ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಕ್ರೀಡೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುದರಿಂದ ದೈಹಿಕ, ಮಾನಸಿಕವಾಗಿ ಸದೃಢರಾಗಲು ಸಾಧ್ಯ. ಕ್ರೀಡೆ ಯುವಜನರ ಚೇತನವಾಗಬೇಕು ಎಂದು ಶಿಕ್ಷಣ ಸಂಯೋಜಕರಾದ ಜಿ ಟಿ ಕಾಗವಾಡ ಗ್ರಾಮೀಣ ವಲಯ ವಿಜಯಪುರ ತಿಳಿಸಿದರು.
ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ವಿ ವ ಸಂ ಪದವಿ ಪೂರ್ವ ಕಾಲೇಜನಲ್ಲಿ 2025-26ನೇ ಸಾಲಿನ ತಿಕೋಟಾ ಹಾಗೂ ಬಬಲೇಶ್ವರ ತಾಲೂಕಗಳ ಕ್ರೀಡಾ ಕೂಟ ಜರುಗಿದವು.
ಇಂದಿನ ಯುವ ಜನಾಂಗ ಕ್ರೀಡಾ ಮನೋಭಾವನೆ ಬೆಳಿಸಿಕೊಳ್ಳಬೇಕು, ಮೊಬೈಲ್ ಬಳಕೆ ಕಡಿಮೆಮಾಡಿಕೊಂಡು ಅದರಿಂದ ಆಗುವ ದುಷ್ಪರಿಣಾಮಯಿಂದ ದೂರವಿರಿ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್ ಜಿ ಲಕ್ಕುಂಡಿಮಠ ಹೇಳಿದರು.
ಪ್ರಾಚಾರ್ಯ ಎಂ ಎ ಹಿರೇಮಠ ಕ್ರೀಡಾ ಧ್ವಜಾರೋಹಣ ನಡೆಸಿಕೊಟ್ಟರು.
ಕೃಷಿ ಅಧಿಕಾರಿ ಯಂಕಪ್ಪ ಉಪ್ಪಾರ ಹಾಗೂ ಸಂಸ್ಥೆಯ ಕಾರ್ಯದರ್ಶಿ ಪ್ರವೀಣ್ ಮಸಳಿ ಕ್ರೀಡಾ ಜ್ಯೋತಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ದೈಹಿಕ ಪರಿವಿಕ್ಷಕ ಕೆ ಎಲ್ ಚವ್ಹಾಣ, ಕೃಷ್ಣಾಜಿ ಬುಯಿನ ಕ್ರೀಡಾ ಸಂಯೋಜಕರಾದ ಬಿ ಎಲ್ ನಾಟಿಕಾರ ಎಂ ಎಸ್ ಮಸಳಿ ಪಿ ಕೆ ಪಿ ಎಸ್ ಅಧ್ಯಕ್ಷ ಮಹಾಂತೇಶ ಮಾಲಗಾರ, ಉದ್ಯಮಿಗಳಾದ ದಾನೇಶ ಐನಾಪುರ, ಎ ಬಿ ಜತ್ತಿ, ಕಾಲೇಜಿನ ಪ್ರಾಚಾರ್ಯ ಸಿ ಎಸ್ ಪಾಟೀಲ, ಶಿವಾನಂದ ಮಸಳಿ, ಲಿಂಗರಾಜ ಪಾಟೀಲ, ಧರೆಪ್ಪ ಗುಗ್ಗರಿ, ಸಿದರಾಯ ಮಸಳಿ, ಕೆಂಚಪ್ಪ ಪೂಜಾರಿ, ಗೋಪಾಲ ಕಾತ್ರಾಳ, ವಿವೇಕಾನಂದ ಮಸಳಿ, ನಾಗೇಶ ಹಿರೇಪಟ್ಟ, ದುಂಡಪ್ಪ ಮಾಲಗಾರ, ವಿಶ್ವನಾಥ ಉಪ್ಪಣ್ಣಗಿ, ಭೀಮಣ್ಣ ಪಡತಾರೆ, ತಿಕೋಟಾ ಹಾಗೂ ಬಲೇಶ್ವರ ದೈಹಿಕ ಶಿಕ್ಷಕರು, ಕ್ರೀಡಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

