ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಬ್ಯಾಂಕು ಪ್ರಾರಂಭಗೊಂಡು ೧೧ ವರ್ಷದಲ್ಲಿ ರೂ.೬.೧೩ ಕೋಟಿ ವ್ಯವಹಾರ ಮಾಡುತ್ತಿದೆ. ಪ್ರಸಕ್ತ ವರ್ಷದಲ್ಲಿ ರೂ.೭.೧೨ ಲಕ್ಷ ಲಾಭದಲ್ಲಿ ಉತ್ತಮ ರೀತಿಯ ವ್ಯವಹಾರ ಮಾಡಲಾಗುತ್ತಿದೆ ಎಂದು ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರುದ್ರಸ್ವಾಮಿ ಹಿರೇಮಠ ಹೇಳಿದರು.
ಪಟ್ಟಣದ ಜಗದ್ಗುರು ರೇಣುಕಾಚಾರ್ಯ ಪತ್ತಿನ ಸಹಕಾರಿ ಬ್ಯಾಂಕಿನ ವಾರ್ಷಿಕ ಸಾಮನ್ಯ ಸಭೆಯಲ್ಲಿ ಮಾತನಾಡುತ್ತ ಹೇಳಿದರು.
ಬ್ಯಾಂಕ್ ಪ್ರಾರಂಭದಿಂದ ಉತ್ತಮ ರೀತಿ ವ್ಯವಹಾರ ಮಾಡುತ್ತ ಬಂದಿದ್ದು ಕಳೆದ ೮ ವರ್ಷಗಳಿಂದ “ಬ” ವರ್ಗದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಪಿಕೆಪಿಎಸ್ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಭಾಗಣ್ಣ ಗುರಕಾರ ಮಾತನಾಡಿ
ಸ್ಥಳಿಯ ಸಹಕಾರಿ ಬ್ಯಾಂಕಗಳು ಅಭಿವೃದ್ದಿಗೊಳ್ಳಬೇಕು ಎಂದರೆ ಸೇರುದಾರರು ತಮ್ಮ ಬ್ಯಾಂಕಿನಲ್ಲಿ ಉತ್ತಮ ವ್ಯವಹಾರದ ಜೊತೆಗೆ ಹೆಚ್ಚಿನ ಠೇವಣಿ ಇಡುತಿರಬೇಕು ಅಂದಾಗ ಮಾತ್ರ ಬ್ಯಾಂಕ ಹೆಚ್ಚೆ ಅಭಿವೃದ್ದಿ ಹೊಂದಲು ಸಾದ್ಯ ಎಂದು ಹೇಳಿದರು.
ಬ್ಯಾಂಕಿನ ಸಂಸ್ಥಾಪಕ ನಿರ್ದೇಶಕ ತಾರಾಪೂರ ಹಿರೇಮಠದ ಗುರುಲಿಂಗ ಶಿವಾಚಾರ್ಯರು, ಸಂಗನಬಸವ ಶಿವಾಚಾರ್ಯರು ಸಾನಿದ್ಯ ವಹಿಸಿದ್ದರು. ಅಧ್ಯಕ್ಷ ವೀರುಪಾಕ್ಷಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷ ಎಂ.ಆರ್. ರಸ್ತಾಪೂರಮಠ, ನಿರ್ದೇಶಕರಾದ ಜಿ.ಸಿ. ಪಶುಪತಿಮಠ, ಆಯ್.ಎಸ್. ಮಠ, ವಿ.ಜಿ. ಘಾಳಿಮಠ, ಸಿದ್ದು ಹಿರೇಮಠ, ಶ್ರೀಶೈಲ ಮಠಪತಿ, ಮಂಗಲಾ ಗುಡಿಮಠ, ಪಿ.ಪಿ. ಪಾಟೀಲ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

