ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ತಾಲೂಕಿನ ಕರಜಗಿ ಗ್ರಾಮದ ರೈತನಾದ ಸಿದ್ದರಾಮ ಪರಿಟ ಅವರ ಕಬ್ಬು ಧಾರಾಕಾರ ಮಳೆ ಹಾಗೂ ಗಾಳಿಯ ರಭಸಕ್ಕೆ 4 ಎಕರೆ ಕಬ್ಬು ಸಂಪೂರ್ಣವಾಗಿ ನೆಲಕಚ್ಚಿದೆ
ಎಲ್ಲ ಬೆಳೆಗಳು ಮಳೆ ಹೆಚ್ಚಾಗಿ ಕೊಳೆಯುತ್ತಿವೆ. ಕಬ್ಬು ನೆಲಕಚ್ಚಿದೆ ಇದರಿಂದಾಗಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು ದಿಕ್ಕು ತೋಚದಂತಾಗಿದೆ,
ಮಳೆಯ ರಭಸಕ್ಕೆ ತೊಗರಿ, ಹತ್ತಿ, ಶೇಂಗಾ, ಬೆಳೆ ಹಾನಿಯಾಗಿದ್ದು ಹಳ್ಳದ ನೀರು ಹೆಚ್ಚಾಗಿ ಜಮೀನುಗಳ ಒಡ್ಡುಗಳು ಒಡೆದು ಹೋಗಿದ್ದು, ಬದುಗಳು ಸಮತಟ್ಟವಾಗಿವೆ, ಹಳ್ಳ ಯಾವುದು ಹೊಲ ಯಾವುದು ಎಂಬುದು ಕಾಣದಾಗಿದೆ.
ಮಳೆ ನೀರಿನಿಂದ ಅಸ್ತವ್ಯಸ್ತ
ಕರಜಗಿಯಲ್ಲಿ ಸುರಿದ ಧಾರಾಕಾರ ಮಳೆಗೆ ಗ್ರಾಮದ ಜನರು ತೊಂದರೆ ಅನುಭವಿಸಿದರು. ರಸ್ತೆಗಳು ಹಾಗೂ ಬಡಾವಣೆಗಳು ಜಲಾವೃತವಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು ಮನೆಗಳಿಗೆ ನೀರು ನುಗ್ಗಿ ದವಸ ಧಾನ್ಯಗಳು, ಗೃಹ ಉಪಯೋಗಿ ವಸ್ತುಗಳು ನೀರು ಪಾಲಾಗಿದೆ.
ಕರಜಗಿದ ಗ್ರಾಮದಲ್ಲಿ ಮನೆ ವೊಂದರಲ್ಲಿ ನೀರು ಹೊಕ್ಕು ಮಕ್ಕಳ ಪಠ್ಯ ಪುಸ್ತಕಗಳು ಶಾಲಾ ದಾಖಲಾ ತಿಗಳು ಶಾಲಾ ನೆನೆದು ಹಾಳಾಗಿವೆ.
ಮಾಶಾಳ ಗ್ರಾಮದಲ್ಲಿ ಕೆರೆ ಒಡೆದು ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ,
ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ನೀರು ನಿಂತು ವಿದ್ಯಾರ್ಥಿಗಳಿಗೆ ತುಂಬಾ ಆಡಚಣೆ ಉಂಟಾಯಿತು ಎಷ್ಟೋ ವಿದ್ಯಾರ್ಥಿಗಳು ನೀರಲ್ಲಿ ಬಿದ್ದು ಶಾಲೆಗೆ ಹೋಗಿದ ಪ್ರಸಂಗ ಜರುಗಿತು.
ಸಾಲಮಾಡಿ ಬೆಳೆದ ಫಸಲು ಚೆನ್ನಾಗಿ ಬಂದಿತ್ತು, ರಾತ್ರಿ ಮಳೆ ಸುರಿದು ಮಳೆಯ ರಭಸಕ್ಕೆ ಮಣ್ಣು ಕೊಚ್ಚಿಕೊಂಡು 4 ಎಕರೆ ಕಬ್ಬು ನೆಲಕ್ಕೆ ಕಚ್ಚಿದೆ ಇದರಿಂದ ರೈತರು ತೊಂದರೆಗೊಳಗಾಗಿದ್ದಾರೆ.
ಸರ್ಕಾರ ಸಮೀಕ್ಷೆ ಮಾಡಿಸಿ ರೈತರಿಗೆ ಪರಿಹಾರ ಧನ ಕಲ್ಪಿಸಬೇಕೆಂದು ರೈತ ಸಿದ್ದರಾಮ ಪರಿಟ್ ಆಗ್ರಹಿಸಿದ್ದಾರೆ.

