ಕೋರವಾರಲ್ಲಿ ವಿವಿಧೋದ್ದೇಶ ಗ್ರಾಮೀಣ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಸಂಗಮೇಶ ಛಾಯಾಗೋಳ ಸಲಹೆ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಕೃಷಿ ಸಹಕಾರಿ ಸಂಘ ರೈತ ಸಮುದಾಯಕ್ಕೆ ಸೇರಿದ ಸಂಸ್ಥೆ, ಇದರ ಲಾಭ, ಹಾನಿ ಸಹಿತ ಪ್ರತಿಯೊಂದು ಚಟುವಟಿಕೆಗಳ ಬಗ್ಗೆ ಅರಿಯುವುದು ರೈತರ ಜವಾಬ್ದಾರಿಯಾಗಿದೆ ಎಂದು ವಿವಿಧೋದ್ದೇಶ ಗ್ರಾಮೀಣ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಸಂಗಮೇಶ ಛಾಯಾಗೋಳ ಹೇಳಿದರು.
ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ಭಾನುವಾರ ಜರುಗಿದ ವಿವಿಧೋದ್ದೇಶ ಗ್ರಾಮೀಣ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಸಂಘದ ಸದಸ್ಯರಾದ ಎಲ್ಲ ರೈತರು ಪಾಲ್ಗೊಳ್ಳುವಿಕೆ ಅತ್ಯಂತ ಅವಶ್ಯ ಹಾಗೂ ಅಗತ್ಯವಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೆಶಕ ಕೆ.ಕೆ.ಚವ್ಹಾಣ ಮಾತನಾಡಿ, ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಆಧಾರಸ್ತಂಭವಾದ ರೈತ ಸಮುದಾಯ ಸರ್ವಸಾಧಾರಣ ಸಭೆಗೆ ಹಾಜರಾಗಿ ತಮ್ಮ ಇಚ್ಛಾಶಕ್ತಿಯನ್ನು ತೋರಿರುವುದು ಪ್ರಗತಿಯ ಸಂಕೇತ ಎಂದರು.
ಸಾನಿಧ್ಯ ವಹಿಸಿದ್ದ ಚೌಕಿಮಠದ ಮುರುಗೇಂದ್ರ ಸ್ವಾಮೀಜಿ ಆಶೀರ್ವಚನ ನೀಡುತ್ತಾ, ಕೃಷಿ ಸಹಕಾರಿ ಸಂಘ ಈ ವರ್ಷ ೧೫ ಲಕ್ಷಕ್ಕಿಂತ ಹೆಚ್ಚು ಲಾಭಗಳಿಸಿದ್ದು ಪ್ರಗತಿಪಥವನ್ನು ಸೂಚಿಸುತ್ತದೆ. ಸಂಘ ಇದೇ ರೀತಿಯಾಗಿ ಉತ್ತರೋತ್ತರವಾಗಿ ಅಭಿವೃದ್ಧಿಯಾಗಲಿ ಎಂದು ಶುಭಹಾರೈಸಿದರು.
ವ್ಹಿಡಿಸಿಸಿ ಬ್ಯಾಂಕ್ ನಿರ್ದೇಶಕ ಹಣಮಂತ್ರಾಯಗೌಡ ಪಾಟೀಲ(ಪಡಗಾನೂರ) ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಇದೇ ಸಂದರ್ಭದಲ್ಲಿ ನೂತನ ಸಿಎಸ್‌ಸಿ ಕೇಂದ್ರವನ್ನು ವಿಜಯಪುರ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಎಂ.ಎಸ್.ರಾಠೋಡ ಉದ್ಘಾಟಿಸಿದರು.
ನಂತರ ನಿವೃತ್ತ ಶಿಕ್ಷಕರು, ಸೈನಿಕರು, ಆದರ್ಶ ಶಿಕ್ಷಕರು ಹಾಗೂ ಗ್ರಾಮದ ಪ್ರತಿಭಾನ್ವಿತ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.
ಪಿಕೆಪಿಎಸ್ ಉಪಾಧ್ಯಕ್ಷ ಶರಣಪ್ಪ ತಾಳಿಕೋಟಿ, ತಾಲ್ಲೂಕು ಪಂಚಾಯಿತಿ ಮಾಜಿಸದಸ್ಯ ಮಲ್ಲನಗೌಡ ಬಿರಾದಾರ, ಶರಣಗೌಡ ಪಾಟೀಲ, ಸಂಗಪ್ಪಗೌಡ ಬಿರಾದಾರ, ಹಣಮಂತ್ರಾಯ ಸಾಲವಾಡಗಿ ಸದಸ್ಯರಾದ ಎಸ್.ಎಸ್.ಪೊಲೀಸಪಾಟೀಲ, ಜಿ.ಎಮ್.ಅಂಗಡಿ, ಎಸ್.ಸಿ.ಸುಂಬಡ, ನಾನಾಗೌಡ ಬೋರಾವತ್, ಇಸ್ಮಾಯಿಲ್ ವಡಗೇರಿ, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಸ್.ಎಸ್.ಬೋರಾವತ್, ಜಿ.ಎನ್.ಚವ್ಹಾಣ, ಎಮ್.ಎಸ್.ಕೇಮಶೆಟ್ಟಿ, ಎನ್.ಎ.ಚಾಂದಕವಟೆ, ಎಮ್.ಎಸ್.ಜಾಲವಾದಿ, ಬಿ.ಬಿ.ಮನಹಳ್ಳಿ ಸೇರಿದಂತೆ ಕೋರವಾರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಇದ್ದರು.

