿಕ್ಷಕಿ ಶೃತಿ ಲಿಗಾಡೆ ಇತರರಿದ್ದರು.