ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಬಸವನ ಬಾಗೇವಾಡಿ ಪಟ್ಟಣದ ಬಿಎಲ್ ಡಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಅಖಂಡ ಬಸವನ ಬಾಗೇವಾಡಿ ತಾಲೂಕು ಮಟ್ಟದ ಅಥ್ಲೇಟಿಕ್ಸನಲ್ಲಿ ಪಟ್ಟಣದ ಸಂಗಮೇಶ್ವರ ಪದವಿಪೂರ್ವ ಕಾಲೇಜು ವೈಯಕ್ತಿಕ ವಿರಾಗ್ರಣಿ ಪ್ರಶಸ್ತಿ ಪಡೆದು ವಿಶೇಷ ಸಾಧನೆ ಗೈದಿದೆ.
ಕಾಲೇಜಿನ ವಿದ್ಯಾರ್ಥಿಗಳಾದ ಕುಮಾರ ಕಿರಣ ಬೆಳ್ಳುಬ್ಬಿ ತ್ರಿಬಲ್ ಜಂಪ್ ಮತ್ತು ಉದ್ದ ಜಿಗಿತದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ 800 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದು ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದ್ದಾನೆ. ಬಾಲಕರ ವಿಭಾಗದ 4×100 ಮೀಟರ್ ರೀಲೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಸೋಮಲಿಂಗ ನುಚ್ಚಣ್ಣನವರ 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಹಾಗೂ ಅಕ್ಷಯಕುಮಾರ ಪೂಜಾರಿ ಪೋಲೋ ಆಟದಲ್ಲಿ ಪ್ರಥಮ ಸ್ಥಾನ, ಹಾಗೂ ಎಸ್.ಕೆ.ಎಮ್. ಗುಡ್ಡಗಾಡು ಓಟದಲ್ಲಿ ರೇಣುಕಾ ಜಮಾದಾರ ದ್ವಿತೀಯ ಸ್ಥಾನ, ಹಾಗೂ
ಭಾಗ್ಯಶ್ರೀ ಕೊಠಾರಿ ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ ಹಾಗೂ ರೇಣುಕಾ ಜಮಾದಾರ ಟ್ರಿಪಲ್ ಜಂಪ್ ನಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಕಾಲೇಜಿನ ಕೀರ್ತಿ ಪತಾಕೆಯನ್ನು ತಾಲೂಕು ಮಟ್ಟದಲ್ಲಿ ಮಿಂಚು ಹಾಗೆ ಮಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಸಾಧಕರಿಗೆ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ.ಯ. ಗಿಡ್ಡಪ್ಪಗೊಳ, ಕಾರ್ಯದರ್ಶಿ ಎಸ್.ಬಿ. ಪತಂಗಿ, ಸರ್ವ ಅಡಳಿತ ಮಂಡಳಿ, ಪ್ರಾಚಾರ್ಯ ಡಾ.ಎ.ಡಿ. ಚೌಹಾಣ, ದೈಹಿಕ ಉಪನ್ಯಾಸಕ ಆರ್.ಎಸ್. ತೋಟದ, ಉಪನ್ಯಾಸಕ ಮಂಜುನಾಥ ಮಟ್ಟಿಹಾಳ ಸರ್ವ ಉಪನ್ಯಾಸಕ ಬಳಗದವರು ಸಾಧಕರಿಗೆ ತುಂಬು ಹೃದಯದಿಂದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

