Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ದೇಶಕ್ಕೆ ಮಾದರಿಯಾದ ಪಂಚಗ್ಯಾರಂಟಿ ಯೋಜನೆಗಳು

ಭಾರತ ನಕ್ಷೆಯ ಆಕಾರದಲ್ಲಿ ಅರಿಹಂತ ಶಾಲೆ ವಿದ್ಯಾರ್ಥಿಗಳು

ಸಹಿಷ್ಣುತೆ- ಸಾಮರಸ್ಯದಿಂದ ದೇಶದ ಐಕ್ಯತೆ ಸಾಧ್ಯ :ಡಾ.ಹಾದಿಮನಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಅನಾಹುತಕ್ಕೆ ಆಹ್ವಾನ ನೀಡುತ್ತಿರುವ ಶೀರನಹುಂಡಿ ಹಳೆ ಸೇತುವೆಗಳು
(ರಾಜ್ಯ ) ಜಿಲ್ಲೆ

ಅನಾಹುತಕ್ಕೆ ಆಹ್ವಾನ ನೀಡುತ್ತಿರುವ ಶೀರನಹುಂಡಿ ಹಳೆ ಸೇತುವೆಗಳು

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಸೇತುವೆ ದುರಸ್ತಿಗೊಳಿಸದಿದ್ದರೆ ಗ್ರಾಮಸ್ಥರಿಂದ ಉಗ್ರ ಹೋರಾಟದ ಎಚ್ಚರಿಕೆ

ಉದಯರಶ್ಮಿ ದಿನಪತ್ರಿಕೆ

ಎಚ್ ಡಿ ಕೋಟೆ: ಕಳೆದ ಹಲವು ವರ್ಷಗಳಿಂದ ಶಿಥಿಲಾವಸ್ಥೆಗೆ ತಲುಪಿ ಒಂದು ಕಡೆಯಿಂದ ಕುಸಿಯುತ್ತಾ ಬರುತ್ತಿರುವ, ಅನೇಕ ಅನಾಹುತಗಳಿಗೆ ಕಾರಣವಾಗಿರುವ, ನಾಲ್ಕೈದು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಗ್ರಾಮದಲ್ಲಿರುವ ಕಿರಿದಾದ ಎರಡು ಸೇತುವೆಗಳನ್ನು ದುರಸ್ತಿಗೊಳಿಸದಿದ್ದರೆ, ಸಂಬಂಧಪಟ್ಟ ಇಲಾಖೆ ಕಚೇರಿ ಎದುರು ಧರಣಿ ನಡೆಸಲು ಶೀರನಹುಂಡಿ ಗ್ರಾಮಸ್ಥರು ಮುಂದಾಗಿದ್ದಾರೆ.
ತಾಲೂಕಿನ ಶೀರನಹುಂಡಿ ಗ್ರಾಮದ ಬಳಿ ಎರಡು ಕಿರಿದಾದ ಸೇತುವೆಗಳಿವೆ. ಒಂದು ಸೇತುವೆ ಶೀರನಹುಂಡಿಯಿಂದ ನಾಗನಹಳ್ಳಿ, ಮಾಚನಾಯಕನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸಿದರೆ, ಮತ್ತೊಂದು ಸೇತುವೆ, ಮೈಸೂರು-ಮಾನಂದವಾಡಿ (ಅಂತರಸಂತೆ)ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಅಲ್ಲದೆ ಈ ಎರಡು ಸೇತುವೆಗಳ ಮೂಲಕವೇ ಕೆಎಸ್ ಆರ್ ಟಿಸಿ ಬಸ್ ಸೇರಿದಂತೆ ವಾಹನಗಳು ಓಡಾಡುತ್ತವೆ. ಆದರೆ ಈ ಎರಡು ಸೇತುವೆಗಳು ಬಹಳ ಹಳೆಯದಾಗಿದ್ದು, ಬಹಳ ಕಿರಿದಾಗಿದ್ದು ಕುಸಿಯುತ್ತಾ ಬರುತ್ತಿದೆ. ಸೇತುವೆಗೆ ಅಡ್ಡಲಾಗಿರುವ ತಡೆಗೋಡೆ ಕೂಡ ಕುಸಿದು ಬಿದ್ದಿದ್ದು, ಜನರು ಜೀವ ಭಯದಲ್ಲೇ ಓಡಾಡಬೇಕಾಗಿದೆ. ರಾತ್ರಿ ವೇಳೆ ವಾಹನ ಸವಾರರು ಈ ಸೇತುವೆಗಳ ಮೇಲೆ ಸಂಚರಿಸಲು ಹಿಂದೇಟು ಹಾಕುತ್ತಾರೆ. ಒಂದು ಕ್ಷಣ ಎಚ್ಚರ ತಪ್ಪಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಆದರೆ ಪರ್ಯಾಯ ಮಾರ್ಗವಿಲ್ಲದೆ ಈ ಸೇತುವೆಗಳ ಮೂಲಕವೇ ಶೀರನಹುಂಡಿ ಗ್ರಾಮಸ್ಥರು ಜಮೀನುಗಳಿಗೆ, ಪಕ್ಕದ ಗ್ರಾಮಗಳಿಗೆ ಹೋಗಬೇಕಾಗಿದೆ. ಅಲ್ಲದೆ ರಸ್ತೆಗಳು ಕೂಡ ಹದಗೆಟ್ಟಿದ್ದು, ಶಾಪ ಹಾಕಿಕೊಂಡೆ ಓಡಾಡುವಂತಾಗಿದೆ.
ಸುಂದ್ರೇಶ್, ಕೆಂಡಗಣಸ್ವಾಮಿ ಎಸ್ ಪಿ , ರಂಗರಾಜೇಗೌಡ, ಪುಟ್ಟೇಗೌಡ, ಮಂಜುನಾಥ, ಚಂದ್ರಶೇಖರ್ ಎಸ್ ಎನ್, ಮಾದೇವ, ಸಂತೋಷ್ ಕುಮಾರ್, ಶ್ರೀನಿವಾಸ, ಲಿಂಗರಾಜು, ಮಂಜು ಎಸ್, ನಾಗರಾಜು ಎಲ್, ನಿಂಗರಾಜು ಬಿ. ಸೇರಿದಂತೆ ಗ್ರಾಮದ ಯಜಮಾನವರು, ಮುಖಂಡರು, ಯುವಕರು ಇದ್ದರು.

ಮನವಿಗೆ ಕ್ಯಾರೆ ಎನ್ನದ ಜನಪ್ರತಿನಿಧಿಗಳು & ಅಧಿಕಾರಿಗಳು

ಅನಾಹುತಕ್ಕೆ ಆಹ್ವಾನ ನೀಡುತ್ತಿರುವ ಸೇತುವೆಗಳನ್ನು ದುರಸ್ತಿಗೊಳಿಸುವಂತೆ ಗ್ರಾಮಸ್ಥರು, ಅನೇಕ ಬಾರಿ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಶಾಸಕ ಅನಿಲ್ ಚಿಕ್ಕಮಾದು, ಸಂಸದ ಸುನಿಲ್ ಬೋಸ್ ಅವರ ಗಮನಕ್ಕೂ ಕೂಡ ತರಲಾಗಿದೆ. ಮನವಿ ಪತ್ರ ಸ್ವೀಕರಿಸಿ ಅಧಿಕಾರಿಗಳು ಸುಮ್ಮನಾದರೆ, ಶಾಸಕರು, ಸಂಸದರು, ದುರಸ್ತಿಗೊಳಿಸುವುದಾಗಿ ಭರವಸೆ ಕೊಡುತ್ತಾರೋ ಹೊರತು, ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡೋದಾಗಿ ವಕೀಲರೂ ಆದ ಸುಂದ್ರೇಶ್ ಎಚ್ಚರಿಕೆ ನೀಡಿದ್ದಾರೆ.

“ಶೀರನಹುಂಡಿ ಗ್ರಾಮದ ರೈತರು ಜಮೀನುಗಳಿಗೆ ತೆರಳಲು ತಾರಕ ಬಲದಂಡೆ ನಾಲೆಯ ಮುಖಾಂತರವೇ ಹಾದುಹೋಗಬೇಕಾಗಿದೆ. ಆದರೆ ಸೇತುವೆಗಳು ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿದ್ದು, ಶಾಲಾ ಮಕ್ಕಳಿಗೂ ಕೂಡ ತುಂಬಾ ತೊಂದರೆಯಾಗಿದೆ. ಸೇತುವೆ ರಸ್ತೆ ಬಹಳ ಕಿರಿದಾಗಿರುವುದರಿಂದ ಊರಿನೊಳಗೆ ಸಾರಿಗೆ ಬಸ್ ಕೂಡ ಬರುತ್ತಿಲ್ಲ.”

– ಕೆಂಡಗಣಸ್ವಾಮಿ ಎಸ್ ಪಿ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ದೇಶಕ್ಕೆ ಮಾದರಿಯಾದ ಪಂಚಗ್ಯಾರಂಟಿ ಯೋಜನೆಗಳು

ಭಾರತ ನಕ್ಷೆಯ ಆಕಾರದಲ್ಲಿ ಅರಿಹಂತ ಶಾಲೆ ವಿದ್ಯಾರ್ಥಿಗಳು

ಸಹಿಷ್ಣುತೆ- ಸಾಮರಸ್ಯದಿಂದ ದೇಶದ ಐಕ್ಯತೆ ಸಾಧ್ಯ :ಡಾ.ಹಾದಿಮನಿ

ದೇಶದ ಸೈನಿಕರಿಂದ ಸ್ವಾತಂತ್ರ್ಯ ರಕ್ಷಣೆ :ಮೇಜರ್ ಗಿರಿಮಲ್ಲೇಶ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ದೇಶಕ್ಕೆ ಮಾದರಿಯಾದ ಪಂಚಗ್ಯಾರಂಟಿ ಯೋಜನೆಗಳು
    In (ರಾಜ್ಯ ) ಜಿಲ್ಲೆ
  • ಭಾರತ ನಕ್ಷೆಯ ಆಕಾರದಲ್ಲಿ ಅರಿಹಂತ ಶಾಲೆ ವಿದ್ಯಾರ್ಥಿಗಳು
    In (ರಾಜ್ಯ ) ಜಿಲ್ಲೆ
  • ಸಹಿಷ್ಣುತೆ- ಸಾಮರಸ್ಯದಿಂದ ದೇಶದ ಐಕ್ಯತೆ ಸಾಧ್ಯ :ಡಾ.ಹಾದಿಮನಿ
    In (ರಾಜ್ಯ ) ಜಿಲ್ಲೆ
  • ದೇಶದ ಸೈನಿಕರಿಂದ ಸ್ವಾತಂತ್ರ್ಯ ರಕ್ಷಣೆ :ಮೇಜರ್ ಗಿರಿಮಲ್ಲೇಶ
    In (ರಾಜ್ಯ ) ಜಿಲ್ಲೆ
  • ಸ್ವಾತಂತ್ರ್ಯ ಫಲಪ್ರದದಿಂದ ನಮಗೆ ನೆಮ್ಮದಿ ಜೀವನ :ಹೂಗಾರ
    In (ರಾಜ್ಯ ) ಜಿಲ್ಲೆ
  • ​ಗಾಂಧಿ ಭವನದಲ್ಲಿ ಡಿಸಿ ಡಾ.ಆನಂದ.ಕೆ ರಿಂದ ಧ್ವಜಾರೋಹಣ
    In (ರಾಜ್ಯ ) ಜಿಲ್ಲೆ
  • “ದೇಶದ ಅಭಿವೃದ್ಧಿ ಹಾಗೂ ಜನಕಲ್ಯಾಣಕ್ಕೆ ಸಂಕಲ್ಪ ಮಾಡಬೇಕು
    In (ರಾಜ್ಯ ) ಜಿಲ್ಲೆ
  • ಉರ್ದು ಶಾಲಾ ಶಿಕ್ಷಕರ ನೇಮಕಕ್ಕೆ ಉರ್ದು ಶಿಕ್ಷಕರ ಸಂಘ ಮನವಿ
    In (ರಾಜ್ಯ ) ಜಿಲ್ಲೆ
  • ಸ್ವಾತಂತ್ರ್ಯದ ಹಿಂದೆ ಸಾವಿರಾರು ವೀರರ ತ್ಯಾಗವಿದೆ :ಕಟಕಧೋಂಡ
    In (ರಾಜ್ಯ ) ಜಿಲ್ಲೆ
  • ಆ.17ರಿಂದ ಗುರುದೇವ ಆಶ್ರಮದಲ್ಲಿ ಆಧ್ಯಾತ್ಮಿಕ ಪ್ರವಚನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.