ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಕೊಲ್ಹಾರ ವಲಯದ ಚಿಕ್ಕಆಸಂಗಿ ಗ್ರಾಮದಲ್ಲಿ ಕಾರ್ಯಕ್ಷೇತ್ರದಲ್ಲಿ ಜ್ಞಾನವಿಕಾಸದ ಅಡಿಯಲ್ಲಿ ನಾಗಸಂಪಿಗೆ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮುಖಾಂತರ ಕಾರ್ಯಕ್ರಮ ಚಾಲನೆ ನೀಡಲಾಯಿತು.
ವಲಯದ ಮೇಲ್ವಿಚಾರಕರಾದ ಕಿರಣ ಪ್ರಾಸ್ತಾವಿಕವಾಗಿ ಮಾತನಾಡಿ, ಯೋಜನೆಯ ಕಾರ್ಯಕ್ರಮಗಳ ಕುರಿತು ಮತ್ತು ಮಾತೋಶ್ರೀ ಹೇಮಾವತಿ ಅಮ್ಮನವರ ಕನಸಿನ ಕೂಸಾದ ಜ್ಞಾನವಿಕಾಸ ಕಾರ್ಯಕ್ರಮ ದಡಿಯಲಿ ಉಚಿತವಾಗಿ ಆರೋಗ್ಯ ತಪಾಸಣೆ ಶಿಬಿರ ಕೇಂದ್ರವನ್ನು ನಡೆಸಿದ್ದು ಅದರ ಪ್ರಯೋಜನವನ್ನು ಪಡೆದುಕೊಳ್ಳುವ ಕುರಿತು ಮಾಹಿತಿ ನೀಡಿದರು.
ಸ್ತ್ರೀ ಯೋಗ ತಜ್ಞ ರಾಜೇಶ್ವರಿ ಕುಂಬ ಅವರು 12 ನೆ ವಯಸ್ಸಿನಿಂದ 60 ವರ್ಷದ ಮಹಿಳೆಯರಲ್ಲಿ ಆಗುವ ಬದಲಾವಣೆಗಳ ಬಗ್ಗೆ ರೋಗಗಳ ಬಗ್ಗೆ ಮಾಹಿತಿ ತಿಳಿಸಿದರು.
ಮಡಿವಾಳ ಸ್ವಾಮಿ ಡವಲಗಿಮಠ ಅವರು, ಹೃದಯಾಘಾತ ತಡೆಯುವ ಬಗ್ಗೆ ಹೃದಯಾಘಾತ ಆಗುವ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದರು.
ಆರೋಗ್ಯ ಶಿಬಿರದಲ್ಲಿ ನರ ರೋಗ ತಜ್ಞೆ ಅಶ್ವಿನಿ ಹಿರೇಮಠ, ಸ್ತ್ರೀ ರೋಗ ತಜ್ಞೆ ರಾಜೇಶ್ವರಿ, ಕಣ್ಣಿನ ತಜ್ಞೆ ಕೀರ್ತಿ ವಾಲಿ, ಡೆಂಟಿಸ್ಟ್ ಶಿವರಾಜ್ ಕಟಗಿ, ಸ್ತ್ರೀ ರೋಗ ತಜ್ಞೆ ಶ್ವೇತಾ ನಾಯ್ಡು ಮತ್ತು ವಲಯದ ಒಕ್ಕೂಟ ಅಧ್ಯಕ್ಷೆ ರಾಜಶ್ರೀ, ಗ್ರಾಮ ಪಂಚಾಯಿತಿ ಸದಸ್ಯೆ ರುಕ್ಮಿಣಿ, ತಾಲ್ಲೂಕ ಸಮನ್ವಯ ಅಧಿಕಾರಿ ಸಂಗೀತಾ, ವಲಯದ ಸೇವಾ ಪ್ರತಿನಿಧಿ ದೀಪಾ, ಕೇಂದ್ರದ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.

