ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರ ಬೇಡಿಕೆಯ ಅನುಗುಣವಾಗಿ ಗಣವೇಶ ಮಾರಾಟ ಮಳಿಗೆಗೆ ಚಾಲನೆ ನೀಡಲಾಗಿದೆ ಎಂದು ಕಾರ್ಯಕರ್ತ ಗುರುರಾಜ್ ದೇಸಾಯಿ ಹೇಳಿದರು.
ಪಟ್ಟಣದ ಬಸ್ ನಿಲ್ದಾಣ ಸಮೀಪದ ಸಾಲಕ್ಕಿ ಸಂಕೀರ್ಣದಲ್ಲಿನ ಓಂ ಮಾರಾಟ ಮಳಿಗೆಯಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಗಣವೇಶಗಳ ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂಘ ಶತಾಬ್ದಿಯ ಈ ಸಂದರ್ಭದಲ್ಲಿ ಗಣವೇಶಧಾರಿಗಳಿಗೆ ಅಗತ್ಯವಾದ ಕಪ್ಪು ಟೋಪಿ, ದಂಡ, ಉದ್ದ ತೋಳಿನ ಬಿಳಿ ಅಂಗಿ, ಬಟ್ಟೆ ಬೆಲ್ಟ್, ಖಾಕಿ ಪ್ಯಾಂಟ್, ಖಾಕಿ ಕಾಲುಚೀಲ ಹಾಗೂ ಲೇಸ್ ಇರುವ ಪದವೇಶ ಯೋಗ್ಯದರದಲ್ಲಿ ದೊರೆಯುತ್ತಿದ್ದು ಆಸಕ್ತ ಗ್ರಾಮೀಣ ಕಾರ್ಯಕರ್ತರು ಇದರ ಸದುಪಯೋಗ ಪಡೆಯಬಹುದಾಗಿದೆ ಎಂದರು.
ಕಾರ್ಯಕರ್ತರಾದ ಚಿದಾನಂದ ಕುಂಬಾರ, ಪ್ರವೀಣ ದೇಸಾಯಿ, ಓಂಕಾರ ಬಡಿಗೇರ, ಮಹೇಶ ದೇಸಾಯಿ, ದರ್ಶನ ನಾಡಗೌಡ, ಷಣ್ಮುಖಪ್ಪ ಸಿದಗೊಂಡ, ರವಿ ಮಸಬಿನಾಳ ಹಾಗೂ ಇತರರು ಇದ್ದರು.

