ಉದಯರಶ್ಮಿ ದಿನಪತ್ರಿಕೆ
ವಿಜಯಪುರ: “ಸ್ವಾತಂತ್ರ‍್ಯ ಹೋರಾಟಗಾರದಲ್ಲಿ ಸಾಕಷ್ಟು ಚಿತ್ಪಾವನರು ತನು-ಮನ-ಧನದಿಂದ ಪಾಲ್ಗೊಂಡರು” ಎಂದು ಶ್ರೀಪಾದ ಪಟವರ್ಧನ ಹೇಳಿದರು.
ನಗರದ ಮರಾಠಿ ವಿದ್ಯಾಲಯದಲ್ಲಿ “ಅಖಿಲ ಭಾರತೀಯ ಸಾಹಿತ್ಯ ಪರಿಷತ್(ರಿ) ವಿಜಯಪುರ” ಆಯೋಜನೆಯ “ಕರ್ನಾಟಕ ಚಿತ್ಪಾವ ವೃತ್ತಾಂತ” ಪುಸ್ತಕದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತಾಡಿದ ಅವರು ಶಿವಾಜಿ ನಂತರ , ಮೊಘಲರಿಂದ ಬಿಡುಗಡೆಯಾಗಿ ಬಂದ ಶಿವಾಜಿ ಮೊಮ್ಮಗ ಸಂಭಾಜಿಯನ್ನು ಪಟ್ಟಕ್ಕೆ ಕೂಡಿಸಿ ಮರಾಠ ಸಾಮ್ರಾಜ್ಯವನ್ನು ಉಳಿಸಿದ , ರಾಷ್ಟ್ರವ್ಯಾಪಿ ವಿಸ್ತರಿಸಿ, ಹಿಂದು ದೇವಸ್ಥಾನಗಳನ್ನು ಪುನರುಜ್ಜೀವನಗೊಳಿಸಿದ ಪೇಶ್ವೆಗಳು ಸಹ ಚಿತ್ಪಾವನರು. ಚಿತ್ಪಾವನರು ಶಾಸ್ತ್ರ ಮತ್ತು ಶಸ್ತ್ರದಲ್ಲಿ ಸಿದ್ಧಹಸ್ತರು ಎಂದು ಶ್ರೀಪಾದ ಪಟವರ್ಧನ ಚಿತ್ಪಾವ ವೃತ್ತಾಂತ ಕುರಿತು ವಿವರಿಸಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಹರ್ಷವರ್ಧನ ಸರಾಫ್ ವಹಿಸಿದ್ದು, ಸ್ವಾಗತ ಪರಿಚಯ ಆನಂದ ಗೋಡ್ಸೆ, ನಿರೂಪಣೆ ಸುಕಾಂತ ಕುಲಕರ್ಣಿ, ವಂದನಾರ್ಪಣೆ ವರುಣ ಸೋಲಾಪುರ ನಿರ್ವಹಿಸಿದರು.
ನಾರಾಯಣ ಬಾಬಾನಗರ, ವಿವೇಕ ಕುಲಕರ್ಣಿ, ಶ್ರೀರಂಗ ಪುರಾಣಿಕ, ಅನಿಲ ಬಳ್ಳುಂಡಗಿ, ವಿಜಯ ಪಟವರ್ಧನ, ಜಿ ಆರ್ ಕುಲಕರ್ಣಿ, ಡಾ.ಚಿದಂಬರ ಪಾಟೀಲ, ವಿಷ್ಣು ಛತ್ರೆ, ಗಂಗಾಧರ ಪವಾಡಶೆಟ್ಟಿ, ಡಾ.ಮಿಲಿಂದ ವಾಟವೆ, ಶೈಲೇಶ ಜೋಶಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

