ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲ್ಲೂಕಿನ ಘೋಣಸಗಿ ಗ್ರಾಮದ ರಾಹುಲ್ ಸೋಮನಿಂಗ ಖವಿ ಎಂಬ ಯುವಕ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಆರಂಭವಾದ ಎಲ್.ಕೆ.ಜಿ ಹಾಗೂ ಯುಕೆಜಿ ಮಕ್ಕಳಿಗೆ ನೋಟ್ ಬುಕ್ ಹಾಗೂ ಪೆನ್ಸಿಲ್ ಕೊಡುವ ಮೂಲಕ ಜನ್ಮದಿನ ಆಚರಿಸಿಕೊಂಡರು.
ದುಂದು ಅನವಶ್ಯಕ ವೆಚ್ಚ ಮಾಡದೇ ಸರ್ಕಾರಿ ಬಡ ಶಾಲೆಯ ಮಕ್ಕಳ ಕಲಿಕೆಗೆ ಅನೂಕೂಲವಾಗಲು ಕಲಿಕಾ ಸಾಮಗ್ರಿ ಕೊಡಲಾಗಿದೆ. ಮಕ್ಕಳ ಕಲಿಕೆಗೆ ಸಹಕಾರಿಯಾಗಲಿದೆ ಎಂದು ರಾಹುಲ್ ತಿಳಿಸಿದರು.
ಈ ಸಂದರ್ಭದಲ್ಲಿ ಪೈಗಂಬರ್ ಜತ್ತಿ, ಅಂಜನಾ ದೇಶಮುಖ ರಮೇಶ ದೊಡಮನಿ, ಇಮಾಮಸಾಬ ಮುಲ್ಲಾ, ಸೋಮನಿಂಗ ಖವಿ, ವಿನಾಯಕ ಜಮಖಂಡಿ ಹಾಗೂ ಗೆಳೆಯರ ಬಳಗ ಇದ್ದರು.

