Subscribe to Updates
Get the latest creative news from FooBar about art, design and business.
Author: editor.udayarashmi@gmail.com
೫ ವರ್ಷದೊಳಗಿನ ಎಲ್ಲ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಲು ಅಧಿಕಾರಿಗಳಿಗೆ ಡಿಸಿ ಡಾ. ಕೆ ಆನಂದ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಪಲ್ಸ್ ಪೋಲಿಯೊ ಲಸಿಕೆ ಅಭಿಯಾನದಡಿ ಡಿ.೨೧ ರಿಂದ ೨೪ರವರೆಗೆ ೫ ವರ್ಷದೊಳಗಿನ ಎಲ್ಲ ಮಕ್ಕಳಿಗೆ ತಪ್ಪದೇ ಪೋಲಿಯೊ ಲಸಿಕೆ ಹಾಕಿಸುವಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ಅಧಿಕಾರಿಗಳಿಗೆ ಸೂಚಿಸಿದರು.ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ ಕುರಿತು ಕೈಗೊಂಡಿರುವ ಪೂರ್ವಸಿದ್ಧತೆಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಪ್ರಸಕ್ತ ಸಾಲಿನ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಅತ್ಯಂತ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ನಿಯೋಜನಗೊಂಡ ವೈದ್ಯರು,ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ತಮಗೆ ವಹಿಸಿದ ಕೆಲಸ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚಿಸಿದರು.ತಮ್ಮ ವ್ಯಾಪ್ತಿಯಲ್ಲಿನ ೫ ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆ ಹಾಕಿಸುವ ಕುರಿತು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸೂಚಿಸಲಾಯಿತು.ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ದಿನದ ೨೪ ಗಂಟೆಯೂ ಲಸಿಕಾ ಕೇಂದ್ರಗಳನ್ನು ತೆರೆಯುವಂತೆ…
ವಿಧಾನಸಭೆಯಲ್ಲಿ ‘ಗೃಹ ಲಕ್ಷ್ಮಿ’ ಕೋಲಾಹಲ :ಬಿಜೆಪಿ ಸಭಾತ್ಯಾಗ | ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿಷಾದ ಬೆಂಗಳೂರು: ಗೃಹಲಕ್ಷ್ಮಿ ಯೋಜನೆ ಹಣದ ವಿಚಾರವಾಗಿ ವಿಧಾನಸಭೆ ಅಧಿವೇಶನದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಭಾರಿ ಮಾತಿನ ಸಮರವೇ ನಡೆದಿದ್ದು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸಭಾತ್ಯಾಗ ನಡೆಸಿದ ಪ್ರಸಂಗ ಬುಧವಾರ ನಡೆಯಿತು.ರಾಜ್ಯ ಸರ್ಕಾರದ ಮಹಿಳಾ ಸಹಾಯ ಯೋಜನೆಯಡಿ 1.26 ಕೋಟಿ ಫಲಾನುಭವಿಗಳಿಗೆ ಎರಡು ತಿಂಗಳ ಕಂತುಗಳನ್ನು “ವಿತರಿಸದಿರುವ” ಆರೋಪವನ್ನು ವಿರೋಧಿಸಿ ವಿರೋಧ ಪಕ್ಷ ಬಿಜೆಪಿ ಬುಧವಾರ ಕರ್ನಾಟಕ ವಿಧಾನಸಭೆಯಿಂದ ಸಭಾತ್ಯಾಗ ಮಾಡಿತು.ಪ್ರಮುಖವಾಗಿ ಗೃಹ ಲಕ್ಷ್ಮಿ ಯೋಜನೆಯ ಪಾವತಿ ಸ್ಥಿತಿಯ ಬಗ್ಗೆ ರಾಜ್ಯ ಸರ್ಕಾರವು ಸದನಕ್ಕೆ “ತಪ್ಪು” ಮಾಹಿತಿಯನ್ನು ಒದಗಿಸುತ್ತಿದೆ ಎಂದು ವಿರೋಧ ಪಕ್ಷ ಆರೋಪಿಸಿದ ನಂತರ ಪ್ರತಿಭಟನೆ ನಡೆಯಿತು. ಬಿಜೆಪಿ ಪಕ್ಷದ ಸದಸ್ಯರು ಸದನದ ಬಾವಿಗೆ ಇಳಿದು ಘೋಷಣೆಗಳನ್ನು ಕೂಗಿದರು, ಇದು ಸದನದ ಕಲಾಪವನ್ನು ಒಂದು ಗಂಟೆಗೂ ಹೆಚ್ಚು ಕಾಲ ಮುಂದೂಡಲು ಕಾರಣವಾಯಿತು. ಸದನಕ್ಕೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ, ಸಿಂದಗಿ.ಶಾಖೆಯ ವತಿಯಿಂದ ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಹೆಚ್ಚುತ್ತಿರುವ ಚಳಿಯನ್ನು ಗಮನದಲ್ಲಿಟ್ಟುಕೊಂಡು, ವೃದ್ಧರು ಮತ್ತು ಅಸಹಾಯಕರನ್ನು ಹಾಗೂ ಅತ್ಯಂತ ಬಡ ಕುಟುಂಬದ ಜನರಗೆ ಚಳಿಯಿಂದ ರಕ್ಷಿಸಿಕೊಳ್ಳಲು ಬುಧವಾರ ಕಂಬಳಿಗಳನ್ನು ವಿತರಿಸಲಾಯಿತು.ಈ ವೇಳೆ ಎನ್.ಕೆ.ಚೌದರಿ ಗುರುಗಳು ವೇದಿಕೆ ಉದ್ದೇಶ ಹಾಗೂ ಸೇವೆಗಳ ಕುರಿತು ಮಾಹಿತಿ ನೀಡಿ, ವೇದಿಕೆ ಯಾವುದೆ ಜಾತಿ ಭೇದ ಮತ-ಪಂಥ ಅನ್ನದೆ ಬಡವರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆಯ ಸಂದೇಶ ಸಾರುತ್ತಿದೆ. ಎರಡು ವರ್ಷಗಳಿಂದ ನಮ್ಮ ಶಾಲೆಯ ಮಕ್ಕಳಿಗೆ ಬ್ಯಾಗ್, ನೋಟ ಪುಸ್ತಕ ಕೊಡುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಸಹಕಾರ ನೀಡಿದೆ. ಇಂದು ನಾವು ಎಲ್ಲರೂ ಸಹಾಯದ ಭಾವನೆ ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ ಎಂದು ಹೇಳಿದರು.ವೇದಿಕೆಯ ಮೌಲಾನಾ ದಾವುದ ನದ್ವಿ ಮಾತನಾಡಿ, ಮಾನವನಿಗೆ ಮಾನವನೆ ಪರಿಹಾರ. ಆದ ಕಾರಣ ನಾವು ಎಲ್ಲರೂ ಒಗ್ಗಟ್ಟಿನಿಂದ ಬಾಳುವುದು ಬಹಳ ಮುಖ್ಯ. ಸುಂದರ ಸಮಾಜದ ನಿರ್ಮಾಣ ಪರಸ್ಪರ ಸಹಕಾರ ಸಹಾಯದಿಂದ ಸಾದ್ಯ. ಮಾನವೀಯ ಮೌಲ್ಯಗಳು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್(ಸಿ.ಬಿ.ಎಸ್.ಇ) ಶಾಲೆಗೆ ಇ ಟೆಕ್ಸ್ ಬ್ರೇನ್ ಫೀಡ್ ಮ್ಯಾಗಝಿನ್ ಅಕಾಡೆಮಿಯವರು ಪ್ರತಿ ವರ್ಷ ಕೊಡುವ ಬೆಸ್ಟ್ ಅಕಾಡೆಮಿಕ್ ಎಕ್ಸ್ ಲೆನ್ಸ್ 2025-26 ವಿಭಾಗದ ಸ್ಕೂಲ್ ಎಕ್ಸಲೆನ್ಸ್ ಪ್ರಶಸ್ತಿ ಲಭಿಸಿದೆ.ಅತ್ಯುತ್ತಮ ಸ್ಟೆಮ್/ಸ್ಟೀಮ್ (STEM/STEAM ) ಇಂಪ್ಲಿಮೆಂಟೇಶನ್ ಮತ್ತು ಇನ್ನೋವೇಟಿವ್ ಕಲಿಕಾ ಅನುಷ್ಠಾನದ ಮಾನದಂಡ, ಅಲ್ಲದೇ, ಈ ಶಾಲೆಯಲ್ಲಿ ಅಳವಡಿಸಲಾದ ಎಟಿಎಲ್ ಲ್ಯಾಬ್, ಲಾಂಗ್ವೇಜ್ ಲ್ಯಾಬ್ ಮತ್ತು ತರಗತಿಗಳಲ್ಲಿ ಕಂಟ್ರೋಲ್ ಪ್ಯಾನಲ್ ಬೋರ್ಡಗಳನ್ನು ಅಳವಡಿಸಿ ಮಕ್ಕಳಿಗೆ ಅತ್ಯಾಧುನಿಕ ರೀತಿಯಲ್ಲಿ ಉನ್ನತಮಟ್ಟದ ಶಿಕ್ಷಣ ನೀಡುತ್ತಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ತೆಲಂಗಾಣ ರಾಜ್ಯದ ಹೈದರಾಬಾದಿನಲ್ಲಿ ಶುಕ್ರವಾರ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದದಲ್ಲಿ ಅಕಾಡೆಮಿದ ಅಧಿಕಾರಿಗಳು ಶಾಲೆಯ ಪ್ರಾಚಾರ್ಯ ಡಾ. ಶೈಜೂ ಕೆ. ನಾಯರ ಪ್ರಶಸ್ತಿ ಸ್ವೀಕರಿಸಿದರು.ಶಾಲೆಗೆ ಪ್ರಶಸ್ತಿ ಲಭಿಸಿರುವುದಕ್ಕೆ ಸಂಸ್ಥೆಯ ಅಧ್ಯಕ್ಷ ಮತ್ತು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಧಾನ ಕಾರ್ಯದರ್ಶಿ…
ಬಾಗಲಕೋಟ ವಿಶ್ವವಿದ್ಯಾಲಯ ಕುಲಸಚಿವ ಡಾ. ಜೌದ್ರಾಮ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿದ್ಯಾರ್ಥಿಗಳಿಗೆ ಬರೀ ಅಂಕಗಳು ಮುಖ್ಯ ಅಲ್ಲ, ಸರ್ವತೋಮುಖ ಅಭಿವೃದ್ಧಿಗೆ ನೈಜ ಜ್ಞಾನ ಅವಶ್ಯ ಎಂದು ಬಾಗಲಕೋಟ ವಿಶ್ವವಿದ್ಯಾಲಯ ಕುಲಸಚಿವ ಡಾ. ಜೌದ್ರಾಮ ಹೇಳಿದ್ದಾರೆ.ಮಂಗಳವಾರ ನಗರದ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ನಿರ್ವಹಣೆ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಪ್ರಥಮ ವರ್ಷದ ಎಂ.ಬಿ.ಎ. ವಿದ್ಯಾರ್ಥಿಗಳಿಗಾಗಿ ನಡೆದ ಪರಿಚಯಾತ್ಮಕ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಕೇವಲ ಪಠ್ಯ ಅಧ್ಯಯನ, ಫಲಿತಾಂಶಕ್ಕೆ ಗಮನ ನೀಡದೇ ಸಾಮಾನ್ಯ ಜ್ಞಾನ, ವ್ಯವಹಾರ ಜ್ಞಾನಕ್ಕೂ ಪ್ರಾಶಸ್ತ್ಯ ನೀಡಬೇಕು. ಜ್ಞಾನದಿಂದ ಮಾತ್ರ ಎಲ್ಲವನ್ನು ಗೆಲ್ಲಬಹುದು ಎಂದು ಅವರು ಹೇಳಿದರು.ಪ್ರಾಚಾರ್ಯ ಡಾ. ಎಸ್. ಬಿ. ಕಮತಿ ಮಾತನಾಡಿ, ನಮ್ಮಲ್ಲಿರುವ ಜ್ಞಾನದಿಂದ ಬದುಕು ಸುಂದರವಾಗಲು ಬುದ್ಧಿವಂತಿಕೆ ಬೇಕು. ಸಂದರ್ಭಾನುಸಾರ ಜ್ಞಾನವನ್ನು ಬಳಸಿದಾಗ ಕಾರ್ಯ ಯಶಸ್ವಿಯಾಗುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಡಾ. ಅಶ್ವಿನಿ ಯರನಾಳ, ಡಾ. ಗೌರಿ ಕಲಗೊಂಡ, ಪ್ರೊ. ಲಕ್ಷ್ಮಣ ಪವಾರ, ಪ್ರೊ. ಗಂಗಾಧರ ಮಮದಾಪುರ, ಪ್ರೊ. ರವಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಮುಂದಿನ ಮೂರು ತಿಂಗಳು ಶಿಕ್ಷಕರು ಸೇರಿದಂತೆ ಎಲ್ಲರೂ ಸಮನ್ವಯದಿಂದ ಕಾರ್ಯ ನಿರ್ವಹಿಸುವಂತೆ ಕರ್ನಾಟಕ ಪ್ರೌಢಶಾಲಾ ಮಂಡಳಿ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರಾದ ಪ್ರಕಾಶ ನಿಟ್ನಳ್ಳಿ ಅವರು ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಅವರ ಸಹಯೋಗದಲ್ಲಿ ಬುಧವಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಫ.ಗು.ಹಳಕಟ್ಟಿ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ವಿಜಯಪುರ-ಬಾಗಲಕೋಟೆಯ ವಿಭಾಗ ಮಟ್ಟದ ಸಂಪನ್ಮೂಲ ಶಿಕ್ಷಕರ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಮಗುವಿನ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಹಾಗೂ ಮನಸ್ಥಿತಿಯನ್ನು ಅರಿತುಕೊಂಡು ಗುಣಾತ್ಮಕ ಮತ್ತು ಪರಿಮಾಣಾತ್ಮಕವಾಗಿ ಬೋಧನಾ ಕ್ರಮಗಳನ್ನು ಅಳವಡಿಸಿಕೊಂಡು ಶಿಕ್ಷಕರು ಬೋಧನೆ ಮಾಡುವ ಮೂಲಕ ಅವರ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಿ ವಿಷಯ ಕರಗತ ಮಾಡಿಸಬೇಕು. ಮುಂದಿನ ಮೂರು ತಿಂಗಳು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಕಾಳಜಿ ಪೂರಕವಾಗಿ ಶ್ರಮಿಸುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ ಎಂದು ಅವರು ಹೇಳಿದರು.ಪರೀಕ್ಷೆಗೆ ಸಂಬಂಧಿಸಿದ ನೀಲನಕ್ಷೆ, ಮಾದರಿ ಪ್ರಶ್ನೆ ಪತ್ರಿಕೆ, ಪರೀಕ್ಷಾ ಉಪಕ್ರಮಗಳನ್ನು ಈಗಾಗ…
ವಿಜಯಪುರದ ಇಬ್ರಾಹಿಂಪುರದಲ್ಲಿ ನಂದಬಸವೇಶ್ವರ ಜಾತ್ರೆಯ ವೈಭವ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಇಬ್ರಾಹಿಂಪುರದಲ್ಲಿ ಬುಧವಾರ ಶ್ರೀ ನಂದಬಸವೇಶ್ವರ ಜಾತ್ರೆಯ ಅಂಗವಾಗಿ ನಂದಿಕೋಲ ಮೆರವಣಿಗೆ ವೈಭವದಿಂದ ನಡೆಯಿತು.ಸಿದ್ಧೇಶ್ವರ ಸಂಕ್ರಮಣ ಜಾತ್ರೆಯ ಮಾದರಿಯಲ್ಲಿ ವಿವಿಧ ವಾದ್ಯ ಮೇಳದೊಂದಿಗೆ ನಡೆದ ಅಲಂಕೃತ ನಂದಿಕೋಲ ಮೆರವಣಿಗೆ ಭಕ್ತರ ಕಣ್ಮನ ಸೆಳೆಯಿತು.ಗ್ರಾಮದ ಹೃದಯ ಭಾಗದಲ್ಲಿರುವ ಶ್ರೀ ನಂದಬಸವೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ನಂದಿಕೋಲ ಮೆರವಣಿಗೆ ಭಕ್ತರ ಮನೆಗಳಿಗೆ ಭೇಟಿ ನೀಡುತ್ತ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಮುಂದೆ ಹಾಯ್ದು ಸಂಜೆ ನಗರದ ರೇಲ್ವೆ ಸ್ಟೇಷನ್ ಮುಂದುಗಡೆ ನಡೆಯುವ ಶ್ರೀ ಪವಾಡ ಬಸವೇಶ್ವರ ದೇವರ ಭೇಟಿಗೆ ತೆರಳಿತು.ಮೆರವಣಿಗೆಯಲ್ಲಿ ನೂರಾರು ಜನ ಸುಮಂಗಲೆಯರು ಕೈಯ್ಯಲ್ಲಿ ಆರತಿ ತಟ್ಟೆ ಹಿಡಿದುಕೊಂಡು ನಂದಿಕೋಲ ಹಿಂದಿದ್ದರು. ಯುವಕರು, ಗ್ರಾಮದ ಹಿರಿಯರು, ಜಾತ್ರಾ ಕಮೀಟಿಯ ಮುಖಂಡರು, ಯುವಕರು ನಂದಿಕೋಲ ಮುಂದೆ ಸಾಗುತ್ತಿದ್ದರು. ಕೆಲವು ಯುವಕರು ಬಿಳಿ ಬಣ್ಣದ ಉಡುಗೆ ತೊಟ್ಟು ತಲೆಗೆ ಕೆಂಪು ಪೇಟಾ ಸುತ್ತಿಕೊಂಡು ಮೆರವಣಿಗೆಯಲ್ಲಿ ಭಾಗವಹಿಸಿದ್ದು ಗಮನ ಸೆಳೆಯಿತು.ಮೆರವಣಿಗೆ ಪ್ರಮುಖ ಬೀದಿಯಲ್ಲಿ ಸಂಚರಿಸಿ ತಮ್ಮ ಮನೆಗಳ ಬಳಿ…
ಧೂಳಖೇಡ ಅಂಡರ್‌ಪಾಸ್ ಸುತ್ತಮುತ್ತಲಿನ ಅತಿಕ್ರಮ ಅಂಗಡಿ ತೆರವಿಗೆ ಶನಿವಾರದವರೆಗೆ ಗಡುವು ಉದಯರಶ್ಮಿ ದಿನಪತ್ರಿಕೆ ಚಡಚಣ: ಧೂಳಖೇಡ ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಅಂಡರ್‌ಪಾಸ್ ಸಂಪರ್ಕ ರಸ್ತೆಯ ಎರಡೂ ಬದಿಯಲ್ಲಿ ನಿರ್ಮಾಣವಾಗಿರುವ ಅತಿಕ್ರಮ ಅಂಗಡಿಗಳನ್ನು ಸಂಬಂಧಪಟ್ಟವರು ಬರುವ ಡಿ.20 ಶನಿವಾರದೊಳಗೆ ತೆರವುಗೊಳಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿ ಚೇತನ ರಂಗಸೊಬೆ ಸೂಚನೆ ನೀಡಿದರು.ಬುಧವಾರ ಧೂಳಖೇಡ ಗಾ.ಪಂ.ಸಭಾ ಭವನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯ ಮೇಲೆಯೆ ಅಂಗಡಿಗಳನ್ನು ಇಟ್ಟು ವ್ಯಾಪಾರ ನಡೆಸುತ್ತಿರುವುದರಿಂದ ವಾಹನ ಸವಾರರ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದ್ದು ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿದ್ದು ಅಂಗಡಿ ತೆರವುಗೋಳಿಸುವ ಕುರಿತು ಈಗಾಗಲೇ ಹಲವು ಬಾರಿ ನೋಟಿಸ್ ನೀಡಲಾಗಿದ್ದು, ವ್ಯಾಪಾರಸ್ಥರಿಗೆ ಅಂತಿಮವಾಗಿ ಡಿ.20 ಶನಿವಾರದವರೆಗೆ ಕಾಲಾವಕಾಶ ನೀಡಲಾಗಿದೆ. ನಿಗದಿತ ಅವಧಿಯೊಳಗೆ ಅಂಗಡಿಗಳನ್ನು ಸ್ಥಳಾಂತರಿಸದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ರಸ್ತೆ ಬದಿಯಲ್ಲಿ ಇರುವ ವ್ಯಾಪಾರಸ್ಥರು, ರಸ್ತೆ ಬದಿಯಲ್ಲಿ ಕಸ ಎಸೆಯುವುದರಿಂದ ಮಾಲಿನ್ಯ ಉಂಟಾಗಿ ಕ್ರಿಮಿ–ಕೀಟಗಳ ಹೆಚ್ಚಳದಿಂದ ರೋಗಗಳು ಹರಡುವ ಸಾಧ್ಯತೆ ಇದೆ ಆದ್ದರಿಂದ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಕರ್ನಾಟಕ ಪ್ರತಿಭಾ ಅಕಾಡೆಮಿ (ರಿ), ವಿಜಯಪುರ ಇವರಿಂದ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಡಿ. 21 ರಂದು ಬೆಳಿಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ. ವಿಜಯಪುರ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಸುಮಾರು 140 ಮಂದಿ ಪ್ರತಿಭಾವಂತ ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೆ ಈ ಸಮಾರಂಭದಲ್ಲಿ ಸನ್ಮಾನ ಹಾಗೂ ಪ್ರಶಸ್ತಿ ವಿತರಿಸಲಾಗುವುದು ಎಂದು ಕರ್ನಾಟಕ ಪ್ರತಿಭಾ ಅಕಾಡೆಮಿ (ರಿ), ವಿಜಯಪುರ ಜಿಲ್ಲಾ ಸಂಚಾಲಕರಾದ ಚನ್ನು ಕಟ್ಟಿಮನಿ ಅವರು ಹೇಳಿದರು.ಕಾರ್ಯಕ್ರಮವು ವೀರಶೈವ ಲಿಂಗಾಯತ ಮಹಾ ಸಭಾಭವನ, ಬಂಜಾರ ಕ್ರಾಸ್, ಸೋಲಾಪುರ ರಸ್ತೆ, ವಿಜಯಪುರದಲ್ಲಿ ನಡೆಯಲಿದೆ.ಮಾನವ ಬಂಧುತ್ವ ವೇದಿಕೆಯ ವಿಭಾಗಿಯ ಸಂಚಾಲಕರಾದ ಪ್ರಭುಗೌಡ ಪಾಟೀಲ ಅವರ ಸಹಯೋಗದೊಂದಿಗೆ ಮತ್ತು ಉಧ್ಘಾಟಕರಾಗಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು ಮತ್ತು ಬಸವ ಚಿಂತಕರು ಮತ್ತು ವಿಮರ್ಶಕರಾದ ಡಾ| ಜೆ.ಎಸ್.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಜರಗುವದು ಎಂದರು.ಈ ಕಾರ್ಯಕ್ರಮಕ್ಕೆ ಚಡಚಣ ತಾಲೂಕಿನಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಐದು ವಿದ್ಯಾರ್ಥಿಗಳಾದ…
ಲೇಖನ- ಬಸವರಾಜ ಹೂಗಾರನಿಕಟ ಪೂರ್ವ ಜಿಲ್ಲಾ ಅಧ್ಯಕ್ಷರುಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾವಿಜಯಪುರ ಜಿಲ್ಲೆಮೊ: 9740207097 ಉದಯರಶ್ಮಿ ದಿನಪತ್ರಿಕೆ ಭಾರತೀಯ ಜನತಾ ಪಕ್ಷವು ತನ್ನ ರಾಜಕೀಯ ಯಶಸ್ಸಿನ ಹಿಂದೆ ಸಂಘಟನಾ ಶಕ್ತಿಯನ್ನು ಪ್ರಮುಖ ಆಧಾರವಾಗಿ ಹೊಂದಿದೆ. ಕಾರ್ಯಕರ್ತಕೇಂದ್ರಿತ ರಾಜಕಾರಣ, ಶಿಸ್ತುಬದ್ಧ ಕಾರ್ಯವೈಖರಿ ಮತ್ತು ದೀರ್ಘಕಾಲೀನ ದೃಷ್ಟಿಕೋನವೇ ಪಕ್ಷದ ವೈಶಿಷ್ಟ್ಯ. ಈ ಸಂಘಟನಾ ಪರಂಪರೆಯ ಮುಂದುವರಿಕೆಯಾಗಿ ಶ್ರೀ ನಿತಿನ್ ನಬಿನ್ ಅವರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಧ್ಯಕ್ಷರಾಗಿ ನೇಮಿಸಿರುವುದು ಕೇವಲ ಹುದ್ದೆಯ ನೇಮಕವಲ್ಲ; ಅದು ಪಕ್ಷದ ಭವಿಷ್ಯದ ಕಾರ್ಯಯೋಜನೆಗೆ ನೀಡಿದ ಸ್ಪಷ್ಟ ಸಂದೇಶವಾಗಿದೆ.ಬಿಹಾರ ರಾಜ್ಯದ ಪಾಟ್ನಾ ನಗರದಲ್ಲಿ ಜನಿಸಿದ ಶ್ರೀ ನಿತಿನ್ ನಬಿನ್ ಅವರು ವಿದ್ಯಾರ್ಥಿ ಜೀವನದಲ್ಲಿಯೇ ರಾಷ್ಟ್ರಭಕ್ತಿ ಮತ್ತು ಸೇವೆಯ ಮೌಲ್ಯಗಳನ್ನು ಅಳವಡಿಸಿಕೊಂಡವರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಿಂತನೆಗಳಿಂದ ರೂಪುಗೊಂಡ ಅವರ ವ್ಯಕ್ತಿತ್ವದಲ್ಲಿ ಶಿಸ್ತು, ಸಮರ್ಪಣೆ ಮತ್ತು ಸಂಘಟನಾ ಬದ್ಧತೆ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಮೌಲ್ಯಗಳೇ ಅವರ ರಾಜಕೀಯ ಬದುಕಿನ ದಿಕ್ಕನ್ನು ನಿರ್ಧರಿಸಿವೆ. ರಾಜಕೀಯ ಬದುಕನ್ನು ನೆಲಮಟ್ಟದ ಕಾರ್ಯಕರ್ತನಾಗಿ ಆರಂಭಿಸಿದ ಅವರು, ಭಾರತೀಯ…
