ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣಕ್ಕೆ ಇಂದು ಮಂಗಳವಾರ ಮದುತ್ತರಾದಿ ಮಠದ ಶ್ರೀಸತ್ಯಾತ್ಮತೀರ್ಥ ಪಾದಂಗಳರವರು ಆಗಮಿಸಲಿದ್ದಾರೆ.
ಪಟ್ಟಣದಲ್ಲಿ ಶ್ರೀಮೂಲರಾಮ ದೇವರ ಪೂಜಾ ಮಹೋತ್ಸವ ಅಂಗವಾಗಿ ಆಗಮಿಸುವ ಶ್ರೀಗಳು ವಿಜಯಪುರ ರಸ್ತೆಯ ಗೌರೀಶಂಕರ ನಗರದ ವರ್ಕಾನಳ್ಳಿ ವಿನಾಯಕ ಪಾಟೀಲ ಅವರ ತೋಟದ ಮನೆಯಲ್ಲಿ ಬೆಳಿಗ್ಗೆ ಪಾದಪೂಜೆ ನಂತರ ಸಪ್ತಮುದ್ರಾಧಾರಣೆ ಆನಂತರ ಮೂಲರಾಮದೇವರ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಪೂಜೆಯ ನಂತರ ತೀರ್ಥಪ್ರಸಾದ ವಿತರಣೆಯಾಗಲಿದೆ.
ಕೊನೆಯಲ್ಲಿ ಶ್ರೀಗಳಿಂದ ಫಲಮಂತ್ರಾಕ್ಷತೆ ಹಾಗೂ ಆಶೀರ್ವಚನ ಜರುಗಲಿದೆ. ಈ ಎಲ್ಲ ಕಾರ್ಯಗಳಲ್ಲಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲ ವಿಪ್ರ ಸಮುದಾಯದವರು ಪಾಲ್ಗೊಳ್ಳುವಂತೆ ಶ್ರೀಚಿದಂಬರ ಸೇವಾ ಸಮಿತಿ ಅಧ್ಯಕ್ಷ ನರೇಂದ್ರ ನಾಡಗೌಡ ಹಾಗೂ ವಿನಾಯಕ ಪಾಟೀಲ (ವರ್ಕಾನಳ್ಳಿ) ಪ್ರಕಟಣೆ ಮೂಲಕ ತಿಳಿಸಿದ್ದಾರೆ.

