Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ನೇತಾಜಿಗೊಂದು ಪತ್ರ ವೀಣಾಂತರಂಗ
ವಿಶೇಷ ಲೇಖನ

ನೇತಾಜಿಗೊಂದು ಪತ್ರ ವೀಣಾಂತರಂಗ

By Updated:No Comments4 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ

ಉದಯರಶ್ಮಿ ದಿನಪತ್ರಿಕೆ

ಪ್ರಿಯ ನೇತಾಜಿ,
ನಿಮ್ಮೆಲ್ಲರ ಕಠಿಣ ಪರಿಶ್ರಮ, ಹೋರಾಟದ ಫಲವಾಗಿ ನಾವಿಂದು ಸ್ವಚ್ಛಂದವಾಗಿ ಜೀವಿಸುತ್ತಿದ್ದೇವೆ. ಒಳ್ಳೆಯ ಆಹಾರ, ಆರೋಗ್ಯ, ಶಿಕ್ಷಣ ಮತ್ತಿತರ ಸೌಲಭ್ಯಗಳು ನಮಗೆ ನಿಮ್ಮಂತಹ ಸ್ವಾತಂತ್ರ್ಯ ಯೋಧರ ಕೃಪೆಯಿಂದ ದೊರೆತಿವೆ. ಅದಕ್ಕೆ ನಾವು ನಿಮಗೆ ಎಷ್ಟು ಋಣಿಯಾಗಿದ್ದರೂ ಸಾಲದು.
ಹಾ0… ನಿಮ್ಮನ್ನು ವರ್ಷದಲ್ಲಿ ಮೂರು ಬಾರಿ ಮಾತ್ರ ನೆನೆಸಿಕೊಳ್ಳುತ್ತೇವೆ ನಾವು. ಸ್ವಾತಂತ್ರ್ಯೋತ್ಸವ ದಿನ, ಗಣರಾಜ್ಯೋತ್ಸವದ ದಿನ ಮತ್ತು ಶಾಲೆಗಳಲ್ಲಿ ನಡೆಯುವ ಫ್ಯಾನ್ಸಿ ಡ್ರೆಸ್ ಸ್ಪರ್ಧೆಗೆ ನಿಮ್ಮ ರೀತಿ ವೇಷಭೂಷಣ ಧರಿಸಿದಾಗ…. “ನನಗೆ ನಿಮ್ಮ ಒಂದು ಹನಿ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯವನ್ನು ಕೊಡಿಸುತ್ತೇನೆ… ಸ್ವಾತಂತ್ರ್ಯ ಎನ್ನುವುದು ಬೇಡುವುದಲ್ಲ ಅದು ಹಕ್ಕಿನಿಂದ ಪಡೆದುಕೊಳ್ಳುವುದು” ಎಂಬ ನಿಮ್ಮ ವಾಗ್ನುಡಿ ಸಾವಿರಾರು ಮಕ್ಕಳ ಬಾಯಲ್ಲಿ ಅನುರಣಿತಗೊಂಡಿದೆ. ಅದು ನಿಮ್ಮ ಮಿಲಿಟರಿ ಡ್ರೆಸ್ ಅತ್ಯಂತ ಶಿಸ್ತಿನ ಸಿಪಾಯಿಯಂತೆ ತೋರಿ ಪ್ರಶಸ್ತಿ ಸಿಗಬಹುದು ಎಂಬ ಆಸೆಯಿಂದ ನಮಗೆ ಧರಿಸಲು ನೀಡಲಾಗುತ್ತದೆ. ವಿಪರ್ಯಾಸ ಎಂದೆನಿಸಿದರೂ ಇದೇ ನಿಜವಾದ ಸತ್ಯ.
ದೊಡ್ಡವರಾಗುತ್ತಾ ಬಂದಂತೆ ನಿಮ್ಮ ಕುರಿತು ಆಸಕ್ತಿ ಬೆಳೆಯುತ್ತಾ ಬಂತು. ವಿದೇಶದಲ್ಲಿದ್ದುಕೊಂಡು ಭಾರತದಲ್ಲಿ ಇಂಡಿಯನ್ ನ್ಯಾಷನಲ್ ಆರ್ಮಿಯಂತಹ ಬೃಹತ್ಸೇನಾ ಪಡೆಯನ್ನು ಕಟ್ಟಿದ ತಾಯಿ ಭಾರತಿಯ ಪುತ್ರರಲ್ಲವೇ ನೀವು.. ನಿಮ್ಮ ಚಾಣಾಕ್ಷತೆ,ಜ್ಞಾನ, ಅಪಾರ ಯುಕ್ತಿ, ಸಂಘಟನಾ ಚಾತುರ್ಯಕ್ಕೆ
ಬೆರಗಾಗಿ ಆ ಹಿಟ್ಲರ್ ಕೂಡ ನಿಮ್ಮನ್ನು ಭೇಟಿಯಾಗ ಬಯಸಲಿಲ್ಲವೇ? ಜರ್ಮನಿ ಜಪಾನ್ ಮತ್ತು ರಷ್ಯಾ ದೇಶಗಳ ಜೊತೆ ನೀವು ಒಪ್ಪಂದ ಮಾಡಿಕೊಂಡು ಸೈನಿಕ ಸಹಾಯವನ್ನು ಪಡೆದವರಲ್ಲವೇ!!? ಗಾಂಧೀಜಿ, ನೆಹರು ರಂತಹ ಧೀಮಂತರನ್ನು ಹಿಂದಿಕ್ಕಿ ಸಶಸ್ತ್ರ ಹೋರಾಟಕ್ಕೆ ತಯಾರಾದವರಲ್ಲವೇ. ಹಾಗೆ ತಯಾರಾದರೂ ಕೂಡ ಕಾಂಗ್ರೆಸನ ಅಧ್ಯಕ್ಷ ಪದವಿಯನ್ನು ಮಹಾತ್ಮ ಗಾಂಧೀಜಿಯವರಿಗೆ ಇಷ್ಟವಾಗುವುದಿಲ್ಲ ಎಂಬ ಕಾರಣದಿಂದ ತ್ಯಜಿಸಿದವರಲ್ಲವೇ… ನಿಮಗೆ ವೈಯುಕ್ತಿಕ ಹಿತಾಸಕ್ತಿಗಿಂತ ದೇಶದ ಸ್ವಾತಂತ್ರ್ಯವೇ ಮುಖ್ಯವಾಗಿತ್ತು.
ನೀವು ಜನಿಸಿದ್ದು ೧೮೯೭ರ ಜನವರಿ ೨೩ರಂದು ಒರಿಸ್ಸಾ ರಾಜ್ಯದ ಕಟಕ್‌ನಲ್ಲಿ. ನಿಮ್ಮ ತಂದೆ ಜಾನಕೀನಾಥ ಬೋಸ್, ತಾಯಿ ಪ್ರಭಾವತಿ. ದಂಪತಿಗಳ ೧೪ ಜನ ಮಕ್ಕಳಲ್ಲಿ ಸುಭಾಷ್ ೯ ನೇಯವರು.ಕಟಕ್‌ನಲ್ಲಿ ರ‍ಯಾವೆನ್‌ಶಾ ಕೊಲಿಜಿಯೇಟ್ ಶಾಲೆಯಲ್ಲಿ ಪ್ರಾಥಮಿಕ ವ್ಯಾಸಂಗ, ಅಲ್ಲಿ ಮುಖ್ಯೋಪಾಧ್ಯಾಯ ಬೇಣಿಮಾಧವದಾಸ್‌ರ ರಿಂದ ಪ್ರೇರಣೆ ಪಡೆದ ನೀವು ಮುಂದೆ ವಿವೇಕಾನಂದರ ಸಾಹಿತ್ಯಗಳು, ಪತ್ರಗಳು ಮತ್ತು ’ಕೊಲೊಂಬೋದಿಂದ ಆಲ್ಮೋರಾಕ್ಕೆ’ ಉಪನ್ಯಾಸಗಳಿಂದ ಪ್ರಭಾವಿತರಾದವರು. ನೀವು ಅರವಿಂದರ ’ಆರ್ಯ’ ಮಾಸಪತ್ರಿಕೆಯನ್ನು ತಪ್ಪದೇ ಓದುತ್ತಿದ್ದಿರಿ. ೧೯೧೯ರಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಬಿ.ಎ. ಪದವಿ, ನಂತರ ೧೯೧೯ರ ಸೆಪ್ಟೆಂಬರ್ ೧೫ರಂದು ಐ.ಸಿ.ಎಸ್ ಪರೀಕ್ಷೆಗಾಗಿ ಇಂಗ್ಲೆಂಡಿಗೆ ಪಯಣ ಬೆಳೆಸಿದ ನೀವು ೧೯೨೦ರ ಸೆಪ್ಟಂಬರ್‌ನಲ್ಲಿ ನಾಲ್ಕನೇ ಸ್ಥಾನ ಪಡೆದವರಾಗಿ ಐ.ಸಿ.ಎಸ್ ಪದವಿಯನ್ನು ಪಡೆದಿರಿ. ವಿದೇಶೀ ನೌಕರಿ ಒಲ್ಲೆ ಎಂದು ಗಳಿಸಿದ್ದ ಐ.ಸಿ.ಎಸ್. ಪದವಿಯನ್ನು ೧೯೨೧ರ ಎಪ್ರಿಲ್ ೨೨ರಂದು ಬ್ರಿಟಿಷ್ ಸರ್ಕಾರದ ಭಾರತ ವ್ಯವಹಾರ ಸಚಿವ ಎಡ್ವಿನ್ ಮಾಂಟೆಗುಗೆ ಪತ್ರವೊಂದನ್ನು ಬರೆದು ಮರಳಿಸಿದ್ದಿರಿ.


೨೦ ತಿಂಗಳ ಇಂಗ್ಲೆಂಡ್ ವಾಸದ ನಂತರ ೧೯೨೧ರ ಜುಲೈ ೧೬ರಂದು ಮುಂಬಯಿಗೆ ಮರಳಿದ ನೀವು ಅಂದೇ ಗಾಂಧೀಜಿ ಜತೆ ಮೊದಲ ಭೇಟಿಯಾದಿರಿ. ೧೯೨೧ರ ಆಗಸ್ಟ್‌ನಿಂದ ಚಿತ್ತರಂಜನ್‌ದಾಸ್‌ರ ಮಾರ್ಗದರ್ಶನದಲ್ಲಿ ಯುವಕರ ಸಂಘಟನೆಗೆ ಆದ್ಯತೆ ನೀಡಿದಿರಿ.
“ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಯಾವುದೇ ರೀತಿಯ ಬಲಹೀನತೆ ಹೊಂದಿರಬಾರದು” ಎಂಬುದು ನಿಮ್ಮ ನೀತಿಯಾಗಿತ್ತು. ನೀವು ನಂಬಿದ ಕ್ರಾಂತಿ ನಿಮ್ಮ ದಿಟ್ಟ ನಿಲುವಿಗೆ ಸಾಕ್ಷಿಯಾಗಿತ್ತು.
ದೂರಗಾಮಿ ಚಿಂತನೆಗಳಿಗೂ ಕವಡೆ ಕಿಮ್ಮತ್ತಿನ ಬೆಲೆ ಕೊಡದ ಕಾಂಗ್ರೆಸ್‌ನಿಂದ ಸ್ವತಃ ಹೊರಬಂದವರು ನೀವು.
ಕಾಂಗ್ರೆಸ್‌ನ ಡೋಲಾಯಮಾನ ನೀತಿಗಳಿಗೆ ಬೇಸತ್ತು ಚಿತ್ತರಂಜನ್‌ದಾಸ್‌ರಿಂದ ’ಸ್ವರಾಜ್ಯಪಕ್ಷ ಸ್ಥಾಪನೆಯಾದಾಗ ಅವರ ಎಲ್ಲಾ ಚಟುವಟಿಕೆಗಳಲ್ಲಿ ಸಹಭಾಗಿಯಾದವರು ನೀವು. ೧೯೨೩ರ ಅಕ್ಟೋಬರ್‌ನಲ್ಲಿ ದಾಸ್‌ರು ಸ್ಥಾಪಿಸಿದ್ದ ’ಫಾರ್ವರ್ಡ್’ ದಿನಪತ್ರಿಕೆಯ ನಿರ್ವಹಣೆ ಜವಾಬ್ದಾರಿ ಹೊತ್ತ ನಿಮಗೆ ಆಘಾತವಾಗಿದ್ದು ೧೯೨೫ರ ಜೂನ್ ೧೬ ಚಿತ್ತರಂಜನ್ ದಾಸರು ಮರಣ ಹೊಂದಿದಾಗ. ಕ್ರಾಂತಿಕಾರಿ ಚಟುವಟಿಕೆಗಳಿಗಾಗಿ ಹಲವು ಬಾರಿ ಬಂಧನವಾಗಿ ಮತ್ತೆ ಬಿಡುಗಡೆಯಾದವರು ನೀವು.
೧೯೨೭ರ ನವೆಂಬರ್‌ನಲ್ಲಿ ಬಂಗಾಳಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದ, ಆದರೆ ಗಾಂಧಿ ಪ್ರಣೀತ ಮಂದ ಮಾರ್ಗಕ್ಕಿಂತ ನಿಮ್ಮದು ತೀರಾ ಭಿನ್ನ ಮಾರ್ಗ ಎಂಬುದನ್ನರಿತ ನೀವು ಕ್ರಮೇಣ ಅದರಿಂದ ದೂರವಾದವರು.. ಹತ್ತಾರು ಚಳುವಳಿಗೆ ನೇತೃತ್ವ, ಅಖಿಲಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದ ನೀವು ೧೯೩೩ ಫೆಬ್ರವರಿ ೨೩ರಂದು ಯೂರೋಪಿನಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಪರ ಅಭಿಯಾನ ನಡೆಸಿದಿರಿ. ಇಂಗ್ಲೆಂಡ್, ಆಸ್ಟ್ರಿಯಾ, ಇಟೆಲಿ ವಿಯೆನ್ನಾಗಳ ಭೇಟಿ ನೀಡಿದಿರಿ., ನಿಮ್ಮ ವೇಗದ ಪ್ರವಾಸ, ಮಿಂಚಿನ ಸಂಚಾರ ಸ್ವಿಟ್ಜರ್ಲೆಂಡ್, ಚೆಕೋಸ್ಲೋವಾಕಿಯಾ, ಪೋಲೆಂಡ್, ಜರ್ಮನಿಗಳಲ್ಲಿ ಭಾರತದ ಪರ ಪ್ರಚಾರ ಮಾಡಿದ ನೀವು ಕೊನೆಯದಾಗಿ ಇಟೆಲಿ ಪ್ರಧಾನಿ ಬೆನಿತೋ ಮುಸ್ಸೋಲಿನಿ ಜತೆ ಚರ್ಚೆ ಮಾಡಿದಿರಿ. ೧೯೩೬ ಏಪ್ರಿಲ್ ೮ರಂದು ಮರಳಿ ಭಾರತಕ್ಕೆ, ಬಂದರಿನಲ್ಲೇ ನಿಮ್ಮನ್ನು ಬಂಧಿಸಲಾಯಿತು. ೧೯೩೭ರಲ್ಲಿ ಮತ್ತೆ ಆಸ್ಟ್ರಿಯಾಗೆ ಪಯಣ ಬೆಳೆಸಿದಿರಿ.
ವಿದೇಶೀ ನೆಲಗಳ ಓಡಾಟದಿಂದ ಪಡೆದ ರಾಜಕೀಯ ಅನುಭವ,ಒಳನೋಟಗಳಿಂದ ಬ್ರಿಟಿಷರ ಒಡೆದು ಆಳುವನೀತಿ ಕುರಿತ ಕ್ಷಾತ್ರತೇಜದ ಐತಿಹಾಸಿಕ ಭಾಷಣ ಮಾಡಿದ ನೀವು ದೇಶ ವಿಭಜನೆಯ ಬ್ರಿಟಿಷರ ತಂತ್ರದ ಕುರಿತು ದೇಶವನ್ನು ಎಚ್ಚರಿಸಿದಿರಿ.
ಕಾಂಗ್ರೆಸ್ ಅಧ್ಯಕ್ಷಗಾದಿಗೆ ನಡೆದ ಮೊತ್ತಮೊದಲ ಚುನಾವಣೆಯಲ್ಲಿ ಡಾ|| ಪಟ್ಟಾಭಿ ಸೀತಾರಾಮಯ್ಯರ ವಿರುದ್ಧ ೨೧೫ ಮತಗಳ ಗೆಲುವು ಪಡೆದರೂ ನಿಮ್ಮ ವಿರುದ್ಧದ ಟೀಕೆಗಳು,ಬ್ರಿಟಿಷ್ ಸರ್ಕಾರದ ಜತೆ ದುರ್ಬಲ ಕಾಂಗ್ರೆಸ್‌ನ ತಾರ್ಕಿಕ ನಡೆಗಳಿಂದ ಬೇಸತ್ತು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದಿರಿ.
ಆರ್ ಎಸ್ ಎಸ್ ಕೆಲ ವಿಚಾರಧಾರೆಗಳಿಂದ ಪ್ರಭಾವಿತರಾದ ನೀವು ನಂತರ ವೀರ ಸಾವರ್ಕರ ರನ್ನು ಭೇಟಿಯಾದಿರಿ. ಮುಂದೆ ಭಾರತದಿಂದ ಕಾಣೆಯಾದ ನೀವು ಕಾಬೂಲ್ ಮೂಲಕ ಬರ್ಲಿನ್ ಸೇರಿ ಸೈನಿಕ ಕಾರ‍್ಯಾಚರಣೆ ನಡೆಸಿದಿರಿ. 1942ರಲ್ಲಿ ‘ಫ್ರೀ ಇಂಡಿಯಾ ಸೆಂಟರ್’ ಅನ್ನು ಉದ್ಘಾಟಿಸಿದ ನೀವು ಆಜಾದ್ ಹಿಂದ್ ಲಾಂಛನ ಮತ್ತು ಜೈ ಹಿಂದ್ ಘೋಷಣೆಗಳನ್ನು ಭಾರತ ದೇಶಕ್ಕೆ ಕೊಟ್ಟಿರಿ. ಉತ್ತಮ ಸಂಘಟನಾ ಚತುರರಾದ ನಿಮಗೆ ಆಗಲೆ ನೇತಾಜಿ ಎಂಬ ಬಿರುದು ದೊರೆತದ್ದು. ಜರ್ಮನ್ ಸೇನಾಕೇಂದ್ರಗಳಿಗೆ ಸೈನಿಕ ತರಬೇತಿ ನೀಡುವುದು, ಬರ್ಲಿನ್ ನ ರೇಡಿಯೋದಲ್ಲಿ ಆಗಾಗ ಭಾಷಣ, ಹಿಟ್ಲರ್ ಜತೆ ಭೇಟಿ. ಜಪಾನ್‌ಗೆ ತೆರಳಿ ಅಲ್ಲಿಂದ ಪೂರ್ವಾಂಚಲ ಭಾರತದ ಗಡಿಗಳಲ್ಲಿ ಸೈನ್ಯ ಸಜ್ಜು ಮಾಡಲು ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಮೂಲಕ ಅವಿರತ ಚಟುವಟಿಕೆ ನಡೆಸಿದಿರಿ. ಮುಂದೆ ಇದೇ ಆಜಾದ್ ಹಿಂದ್ ಸೈನ್ಯಕ್ಕೆ ಇಂಡಿಯನ್ ನ್ಯಾಷನಲ್ ಆರ್ಮಿ ಎಂದು ಹೆಸರಿಸಿದ ನೀವು ಈ ಸೇನೆಯ
ಕಮಾಂಡರ್ ಇನ್ ಚೀಫ್ ಆಗಿ ಕಾರ್ಯನಿರ್ವಹಿಸಿದಿರಿ.. ಸ್ವಾತಂತ್ರ್ಯ ಹೋರಾಟದ ನಿಮಿತ್ತ ಭಾರತದೆಡೆ ಧಾವಿಸಿದ ನೀವು 1945ರ ಆಗಸ್ಟ್ 18ರಂದು ವಿಮಾನ ಅಪಘಾತದಲ್ಲಿ ಮರಣ ಹೊಂದಿದಿರಿ ಎಂದು ಬಿ ಬಿ ಸಿ ತನ್ನ ರೇಡಿಯೋ ಪ್ರಕಟಣೆಯಲ್ಲಿ ಜಗತ್ತಿಗೆ ಸಾರಿ ಹೇಳಿದ್ದು ತದನಂತರ ನಿಮ್ಮ ಕುರಿತು ಬಂದದ್ದು ಕೇವಲ ಊಹಾ
ಪೋಹಗಳು ಮಾತ್ರ. ಈ ಮಧ್ಯದಲ್ಲಿ ನಿಮ್ಮ ವಿವಾಹವಾಗಿದ್ದು ಐರಿಷ್ ಮಹಿಳೆ ಎಮಿಲಿ ಶಂಕೆಲ್ ಬೋಸ್ ಮತ್ತು ನಿಮ್ಮ ಮಗಳು ಅನಿತಾ ಬೋಸ್ ಫ್ಲಾಫ್ ಎಂದು.
ಇಷ್ಟೆಲ್ಲಾ ಅರಿತದ್ದು ನಿಮ್ಮ ಕುರಿತು ಓದಿದಾಗ ಮಾತ್ರ…. ಇಂದಿಗೂ ನಿಮ್ಮ ಅಸೀಮ ಸಾಹಸ, ಚತುರತೆ ಅಭಿಮಾನ ಇವುಗಳ ಕುರಿತು ನಾವು ಕೊಂಚ ಕುರುಡರೇ. ಇನ್ನಾದರೂ ನಿಮ್ಮ ಕುರಿತ ಲೇಖನಗಳು ಪಠ್ಯ ಪುಸ್ತಕಗಳಲ್ಲಿ ಪ್ರಕಟವಾಗಲಿ ನಾಡಿನ ಪ್ರತಿ ಮನೆಯ ಮಗು ನಿಮ್ಮನ್ನು ಅರಿಯಲಿ ಎಂಬ ಆಶಯವನ್ನು ಹೊತ್ತಿರುವೆವು. ನಿಮ್ಮ ಕುರಿತ ನಮ್ಮ ಉಪೇಕ್ಷೆಯ ಧೋರಣೆಗೆ ಕ್ಷಮಿಸಿ ನಮಗೆ ಉತ್ತಮ ದಾರಿ ತೋರಿಸಿ ಎಂದು ಮಾತ್ರ ಹೇಳಬಲ್ಲೆವು.

ಇಂತಿ ನಿಮ್ಮ ಪ್ರೀತಿಯ
ಭಾರತದೇಶ ನಿವಾಸಿಗಳು

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ
    In (ರಾಜ್ಯ ) ಜಿಲ್ಲೆ
  • ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ
    In (ರಾಜ್ಯ ) ಜಿಲ್ಲೆ
  • ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .
    In (ರಾಜ್ಯ ) ಜಿಲ್ಲೆ
  • ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ
    In (ರಾಜ್ಯ ) ಜಿಲ್ಲೆ
  • ಸರ್ಕಾರದಿಂದ ಮೈಸೂರು ಜಿಲ್ಲೆಗೆ 5 ಕೋಟಿ 19 ಲಕ್ಷ ಅನುದಾನ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿಯಲ್ಲಿ ಭಾವೈಕ್ಯತಾ ದಿನಾಚರಣೆ…
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಭೀಮ ಗಾಯನ ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಿ
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಪ್ರಧಾನ ಮಂತ್ರಿ ರಾಷ್ಟ್ರೀಯ ಶಿಶುಕ್ಷು ಮೇಳ
    In (ರಾಜ್ಯ ) ಜಿಲ್ಲೆ
  • ಹೋಳಿ ಹಬ್ಬ ಆಚರಣೆ: ವಿಶೇಷ ದಂಡಾಧಿಕಾರಿಗಳ ನೇಮಿಸಿ ಆದೇಶ
    In (ರಾಜ್ಯ ) ಜಿಲ್ಲೆ
  • ಬೇಡಿಕೆಗಳ ಈಡೇರಿಕೆಗೆ ಮಾ.೧೧ ರಿಂದ ೧೫ವರೆಗೆ ಮುಷ್ಕರಕ್ಕೆ ನಿರ್ಧಾರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.