ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಜರುಗಿದ ಸಭೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ಆದೇಶದ ಮೇರೆಗೆ ಸಾಮಾಜಿಕ ಜಾಲತಾಣದ ತಾಲೂಕಾಧ್ಯಕ್ಷರನ್ನಾಗಿ ಹಣಮಂತ ಟಕ್ಕಳಕಿ ಅವರನ್ನು ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ, ಅವಳಿ ಜಿಲ್ಲೆಯ ಉಸ್ತುವಾರಿ ಅಶೋಕ ಹಾರಿವಾಳ ನೇಮಕ ಮಾಡಿದರು. ನಂತರ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರಜಕಾ ದರ್ಗಾ, ಶಂಕ್ರಪ್ಪ ದೊಡ್ಡಮನಿ, ಸಿದ್ದಪ್ಪ ಬೇಲಿ, ಶಾಸಪ್ಪ ಮಾದರ, ಕರೆಯಪ್ಪ ಶರಣರ, ರಾಜು ಬೇಲಿ, ರಾಜು ದಡ್ಡಿ, ಮಹಾಂತೇಶ ಬೇವಿನಗಿಡದ, ಕರೆಯಪ್ಪ ಹೊಸಮನಿ, ಬಸವರಾಜ ಹೂಗಾರ, ಭರತ ಗಾಯಕವಾಡ ಇತರರು ಇದ್ದರು.