ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಇತ್ತೀಚೆಗೆ ವಿಜಯಪುರದ
ಇಟ್ಟಂಗಿಬಟ್ಟಿ ಮಾಲಕರು ಮತ್ತು ಅವನ ಸಹಚರರಿಂದ ಕಾರ್ಮಿಕರ ಮೇಲೆ ನಡೆದ ಅಮಾನುಷ ಹಲ್ಲೆ ಖಂಡಿಸಿ, ಆರೋಪಿಗಳಿಗೆ ಕಠಿಣ ಶಿಕ್ವೆ ವಿಧಿಸಲು ಆಗ್ರಹಿಸಿ ದಲಿತ ಸೇನೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ದಲಿತ ಸೇನೆಯ ಅಧ್ಯಕ್ಷ ರವಿ ಹೋಳಿ ಮಾತನಾಡಿ, ಈ ಒಂದು ಘಟನೆ ಇಡೀ ಮಾನವ ಕುಲವೇ ತಲೆ ತಗ್ಗಿಸುವಂತಾಗಿದೆ. ಬಡ ಕೂಲಿ ಕಾರ್ಮಿಕರಿಗೆ ಬಡೆದಿರುವ ರೀತಿ ನೋಡಿದರೆ ಮನುಷ್ಯತ್ವ ಇಲ್ಲದ ರಾಕ್ಷಸರಂತೆ ವರ್ತಿಸಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿಗಳು ಯಾವುದೇ ಸಮಾಜದವರಿರಲಿ ಅವರನ್ನು ಬಡಿದಿರುವ ವ್ಯಕ್ತಿ ಕೂಡ ಯಾವುದೇ ಸಮಾಜದನಾಗಿರಲಿ ಅಪರಾಧಿಗೆ ಉಗ್ರವಾದ ಶಿಕ್ಷೆ ಆಗಬೇಕು. ಇದರಲ್ಲಿ ಕಾಣದ ಕೆಲವು ರಾಜಕೀಯ ಕೈಗಳು ಮತ್ತು ಜಿಲ್ಲೆಯ ಪ್ರಭಾವಿ ನಾಯಕರು ಆರೋಪಿ ಪರವಾಗಿದ್ದು ಆರೋಪಿಗಳಿಗೆ ಬಚಾವ ಮಾಡುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಯ ನಾಯಕರಿಗೆ ಇದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಪೋಲಿಸ್ ಇಲಾಖೆ ಇದ್ಯಾವುದನ್ನು ಪರಿಗಣಿಸದೆ ಇನ್ನೊಮ್ಮೆ ಎಲ್ಲಿಯೂ ಇಂತ ಘಟನೆಗಳು ಆಗದಂತೆ ಆರೋಪಿಗಳಿಗೆ ಉಗ್ರ ಶಿಕ್ಷೆಯನ್ನು ನೀಡಬೇಕು ಎಂದು ಆಗ್ರಹಿಸಿದರು
ದಲಿತ ಸೇನೆಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಕಲಬುರ್ಗಿ ಅವರು ಮಾತನಾಡಿ, ಈ ಒಂದು ಕೃತ್ಯ ನೋಡಿದರೆ ಬಡವರು ಕೂಲಿಕಾರ್ಮಿಕರು ಕಳ್ಳು ಕಿತ್ತು ಬರುತ್ತದೆ. ಕೂಲಿ ಕಾರ್ಮಿಕರು ಎಂದರೆ ಅಮಾಯಕರು. ಅಣ್ಣ ಬಸವಣ್ಣನವರ ನಾಡಿನಲ್ಲಿ ಈ ರೀತಿಯ ಕೃತ್ಯ ಮಾಡಿರುವ ವ್ಯಕ್ತಿಗೆ ಎಡೆಮುರಿ ಕಟ್ಟಿ ಪೋಲಿಸ್ ಇಲಾಖೆ ಒದ್ದು ಒಳಗೆ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ಮುಖಂಡ ಬಾಲು ಚಲವಾದಿ ಮನವಿ ಪತ್ರ ಸಲ್ಲಿಸಿದರು
ಗೌರವಾಧ್ಯಕ್ಷ ಶಬ್ಬೀರ್ ಪಟೇಲ್ ಬಿರಾದಾರ್ ಮಾಜಿ ಸೈನಿಕರು , ಉಪಾಧ್ಯಕ್ಷ ಚಂದ್ರಶೇಖರ್ ದೇವುರ ಗೌರವಾಧ್ಯಕ್ಷ ನೂರ ಹಮ್ಮದ್ ಕಣ್ಣಿ, ಗೌರವಾಧ್ಯಕ್ಷ ಚಂದ್ರಾಮ ಮೇಲಿನಕೇರಿ (ಮಾಜಿ ಸೈನಿಕರು) ಗೌರವಾಧ್ಯಕ್ಷ ಸೋಮನಿಂಗ್ ಭಾವಿಕಟ್ಟಿ ಗೌರವಾಧ್ಯಕ್ಷ ಅಲ್ಲಾಭಕ್ಷಿ ಮಿರ್ಜಿ (ಮಾಜಿ ಸೈನಿಕರು) ಸಂಘಟನಾ ಕಾರ್ಯದರ್ಶಿ ರಾಜು ಗುಬ್ಬೆವಾಡ ಮಹಿಳಾಘಟ್ಟದ ಅಧ್ಯಕ್ಷ ನಾಗಮ್ಮ ಎಮ್ಮಿ, ಸುನಂದ ಯಂಪುರ ಉಪಾಧ್ಯಕ್ಷ ಪ್ರಕಾಶ್ ಹಾಲಳ್ಳಿ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಸಿದ್ದು ದ್ವಾರಿ, ಸಾಮಾಜಿಕ ಜಾಲತಾಣದ ಸದಸ್ಯ ಮಾಳಪ್ಪ ಕಕ್ಕಳಮೇಲಿ, ಸಂಘಟನಾ ಕಾರ್ಯದರ್ಶಿಗಳು ಸದ್ದಾಂ ಮುಲ್ಲಾ ರಾಜು ಜಮಾದಾರ, ಸಿದ್ಧಾರೂಢ ವಾಲಿಕಾರ್, ಸಚಿನ್ ಹೋಳಿ, ಹಣಮಂತ ಹೊಸಮನಿ ಬಸವರಾಜ್ ರಾಥೋಡ್ ಸಂಜು ಮಾನಸುಣಗಿ ಶಿವು ಪವಾರ್
ಮಹಿಳಾ ಘಟಕದ ಉಪಾಧ್ಯಕ್ಷರು ಶ್ರೀದೇವಿ ವಾಲಿ, ಸುನಂದ ಸಾಲೋಟಗಿ, ಸರಸ್ವತಿ ರೂಗಿ ಸೇರಿದಂತೆ ಅನೇಕ ದಲಿತ ಸೇನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

